ಖೊ ಖೋ ಆಟ
ಖೊ ಖೋ ಆಟ
ಆಡಲು ಬೇಕಾಗುವ ವಸ್ತುಗಳು- ೨ ಕೋಲುಗಳು ಅಂಕಣದ ಕೊನೆಗಳಲ್ಲಿ ಹಾಕಲು
ಆಟದವ ವಿವರಣೆ
ಖೋಖೋ ಆಟ ಮೊದಲು ಜಮೈಕಯಲ್ಲಿನ ಬರೋಡ ಎಂಬಲ್ಲಿ 1924 ಉಗಮವಾಯಿತು. ಈ ಆಟದ ಒಂದು ಚಾಂಪಿಯನ್ಶಿಪ್ 1960 ರಲ್ಲಿ ನಡೆಯಿತು. ಭಾರತದಲ್ಲಿ ಈ ಆಟವನ್ನು ಮೊದಲು ಪರಿಚಯಿಸಿದ್ದು ಮಹಾರಾಷ್ಟ್ರದ ಅಖಿಲ ಮಹಾರಾಷ್ಟ್ರ ಶಾರೀರಿಕ್ ಶಿಕ್ಷಣ ಮಂಡಲ್.ಈಗ ಈ ಆಟವು ಶಾಲೆಗಳಲ್ಲಿ ಕಡ್ಡಾಯ ಕ್ರೀಡೆಯಾಗಿದೆ.
ಆಡುವ ವಿಧಾನ
· ಈ ಆಟದಲ್ಲಿ ಒಟ್ಟಾರೆಯಾಗಿ 24 ಜನ ಇರುತ್ತಾರೆ.
· ಅದರಲ್ಲಿ 12,12 ಜನರಂತೆ 2 ತಂಡಗಳಾಗಿ ವಿಂಗಡಿಸಬೇಕು.
· ಮೊದಲ ಗುಂಪಿನ 12 ಜನರಲ್ಲಿ 9 ಜನ ಆಟಗಾರರು ಅಂಕಣದಲ್ಲಿ ಸಾಲಾಗಿ ಅಕ್ಕ ಪಕ್ಕದ ಆಟಗಾರರು ವಿರುಧ್ದ ದಿಕ್ಕಿಗೆ ಮುಖಮಾಡಿ ಮಂಡಿಯೂರಿ ಕುಳಿತುಕೊಳ್ಳುತ್ತಾರೆ
· ವಿರುದ್ಧ ಗುಂಪಿನ ಮೂರು ಜನ ಆಟಗಾರರು ಅಂಕಣಕ್ಕೆ ಇಳಿಯುತ್ತಾರೆ.
· ಉಳಿದ 3 ಜನರಲ್ಲಿ ಗುಂಪಿನ ಓಬ್ಬ ಆಟಗಾರ ಈ ಮೂರು ಜನರನ್ನು ಅಟ್ಟಿಸಿಕೊಂಡು ಹೋಗಿ ಮುಟ್ಟಬೇಕು.
· ಗುಂಪಿಗೆ 2 ಸರದಿಗಳಿರುತ್ತದೆ.ಪ್ರತಿ ಸರದಿ 9 ನಿಮಿಷಗಳದ್ದಾಗಿರುತ್ತದೆ.
· ವಿರುದ್ಧ ಗುಂಪಿನ ಜನರು ಸಾಲಾಗಿ ಕುಳಿತಿರುವವರ ಮಧ್ಯದಲ್ಲಿ ಓಡಬಹುದು.
· ಓಡಿಸುವ ಆಟಗಾರ ಸಾಲಿಗೆ ಸುತ್ತಲೂ ಸುತ್ತುತ್ತಾರೆ ಹಾಗೂ ಕುಳಿತವರ ಬೆನ್ನಿಗೆ ಖೋ ಎಂದು ಹೇಳಿ ಮುಟ್ಟಬಹುದು.ಹಾಗೆ ಮುಟ್ಟಿದಲ್ಲಿ ಮುಟ್ಟಿಸಿಕೊಂಡಾತ ಓಡಿಸುತ್ತಾನೆ ಹಾಗೂ ಮುಟ್ಟಿದಾತ ಆತನ ಜಾಗದಲ್ಲಿ ಕುಳಿತುಕೊಳ್ಳುತ್ತಾನೆ.
· ಹೀಗೆ ಆಟ ಮುಂದುವೆಯುತ್ತದೆ. ಎರಡು ಸರದಿಯ ನಂತರ ಆಟಗಾರರ ಪಾತ್ರ ಬದಲಾಗುತ್ತದೆ.
ಮಾಹಿತಿ ಸಂಗ್ರಹಣೆ – ಅನುಷ ಎನ್
ಆಲಂಬ ಮಾಲೂರು.