ಗಾಂಠಿಯಾ
ಗೋಚರ
ಗಾಂಠಿಯಾ ಎಣ್ಣೆಯಲ್ಲಿ ಕರಿದ ಒಂದು ಭಾರತೀಯ ಖಾದ್ಯ. ಇದನ್ನು ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ.[೧] ಇದು ಗುಜರಾತ್‍ನಲ್ಲಿ ಒಂದು ಜನಪ್ರಿಯ ಚಹಾ ಸಮಯದ ಲಘು ಆಹಾರವಾಗಿದೆ.[೧][೨] ಇವು ಬಹುತೇಕ ಇತರ ಭಾರತೀಯ ಲಘು ಆಹಾರಗಳಂತೆ ಗರಿಗರಿಯಾಗಿರದೇ ಮೃದುವಾಗಿರುತ್ತವೆ.[೩] ಇದರ ಸಿಹಿ ರೂಪವನ್ನು ಮೀಠಾ ಗಾಂಠಿಯಾ ಎಂದು ಕರೆಯಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಗಾಂಠಿಯಾ ಗುಜರಾತ್‍ನಲ್ಲಿ ಎಷ್ಟು ಜನಪ್ರಿಯವಾಗಿದೆಯೆಂದರೆ, ಗುಜರಾತ್‍ನ ಅತಿ ದೊಡ್ಡ ಪಕ್ಷಿಧಾಮವಾದ ನಳ್ ಸರೋವರ್‌ಗೆ ವಲಸೆ ಬರುವ ಪಕ್ಷಿಗಳು ಬಹಳ ಬೇಗನೇ ಪ್ರವಾಸಿಗರು ನೀಡುವ ಗಾಂಠಿಯಾ ತಿಂಡಿಯನ್ನು ತಿನ್ನಲು ಕಲಿಯುತ್ತವೆ.[೧][೪] ಇದು ಪಕ್ಷಿಗಳಿಗೆ ಅಪಾಯಕಾರಿ ಆಗಬಹುದು ಎಂದು ತಜ್ಞರು ಹೇಳುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ "KapilDave" (13 December 2011). "Tourists use ganthiya to lure birds at Nal Sarovar". The Indian Express. Archived from the original on 8 November 2015. Retrieved 8 November 2015.
- ↑ Kavoor, Rekha (13 October 2010). "Dandiya nights light up city life". The Times Of India. TNN. Archived from the original on 3 ಡಿಸೆಂಬರ್ 2013. Retrieved 8 November 2015.
- ↑ Elias, Esther (14 November 2013). "On the Kutch food trail". ದಿ ಹಿಂದೂ. Retrieved 8 November 2015.
- ↑ Varu, Shantilal (28 November 2010). "Brown-headed Gull feeding on ganthiya[made from bason]". Photograph. Internet Bird Collection (http://ibc.lynxeds.com). Archived from the original on 8 November 2015. Retrieved 8 November 2015.