ವಿಕಿಪೀಡಿಯ:ವಿಕಿಪೀಡಿಯ ಸಾಧಕರು/ಅನೂಪ್ ರಾವ್
ನಾವು ಈ ಬಾರಿ ಪರಿಚಯಿಸುತ್ತಿರುವ ವಿಕಿಪೀಡಿಯ ಸಾಧಕರು ಅನೂಪ್ ರಾವ್.
ಇವರು ಮೊದಲಿಗೆ FANDOM ನಲ್ಲಿ VSTF ಸದಸ್ಯರಾಗಿದ್ದರು. ವಿಕಿಯಾದಲ್ಲಿ ಇವರು ಸ್ಪ್ಯಾಮ್, ವಿಧ್ವಂಸಕತೆ, ಸೂಕ್ತವಲ್ಲದ ಅಪ್‌ಲೋಡುಗಳನ್ನು ತೆಗೆದುಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲಿ ಇವರು ವಿಕಿ ಬಗ್ಗೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. ಅಲ್ಲಿ ಕಲಿತ ವಿಷಯಗಳು ಕನ್ನಡ ವಿಕಿಪೀಡಿಯದಲ್ಲಿ ತಾಂತ್ರಿಕವಾಗಿ ತುಂಬಾ ಮುಖ್ಯ ಪಾತ್ರವಹಿಸಿದೆ. ಇವರಿಗೆ ಸಮಯ ಸಿಕ್ಕಾಗ ಟೆಂಪ್ಲೇಟು ಹಾಗೂ CSS ಸಹಾಯದಿಂದ ಓದುಗರಿಗೆ ಸುಲಭವಾಗುವಂತ ವಿನ್ಯಾಸಗಳನ್ನು ಸಿದ್ಧಪಡಿಸುವಂತಹ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸುಕೊಳ್ಳುವದಲ್ಲದೇ, ಇತರೇ ತಾಂತ್ರಿಕ ಕೆಲಸಗಳಲ್ಲಿಯೂ ಸಹ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ.
ಇವರು ಕನ್ನಡ ವಿಕಿಪೀಡಿಯದ ಹಾಲಿ ನಿರ್ವಾಹಕರು ಮತ್ತು ಈ ಮೊದಲು ಇತರ ಕನ್ನಡ ವಿಕಿಗಳ(ವಿಕಿಸೋರ್ಸ್) ನಿರ್ವಾಹಕರಾಗಿ ಅನೇಕ ತಾಂತ್ರಿಕ ಕೆಲಸಗಳನ್ನು ಕನ್ನಡ ವಿಕಿಪೀಡಿಯದಲ್ಲಿ ಮಾಡಿದ್ದಾರೆ ಹಾಗು ಇತರ ವಿಕಿಮೀಡಿಯ ತಾಂತ್ರಿಕ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ತಾಂತ್ರಿಕ ಕೆಲಸಗಳಲ್ಲದೇ ಲೇಖನಗಳನ್ನು ಸೇರಿಸುವುದು ಮತ್ತು ಉತ್ತಮಗೊಳಿಸುವುದಲ್ಲದೇ ಸಮುದಾಯಕ್ಕೆ ತಾಂತ್ರಿಕ ತರಬೇತಿ ನೀಡುವ ಕೆಲಸಗಳಲ್ಲೂ ಸಕ್ರೀಯವಾಗಿ ಪಾಲ್ಗೊಳ್ಳುತ್ತಿರುತ್ತಾರೆ.