ಹುಟ್ಟು
ಹುಟ್ಟು (ತೊಳೆ, ಜಲ್ಲೆ) ಜಲವಾಹಿತ ಸಂಚಾಲನೆಗೆ ಬಳಸಲಾದ ಒಂದು ಸಾಧನ. ಹುಟ್ಟುಗಳು ಒಂದು ತುದಿಯಲ್ಲಿ ಚಪ್ಪಟೆಯಾದ ಭಾಗವನ್ನು ಹೊಂದಿರುತ್ತವೆ. ಹುಟ್ಟುಗಾರರು ಮತ್ತೊಂದು ತುದಿಯಲ್ಲಿ ಹುಟ್ಟನ್ನು ಹಿಡಿದುಕೊಳ್ಳುತ್ತಾರೆ.
ಹುಟ್ಟುಹಾಕುವಿಕೆಯಲ್ಲಿ ಹುಟ್ಟಿಗಾಗಿ ಇರುವ ಆಧಾರ ಗೂಟ ಬಿಂದುವಿನ ಮೂಲಕ ಹುಟ್ಟು ನೌಕೆಗೆ ಜೋಡಣೆಗೊಂಡಿರುತ್ತದೆ, ಇದು ಹುಟ್ಟು ತಿರುಗಣೆ ಅಥವಾ ಹುಟ್ಟಾಣಿಯಾಗಿರಬಹುದು. ಹುಟ್ಟಿನ ಗಿಡ್ಡನೆಯ ಭಾಗ ನೌಕೆಯ ಒಳಗಿರುವಂತೆ ಮತ್ತು ಹೆಚ್ಚು ಉದ್ದನೆಯ ಭಾಗವು ನೌಕೆಯ ಹೊರಗಿರುವಂತೆ ಹುಟ್ಟನ್ನು ಆಧಾರ ಗೂಟ ಬಿಂದುವಿನಲ್ಲಿ ಇರಿಸಲಾಗುತ್ತದೆ. ಹುಟ್ಟು ಹಾಕುವವನು ಹುಟ್ಟಿನ ಗಿಡ್ಡನೆಯ ಕೊನೆಯನ್ನು ಎಳೆಯುತ್ತಾನೆ ಮತ್ತು ಉದ್ದನೆಯ ಕೊನೆಯು ನೀರಿನಲ್ಲಿರುತ್ತದೆ. ಹುಟ್ಟು ಹಾಕುವವನು ಸಣ್ಣ ದೂರದವರೆಗೆ ದೊಡ್ಡ ಬಲವನ್ನು ಅನ್ವಯಿಸುತ್ತಾನೆ. ಇದಕ್ಕೆ ನೀರು ಹೆಚ್ಚಿನ ದೂರದವರೆಗೆ ಕಾರ್ಯನಿರ್ವಹಿಸುತ್ತಾ ಅನ್ವಯಿಸುವ ಸಣ್ಣ ಬಲಕ್ಕೆ ಸಮಾನವಾಗಿರಬೇಕು, ಅಂದರೆ ಹುಟ್ಟುಹಾಕುವವನು ಮಾಡಿದ ಕೆಲಸವನ್ನು ನೀರು ಮಾಡುವ ಕೆಲಸವು ಸಮವಾಗಿಸಬೇಕು.[೧]
ಉಲ್ಲೇಖಗಳು
[ಬದಲಾಯಿಸಿ]- ↑ "2011 FISA Rule Book". FISA. p. 53. Archived from the original on 29 ಜುಲೈ 2013. Retrieved 19 January 2013.