ಸದಸ್ಯ:Venkateshab/ನನ್ನ ಪ್ರಯೋಗಪುಟ
ಮಹಿಳಾ ಆರೋಗ್ಯ
[ಬದಲಾಯಿಸಿ]ಪ್ರಚಲಿತ ಮಹಿಳೆಯರ ಆರೋಗ್ಯದಲ್ಲಿ ಅವರು ಸೇವನೆ ಮಾಡುವ ಆಹಾರ ಪದ್ದತಿ, ಮಾನಸಿಕ ಒತ್ತಡ,ದ್ಯೆಹಿಕ ಬದಲಾವಣೆಗಳಿಂದಾಗಿ ಸಾಕಷ್ಟು ಆರೋಗ್ಯದ ಸಮಸ್ಯೆಗಳು ಉಂಟಾಗುತ್ತಿವೆ. ಮಹಿಳಾ ಸಭಾ 1937ರಲ್ಲಿ ದುರ್ಗಾಬಾಯಿ ಹುಟ್ಟುಹಾಕಿದ ಸಂಸ್ಥೆ. ಅದು ಅಂದಿನಿಂದ ಇಂದಿನ ವರಗೆ ಮಕ್ಕಳ ಮತ್ತು ಮಹಿಳೆಯರ ಶಿಕ್ಷಣ, ಆರೋಗ್ಯ ಕಲ್ಯಾಣ ಮತ್ತು ಪುನರ್ವಸತಿಗೆ ಹೆಚ್ಚಿನ ಅದ್ಯತೆಯನ್ನು ನೀಡಿದೆ. (ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೇಶಮುಖ್, ದುರ್ಗಾಬಾಯಿ) ವಿಶ್ವ ಆರೋಗ್ಯ ಸಂಸ್ಥೆಯು ಕೂಡ ಮಹಿಳೆಯರ ಆರೋಗ್ಯದ ಕಡೆ ಹೆಚ್ಚಿನ ಒಲುವನ್ನು ತೋರುತ್ತಿದೆ. ಹಾಗೆಯೇ ಮಹಿಳಾ ಅಪೌಷ್ಠಿಕತೆ, ರಕ್ತಹಿನತೆ, ಲ್ಯೆಂಗಿಕ ಸಮಸ್ಯೆಗಳು, ಮಾನಸಿಕ ಒತ್ತಡ, ಕೌಟಂಬಿಕ ಸಮಸ್ಯೆಗಳು, ಗಣಿಗಾರಿಕೆಯಲ್ಲಿ ಮಹಿಳ ಕಾಮಿಕರು,ಶ್ರವಣದೋಷ, ಅಂಗವ್ಯೆಕಲತೆ,ಕಣ್ನಿನ ದೋಷಗಳಂತಹ ಸಮಸ್ಯಗಳಿಗೆ ಒಳಗಾಗಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆ
ಮಹಿಳ ಅನಾರೋಗ್ಯಕ್ಕೆ ತುತ್ತಾಗುವ ಖಾಯಿಲೆಗಳು
[ಬದಲಾಯಿಸಿ]- ಮಾನಸಿಕ ರೋಗಗಳು ಮಾನಸಿಕ ರೋಗ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (NIMHANS) ಭಾರತದ ಪ್ರಮುಖ ವೈದ್ಯಕೀಯ ಸಂಸ್ಥೆಯಾಗಿದೆ. ಇದು ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿದೆ . NIMHANS 1994 ರಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ಸ್ವಾಯತ್ತ ವಿಶ್ವವಿದ್ಯಾಲಯ ಮತ್ತು 2012 ರಲ್ಲಿ ಸಂಸತ್ತಿನ ಕಾಯ್ದೆಯ ಮೂಲಕ ಮಹತ್ವದ ಸಂಸ್ಥೆ ಎಂದು ಘೋಷಿಸಲಾಗಿದೆ.ಇದು ಮಹಿಳೆಯರ ಮಾನಸಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ೧೯೮೨ ರಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾಯಿದೆ ಜಾರಿಗೆ ಬಂತು ಈ ಕಾರ್ಯಕ್ರಮದಿಂದ ಮಹಿಳೆಯ ಮಾನಸಿಕ ಆರೋಗ್ಯದಲ್ಲಿ ಸುಧಾರಣೆಯಾಗಿದೆ.
- ದ್ಯೆಹಿಕ ನ್ಯೂನತೆಗಳು ದ್ಯೆಹಿಕ ನ್ಯೂನತೆಗಳಾದ ಶ್ರವಣ ದೋಷ, ಇರುಳು ಕುರುಡುತನ, ಬಡಕಲು ದೇಹಸ್ಥಿತಿ,ಕ್ಯೆ ಕಾಲುಗಳ ರಚನೆಯಲ್ಲಿ ಏರುಪೇರು ಹೃದಯ ಸಂಬಂಧಿ ಕಾಯಿಲೆ,ಮೂತ್ರಪಿಂಡ, ಮೆದುಳು ಸಂಬಂಧಿ ಕಾಯಿಲೆ, ಶ್ವಾಸಕೋಶ, ಅಪೌಷ್ಠಿಕತೆ ಸಂಬಂಧಿಸಿದ ಕಾಯಿಗಳು ಇತ್ಯಾದಿ.
ಮಹಿಳಾ ಆರೋಗ್ಯ ಕಾರ್ಯಕ್ರಮಗಳು
[ಬದಲಾಯಿಸಿ]ಮಹಿಳೆಯರ ಆರೋಗ್ಯ ಸುಧಾರಣೆಗೆ ಸಂಬಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಮಹಿಳಾ ಆರೋಗ್ಯಕ್ಕೆ ಸಂಬಂಧಿಸಿದಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಮಾತೃಪೂರ್ಣ ಯೋಜನೆ, ಮಡಿಲು ಯೋಜನೆ,
ಮಹಿಳೆಯ ಆರೋಗ್ಯ ಸಂಬಂಧಿಸಿದ ಹಂತಗಳು
[ಬದಲಾಯಿಸಿ]ಪ್ರಸೂತಿ ಆರೈಕೆ, ಗರ್ಭಧಾರಣೆ ಆರೋಗ್ಯ, ಸಂತಾನೂತ್ಪತ್ತಿ ಆರೋಗ್ಯ, ರಜಸ್ರಾವ,ಇನ್ನು ಮುಂತಾದ ಹಂತಗಳಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ಹೊಂದಿರಬೇಕಾಗುತ್ತದೆ.ಪೌಷ್ಠಿಕ ಆಹಾರವನ್ನು ಒದಗಣೆ, ಗರ್ಭಿಣಿ ಮಹಿಳೆಯರಿಗೆ ಲಸಿಕಾ ಕಾರ್ಯಕ್ರಮ,ಮಹಿಳೆ ಮತ್ತು ಮಕ್ಕಳ ರಕ್ಷಣೆ, ಉಜ್ವಲ ಯೋಜನೆಯನ್ನು. ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನೆ,(ಹೆರಿಗೆ ಸೌಲಭ್ಯ ಯೋಜನೆ) ಜನನಿ ಸುರಾಕ್ಷಾ ಯೋಜನೆ, ಉದ್ಯೋಗಿನಿ ಯೋಜನೆ, ಮಹಿಳಾ ಸಾಂತ್ವಾನ ಕೇಂದ್ರ,ಇತ್ಯಾದಿ.
ಮಹಿಳೆ ಅರೋಗ್ಯ ಸಲಹೆಗಳು
[ಬದಲಾಯಿಸಿ]- ಯಾವುದೆ ಅನಾರೋಗ್ಯದ ಸಮಸ್ಯೆಗಳು ಕಂಡು ಬಂದಲ್ಲಿ ಸೂಕ್ತ ವ್ಯೆದ್ಯರ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆಯುವುದು.
- ಬಾಣಂತಿ ಮಹಿಳೆಯರು ಮಳೆಗಾಲ,ಚಳಿಗಾಲ, ಹಾಗೂ ಬೇಸಿಗೆ ಕಾಲಕ್ಕೆ ಅನುಗುಣವಾಗಿ ತಮ್ಮ ದ್ಯೆಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿಯಲ್ಲಿರಿಸಿ ಕೋಳ್ಳುವುದು.
- ಸಮತೋಲನ ಆಹಾರವನ್ನು ಸೇವನೆ ಮಾಡುವುದು.
- ಸ್ವಚ್ಛ ಮತ್ತು ಶುಧ್ಧವಾದ ವಾತವರಣ ಪೂರಕವಾಗಿ ಹೊಂದಿಕೋಳ್ಳುವುದು.
- ಮಾನಸಿಕ ಸಮಸ್ಯೆಗಳು ಉಂಟಾದಾಗ ಸೂಕ್ತ ಮನೋ ವ್ಯೆದರ ಸಲಹೆಗಳನ್ನು ಪಡೆಯುವುದು.
- ಖಾಯಿಲೆಗಳು ಬಂದಾಗ ಯಾವುದೇ ರೀತಿಯ ಮಾನಸಿಕ ದುಗುಡಗಳಿಗೆ ಒಳಗಾಗದೆ ಮಾನಸಿಕ ಸದೃಡತೆಯ ಮೂಲಕ ಸೂಕ್ತ ಚಿಕಿತ್ಸೆಯನ್ನು ಪಡೆಯುವುದು.
ಉಲ್ಲೇಖ
[ಬದಲಾಯಿಸಿ]- ↑ [www:.prajavani.net/article/ಸ್ತ್ರೀ-ಜಗದಲಿ;08/03/2016:ಪ್ರಜಾವಾಣಿ :]
- ↑ http://www.kannadaprabha.com/district-news/women-have-a-long-and-rich-heritage-meena-chandavarkar/265517.html