ಗೌನ್
ಸ್ಯಾಕ್ಸನ್ ಪದ ‘ಗುನ್ನ’ದಿಂದ ಬಂದಿರುವ ಶಬ್ದವೇ ಗೌನ್. ಸಾಮಾನ್ಯವಾಗಿ ನಿಲುವಂಗಿ ಎಂದೂ ಕರೆಯಲ್ಪಡುವ ಗೌನ್‍ಗಳು ಸಡಿಲವಾಗಿದ್ದು,ಮೊಣಕಾಲಿನವರೆಗೆ ಅಥವಾ ಪಾದದವರೆಗೂ ಇರುತ್ತವೆ.ಇದನ್ನು ಒಂದೇ ಬಟ್ಟೆಯಿಂದ ಹೊಲಿಯಲಾಗುತ್ತದೆ.17ನೇ ಶತಮಾನದಲ್ಲಿ ಯರೋಪಿನ ಮಹಿಳೆಯರು ಹಾಗೂ ಪುರುಷರು ಧರಿತ್ತಿದ್ದ ಗೌನ್‍ಗಳು ಇದೀಗ ಮಹಿಳೆಯರಿಗೆ ಮಾತ್ರ ಸೀಮಿತವಾಗಿದೆ.ಆಧುನಿಕ ಗೌನ್‍ಗಳು ವಿವಿಧ ಆಕಾರಗಳಲ್ಲಿ, ಶೈಲಿಗಳಲ್ಲಿ ಇರುತ್ತವೆ. ವಿದೇಶಿ ಸಂಸ್ಕøತಿಯ ಹುಡುಗಿಯರು ಹಾಗೂ ಮಹಿಳೆಯರು ಈ ಉಡುಪನ್ನು ಧರಿಸುತ್ತಾರೆ. 18ನೇ ಶತಮಾನದಲ್ಲಿ ಕೋಟ್‍ನಂತಿರುವ ಉದ್ದವಾದ ಸಡುಲ ಉಡುಪನ್ನು ಪುರುಷರು ಧರಿಸುತ್ತಿದ್ದರು.ಇದಕ್ಕೆ ಬಾನ್ಯನ್ ಎಂಬ ಹೆಸರಿದೆ.ನ್ಯಾಯಾಧೀಶರು, ಪಾದ್ರಿಗಳು ಇಂದುಧರಿಸುವ ನಿಲುವಂಗಿಗಳು ಮಧ್ಯಕಾಲೀನ ಪುರುಷರು ದೈನಂದಿನ ಉಡುಪಾಗಿ ಧರಿಸುತ್ತದ್ದ ನಿಲುವಂಗಿಗಳಿಂದ ರೂಪಿತಗೊಂಡಿವೆ.
ಇತಿಹಾಸ
[ಬದಲಾಯಿಸಿ]ಗೌನ್‍ಗಳನ್ನು ಹೆಚ್ಚಾಗಿ ಆಂಗ್ಲೋ ಸ್ಯಾಕ್ಸನ್ ನಹಿಳೆಯರು ಧರಿಸುತ್ತಿದ್ದರು. ಇದು ಉದ್ದವಾದ, ಸಡಿಲ ಹೊರ ಉಡುಪನ್ನು ಒಳಗೊಂಡಿತ್ತು. ಕೋಟ್, ಸರ್ಕೋಟ್, ನಿಲುವಂಗಿ ಎಂದುಕರೆಯಲ್ಪಡುತ್ತಿತ್ತು.12ನೇ ಮತ್ತು 13ನೇ ಶತಮಾನದಲ್ಲಿ ಯರೋಪಿಯನ್ ವಿಶ್ವವಿದ್ಯಾನಿಲಯಗಳಿಗೆ ಹಾಜರಾಗುತ್ತಿದ್ದ ವಿದ್ಯಾರ್ಥಿಗಳು ಗೌನ್ ಧರಿಸುತ್ತಿದ್ದರು.14ನೇ ಶತಮಾನದಿಂದ 17ನೇ ಶತಮಾನದವರೆಗೂ ಪುರುಷ ಹಾಗೂ ಮಹಿಳೆಯರು ಧರಿಸುವ ಯಾವುದೆ ಉದ್ದನೆಯ, ಸಡಿಲ ಉಡುಪನ್ನು ಗೌನ್ ಎನ್ನುತ್ತಿದ್ದರು.16ನೇ ಶತಮಾನದಅಂತ್ಯದ ವೇಳೆಗೆ ಇಟಲಿಯಲ್ಲಿ ಗೌನ್‍ಗಳು ಬಳಕೆಯಲ್ಲಿರಲಿಲ್ಲ.18ನೇ ಶತಮಾನದಲ್ಲಿ ಅಮೇರಿಕನ್ ವಸಾಹತುಗಳಲ್ಲಿ ಕೆಲಸದ ಸಂದರ್ಭದಲ್ಲಿ ಸಣ್ಣ ಗೌನ್‍ಗಳನ್ನು ಧರಿಸುತ್ತಿದ್ದರು.ರೇಷ್ಮೆ ಹಾಗೂ ರಿಬ್ಬನ್‍ಗಳನ್ನು ಗೌನ್‍ನ ಅಲಂಕಾರಕ್ಕಕಾಗಿ ಬಳಸುತ್ತಿದ್ದರು.[೧]
11ನೇ ಶತಮಾನ
[ಬದಲಾಯಿಸಿ]ಯುರೋಪಿನಲ್ಲಿ 11ನೇ ಶತಮಾನದಲ್ಲಿ ಮಹಿಳೆಯರು ಪುರುಷರ ಗಿಡ್ಡ ಅಂಗಿಯನ್ನು ಹೋಲುವ ಉಡುಪು ಧರಿಸುತ್ತಿದ್ದರು ಮತ್ತು ಇವು ಸಡಿಲವಾಗಿರುತ್ತಿತ್ತು.ಇವು ಮೊಣಕಾಲಿನ ಕೆಳ ಭಾಗದವರೆಗೆ ಇರುತ್ತಿದ್ದವು.ಶತಮಾನದ ಅಂತ್ಯದಲ್ಲಿ ಈ ಉಡುಪುಗಳು ಮಹಿಳೆಯರಿಗೆ ಬೇಕಾಗುವ ರೀತಿಯಲ್ಲಿ ಧರಿಸಲು ಸುಲಭವಾಗುತ್ತಿದ್ದವು.
16ನೇ ಶತಮಾನ
[ಬದಲಾಯಿಸಿ]16ನೇ ಶತಮಾನದ ಆರಂಭದಿಂದ ಯುರೋಪಿನಲ್ಲಿ ಮಧ್ಯಮ ಹಾಗೂ ಮೇಲ್ವರ್ಗದ ಮಹಿಳೆಯರು ಗೌನ್‍ಧರಿಸುತ್ತದ್ದರು.ಇವು ಅಗಲ ತೋಳುಗಳನ್ನು ಹೊಂದಿದ್ದವು.ಇಂಗ್ಲೆಂಡಿನ ರಾಣಿ ಎಲಿಜಬೆತ್ ಮಹಿಳೆಯರಿಗೆ ಯಾವರೀತಿಯಗೌನ್‍ಧರಿಸಬೇಕೆಂದು ಆದೇಶಿಸಿದ್ದಳು.ಫ್ರೆಂಚ್ ಉಡುಪುಗಳನ್ನು ಮಾರ್ಲೋಟೆಸ್‍ಎಂದುಕರೆಯಲಾಗುತ್ತಿತ್ತು.ಇಟಲಿಯಲ್ಲಿಉಡುಪುಗಳನ್ನು ರೋಪಾ ಮತ್ತು ಸೆಮರಾಎನ್ನುತ್ತಿದ್ದರು.ರಷ್ಯಾದ ಉಡುಪುಗಳು ಸಮಾಜದಲ್ಲಿ ಹಾಗೂ ಕುಟುಂದಲ್ಲಿ ಮಹಿಳೆರ ಸ್ಥಾನವನ್ನು ಗುರುತಿಸಿದೆ. ಈ ಶತಮಾನದಲ್ಲಿ ಗೌನ್‍ಗಳ ಮೇಲಿನ ಕಸೂತಿಗಳು ಜನಪ್ರಿಯವಾದವು.
17ನೇ ಶತಮಾನ
[ಬದಲಾಯಿಸಿ]ವಸ್ತ್ರೋದ್ಯಮದ ಕೇಂದ್ರವಾಗಿದ್ದ ಹಾಲೆಂಡ್‍ನಲ್ಲಿ, 17ನೇ ಶತಮಾನದಲ್ಲಿ ವಿಶೇಷ ನಾವಿನ್ಯತೆಯ ಗೌನ್ ಹಾಗೂ ಉಡುಪುಗಳು ತಯಾರಾಗುತ್ತಿದ್ದವು.ಇಂಗ್ಲೆಂಡ್ ಮತ್ತು ಫ್ರಾನ್ಸ್‍ನಲ್ಲಿಉಡುಪುಗಳು ಮಹಿಳೆ ಸೂಕ್ತವಾಗುವ ಆಕಾರಗಳನ್ನು ಹೊಂದಿದ್ದವು.ಅಗಲವಾದ ಲಂಗ, ನಿಯಮಿತವಾದ ಮಡಿಕೆಗಳು, ವಿವಿಧ ರೀತಿಯ ಕತ್ತಿನ ಆಕಾರದ ಗೌನ್‍ಗಳಿದ್ದವು.ಅಮೇರಿಕಾ, ಸ್ಪ್ಯಾನಿಶ್ ಹಾಗೂ ಡಚ್ ವಸಾಹತುಶಾಹಿಗಳಲ್ಲಿ ವಾಸಿಸುತ್ತಿದ್ದ ಶ್ರೀಮಂತ ಮಹಿಳೆಯರು ತಮ್ಮ ಸ್ವದೇಶಿ ಉಡುಪುಗಳನ್ನು ಧರಿಸುತ್ತಿದ್ದರು.ಅಮೇರಿಕಾ ವಸಾಹತುಶಾಹಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ಉಣ್ಣೆ ಅಥವಾ ಲಿನಿನ್ ಬಟ್ಟೆಯ ಉಡುಪು ಧರಿಸುತ್ತದ್ದರು. ನಿಲುವಂಗಿಗಳನ್ನು ಹೊಲಿಯಲು ಸರಳ ಮಾದರಿ ಅನುಸರಿಸುತ್ತಿದ್ದರು.
18ನೇ ಶತಮಾನ
[ಬದಲಾಯಿಸಿ]ದೊಡ್ಡ, ಅಗಲ ಗೌನ್‍ಗಳನ್ನು 18ನೇ ಶತಮಾನದಲ್ಲಿಮಹಿಳೆಯರು ಧರಿಸುತ್ತಿದ್ದರು.ತಿಳಿಯಾದ ಬಣ್ಣ ಹಾಗೂ ಹಗುರ ಬಟ್ಟೆಗಳಿಂದ ಹೊಲಿಸುತ್ತಿದ್ದರು.18ನೇ ಶತಮಾನದ ನಂತರದಲ್ಲಿ ಫ್ರೆಂಚ್ ಫ್ಯಾಶನ್ ಉಡುಪುಗಳು ಬದಲಾವಣೆಕಂಡವು.ಮೊಣಕಾಲುಉದ್ದದ ಗೌನ್‍ಗಳು, ಹಿಮ್ಮಡಿಉದ್ದದ ಗೌನ್‍ಗಳು, ನೆಲದ ಮೇಲೆ ಗುಡಿಸಿಕೊಂಡು ಹೋಗುವ ಗೌನ್‍ಗಳು ಬದಲಾದವು.ಫ್ರಾನ್ಸ್‍ನಲ್ಲಿ ಫ್ರೆಂಚ್‍ಕ್ರಾಂತಿಯ ಬಳಿಕ ಸರಳವಾದ ಗೌನ್‍ಗಳು ಪ್ರಚಲಿತಗೊಂಡವು.ಕ್ರಾಂತಿಯ ಸಂಕೇತವಾದ ಕೆಂಪು, ಬಿಳಿ, ನೀಲಿ ಬಣ್ಣದ ಉಡುಪುಗಳು ಜನಪ್ರಿಯವಾದವು.
19ನೇ ಶತಮಾನ
[ಬದಲಾಯಿಸಿ]ದಿನದ ಹಾಗೂ ಉಡುಗೆಯಉದ್ದೇಶದಿಂದ 19ನೇ ಶತಮಾನದ ಉಡುಪುಗಳು ವರ್ಗೀಕರಿಸಲ್ಪಟ್ಟವು.ರಷ್ಯಾದಲ್ಲಿ ಈ ಶತಮಾನದ ಆರಂಭದಲ್ಲಿ ಅರೆ ಪಾರದರ್ಶಕ ಗೌನ್‍ಗಳು ಪ್ರಚಲಿತವಾಗಿದ್ದವು.ರಷ್ಯಾ ಹಾಗೂ ಯುರೋಪಿನ ವಸ್ತ್ರ ವಿನ್ಯಾಸದಲ್ಲಿ ಸಾಮ್ಯತೆಯಿತ್ತು.ಲಂಗಗಳು ಅತೀವವಾಗಿ ಅಲಂಕರಿಸಲ್ಪಟಿದ್ದವು. ಬಟರ್ರಿಕ್ ಪಬ್ಲಿಷಿಂಗ್ ಕಂಪನಿ ಉಡುಪುಗಳ ತಯಾರಿಕೆಗೆ ಉತ್ತೇಜನ ನೀಡಿತು.ನಿದ್ರೆ ಮಾಡಲು ಅಮೇರಿಕನ್ ಮಹಿಳೆಯರು ಉದ್ದದ ಬಿಳಿ ಬಣ್ಣದ ಉಡು ಪುಧರಿಸುತ್ತಿದ್ದರು.ಸುಧಾರಿತ ಹೊಲಿಗೆ ಯಂತ್ರಗಳು ನಾವೀನ್ಯ ಗೌನ್‍ಗಳನ್ನು ತಯಾರಿಸಲು ಸಹಕಾರಿಯಾದವು. ವಿಕ್ಟೋರಿಯನ್ ಯುಗದ ಉಡುಪುಗಳು ಬಿಗಿಯಾಗಿ ಹಾಗೂ ಆಲಂಕರಿಕವಾಗಿದ್ದವು. ಉಡುಗೆಗಳ ನಿಯಂತ್ರಣಕ್ಕಾಗಿ ರ್ಯಾಶನಲ್ ಉಡುಗೆ ಸೊಸೈಟಿ ರೂಪುಗೊಂಡಿತು.
20ನೇ ಶತಮಾನ
[ಬದಲಾಯಿಸಿ]ಒಂದೇ ಬಟ್ಟೆಯೊಂದ ತಯಾರಿಸಿದ ಉಡುಪನ್ನು ಶರ್ಟ್‍ವೈಸ್ಟ್ ಎಂದು, ಸ್ಕರ್ಟ್ ಮತ್ತು ಕುಪ್ಪಸವನ್ನು ಒಳಗೊಂಡಿದ್ದರೆ ವೈಸ್ಟ್ ಎಂದು ಕರೆಯುತ್ತಿದ್ದರು.ಗೌನ್‍ಗಳು ದುಬಾರಿ ಬಟ್ಟೆಗಳು ಹಾಗೂ ಲೇಸ್‍ಗಳಿಂದ ತಯಾರಾಗುತ್ತಿದ್ದವು. ಅಮೇರಿಕನ್ ಲೇಡೀಸ್ ಟೈಲರ್ಸ್ ಅಸೋಸೊಯೇಷನ್ ಮಹಿಳೆಯರಿಗೆ ಕೆಲಸ ಒದಗಿಸಲು ವಿವಿಧ ರೀತಿಯ ಗೌನ್‍ಗಳನ್ನು ಪರಿಚಯಿಸಿತು. ಈ ಶತಮಾನದಲ್ಲಿ ಫ್ಯಾಕ್ಟರಿಗಳಲ್ಲಿ ತಯಾರಿಸಿದ ಉಡುಪುಗಳು ಸಿದ್ಧಗೊಂಡವು. ವಿವಿಧ ರೀತಿಯ ನೆಕ್ ಲೈನ್‍ಗಳು, ಅಲ್ಪ ತೋಳು ಹಾಗೂ ತೋಳಿಲ್ಲದ ಗೌನ್‍ಗಳಿದ್ದವು. ಮೊದಲನೆಯ ಮಹಾಯುದ್ಧದ ಸಂದರ್ಭದಲ್ಲಿ ಮಹಿಳೆಯರು ಚಿಕ್ಕ ಉಡುಪುಗಳಿಗೆ ಪ್ರಾಶಸ್ತ್ಯ ನೀಡಿದರು. ಪ್ರಮುಖವಾಗಿಕಪ್ಪು, ಬಿಳಿ ಮತ್ತು ಬೂದು ಬಣ್ಣದ್ದಾಗಿತ್ತು. ವಯಸ್ಸಾದ ಮಹಿಳೆಯರು ಧರಿಸುತ್ತಿದ್ದ ಶೈಲಿಯ ಉಡುಪನ್ನೇ ಯುವತಿಯರು ಅನುಸರಿಸಿದರು. ನೇರವಾದ ಗೌನ್‍ಗಳು ಪ್ರಚಲಿತಗೊಂಡವು[೨]
ಗೌನ್‍ಗಳ ಮಹತ್ವ
[ಬದಲಾಯಿಸಿ]ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಗೌನ್‍ಗಳು ಮುಖ್ಯ ಪಾತ್ರ ವಹಿಸುತ್ತವೆ. ಸಮಾರಂಭಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ, ವಿವಾಹಗಳಲ್ಲಿ ಮಹಿಳೆಯರು ಗೌನ್‍ಗಳಿಗೆ ಪ್ರಾಶಸ್ತ್ಯ ನೀಡುತ್ತಾರೆ.ಇಂದು ವಿವಿಧ ಶೈಲಿಯ ಗೌನ್‍ಗಳನ್ನು ಕಾಣಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ Arnold, Janet: Patterns of Fashion 2: Englishwomen's Dresses and Their Construction c.1860–1940, Wace 1966, Macmillan 1972. Revised metric edition, Drama Books 1977. ISBN 0-89676-027-8
- ↑ Darnell, Paula Jean (2000). From Victorian to Vamp:Women's Clothing 1900-1929. Reno, NV: Fabric Fancies. ISBN 9781887402156.