ರಾಣಿ ರಾಂಪಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಣಿ ರಾಂಪಾಲ್
2010 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ರಾಂಪಾಲ್ (ನೀಲಿ ಬಣ್ಣದಲ್ಲಿ).
Personal information
ಜನನ (1994-12-04) ೪ ಡಿಸೆಂಬರ್ ೧೯೯೪ (ವಯಸ್ಸು ೨೯)
ಶಹಬಾದ್, ಹರಿಯಾಣ, ಭಾರತ
ರಾಷ್ಟ್ರೀಯ ತಂಡ
2009–ಪ್ರಸ್ತುತ ಭಾರತ ಮಹಿಳಾ ರಾಷ್ಟ್ರೀಯ ಹಾಕಿ ತಂಡ 140 (78)


ರಾಣಿ ರಾಂಪಾಲ್[೧] [೨] ಹುಟ್ಟಿದ್ದು ಡಿಸೆಂಬರ್.೪ ೧೯೯೪. ಇವರು ಭಾರತದ ಹಾಕಿ ಆಟಗಾರ್ತಿಯಾಗಿದ್ದಾರೆ.ಇವರು ೧೫ನೇ ವಯಸ್ಸಿನಲ್ಲೇ ಭಾರತದ ರಾಷ್ಟ್ರೀಯ ಹಾಕಿ ತಂಡದಲ್ಲಿದ್ದು ೨೦೧೦ ನೇ ವಿಶ್ವಕಪ್‍ನಲ್ಲಿ ಭಾಗವಹಿಸಿದ್ದರು.

ಆರಂಭಿಕ ಜೀವನ[ಬದಲಾಯಿಸಿ]

ರಾಣಿ ಅವರು ಡಿಸೆಂಬರ್ ೪, ೧೯೯೪ ರಂದು ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ಶಹಾಬಾದ್ ಮಾರ್ಕಂಡದಲ್ಲಿ ಜನಿಸಿದರು, ಇವರು ಬಡ ಕುಟುಂಬದ ಹಿನ್ನಲೆಯನ್ನು ಹೊಂದ್ದಿದ್ದಾರೆ. ಅವರ ತಂದೆ ಬಂಡಿ ಎಳೆಯುವ ಉದ್ಯೋಗ.2003 ರಲ್ಲಿ ಅವರು ಹಾಕಿ ತರಬೇತಿಯನ್ನು ಆರಂಭಿಸಿದರು ಮತ್ತು ದ್ರೋಣಾಚಾರ್ಯ ಪ್ರಶಸ್ತಿಯನ್ನು[೩] ಸ್ವೀಕರಿಸಿದ ಬಲ್ದೇವ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಶಹಬಾದ್ ಹಾಕಿ ಅಕಾಡೆಮಿಯಲ್ಲಿ ತರಬೇತಿ ಪಡೆದರು. ವೃತ್ತಿಪರವಾಗಿ ಆಡಲು ಆರಂಭಿಸಿದಾಗ ಗೋಸ್ಪೋರ್ಟ್ಸ್ ಫೌಂಡೇಷನ್, ಕ್ರೀಡಾ ಸರ್ಕಾರೇತರ ಸಂಸ್ಥೆಯು ಹಣಕಾಸಿನ ಮತ್ತು ವಿತ್ತೀಯವಲ್ಲದ ಬೆಂಬಲ ನೀಡಿತು.[೪]

ವೃತ್ತಿಜೀವನ[ಬದಲಾಯಿಸಿ]

2009 ರ ಜೂನ್‍ನಲ್ಲಿ ರಷ್ಯಾ ಕಜನ್ನಲ್ಲಿ ನಡೆದ ಚಾಂಪಿಯನ್ಸ್ ಚಾಲೆಂಜ್ ಟೂರ್ನಮೆಂಟ್‍ನ ಅಂತಿಮ ಪಂದ್ಯದಲ್ಲಿ 4 ಗೋಲುಗಳನ್ನು ಹೊಡೆಯುವ ಮೂಲಕ ಭಾರತ ತಂಡವನ್ನು ಗೆಲ್ಲಿಸಿದರು. ಅವರು "ಟಾಪ್ ಗೋಲ್ ಸ್ಕೋರರ್" ಮತ್ತು "ಟೂರ್ನಮೆಂಟ್‍ನ ಯುವ ಆಟಗಾರ್ತಿ"ಯಂಬ ಬಿರುದಿಗೆ ಕಾರಣರಾದರು.

2009 ರ ನವೆಂಬರ್‍‍ನಲ್ಲಿ ನಡೆದ ಏಷ್ಯಾ ಕಪ್‍ನಲ್ಲಿ ಭಾರತೀಯ ತಂಡಕ್ಕೆ ಬೆಳ್ಳಿ ಪದಕ ತಂದುಕೊಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. 2010 ರ ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು 2010 ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ರಾಷ್ಟ್ರೀಯ ತಂಡದೊಂದಿಗೆ ಆಡಿದ ನಂತರ ರಾಮ್ಪಾಲ್ 2010 ರ ಮಹಿಳಾ ಆಲ್ ಸ್ಟಾರ್ ತಂಡವನ್ನು ಸೇರಿಕೊಂಡರು. 2010 ರ ಏಷ್ಯನ್ ಕ್ರೀಡಾಕೂಟದಲ್ಲಿ ಗ್ವಾಂಗ್ಝೌನಲ್ಲಿ ಅವರ ಕಾರ್ಯ ನಿರ್ವಹಣೆ ಆಧಾರದ ಮೇಲೆ ಏಷ್ಯನ್ ಹಾಕಿ ಫೆಡರೇಶನ್ ಆಲ್ ಸ್ಟಾರ್ ತಂಡಕ್ಕೆ ಅವರನ್ನು ಸೇರಿಸಿಕೊಳ್ಳಲಾಯಿತು.

ಅರ್ಜೆಂಟೀನಾದ ರೊಸಾರಿಯೋನಲ್ಲಿ ನಡೆದ 2010 ರ ಮಹಿಳಾ ಹಾಕಿ ವಿಶ್ವಕಪ್‍ನಲ್ಲಿ ಅವರು ಒಟ್ಟು ಏಳು ಗೋಲುಗಳನ್ನು ಹೊಡೆದರು, ಇದು ವಿಶ್ವ ಮಹಿಳಾ ಹಾಕಿ ಶ್ರೇಯಾಂಕದಲ್ಲಿ ಒಂಬತ್ತನೆಯ ಸ್ಥಾನದಲ್ಲಿದೆ. ಇದು 1978 ರಿಂದಲೂ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ. 2010 ರ ಎಫ್ಐಹೆಚ್ ಮಹಿಳಾ ಯುವ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಏಕೈಕ ಭಾರತೀಯಳೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಹಿಳಾ ಹಾಕಿ ವಿಶ್ವಕಪ್ 2010 ರ ಪಂದ್ಯಾವಳಿಯಲ್ಲಿ ಅಗ್ರ ಕ್ಷೇತ್ರ ಗೋಲ್ ಸ್ಕೋರರ್ ಆಗಿ ತನ್ನ ನಾಕ್ಷತ್ರಿಕ ಪ್ರದರ್ಶನವನ್ನು ಗುರುತಿಸಿ ಅವರಿಗೆ "ಅತ್ಯುತ್ತಮ ಯುವ ಆಟಗಾರನ ಪಂದ್ಯಾವಳಿಯ ಪ್ರಶಸ್ತಿ" ನೀಡಿದ್ದಾರೆ.

2013 ರ ಜೂನಿಯರ್ ವಿಶ್ವಕಪ್‍ನಲ್ಲಿ ಇವರನ್ನು 'ಪ್ಲಯೆರ್ ಆಫ್‍ ಟೂರ್ನಮೆಂಟ್‍' ಯಂದು ತೀರ್ಮಾನಿಸಿದರು, ಭಾರತ ಕಂಚಿನ ಪದಕ[೫] ಗೆಲ್ಲುವುದರ ಮೂಲಕ ಆಟ ಮುಕ್ತಾಯಗೊಂಡಿತು. ಇವರು FICCI 'ಕಮ್ಬ್ಯಾಕ್ ಆಫ್ ದಿ ಇಯರ್ 2014' ಪ್ರಶಸ್ತಿಗೆ ಪಾತ್ರರಾಗಿದ್ದಾರೆ[೬]

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2015-12-10. Retrieved 2018-03-04.
  2. http://archive.indianexpress.com/news/haryana-cartpullers-daughter-is-hockeys-shining-young-star/1151666/0
  3. http://archive.indianexpress.com/news/haryana-cartpullers-daughter-is-hockeys-shining-young-star/1151666/0
  4. https://timesofindia.indiatimes.com/sports/more-sports/hockey/Rani-named-best-young-player-at-Womens-Hockey-World-Cup/articleshow/6543434.cms?referral=PM
  5. http://hockeyindia.org/news/india-eves-claim-historic-bronze-medal-in-the-fih-junior-women-hockey-world-cup-2013.html
  6. http://news.biharprabha.com/2014/02/ficci-announces-the-winners-of-india-sports-awards-for-2014/