ವಿಷಯಕ್ಕೆ ಹೋಗು

ಸದಸ್ಯ:Shreyas Rai/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಶ್ವಿನಿ ನಾಚಪ್ಪ

*ಜನನ

    ಭಾರತದ ಫ್ಲೋರೆನ್ಸ್ ಗ್ರಿಫಿತ್ ಜೋಯ್ನರ್ ಎಂದು ಪ್ರಸಿದ್ಧಿ ಪಡೆದ ಭಾರತದ ಅಥ್ಲೀಟ್ ಅಶ್ವಿನಿ ನಾಚಪ್ಪ ಅವರು ಜನಿಸಿದ ದಿನ ಅಕ್ಟೋಬರ್ ೨೧,೧೯೬೭
  • ಜೀವನ
ಕೊಡಗಿನ ಬೆಡಗಿ ಅಶ್ವಿನಿಯವರಿಗೆ ಗಗನ ಸಖಿಯಾಗಬೇಕು ಎನ್ನುವುದು ಮೊದಲ ಕನಸಾಗಿತ್ತು. ಆದರೆ ಕಂಠೀರವ ಕ್ರೀಡಾಂಗಣದ ಬಳಿಯೇ ಇದ್ದ ಮನೆ, ಒಬ್ಬ ಖ್ಯಾತ ಅಥ್ಲೀಟ್ ಹೊರಹೊಮ್ಮಲು ನೆರವಾಯಿತು. ಭಾರತೀಯ ಅಥ್ಲೆಟಿಕ್ ಲೋಕದಲ್ಲಿ ಸಾಕಷ್ಟು ಸಾಧಿಸಿ ಹೊರ ಬಂದ ಮೇಲೆ, ಕೆಲವು ಕಾಲ ಸಿನಿಮಾ ಹಾಗೂ ಇತ್ತೀಚಿನ ವರ್ಷಗಳಲ್ಲಿ ಕ್ರೀಡಾ ಅಕಾಡೆಮಿ, ಶಿಕ್ಷಣ ಕ್ಷೇತ್ರ, ಸಮಾಜಸೇವೆ ಹೀಗೆ ಅಶ್ವಿನಿ ನಾಚಪ್ಪ ನಿರಂತರ ಕ್ರಿಯಾಶೀಲರಾಗಿ ಮುಂದುವರೆದಿದ್ದಾರೆ. ಇದು ಒಲಿಂಪಿಕ್ಸ್ ಕ್ರೀಡಾಕೂಟಲ್ಲಿ ಭಾರತವನ್ನು ಪ್ರತಿನಿಧಿಸಿದ್ದ, 'ಪಯ್ಯೋಳಿ ಎಕ್ಸ್‌ಪ್ರೆಸ್' ಪಿ.ಟಿ. ಉಷಾ ಅವರನ್ನೇ ಎರಡು ಬಾರಿ ಸೋಲಿಸಿ, ಕೊಡಗಿನ ಬೆಡಗಿ, ಸೊಗಸುಗಾತಿ ಅಥ್ಲೀಟ್ ಅಶ್ವಿನಿ ನಾಚಪ್ಪ ಅವರ ಚುಟುಕಾದ ಜೀವನಗಾಥೆ. ಆರಂಭದ ದಿನಗಳಲ್ಲಿ ಕೋಚ್ ಮೊಹಿಂದರ್ ಸಿಂಗ್ ನೀಡುತ್ತಿದ್ದ ಸಿಹಿ ತಿಂಡಿಯ ಆಸೆಗಾಗಿಯೇ ಕಂಠೀರವ ಕ್ರೀಡಾಂಗಣದ ಟ್ರ್ಯಾಕ್ ಮೇಲೆ ಒಂದಾದ ಮೇಲೆ ಒಂದು ಸುತ್ತು ಹೊಡೆಯಲಾರಂಭಿಸಿದ ಅಶ್ವಿನಿ ಅವರ ಜೊತೆ ಅಂದಿನ ದಿನಗಳಲ್ಲಿ ಅವರ ಅಕ್ಕ ಪುಷ್ಪಾ ಕೂಡ ಇರುತ್ತಿದ್ದರು. ಕ್ರಮೇಣ ಸಿಹಿ ತಿಂಡಿಯ ಜೊತೆ ಪದಕ-ಪ್ರಶಸ್ತಿ-ಪುರಸ್ಕಾರಗಳೂ ಬರಲಾರಂಭಿಸಿದವು. ಹೀಗೆ ಅಥ್ಲೆಟಿಕ್ ಲೋಕದಲ್ಲಿ ಓಡಲಾರಂಭಿಸಿದ ಅಶ್ವಿನಿ ೧೯೯೧ರಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ನ ೪೦೦ಮೀಟರ್ ಓಟದ ಸ್ಪರ್ಧೆಯಲ್ಲಿ ಪಿ.ಟಿ.ಉಷಾ ಅವರನ್ನು ಮೀರಿಸಿ ಸ್ವರ್ಣ ಗೆದ್ದರು. ಆ ಮೂಲಕ ಮನೆಮಾತಾದ ಅಶ್ವಿನಿ, ೧೯೮೮ರ ಸಿಯೋಲ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದ ಮಹಿಳೆಯರ ರಿಲೆ ತಂಡದ ಸದಸ್ಯೆಯಾಗಿದ್ದರು. ನಂತರ ಸಿನಿಮಾ ರಂಗಕ್ಕೆ ಲಗ್ಗೆಯಿಟ್ಟ ಈ ಚೆಲುವೆ ಟೀಕಾಕಾರರ ಪ್ರಕಾರ ಮುಗಿದು ಹೋದ ಅಧ್ಯಾಯವಾಗಿದ್ದರು. ಆದರೆ, ೧೯೯೨ರಲ್ಲಿ ಕೋಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ ಕೂಟದಲ್ಲಿ ನಾಲ್ಕು ಸ್ವರ್ಣ ಬಾಚಿಕೊಂಡ ಅಶ್ವಿನಿ ಎಲ್ಲರ ಬಾಯಿ ಮುಚ್ಚಿಸಿದರು. ಕೊನೆಗೆ ಗಾಯಾಳುವಾದ ಕಾರಣ ಟ್ರ್ಯಾಕ್‌ನಿಂದ ದೂರ ಸರಿದ ನಂತರದಲ್ಲಿ ಅವರು ಹಲವಾರು ದಕ್ಷಿಣ ಭಾಷೀಯ ಚಲನಚಿತ್ರಗಳಲ್ಲಿ ನಟಿಸಿ ಅಲ್ಲೂ ಹಲವಾರು ಪ್ರಶಸ್ತಿಗಳನ್ನು ಗಳಿಸಿದರು. ಯಶಸ್ಸು ತಮ್ಮೊಂದಿರುವಾಗಲೇ ಅದಕ್ಕೂ ಗುಡ್ ಬೈ ಹೇಳಿ ಅವರು ಪತಿಯೊಡನೆ ಸೇರಿ ಕರುಂಬಯ್ಯ ಕ್ರೀಡಾ ಅಕಾಡೆಮಿ ಸ್ಥಾಪಿಸಿದರು. ಆ ಮೂಲಕ ಹಲವು ಕ್ರೀಡಾ ಪಟುಗಳು ಬೆಳಕಿಗೆ ಬರುವಂತೆ ಮಾಡುತ್ತಿದ್ದಾರೆ. ಜೊತೆಗೆ ಪರಿಕ್ರಮ ಸಂಸ್ಥೆಯ ಮೂಲಕ ಸಮಾಜ ಸೇವೆಯಲ್ಲಿ ಕೂಡ ನಿರತರಾಗಿದ್ದಾರೆ. ‘ಪರಿಕ್ರಮ’ ಸಂಸ್ಥೆ ಕೊಳಗೇರಿಯ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸುಂದರ ದಕ್ಷಿಣ ಕೊಡಗಿನ ಪರಿಸರದಲ್ಲಿ ಐಸಿಎಸ್ಇ ಶಿಕ್ಷಣ ನೀಡುವ ಶಾಲೆಯನ್ನು ಕೂಡ ನಡೆಸುತ್ತಿದ್ದಾರೆ. ಜೊತೆಗೆ ಹಲವು ಕ್ರೀಡಾಸಕ್ತ ಸಂಘಟನೆಗಳೊಂದಿಗೆ ನಿರಂತರವಾಗಿ ಕಾರ್ಯನಿರತರಾಗಿದ್ದು, ತಮ್ಮನ್ನು ಬೆಳೆಸಿದ ಕ್ರೀಡಾ ಕ್ಷೇತ್ರಕ್ಕೆ ಹತ್ತು ಹಲವು ರೀತಿಯಲ್ಲಿ ಪೋಷಕತ್ವ ವಹಿಸಿದ್ದಾರೆ. ಅಶ್ವಿನಿ ಪುತ್ರಿಯರಾದ ಅನೀಷಾ ಮತ್ತು ದೀಪಾಲಿ ಇಬ್ಬರೂ ಬ್ಯಾಡ್ಮಿಂಟನ್ ಆಟಗಾರ್ತಿಯರು. ಅಶ್ವಿನಿ ನಾಚಪ್ಪ ಅವರಿಗೆ ಹಲವಾರು ಪ್ರಶಸ್ತಿಗಳು ದೊರಕಿದ್ದು, ೧೯೯೦ರಲ್ಲಿ ಅರ್ಜುನ ಪ್ರಶಸ್ತಿ ಸಹಾ ಪಡೆದಿದ್ದಾರೆ.
  • ನಡಿಸಿಧ ಸಿನಿಮಗಳು
    • ಇನ್ಸ್