ಸದಾಶಿವ್ ಸೊರಟೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸದಾಶಿವ್ ಸೊರಟೂರು ರವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು,ಶಿಕ್ಷಕ ವೃತ್ತಿಯ ಜೊತೆ ಬರವಣಿಗೆಯನ್ನು ಪ್ರವೃತ್ತಿಯಾಗಿ ರೂಢಿಸಿಕೊಂಡು ಕನ್ನಡದ ಹಲವಾರು ದಿನಪತ್ರಿಕೆ,ವಾರಪತ್ರಿಕೆ,ಮಾಸಪತ್ರಿಕೆ ಹಾಗೂ ಪಾಕ್ಷಿಕ ಪತ್ರಿಕೆಗಳಲ್ಲಿ ಅಂಕಣ ಬರೆಯುವ ಮೂಲಕ ಬರವಣಿಗೆಯಲ್ಲಿ ತಮ್ಮ ಕೈ ಚಳಕ ತೋರಿಸಿದ್ದಾರೆ.ಹವ್ಯಾಸಿ ಬರಹದ ಜೊತೆ ಹಲವಾರು ಕೃತಿಗಳನ್ನ,ಕವನ ಸಂಕಲನಗಳನ್ನ ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದ ಅಳಿಲು ಸೇವೆಯಲ್ಲಿ ತೊಡಗಿದ್ದಾರೆ.ಶಿವದಾಸ ಎಂಬ ಕಾವ್ಯ ನಾಮದೊಂದಿಗೆ ಪ್ರಸಿದ್ಧರಾಗಿದ್ದಾರೆ.

ಜನನ[ಬದಲಾಯಿಸಿ]

ಸೊರಟೂರು ರವರು೧೮ ನೇ ಜೂನ್ ೧೯೮೩ ರಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ಜನಿಸಿದರು. ತಂದೆ ಹಳದಪ್ಪ, ತಾಯಿ ಜಯಮ್ಮ.

ಶಿಕ್ಷಣ[ಬದಲಾಯಿಸಿ]

ಸೊರಟೂರು ರವರು ಶಿಕ್ಷಕರ ತರಬೇತಿ ಪಡೆಯುವುದರ (ಬಿ.ಎಡ್) ಜೊತೆ ಎಂ.ಎ ಪದವೀಧರರಾಗಿದ್ದಾರೆ.

ಹವ್ಯಾಸ[ಬದಲಾಯಿಸಿ]

[೧]ವೃತ್ತಿಯಲ್ಲಿ ಪ್ರೌಢ ಶಾಲಾ ಭಾಷಾ ಶಿಕ್ಷಕರಾಗಿದ್ದು,ಹವ್ಯಾಸಿ ಬರಹಗಾರರಾಗಿದ್ದಾರೆ.ಕನ್ನಡ ದಿನ ಪತ್ರಿಕೆಗಳಲ್ಲಿ ಸುಮಾರು ೫೦೦ ಹೆಚ್ಚು ಲೇಖನ ಗಳನ್ನು ಬರೆದ ಕೀರ್ತಿ ಗೆ ಪಾತ್ರರಾಗಿದ್ದಾರೆ.

ಸಾಹಿತ್ಯಿಕ ಕೊಡುಗೆಗಳ[ಬದಲಾಯಿಸಿ]

ಕೃತಿಗಳು[ಬದಲಾಯಿಸಿ]

  • [೨][೩][೪][೫]ಕನಸುಗಳಿವೆ ಕೊಳ್ಳುವವರಿಲ್ಲ(೨೦೧೭)
  • ಹೆಸರಿಲ್ಲದ ಬಯಲು (ತ್ರಿಪದಿ-೨೦೧೭)
  • ಕನಸುಗಳಿವೆ ಕೊಳ್ಳುವವರಿಲ್ಲ (ಭಾಗ-೦೨)
  • ಹೊಸ್ತಿಲಾಚೆ ಬೆತ್ತಲೆ(೨೦೧೭)
  • ತೂತು ಬಿದ್ದ ಚಂದಿರ(೨೦೧೮)
  • ಆ ಹಾದಿ
  • ಲೈಫ್ನಲ್ಲಿ ಏನಿದೆ ಸರ್?
  • ಷರತ್ತುಗಳು ಅನ್ವಯಿಸುತ್ತವೆ
  • ಅರ್ಧ ಬಿಸಿಲು ಅರ್ಧ ಮಳೆ
  • ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ
  • ಕಂಡಕ್ಟರ್ ಕಮೆಂಟ್ಸ್

ಅಂಕಣಗಳು[ಬದಲಾಯಿಸಿ]

  • [೬][೭][೮][೯]ಪ್ರಸಾರ ಕಪ್ಪು ಬಿಳುಪು(ಸಿಹಿ ಗಾಳಿಮಾಸ ಪತ್ರಿಕೆ)
  • ಪದಗಳಿಗೆ ಸಿಕ್ಕ ಬದುಕು (ನೈರುತ್ಯ ಮಾಸಿಕ ಪತ್ರಿಕೆ)
  • ಬೊಗಸೆ ದೀಪ(ಸಂಯುಕ್ತ ಕರ್ನಾಟಕ )
  • ಕತೆ ಕಿಟಕಿ (avadhimag.com ನಲ್ಲಿ ವಾರಕ್ಕೊಂದು ಕಥೆ)

ಕಥೆಗಳು[ಬದಲಾಯಿಸಿ]

ತರಂಗ ಮತ್ತು ತುಷಾರ ಪತ್ರಿಕೆಗಳಲ್ಲಿ ಪ್ರಕಟವಾದ ಕಥೆಗಳು

  • ಶಿಕಾರಿ
  • ವಿಳಾಸವಿಲ್ಲದ ಪತ್ರಗಳು
  • ವಿದಾಯ
  • ಬಲೆಯ ಆಚೆ
  • ಅಪ್ಪ

ಉಲ್ಲೇಖ[ಬದಲಾಯಿಸಿ]

  1. https://padakunita.blogspot.in/?m=1
  2. https://padakunita.blogspot.com/2017/07/05.html?m=1
  3. https://books.google.co.in/books?id=vj5EDwAAQBAJ&pg=PA5&dq=%22%E0%B2%B8%E0%B2%A6%E0%B2%BE%E0%B2%B6%E0%B2%BF%E0%B2%B5%E0%B3%8D+%E0%B2%B8%E0%B3%8A%E0%B2%B0%E0%B2%9F%E0%B3%82%E0%B2%B0%E0%B3%81%22&hl=en&sa=X&ved=0ahUKEwjj8NT3sajZAhWDrI8KHafUBqgQ6AEIJDAA
  4. https://groups.google.com/forum/m/#!msg/kannadastf/4hcj3iVLmMA/taMILnXUBwAJ
  5. http://avadhimag.com/?p=190734
  6. https://uv.yodasoft.com/kannada/news/josh/192063/she-pillow-telugu-kannada-kunwar-who[ಶಾಶ್ವತವಾಗಿ ಮಡಿದ ಕೊಂಡಿ]
  7. http://kannada.khabar.io/node/127925[ಶಾಶ್ವತವಾಗಿ ಮಡಿದ ಕೊಂಡಿ]
  8. http://avadhimag.com/?p=188175
  9. http://avadhimag.com/?p=188175