ವಿಷಯಕ್ಕೆ ಹೋಗು

ಬ್ಲೂಮ್‌ಬರ್ಗ್ ಎಲ್. ಪಿ.

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Bloomberg L.P.
ಸಂಸ್ಥೆಯ ಪ್ರಕಾರLimited partnership
ಸ್ಥಾಪನೆಅಕ್ಟೋಬರ್ 1, 1981; 15794 ದಿನ ಗಳ ಹಿಂದೆ (1981-೧೦-01)[][]
ಸಂಸ್ಥಾಪಕ(ರು)Michael Bloomberg
Thomas Secunda
Duncan MacMillan
Charles Zegar[]
ಮುಖ್ಯ ಕಾರ್ಯಾಲಯನ್ಯೂ ಯಾರ್ಕ್ ನಗರ, New York, United States Bloomberg Tower
731 Lexington Avenue
ಕಾರ್ಯಸ್ಥಳಗಳ ಸಂಖ್ಯೆ192 offices (2016)[]
ಪ್ರಮುಖ ವ್ಯಕ್ತಿ(ಗಳು)Peter Grauer (Chairman)
Michael Bloomberg
(President & CEO)
ಉದ್ಯಮFinancial services
Technology
ಆದಾಯIncrease US$9 billion (2014)[]
ಮಾಲೀಕ(ರು)Michael Bloomberg (88%)[]
ಉದ್ಯೋಗಿಗಳು19,000 (2016)[]
ಜಾಲತಾಣwww.bloomberg.com
ಮಿಡ್ಟೌನ್ ಮ್ಯಾನ್ಹ್ಯಾಟನ್ನಲ್ಲಿ ಲೆಕ್ಸಿಂಗ್ಟನ್ ಅವೆನ್ಯೂನಲ್ಲಿ ಬ್ಲೂಮ್ಬರ್ಗ್ ಟವರ್

ಬ್ಲೂಮ್ಬರ್ಗ್ ಎಲ್. ಪಿ.  ಎನ್ನುವುದು ಖಾಸಗಿಯಾಗಿ ನಡೆಯುವ ಹಣಕಾಸು ಸಾಫ್ಟ್ವೇರ್, ಡೇಟಾ ಮತ್ತು ಮಾಧ್ಯಮ ಕಂಪನಿಯಾಗಿದೆ. ನ್ಯೂಯಾರ್ಕ್ ನಗರದ ಮಿಡ್ಟೌನ್ ಮ್ಯಾನ್ಹ್ಯಾಟನ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಬ್ಲೂಮ್ಬರ್ಗ್ ಎಲ್. ಪಿ. ಅನ್ನು ಮೈಕಲ್ ಬ್ಲೂಮ್ಬರ್ಗ್ ೧೯೮೧ ರಲ್ಲಿ, ಥಾಮಸ್ ಸೆಕುಂಡ, ಡಂಕನ್ ಮ್ಯಾಕ್ಮಿಲನ್ ಮತ್ತು ಚಾರ್ಲ್ಸ್ ಝೆಗರ್- ಇವರ ಸಹಾಯದಿಂದ ಸ್ಥಾಪಿಸಿದರು. ಮೆರಿಲ್ ಲಿಂಚ್ ಅವರು 30% ಮಾಲೀಕತ್ವದ ಹೂಡಿಕೆಯನ್ನು ಮಾಡಿದರು.[] 

ಬ್ಲೂಮ್ಬರ್ಗ್ ಟರ್ಮಿನಲ್ - ಪ್ರಮುಖ ಆದಾಯ-ಉತ್ಪಾದಿಸುವ ಉತ್ಪನ್ನ.  ಬ್ಲೂಮ್ಬರ್ಗ್ ಟರ್ಮಿನಲ್ ಮೂಲಕ ಆರ್ಥಿಕ ವಿಶ್ಲೇಷಣೆ ಮತ್ತು ಷೇರು ವ್ಯಾವಹಾರ, ದತ್ತಾಂಶ ಸೇವೆಗಳು, ಮತ್ತು ಹಣಕಾಸು ಕಂಪನಿಗಳು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಣಕಾಸು ಸಾಫ್ಟ್ವೇರ್ ಉಪಕರಣಗಳನ್ನು ಒದಗಿಸುತ್ತದೆ. ೨೦೧೪ ನೆಯ ಇಸವಿಯಲ್ಲಿ, ಬ್ಲೂಮ್‌ಬರ್ಗ್ ಎಲ್. ಪಿ. ಯು, ಬ್ಲೂಮ್ಬರ್ಗ್ ಪಾಲಿಟಿಕ್ಸ್‌ಅನ್ನು ಪ್ರಾಂಭಿಸಿತು. ಇದು ಒಂದು ಬಹುಮಾಧ್ಯಮ ಘಟಕವಾಗಿದ್ದು, ಕಂಪನಿಯ ರಾಜಕೀಯ ಸುದ್ದಿ ತಂಡಗಳನ್ನು ವಿಲೀನಗೊಳಿಸುವ ಮೂಲಕ ಅಸ್ತಿತ್ವಕ್ಕೆ ಬಂತು. ನಂತರ ಇದು ಇಬ್ಬರು ನುರಿತ ರಾಜಕೀಯ ಪತ್ರಕರ್ತರಾದ ಮಾರ್ಕ್ ಹಾಲ್ಪೆರಿನ್ ಮತ್ತು ಜಾನ್ ಹೇಲೆಮನ್ ಅವರನ್ನು ಕೆಲಸಕ್ಕೆ ನೇಮಿಸಿಕೊಂಡಿತು.[]

ಇತಿಹಾಸ

[ಬದಲಾಯಿಸಿ]
ಲಂಡನ್ ಸಿಟಿ ವಿಮಾನ ನಿಲ್ದಾಣದಲ್ಲಿ ಬ್ಲೂಮ್ಬರ್ಗ್ ಟರ್ಮಿನಲ್

1981 ರಲ್ಲಿ, ಸಾಲೊಮನ್ ಬ್ರದರ್ಸ್‌ಅನ್ನು ಸ್ವಾಧೀನಪಡಿಸಿಕೊಂಡಿತು ಮತ್ತು ಮೈಕೆಲ್ ಬ್ಲೂಮ್ಬರ್ಗ್, ಸಾಮಾನ್ಯ ಪಾಲುದಾರನಿಗೆ $ ೧೦ ಮಿಲಿಯನ್ ಪಾಲುದಾರಿಕೆ ವಸಾಹತು ನೀಡಲಾಯಿತು. 

ಬ್ಲೂಮ್ಬರ್ಗ್ ಎಲ್. ಪಿ.  ಸ್ಥಾಪನೆಯ ನಂತರ ಖಾಸಗಿ ಕಂಪೆನಿಯಾಗಿಯೇ ಉಳಿದಿದೆ; ಕಂಪನಿಯ ಬಹುಪಾಲು ಮೈಕಲ್ ಬ್ಲೂಮ್ಬರ್ಗ್ ಒಡೆತನದಲ್ಲಿದೆ. ಬ್ಲೂಮ್‌ಬರ್ಗ್ ನ್ಯೂಯಾರ್ಕ್‌ನ ೧೦೮ ನೆಯ ಮೇಯರ್ ಆದ್ದರಿಂದ ಬ್ಲೂಮ್ಬರ್ಗ್ ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನವನ್ನು ಬಿಟ್ಟ ನಂತರ, ಲೆಕ್ಸ್ ಫೆನ್ವಿಕ್‌ನನ್ನು ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಲಾಯಿತು. ಬ್ಲೂಮ್ಬರ್ಗ್ ಆಡಳಿತದಲ್ಲಿ ಮಾಜಿ ಡೆಪ್ಯುಟಿ ಮೇಯರ್ ಡಾನಿಯಲ್ ಡಾಕ್ಟೋರೋಫ್ ಈಗ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.[]

ಸ್ವಾಧೀನಗಳು

[ಬದಲಾಯಿಸಿ]

ಬ್ಲೂಮ್ಬರ್ಗ್ ಎಲ್.ಪಿ. ಹಲವಾರು ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿದೆ

ಡಬ್ಲೂಎನ್‌ಇಡಬ್ಲೂ 

[ಬದಲಾಯಿಸಿ]

೧೯೯೨ ರಲ್ಲಿ, ಬ್ಲೂಮ್ಬರ್ಗ್ ಎಲ್.ಪಿ. ನ್ಯೂಯಾರ್ಕ್ ರೇಡಿಯೊ ಸ್ಟೇಷನ್ ಡಬ್ಲ್ಯುಎನ್ಇಯನ್ನು $ ೧೩.೫ ದಶಲಕ್ಷಕ್ಕೆ ಖರೀದಿಸಿತು. ಬ್ಲೂಮ್ಬರ್ಗ್ ರೇಡಿಯೊ ಎಂದು ಕರೆಯಲ್ಪಡುವ ಈ ಎಲ್ಲಾ ಸ್ಟೇಷನ್ಗಳನ್ನು ಎಲ್ಲಾ-ಸುದ್ದಿಗಳ ರೂಪದಲ್ಲಿ ಪರಿವರ್ತಿಸಲಾಯಿತು ಮತ್ತು ಅಕ್ಷರಗಳನ್ನು ಡಬ್ಲೂಬಿಬಿ‌ಆರ್ ಗೆ ಬದಲಾಯಿಸಲಾಯಿತು

ಬಿಸಿನೆಸ್ ವೀಕ್

[ಬದಲಾಯಿಸಿ]

೨೦೦೯ರಲ್ಲಿ, ಬ್ಲೂಮ್ಬರ್ಗ್ L.P. ವಾರದ ವ್ಯಾಪಾರ ಪತ್ರಿಕೆಯನ್ನು ಮೆಕ್‌ಗ್ರಾವ್-ಹಿಲ್ ಇವರಿಂದ ಖರೀದಿಸಿತು. ಬ್ಯುಸಿನೆಸ್ವೀಕ್ ಅನ್ನು ಬ್ಲೂಮ್ಬರ್ಗ್ ಬಿಸಿನೆಸ್ವೀಕ್ ಎಂದು ಮರುನಾಮಕರಣ ಮಾಡಲಾಯಿತು. ಮೇಗನ್ ಮರ್ಫಿ ನಿಯತಕಾಲಿಕವನ್ನು ಸಂಪಾದಿಸುತ್ತಾನೆ.

ಈಗಲ್ ಐ ಪಬ್ಲಿಷಿಂಗ್

[ಬದಲಾಯಿಸಿ]

೨೦೧೦ ರಲ್ಲಿ, ಬ್ಲೂಮ್ಬರ್ಗ್ ಎಲ್.ಪಿ. ಈಗಲ್ ಐ ಪಬ್ಲಿಷಿಂಗ್ ಅನ್ನು ಸ್ವಾಧೀನಪಡಿಸಿಕೊಂಡಿತು, ಫೇರ್ಫ್ಯಾಕ್ಸ್, ವಿ.ಎ- ಮೂಲದ ಕಂಪೆನಿಯು ಫೆಡರಲ್ ಸರ್ಕಾರದಿಂದ ಸಂಗ್ರಹಣೆ ಬಗ್ಗೆ ಮಾಹಿತಿಯನ್ನು ಪ್ರಕಟಿಸುತ್ತದೆ. ಈ ಸ್ವಾಧೀನವು ೨೦೧೧ ರ ಆರಂಭದಲ್ಲಿ ಪ್ರಾರಂಭವಾದ ಬ್ಲೂಮ್ಬರ್ಗ್ ಸರ್ಕಾರದ ಭಾಗವಾಯಿತು. 

ನ್ಯೂ ಎನೆರ್ಜಿ ಫಿನಾನ್ಸ್

[ಬದಲಾಯಿಸಿ]

೨೦೦೯ ರಲ್ಲಿ, ಬ್ಲೂಮ್ಬರ್ಗ್ ಎಲ್.ಪಿ. ನ್ಯೂ ಎನರ್ಜಿ ಫೈನಾನ್ಸ್ ಅನ್ನು ಖರೀದಿಸಿತು, ಯುನೈಟೆಡ್ ಕಿಂಗ್ಡಂನಲ್ಲಿರುವ ಇಂಧನ ಹೂಡಿಕೆ ಮತ್ತು ಕಾರ್ಬನ್ ಮಾರುಕಟ್ಟೆಯ ಸಂಶೋಧನೆಯ ಮೇಲೆ ಗಮನಹರಿಸಿದ ಒಂದು ದತ್ತಾಂಶ ಕಂಪನಿ. ಕಾರ್ಬನ್ ಮತ್ತು ಕ್ಲೀನ್ ಇಂಧನ ಮಾರುಕಟ್ಟೆಗಳ ಬಗ್ಗೆ ಸುದ್ದಿ, ಮಾಹಿತಿ ಮತ್ತು ವಿಶ್ಲೇಷಣೆ ಒದಗಿಸಲು ೨೦೦೪ ರಲ್ಲಿ ಮೈಕೆಲ್ ಲೈಬ್ರೆಚ್ ಹೊಸ ಎನರ್ಜಿ ಫಿನಾನ್ಸ್ ಅನ್ನು ರಚಿಸಿದರು.  ಬ್ಲೂಮ್ಬರ್ಗ್ ಎಲ್.ಪಿ. ಖರೀದಿ ಮಾಡಿದ ನಂತರವು, ಕಂಪನಿಯು ಲೀಬ್ರೆಚ್‌ನ ನಾಯಕತ್ವದಲ್ಲಿ ನಡೆಯಿತು

ಬ್ಯೂರೋ ಆಫ್ ನ್ಯಾಷನಲ್ ಅಫೇರ್ಸ್ (ಬಿಎನ್‌‌ಎ)

[ಬದಲಾಯಿಸಿ]

ಆಗಸ್ಟ್ ೨೦೧೧ ರಲ್ಲಿ, $ ೯೯೦ ಮಿಲಿಯನ್‌ಗೆ ಬ್ಯೂರೋ ಆಫ್ ನ್ಯಾಷನಲ್ ಅಫೇರ್ಸ್ (ಬಿಎನ್‌‌ಎ) ಖರೀದಿಸಿತು. ಬಿಎನ್‌‌ಎವ್ಯವಹಾರ ಮತ್ತು ಸರ್ಕಾರದ ವೃತ್ತಿಪರರಿಗೆ ವಿಶೇಷ ಆನ್ಲೈನ್ ಮತ್ತು ಮುದ್ರಣ ಸುದ್ದಿ ಮತ್ತು ಮಾಹಿತಿಯನ್ನು ಪ್ರಕಟಿಸುತ್ತದೆ.

ಬ್ಲೂಮ್‌ಬರ್ಗ್ ಪೋಲರ್‌ಲೇಕ್

[ಬದಲಾಯಿಸಿ]

ಮೇ ೨೦೧೨ ರಲ್ಲಿ, ಬ್ಲೂಮ್ಬರ್ಗ್ ಎಲ್. ಪಿ. ಡಬ್ಲಿನ್ ಮೂಲದ ಆಹಾರ ಕಾರ್ಖಾನೆ ಪೋಲಾರ್ಲೇಕ್ ಅನ್ನು ಸ್ವಾಧೀನಪಡಿಸಿಕೊಂಡಿತು ಮತ್ತು ಕಂಪನಿಗಳು ತಮ್ಮ ಸಂಸ್ಥೆಗಳಾದ್ಯಂತ ಡೇಟಾವನ್ನು ಪಡೆದುಕೊಳ್ಳಲು ಮತ್ತು ವಿತರಿಸಲು ಸಹಾಯ ಮಾಡಲು ಹೊಸ ಎಂಟರ್ಪ್ರೈಸ್ ಡಾಟಾ ಮ್ಯಾನೇಜ್ಮೆಂಟ್ (ಎಡಿಎಂ) ಸೇವೆಯನ್ನು ಪ್ರಾರಂಭಿಸಿತು.

ಬಾರ್ಕ್ಲೇಸ್ ಇನ್‌ಡೀಸೆಸ್ ಬಿಸಿನೆಸ್

[ಬದಲಾಯಿಸಿ]

ಬಾರ್ಕ್ಲೇಸ್ ಅದರ ಸೂಚ್ಯಂಕ ವ್ಯಾಪಾರ, ಬಾರ್ಕ್ಲೇಸ್ ರಿಸ್ಕ್ ಅನಾಲಿಟಿಕ್ಸ್ ಮತ್ತು ಇಂಡೆಕ್ಸ್ ಸೊಲ್ಯೂಷನ್ಸ್ ಲಿಮಿಟೆಡ್  ಅನ್ನು, ಬ್ಲೂಮ್ಬರ್ಗ್ ಎಲ್. ಪಿ. ಗೆ £ ೫೨೦ಮಿಲಿಯನ್ಗೆ ಅಥವಾ ಸುಮಾರು $ ೭೮೭ ಮಿಲಿಯನ್ಗೆ ಮಾರಾಟ ಮಾಡಲು ಒಪ್ಪಿಕೊಂಡಿದೆಯೆಂದು ೧೬ ಡಿಸೆಂಬರ್ ೨೦೧೫ ರಂದು ಘೋಷಿಸಲಾಯಿತು. ಕಂಪನಿಯು ಬ್ಲೂಮ್ಬರ್ಗ್ ಇಂಡೆಕ್ಸ್ ಸರ್ವೀಸಸ್ ಲಿಮಿಟೆಡ್ ಎಂದು ಮರುನಾಮಕರಣಗೊಂಡಿತು.

ಉತ್ಪನ್ನಗಳು ಮತ್ತು ಸೇವೆಗಳು

[ಬದಲಾಯಿಸಿ]

ಬ್ಲೂಮ್‌ಬರ್ಗ್ ಪ್ರೊಫೆಷನಲ್ ಸರ್ವಿಸ್

[ಬದಲಾಯಿಸಿ]

೨೦೧೧ ರಲ್ಲಿ, ಬ್ಲೂಮ್‌ಬರ್ಗ್ ಪ್ರೊಫೆಷನಲ್ ಸರ್ವಿಸ್‌ನ ಮಾರಾಟವು ಬ್ಲೂಮ್ಬರ್ಗ್ ಟರ್ಮಿನಲ್ ಎಂದೂ ಕರೆಯಲ್ಪಡುತ್ತದೆ. ಬ್ಲೂಮ್ಬರ್ಗ್ ಎಲ್.ಪಿ.ಯ ಶೇಕಡ ೮೫ ವಾರ್ಷಿಕ ಆದಾಯವು, ಬ್ಲೂಮ್ಬರ್ಗ್ ಟರ್ಮಿನಲ್‌ನಿಂದ ಬರುತ್ತದೆ. ಟರ್ಮಿನಲ್, ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಮಾರುಕಟ್ಟೆಗಳನ್ನು ಒಳಗೊಂಡಿದೆ.[೧೦]

ಬ್ಲೂಮ್‌ಬರ್ಗ್ ನ್ಯೂಸ್

[ಬದಲಾಯಿಸಿ]

ಬ್ಲೂಮ್ಬರ್ಗ್ ನ್ಯೂಸ್ ೧೯೯೦ ರಲ್ಲಿ ಮೈಕೆಲ್ ಬ್ಲೂಮ್ಬರ್ಗ್ ಮತ್ತು ಮ್ಯಾಥ್ಯೂ ವಿಂಕ್ಲರ್ರಿಂದ ಸ್ಥಾಪಿಸಲ್ಪಟ್ಟಿತು, ಇದು ಬ್ಲೂಮ್ಬರ್ಗ್ ಟರ್ಮಿನಲ್ ಚಂದಾದಾರರಿಗೆ ಹಣಕಾಸಿನ ಸುದ್ದಿ ವರದಿಗಳನ್ನು ನೀಡುತ್ತದೆ. ೨೦೦೦ ರಲ್ಲಿ, ಬ್ಲೂಮ್ಬರ್ಗ್ ನ್ಯೂಸ್ ೧೦೦ ದೇಶಗಳಲ್ಲಿ ೨೩೦೦ ಕ್ಕಿಂತಲೂ ಹೆಚ್ಚು ಸಂಪಾದಕರು ಮತ್ತು ವರದಿಗಾರರನ್ನು ಒಳಗೊಂಡಿತ್ತು. ಬ್ಲೂಮ್ಬರ್ಗ್ ನ್ಯೂಸ್ ನಿರ್ಮಿಸಿದ ವಿಷಯವು ಬ್ಲೂಮ್ಬರ್ಗ್ ಟರ್ಮಿನಲ್, ಬ್ಲೂಮ್ಬರ್ಗ್ ಟೆಲಿವಿಷನ್, ಬ್ಲೂಮ್ಬರ್ಗ್ ರೇಡಿಯೊ, ಬ್ಲೂಮ್ಬರ್ಗ್ ಬಿಸಿನೆಸ್ವೀಕ್, ಬ್ಲೂಮ್ಬರ್ಗ್ ಮಾರ್ಕೆಟ್ಸ್ ಮತ್ತು ಬ್ಲೂಮ್ಬರ್ಗ್.ಕಾಮ್ ಮೂಲಕ ಪ್ರಸಾರವಾಗುತ್ತದೆ. ಸಹ-ಸಂಸ್ಥಾಪಕ ಮ್ಯಾಥ್ಯೂ ವಿಂಕ್ಲರ್ ಇನ್ನೂ ಸಂಪಾದಕ-ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬ್ಲೂಮ್‌ಬರ್ಗ್ ರೇಡಿಯೋ

[ಬದಲಾಯಿಸಿ]

ಬ್ಲೂಮ್‌ಬರ್ಗ್ ಟೆಲಿವಿಷನ್

[ಬದಲಾಯಿಸಿ]

ಬ್ಲೂಮ್ಬರ್ಗ್ ನ್ಯೂಸ್‌ನ ಒಂದು ಸೇವೆ ಬ್ಲೂಮ್ಬರ್ಗ್ ಟೆಲಿವಿಷನ್, ಇದು ೨೪ ಗಂಟೆ ಹಣಕಾಸು ಸುದ್ದಿ ನೀಡುವ ದೂರದರ್ಶನ ಜಾಲವಾಗಿದೆ. ಇದನ್ನು ೧೯೯೪ ರಲ್ಲಿ ಉಪಗ್ರಹ ಟೆಲಿವಿಷನ್ ಪ್ರೊವೈಡರ್ ಡೈರೆಕ್ಟಿವಿಯಲ್ಲಿ ಪ್ರಸಾರವಾದ ಚಂದಾದಾರಿಕೆಯ ಸೇವೆಯಾಗಿ ಪರಿಚಯಿಸಲಾಯಿತು. ಬ್ಲೂಮ್ಬರ್ಗ್ ರೇಡಿಯೊ, ಬ್ಲೂಮ್ಬರ್ಗ್ ಟೆಲಿವಿಷನ್ ಮತ್ತು ಬ್ಲೂಮ್ಬರ್ಗ್ನ ಮಲ್ಟಿಮೀಡಿಯಾಗಳ ಆನ್ಲೈನ್ ಘಟಕಗಳನ್ನು ಒಳಗೊಂಡಿರುವ ಬ್ಲೂಮ್ಬರ್ಗ್ ಮಲ್ಟಿಮೀಡಿಯಾ ಗ್ರೂಪ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಜಸ್ಟಿನ್ ಬಿ. ಸ್ಮಿತ್ ಕಾರ್ಯನಿರ್ವಹಿಸುತ್ತಿದ್ದಾರೆ.

ಬ್ಲೂಮ್ಬರ್ಗ್ ಮಾರ್ಕೆಟ್ಸ್

[ಬದಲಾಯಿಸಿ]

ಬ್ಲೂಮ್ಬರ್ಗ್ ಮಾರ್ಕೆಟ್ಸ್ ಎನ್ನುವುದು ೧೯೯೨ ರಲ್ಲಿ ಬಿಡುಗಡೆಯಾದ ಒಂದು ಮಾಸ ನಿಯತಕಾಲಿಕವಾಗಿದೆ, ಇದು ಹಣಕಾಸಿನ ವೃತ್ತಿಪರರಿಗೆ ಜಾಗತಿಕ ಹಣಕಾಸಿನ ಮಾರುಕಟ್ಟೆಗಳ ಬಗ್ಗೆ ಆಳವಾದ ಮಾಹಿತಿಯನ್ನು ಒದಗಿಸುತ್ತದೆ.

ಬ್ಲೂಮ್ಬರ್ಗ್ ಎಂಟಿಟಿ ಎಕ್ಸ್‌ಚೇಂಜ್

[ಬದಲಾಯಿಸಿ]

ಇದನ್ನು ೨೦೧೬ರ ಮೇ ೨೫ರಂದು ಪ್ರಾರಂಭಿಸಲಾಯಿತು. ಬ್ಲೂಮ್ಬರ್ಗ್ ಎಂಟಿಟಿ ಎಕ್ಸ್‌ಚೇಂಜ್ ವೆಬ್ ಆಧಾರಿತವಾಗಿದ್ದು, ಖರೀದಿಸುವ ಹಾಗು ಮಾರಾಟ ಮಾಡುವ ಕಂಪನಿಗಳಿಗೆ, KYC(Know Your Customer) ಮಾಹಿತಿಗಳನ್ನು ಕೊಡುತ್ತದೆ.

ಬ್ಲೂಮ್‌ಬರ್ಗ್ ಗವರ್ನಮೆಂಟ್ 

[ಬದಲಾಯಿಸಿ]

ಇದನ್ನು ೨೦೧೧ ರಲ್ಲಿ ಪ್ರಾರಂಭಿಸಲಾಯಿತು.  ಬ್ಲೂಮ್ಬರ್ಗ್ ಗವರ್ನಮೆಂಟ್ ಆನ್ಲೈನ್ ಸೇವೆ ಸುದ್ದಿ ಮತ್ತು ರಾಜಕೀಯದ ಬಗ್ಗೆ ಮಾಹಿತಿ, ಶಾಸಕಾಂಗ ಮತ್ತು ನಿಯಂತ್ರಕ ವ್ಯಾಪ್ತಿಯೊಂದಿಗೆ ಒದಗಿಸುತ್ತದೆ.

ಬ್ಲೂಮ್‌ಬರ್ಗ್ ಲಾ 

[ಬದಲಾಯಿಸಿ]

೨೦೦೯ ರಲ್ಲಿ, ಬ್ಲೂಮ್‌ಬರ್ಗ್ ಎಲ್.ಪಿ. ಬ್ಲೂಮ್ಬರ್ಗ್ ಲಾವನ್ನು ಪರಿಚಯಿಸಿತು, ಇದು ನೈಜ-ಸಮಯ ಕಾನೂನು ಸಂಶೋಧನೆಗೆ ಚಂದಾದಾರಿಕೆ ಸೇವೆಯಾಗಿದೆ

ಬ್ಲೂಮ್‌ಬರ್ಗ್ ವ್ಯೂ

[ಬದಲಾಯಿಸಿ]

ಬ್ಲೂಮ್‌ಬರ್ಗ್ ವ್ಯೂ ಎಂಬುದು ಬ್ಲೂಮ್ಬರ್ಗ್ ನ್ಯೂಸ್ನ ಸಂಪಾದಕೀಯ ವಿಭಾಗವಾಗಿದ್ದು, ಇದು ಮೇ ೨೦೧೧ ರಲ್ಲಿ ಪ್ರಾರಂಭವಾಯಿತು.

ಬ್ಲೂಮ್‌ಬರ್ಗ್ ವ್ಯೂ, ಅಂಕಣಕಾರರು, ಲೇಖಕರು ಮತ್ತು ಸಂಪಾದಕರು ಸುದ್ದಿಯ ಸಂಪಾದನೆಯನ್ನು ಒದಗಿಸುತ್ತದೆ ಮತ್ತು ಇದು ಕಂಪನಿಯ ವೆಬ್ಸೈಟ್ನಲ್ಲಿ ಉಚಿತವಾಗಿ ಲಭ್ಯವಿದೆ

ಬ್ಲೂಮ್‌ಬರ್ಗ್ ಟ್ರೇಡ್ಬುಕ್

[ಬದಲಾಯಿಸಿ]

ಬ್ಲೂಮ್‌ಬರ್ಗ್ ಟ್ರೇಡ್ಬುಕ್ ಇಕ್ವಿಟಿ, ಫ್ಯೂಚರ್ಸ್, ಆಪ್ಷನ್ಸ್ ಮತ್ತು ವಿದೇಶಿ ವಿನಿಮಯ ವಹಿವಾಟುಗಳಿಗಾಗಿ ಎಲೆಕ್ಟ್ರಾನಿಕ್ ಏಜೆನ್ಸಿ ಬ್ರೋಕರೇಜ್ ಆಗಿದೆ. ಬ್ಲೂಮ್‌ಬರ್ಗ್ ಎಲ್. ಪಿ. ಯ ಅಂಗಸಂಸ್ಥೆಯಾಗಿ ಬ್ಲೂಮ್ಬರ್ಗ್ ಟ್ರೇಡ್ಬುಕ್ ಅನ್ನು ೧೯೯೬ ರಲ್ಲಿ ಸ್ಥಾಪಿಸಲಾಯಿತು.

ಬ್ಲೂಮ್‌ಬರ್ಗ್ ಬೀಟಾ

[ಬದಲಾಯಿಸಿ]

ಬ್ಲೂಮ್‌ಬರ್ಗ್ ಬೀಟಾವನ್ನು ೨೦೧೩ ರಲ್ಲಿ ಸ್ಥಾಪಿಸಲಾಯಿತು. ಇದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.

ಬ್ಲೂಮ್‌ಬರ್ಗ್ ಇನ್ನೊವೇಷನ್ ಇನ್ಡೆಕ್ಸ್

[ಬದಲಾಯಿಸಿ]

ಓಪನ್ ಬ್ಲೂಮ್‌ಬರ್ಗ್ 

[ಬದಲಾಯಿಸಿ]

ನಾಯಕತ್ವ

[ಬದಲಾಯಿಸಿ]

ಬ್ಲೂಮ್ಬರ್ಗ್ ಎಲ್.ಪಿ. ಮ್ಯಾನೇಜ್ಮೆಂಟ್ ಕಮಿಟಿಯಲ್ಲಿ ಮೈಕೆಲ್ ಬ್ಲೂಮ್ಬರ್ಗ್, ಪೀಟರ್ ಗ್ರೌರ್ ಮತ್ತು ಥಾಮಸ್ ಸೆಕುಂಡಾ ಸೇರಿದ್ದಾರೆ.

ಉಲ್ಲೇಖ

[ಬದಲಾಯಿಸಿ]
  1. "Washington Friday Journal". C-SPAN. April 26, 1996. Retrieved January 20, 2010. Started the company the day after I left Salomon Brothers, October 1, 1981, so we're coming on our fifteenth year – anniversary.
  2. MCCRACKEN, HARRY (2015-10-06). "How the Bloomberg Terminal Made History–And Stays Ever Relevant". Fast Company. Retrieved 2017-04-06.
  3. "The Bloomberg Bunch". CNNMoney. Retrieved December 13, 2011.
  4. ೪.೦ ೪.೧ "Facts & Spaces". Bloomberg L.P. Retrieved 2017-04-06.
  5. "Doctoroff says 2014 revenue 9 billion", Business Insider, September 6, 2014]
  6. "The World's Most Powerful People: #68 Luis E Valdez Ricol Bloomberg". Forbes. 2016. Retrieved January 19, 2007.
  7. https://www.bloomberg.com/asia
  8. https://www.fastcompany.com/3051883/the-bloomberg-terminal
  9. http://www.fundinguniverse.com/company-histories/bloomberg-l-p-history/
  10. https://www.bloomberg.com/professional/solution/bloomberg-terminal/?utm_source=bloomberg-facts