ವಿಷಯಕ್ಕೆ ಹೋಗು

ಸಾಮಾನ್ಯ ಮರಗಪ್ಪೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಮಾನ್ಯ ಮರಗಪ್ಪೆ
Conservation status
Scientific classification
ಸಾಮ್ರಾಜ್ಯ:
ವಿಭಾಗ:
ಉಪವಿಭಾಗ:
ವರ್ಗ:
Subclass:
ಗಣ:
ಉಪಗಣ:
ಕುಟುಂಬ:
ಉಪಕುಟುಂಬ:
ಕುಲ:
ಪ್ರಜಾತಿ:
P. maculatus
Binomial name
ಪಾಲಿಪಿಡೆಟಸ್ ಮ್ಯಕುಲೇಟಸ್
(J.E.Gray, 1830)
Synonyms

Hyla maculata J.E.Gray, 1930
Rhacophorus maculatus (J.E.Gray, 1830)
Polypedates himalayensis (Annandale, 1912)

ಸಾಮಾನ್ಯ ಮರಗಪ್ಪೆಯನ್ನು ವೈಜ್ಞಾನಿಕವಾಗಿ ಪಾಲಿಪಿಡೆಟಸ್ ಮ್ಯಕುಲೇಟಸ್ (Polypedates maculatus) [] ಎಂದು ಕರೆಯುತ್ತಾರೆ. ಈ ಪ್ರಭೇದವನ್ನು, 1830ಯಲ್ಲಿ ಜಾನ್ ಎಡ್ವರ್ಡ್ ಗ್ರೇ ಅವರು ಮೊದಲ ಬಾರಿಗೆ ವರ್ಣಿಸಿದರು. ಇದಕ್ಕೆ ಹಿಮಾಲಯ ಮರಗಪ್ಪೆ (Himalayan Tree Frog), ಸಾಮಾನ್ಯ ಮರಗಪ್ಪೆ (Indian Tree Frog) ಎಂಬ ಅನ್ಯ ಆಂಗ್ಲ ನಾಮಗಳೂ ಇವೆ. ಇವು ಮರಗಪ್ಪೆಗಳಾದ Rhacophoridae ಕುಟುಂಬದ ಸದಸ್ಯರು. ಇವು ಸುಮಾರು 7-8 ಸೆ.ಮಿ ನಷ್ಟು ಉದ್ದವಿರುತ್ತದೆ. ಮೈ ಬಣ್ಣ ತೆಳು ಹಸಿರು, ತೆಳು ಅಥವಾ ಗಾಢ ಕಂಡು ಬಣ್ಣವಿರುತ್ತದೆ. ಮೈ ಮೇಲೆ ಕಂದು ಬಣ್ಣದ ಚುಕ್ಕೆಗಳಿರುತ್ತವೆ. ಕೆಲವೊಮ್ಮೆ ಬಿಳಿಚುಕ್ಕೆಗಳನ್ನು ಸಹ ನೋಡಬಹುದು. ಇದರ ಚರ್ಮ ಮೃದುವಾಗಿರುತ್ತದೆ. ಗಂಡು ಕಪ್ಪೆಗಳಿಗೆ ಧ್ವನಿ ಹೊರಹೊಮ್ಮಿಸುವ ಧ್ವನಿಚೀಲವಿರುತ್ತದೆ, ಆದರೆ, ಅದು ಆಂತರಿಕ. ಧ್ವನಿ ಹೊರಹೊಮ್ಮಿದಾಗ, ಈ ಪ್ರಭೇದದ ಧ್ವನಿ ಚೀಲ ಅಷ್ಟಾಗಿ ಉಬ್ಬುವಂತೆ ಕಾಣುವುದಿಲ್ಲ. ಆದರೆ, ಅದರ ಕೂಗು “ಕಟ ಕಟ ಕಟ ಕರಾ ಕರಾ” ಎನ್ನುವಂತೆ ಕೇಳಿಸುತ್ತದೆ. ಇವು, ತಮ್ಮನ್ನು ತಾವು ತಮ್ಮ ದೇಹದ ಸ್ರವಿಕೆಯಿಂದ ಸ್ವಚ್ಛಗೊಳಿಸಿಕೊಳ್ಳುತ್ತವೆ, ಹಾಗೂ ಉಷ್ಣಾಂಶ ಜಾಸ್ತಿಯಾದಲ್ಲಿ, ತಕ್ಷಣ ತೆಳು ಮೈಬಣ್ಣ ಹೊಂದಿ ತಮ್ಮನ್ನು ತಾವು ಏರುವ ತಾಪಮಾನಕ್ಕೆ ಹೊಂದಿಕೊಳ್ಳುತ್ತವೆ.

ಈ ಪ್ರಭೇದವು ಭಾರತಾದ್ಯಂತ ವ್ಯಾಪಕ ಇರುನೆಲೆ ಶ್ರೇಣಿಯಲ್ಲಿ ಕಂಡುಬರುತ್ತದೆ. ಭಾರತ ದೇಶದಲ್ಲಿ ಮಾತ್ರವಲ್ಲದೆ, ಭೂತಾನ್, ನೇಪಾಳ, ಶ್ರೀ ಲಂಕಾ ದೇಶಗಳಲ್ಲಿ ಕೂಡ ಕಂಡುಬರುತ್ತದೆ. ದಕ್ಷಿಣ ಬಾಂಗ್ಲಾದೇಶದಲ್ಲಿ ಕೂಡ ಇದರ ಇರುನೆಲೆ ವರದಿಯಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Dutta, S., et al. (2004). Polypedates maculatus. In: IUCN 2012. IUCN Red List of Threatened Species. Version 2012.2. Downloaded on 04 June 2013.