ವಿಷಯಕ್ಕೆ ಹೋಗು

ಸದಸ್ಯ:Yeshwanth1710560/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

ನನ್ನ ಹೆಸರು ಯಶವಂತ್ ಎನ್., ತಂದೆಯ ಹೆಸರು ನರಸಿಂಹಯ್ಯ ಹಾಗೂ ತಾಯಿಯ ಹೆಸರು ವಿಜಯಮ್ಮ, ಹುಟ್ಟಿ ಬೆಳೆದಿದ್ದಲ್ಲ ಬೆಂಗಳೂರು. ತಂದೆಯ ಊರು ರಾಮನಗರ, ತಾುಯ ಊರು ಕನಕಪುರ.

ಶಿಕ್ಷಣ ಮಾತು ಹವ್ಯಾಸಗಳು

ವಿದ್ಯಾಭ್ಯಾಸ ಪ್ರಾರಂಭಗೊಂಡಿದ್ದು ಲೂಡ್ರ್ಸ್ ಹೈಸ್ಕೂಲ್, ಬೆಂಗಳೂರು. ದ್ವಿತೀಯ ಪಿ.ಯು.ಸಿ. ಗೌತಮ್ ಸಿದ್ದಾರ್ಥ ಕಾಲೇಜು (ದೀಕ್ಷಾ) ಎನ್ನುವ ಕಾಲೇಜಿನಲ್ಲಿ ಪೂರ್ಣವಾುತು. ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಮೊದಲನೆಯ ಬಿ.ಕಾಂ. ಓದುತ್ತಿದ್ದೇನೆ ಹಾಗೂ ನನ್ನ ಇಷ್ಟವಾದ ಕ್ರೀಡೆ ಕ್ರಿಕೇಟ್. ಸ್ಕೂಲಿನಲ್ಲಿ ಜಿಲ್ಲಾ ಮಟ್ಟದ ಕೋಕೋ ಮತ್ತು ವಾಲಿಬಾಲ್ ಪಂದ್ಯಗಳ  ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದೇನೆ. ನೃತ್ಯದಲ್ಲಿ ಹೆಚ್ಚು ಆಸಕ್ತಿ ಇದ್ದು ಸ್ಕೂಲ್ ಡೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ ಹಾಗೂ ಪಿ.ಯು.ಸಿ.ಗೆ ಬಂದಾಗ ಅತಿ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ಕಾಲೇಜಿಗೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿರುವೆ. ನೃತ್ಯದಲ್ಲಿ ಅತಿ ಹೆಚ್ಚು ಆಸಕ್ತಿ ಇದ್ದ ಕಾರಣ ಹಲವಾರು ಟಿ.ವಿ. ಚಾನಲ್‍ಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದೇನೆ. ದುಬೈನಲ್ಲಿಯ ಗ್ಲೋಬಲ್ ವಿಲೇಜ್ ಎನ್ನುವ ದೊಡ್ಡ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದೇನೆ. ಹುಟ್ಟಿ ಬೆಳೆದಿದ್ದೇಲ್ಲ ಬೆಂಗಳೂರು ಆದ ಕಾರಣ ಬಂದು, ಬಳಗ, ಸ್ನೇಹಿತರು ಎಲ್ಲಾ ಇಲ್ಲಿಯೇ ಹೆಚ್ಚು ವಾಸವಿದ್ದಾರೆ ಆದ್ದರಿಂದ ರಜೆಯ ಸಮಯದಲ್ಲಿ ಎಲ್ಲೂ ಹೊರಗೆ ಹೋಗುವುದಿಲ್ಲ. ಹಬ್ಬದ ಸಮಯದಲ್ಲಿ ಮಾತ್ರ ಅಪ್ಪನ ಊರಿಗೆ ಹೋಗಿ ಅಲ್ಲಿಯ ಸಂಭ್ರಮ ಸಡಗರವನ್ನು ಆನಂದಿಸುತ್ತೇನೆ. ಅಮ್ಮನ ಕಡೆ ಅವರ ತಮ್ಮ ಮಾತ್ರವಿದ್ದು ಅಲ್ಲಿಗೆ ಹೋಗುವುದು ಬಹಳ ಕಡಿಮೆ. thumb ಸ್ನೇಹಿತರು

ಬಹಳ ಆಪ್ತ ಗೆಳೆಯರೆಂದರೆ ತುಂಬಾ ಜನರಿದ್ದಾರೆ ಆದರೆ ಅದರಲ್ಲೂ ಪ್ರಮುಖರೆಂದರೇ ರಮೇಶ್ ಅವನು ನಮ್ಮ ಶಾಲೆಯ ದಿನದಿಂದಲೂ ನನ್ನ ಜೊತೆಯೇ ಇದ್ದಾನೆ, ನನ್ನ ಕಷ್ಟ ಸುಖದಲ್ಲಿ ಭಾಗಿಯಾಗಿದ್ದು ಎಂದಿಗೂ ದೂರ ಹೋಗಿಲ್ಲ ಹಾಗೂ ಅವರು ಮತ್ತು ನಮ್ಮ ಮನೆಯವರು ಒಂದೇ ಕುಟುಂಬದವರಂತಿದ್ದಾರೆ. ಆದ್ದರಿಂದ ನಮ್ಮ ಮನೆಯಲ್ಲಿ ಯಾವುದೇ  ಕಾರ್ಯಕ್ರಮ ಮಾಡಿದರೂ ಅವರನ್ನು ಕರೆಯುತ್ತೇವೆ, ಅಂತೆಯೇ ಅವರೂ ಕೂಡ ಅವರ ಮನೆಯ ಕಾರ್ಯಕ್ರಮಗಳಿಗೆ ಕರೆಯುತ್ತಾರೆ. ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಯಾವುದೇ ಕಾರ್ಯಕ್ರವಗಳನ್ನು ಸಂಬ್ರಮದಿಂದ ಆಚರಿಸುತ್ತೇವೆ. ಅದನ್ನು ಬಿಟ್ಟರೆ ಈಗಿರುವ ಕಾಲೇಜಿನಲ್ಲಿ ಬಹಳಷ್ಟು ಆತ್ಮೀಯರಾದ ಸ್ನೇಹಿತರಿದ್ದಾರೆ ಅವರಿಂದ ಕಾಲೇಜಿಗೆ ಬರಲು ಖುಯಾಗುತ್ತದೆ, ಎಂದಿಗೂ ಬೇಸರವಾಗುವುದಿಲ್ಲ. ಕಷ್ಟ ಕಾಲದಲ್ಲೂ ಸಹಾಯ ಮಾಡಿರುತ್ತಾರೆ.

ಪ್ರಮುಖ ಪುಸ್ತಕಗಳು

ಓದಿನಲ್ಲಿ ಆಸಕ್ತಿ ಇದ್ದು ಹಲವಾರು ಪುಸ್ತಕಗಳನ್ನು ಓದುತ್ತೇನೆ ಅದರಲ್ಲೂ ನಾಟಕ ವಿಭಾಗವೆಂದರೆ ಅಚ್ಚುಮೆಚ್ಚು. ನನಗೆ ಬಹಳ ಇಷ್ಟವಾದ ನಾಟಕವೆಂದರೆ ಕೃಷ್ಣೇಗೌಡರ ಆನೆ ಈ ನಾಟಕವನ್ನು ಪೂರ್ಣಚಂದ್ರ ತೇಜಸ್ವಿಯವರು ರಚಿಸಿದ್ದಾರೆ ಈ ನಾಟಕ ಒಂದು ಹಾಸ್ಯ ಹಾಗೂ ಆನೆಯ ವಿಚಾರವಿರುವಂತದ್ದು, ಇದರಲ್ಲಿ ಭಲಶಾಲಿಗಳು ಭಲಹೀನರನ್ನು ಹಾಗೂ ಮಾತನಾಡುವ ಮಾನವರು ಮಾತನಾಡಲಾಗದ ಪ್ರಾಣಿಗಳ ಮೇಲೆ ಮಾಡುವ ಶೋಷಣೆಯನ್ನು ತೋರಿಸುತ್ತದೆ. ಈ ಕಾರಣದಿಂದ ಈ ನಾಟಕ ನನಗೆ ಅಚ್ಚು ಮೆಚ್ಚು ಎನಿಸುತ್ತದೆ. ಡಾ||

ಆದರ್ಶ ವ್ಯಕ್ತಿ

ಅಬ್ದುಲ್ ಕಲಾಂರವರು ನನಗೆ ಆದರ್ಶರಾದ ವ್ಯಕ್ತಿ. ಅಬ್ದುಲ್ ಕಲಾಂರ ಗುಣ, ಮಾತು, ನಡವಳಿಕೆ ನನಗೆ ತುಂಬಾ ಮೆಚ್ಚುಗೆಯಾಗಿದೆ. ಅವರು ಮಾತನಾಡುವುದಕ್ಕಿಂತ ಕೆಲಸ ಮಾಡುವುದನ್ನು ಅತಿ ಹೆಚ್ಚಾಗಿ ನಂಬಿದ್ದರು. ಅವರ ಆಟೋ ಬಯೋಗ್ರಫಿಯಾದ “ವಿಂಗ್ಸ್ ಆಫ್ ಪೈಯರ್ (ಬೆಂಕಿ ರೇಖೆಗಳು)” ಎಂಬ ಪುಸ್ತಕ ಓದಿದಾಗಲಿಂದ ಅವರು ನನ್ನ ಆದರ್ಶ ವ್ಯಕ್ತಿಯೆಂದು ಪರಿಗಣಿಸಿದೆ.

ಧನ್ಯವಾದಗಳು

ಈ ಕಾಲೇಜಿನಲ್ಲಿ ಸಿ.ಐ.ಎ. ಅಸೈನ್‍ಮೆಂಟ್‍ಗಳು ಆನ್‍ಲೈನ್, ವಿಕಿಪೀಡಿಯಾಗಳ ಬಗ್ಗೆ ಕೊಟ್ಟಿರುವುದು ತುಂಬಾ ಖುಯಾದ ವಿಚಾರ ಏಕೆಂದರೆ ನಮ್ಮ ಶಾಲಾ ಕಾಲೇಜುಗಳಲ್ಲಿ ಎಂದಿಗೂ ಈ ತರಹದ ಅಸೈನ್‍ಮೆಂಟ್ ನೀಡಿರಲಿಲ್ಲ ಆದ್ದರಿಂದ ಇದು ನಮಗೆ ಒಂದು ಹೊಸ ತರಹದ ಅನುಭವ ನೀಡುತ್ತಿದೆ. ಆದ್ದರಿಂದ ಎಲ್ಲಾ ಗುರುಗಳಿಗೂ ಈ ತರಹದ ಅಸೈನ್‍ಮೆಂಟ್‍ಗಳನ್ನು ನೀಡಿರುವುದಕ್ಕೆ ಧನ್ಯವಾದಗಳು.