ವಿಷಯಕ್ಕೆ ಹೋಗು

ಅಮಾನತ್ತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮಾನತ್ತು ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘನೆಮಾಡಿದಾಗ ಜನರು ಪಡೆಯುವ ಶಿಕ್ಷೆಯ ಒಂದು ರೂಪ.

ಕಾರ್ಯಸ್ಥಳದಲ್ಲಿ ಒಂದು ಸಂಸ್ಥೆಯ ಕಾರ್ಯನೀತಿಯ ಪ್ರಮುಖ ಉಲ್ಲಂಘನೆಗಳಿಗಾಗಿ ಅಮಾನತ್ತುಗೊಳಿಸುವುದು ಒಂದು ಸಾಮಾನ್ಯ ಅಭ್ಯಾಸವಾಗಿದೆ. ವ್ಯವಹಾರ ವ್ಯವಸ್ಥಾಪಕ ಅಥವಾ ಮೇಲ್ವಿಚಾರಕನು ಒಬ್ಬ ಉದ್ಯೋಗಿಯ ಕ್ರಿಯೆಯು (ಉದ್ದೇಶಪೂರ್ವಕ ಅಥವಾ ಅನುದ್ದೇಶಿತ) ಕಾರ್ಯನೀತಿಯ ಉಲ್ಲಂಘನೆ ಎಂದು ಹಾಗೂ ಶಿಕ್ಷೆಯಲ್ಲಿ ಪರಿಣಮಿಸಬೇಕೆಂದು ಭಾವಿಸಿದಾಗ, ಮತ್ತು ಅಮಾನತ್ತಿನ ಅವಧಿಯಲ್ಲಿ ಉದ್ಯೋಗಿಯ ಅನುಪಸ್ಥಿತಿ ಕಂಪನಿಯ ಮೇಲೆ ಪ್ರಭಾವಬೀರದಿದ್ದಾಗ ಕೆಲಸದಿಂದ ಅಮಾನತ್ತುಗೊಳಿಸಲಾಗುತ್ತದೆ. ಕ್ರಿಯೆಯ ಈ ರೂಪ ಉದ್ಯೋಗಿಗೆ ನೋವುಂಟುಮಾಡುತ್ತದೆ ಏಕೆಂದರೆ ಅಮಾನತ್ತಿನ ಅವಧಿಯಲ್ಲಿ ಅವನು ಕೆಲಸ ಮಾಡುವಂತಿಲ್ಲ ಮತ್ತು ಹಾಗಾಗಿ ಸಂಬಳ ಪಡೆಯುವುದಿಲ್ಲ. ಅಮಾನತ್ತು ಸಂಬಳಸಹಿತವಿರುವುದು, ಅಥವಾ ಅಮಾನತ್ತನ್ನು ವಿರೋಧಿಸಿದಾಗ ಮತ್ತು ತರುವಾಯ ಅದನ್ನು ಅನೂರ್ಜಿತಗೊಳಿಸುವುದು ಇದಕ್ಕೆ ಅಪವಾದವಾಗಿದೆ. ಸಂಬಳ ನೀಡುವಂತಹ ಕೆಲವು ಕೆಲಸಗಳು ಸಂಬಳಸಹಿತ ಅಮಾನತ್ತುಗಳನ್ನು ಹೊಂದಿರಬಹುದು. ಇದರಲ್ಲಿ ಪ್ರಭಾವಿತ ಕಾರ್ಮಿಕನನ್ನು ಕೆಲಸಕ್ಕೆ ಬರದಂತೆ ತಡೆಹಿಡಿಯಲಾಗುವುದು ಆದರೆ ಸಂಬಳ ನೀಡಲಾಗುವುದು. ಸಾಮಾನ್ಯವಾಗಿ, ಪ್ರಭಾವಿತ ಕಾರ್ಮಿಕನು ಸಂಬಳ ಪಡೆಯದಿದ್ದರೆ ಅಮಾನತ್ತುಗಳನ್ನು ಅತ್ಯಂತ ಪರಿಣಾಮಕಾರಿ ಎಂದು ಭಾವಿಸಲಾಗುತ್ತದೆ. ಸಾಮಾನ್ಯವಾಗಿ ಇತರ ಸಮಾಲೋಚನಾ ಹೇಳಿಕೆಗಳ ವಿಧಾನಗಳನ್ನು ಪರಿಶೀಲಿಸಿ ಮುಗಿಸಿದಾಗ ಅಮಾನತ್ತು ಮಾಡಲಾಗುತ್ತದೆ, ಆದರೆ ಕೆಲವು ಉಲ್ಲಂಘನೆಗಳಿಗೆ ತಕ್ಷಣ ಅಮಾನತ್ತುಗೊಳಿಸಬಹುದು. ಅಮಾನತ್ತುಗಳನ್ನು ಹಿಂಬಾಲಿಸಲಾಗುತ್ತದೆ, ಮತ್ತು ಎಷ್ಟೇ ಸಂಖ್ಯೆಯ ಅಮಾನತ್ತುಗಳು, ಒಂದಿದ್ದರೂ ಕೂಡ ಒಬ್ಬರು ಬಡತಿಗಳು, ಬೋನಸ್‍ಗಳು ಅಥವಾ ಪದೋನ್ನತಿಗಳನ್ನು ಪಡೆಯುವಂತಿಲ್ಲ, ಅಥವಾ ಕಂಪನಿಯಿಂದ ವಜಾಗೊಳ್ಳುವುದಕ್ಕೂ ಕಾರಣವಾಗಬಲ್ಲದು.

ಅಮಾನತ್ತು ಷರತ್ತುಗಳು ಸಾಮೂಹಿಕ ಕರಾರು ಒಪ್ಪಂದಗಳ ಸಾಮಾನ್ಯ ಅಂಶಗಳಾಗಿವೆ. ಒಕ್ಕೂಟಗಳಿರುವ ಸಂಸ್ಥೆಗಳಲ್ಲಿ ದೂರು ದಾಖಲಿಸುವ ಮೂಲಕ ಉದ್ಯೋಗಿಗಳು ಅಮಾನತ್ತುಗಳನ್ನು ವಿರೋಧಿಸಬಹುದು.

ಒಂದು ತನಿಖೆಗೆ ಹಾನಿತರುವುದನ್ನು ತಪ್ಪಿಸಲು ಕಾರ್ಯಸ್ಥಳದಿಂದ ಉದ್ಯೋಗಿಯನ್ನು ತೆಗೆಯಬೇಕಾದಾಗ ಪೂರ್ಣ ವೇತನದ ಮೇಲಿನ ಅಮಾನತ್ತನ್ನೂ ಬಳಸಬಹುದು. ಇದನ್ನು ಶಿಕ್ಷೆಯಾಗಿ ಬಳಸಲಾಗದೆ, ಉದ್ಯೋಗದಾತನ ಹಿತಾಸಕ್ತಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ, ಕರ್ತವ್ಯದಲ್ಲಿದ್ದಾಗ ಒಬ್ಬ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ ಪೋಲಿಸ್ ಆಫ಼ಿಸರ್‍ಗೆ ತನಿಖೆಯ ಅವಧಿಯಲ್ಲಿ ವೇತನಸಹಿತ ಅಮಾನತ್ತನ್ನು ನೀಡಲಾಗುತ್ತದೆ, ಶಿಕ್ಷಿಸಲು ಅಲ್ಲ, ಬದಲಾಗಿ ಇಲಾಖೆಗೆ ತನ್ನ ತನಿಖೆ ನಡೆಸಲು ಸಾಧ್ಯಗೊಳಿಸಲು.

ಕ್ರೀಡೆಯಲ್ಲಿ, ಅಮಾನತ್ತು ಒಂದು ಶಿಕ್ಷೆ. ಇದರಲ್ಲಿ ಆಟಗಾರರನ್ನು ನಿರ್ದಿಷ್ಟ ಸಂಖ್ಯೆಯ ಭವಿಷ್ಯದ ಪಂದ್ಯಗಳನ್ನು ಆಡದಂತೆ ನಿಷೇಧಿಸಲಾಗುತ್ತದೆ. ಈ ಅಮಾನತ್ತುಗಳನ್ನು ಆಟದ ನಿಯಮಗಳ ತೀವ್ರ ಉಲ್ಲಂಘನೆಗಳು (ಉದಾ. ವೈಯಕ್ತಿಕ ಫ಼ೌಲುಗಳು), ಕ್ರೀಡಾಋತುವಿನ ಅವಧಿಯಲ್ಲಿ ಮಿತಿಮೀರಿದ ತಾಂತ್ರಿಕ, ಅಥವಾ ಎದ್ದುಕಾಣುವ ಫ಼ೌಲ್‍ಗಳಿಗೆ, ಆಟದ ಅವಧಿಯಲ್ಲಿ ಒಬ್ಬ ಆಟಗಾರನು ತಪ್ಪುಗಳ ಭಾಗವಾಗಿದ್ದ ಜಗಳಗಳಿಗೆ, ಅಥವಾ ಮೈದಾನದ ಹೊರಗಿನ ದುರಾಚಾರಕ್ಕೆ (ಉದಾ. ಅಕ್ರಮ ಅಥವಾ ನಿಷೇಧಿತ ವಸ್ತುವಿನ ಬಳಕೆ) ನೀಡಬಹುದು.