ರೂಢಿ
ರೂಢಿ ನಿಯಮಿತವಾಗಿ ಪುನರಾವರ್ತಿಸಲಾದ ವರ್ತನೆಯ ಒಂದು ವಾಡಿಕೆ ಮತ್ತು ಒಳಪ್ರಜ್ಞೆಯಿಂದ ಸಂಭವಿಸುತ್ತದೆ.[೧]
ಅಮೇರಿಕನ್ ಜರ್ನಲ್ ಆಫ಼್ ಸೈಕಾಲಜಿ ರೂಢಿಯನ್ನು "ಮನೋವಿಜ್ಞಾನದ ದೃಷ್ಟಿಕೋನದಿಂದ, ಒಂದು ಮಾನಸಿಕ ಅನುಭವದ ಹಿಂದಿನ ಪುನರಾವರ್ತನೆಯ ಮೂಲಕ ಪಡೆಯಲಾದ ಹೆಚ್ಚುಕಡಿಮೆ ಸ್ಥಿರ ರೀತಿಯ ಯೋಚನೆ, ಸಮ್ಮತಿ, ಅಥವಾ ಅನಿಸಿಕೆ" ಎಂದು ವ್ಯಾಖ್ಯಾನಿಸುತ್ತದೆ." ರೂಢಿಯ ವರ್ತನೆ ಅದನ್ನು ಪ್ರದರ್ಶಿಸುವ ವ್ಯಕ್ತಿಗಳಲ್ಲಿ ಹಲವುವೇಳೆ ಗಮನಿಸಲ್ಪಡುವುದಿಲ್ಲ, ಏಕೆಂದರೆ ವಾಡಿಕೆಯ ಕಾರ್ಯಗಳನ್ನು ಕೈಗೊಂಡಾಗ ಒಬ್ಬ ವ್ಯಕ್ತಿಯು ಆತ್ಮ ವಿಶ್ಲೇಷಣೆಯಲ್ಲಿ ತೊಡಗಿಕೊಳ್ಳುವ ಅಗತ್ಯವಿಲ್ಲ. ರೂಢಿಗಳು ಕೆಲವೊಮ್ಮೆ ಕಡ್ಡಾಯವಾಗಿರುತ್ತವೆ. ರೂಢಿ ರಚನೆಯ ಪ್ರಕ್ರಿಯೆಯ ಮೂಲಕ ಹೊಸ ವರ್ತನೆಗಳು ರೂಢಿಗತವಾಗಬಹುದು. ಹಳೆಯ ರೂಢಿಗಳನ್ನು ಮುರಿಯುವುದು ಕಷ್ಟ ಮತ್ತು ಹೊಸ ರೂಢಿಗಳನ್ನು ರಚಿಸುವುದು ಕಷ್ಟ ಏಕೆಂದರೆ ಮಾನವರು ಪುನರಾವರ್ತಿಸುವ ವರ್ತನ ಮಾದರಿಗಳು ನರಮಂಡಲದ ಮಾರ್ಗಗಳಲ್ಲಿ ಅಚ್ಚಾಗಿಬಿಡುತ್ತವೆ, ಆದರೆ ಪುನರಾವರ್ತನೆಯ ಮೂಲಕ ಹೊಸ ರೂಢಿಗಳನ್ನು ರೂಪಿಸಿಕೊಳ್ಳುವುದು ಸಾಧ್ಯ.
ಸಮಂಜಸ ಸಂದರ್ಭದಲ್ಲಿ ವರ್ತನೆಗಳನ್ನು ಪುನರಾವರ್ತಿಸಿದಾಗ, ಸಂದರ್ಭ ಮತ್ತು ಕ್ರಿಯೆಯ ನಡುವಿನ ಸಂಬಂಧದಲ್ಲಿ ಕ್ರಮೇಣ ಹೆಚ್ಚಳವಿರುತ್ತದೆ. ಇದು ಆ ಸಂದರ್ಭದಲ್ಲಿ ವರ್ತನೆಯ ಸ್ವಯಂಚಾಲಿತತೆಯನ್ನು ಹೆಚ್ಚಿಸುತ್ತದೆ. ರೂಢಿಗತ ವರ್ತನೆಯ ಗುಣಲಕ್ಷಣಗಳೆಂದರೆ:
- ಫಲಕಾರಿತ್ವ
- ಅರಿವಿನ ಕೊರತೆ
- ಅನುದ್ದೇಶಿತತೆ
- ಅನಿಯಂತ್ರಿತತೆ
ರೂಢಿ ರಚನೆಯು ನಿಯಮಿತ ಪುನರಾವರ್ತನೆಯ ಮೂಲಕ ಒಂದು ವರ್ತನೆ ರೂಢಿಗತವಾಗುವ ಪ್ರಕ್ರಿಯೆ. ಇದನ್ನು ಒಂದು ಅಸಂಪಾತದವರೆಗೆ ಪುನರಾವರ್ತನೆಗಳ ಸಂಖ್ಯೆಯ ಜೊತೆಗೆ ರೂಢಿಗತತೆಯಲ್ಲಿನ ಹೆಚ್ಚಳವಾಗಿ ರೂಪಿಸಲಾಗುತ್ತದೆ. ರೂಢಿಯ ರಚನೆಯ ಈ ಪ್ರಕ್ರಿಯೆ ನಿಧಾನವಾಗಿರಬಹುದು. ಭಾಗಿಗಳಲ್ಲಿ ರೂಢಿಗತತೆಯ ಅಸಂಪಾತವನ್ನು ಮುಟ್ಟುವ ಸರಾಸರಿ ಸಮಯ ೬೬ ದಿನಗಳು ಮತ್ತು ವ್ಯಾಪ್ತಿ ೧೮-೨೫೪ ದಿನಗಳು ಎಂದು ಕೆಲವು ವಿದ್ವಾಂಸರು ಕಂಡುಕೊಂಡಿದ್ದಾರೆ.
ರೂಢಿಯು ರೂಪಿತವಾಗುತ್ತಿರುವಾಗ, ಅದನ್ನು ಮೂರು ಭಾಗಗಳಲ್ಲಿ ವಿಶ್ಲೇಷಿಸಬಹುದು: ಸೂಚನೆ, ವರ್ತನೆ, ಮತ್ತು ಪ್ರತಿಫಲ. ಸೂಚನೆ ಅಥವಾ ಸಂಕೇತವೆಂದರೆ ರೂಢಿಯು ಬರಲು ಕಾರಣವಾಗುವ ವಸ್ತು, ರೂಢಿಯ ವರ್ತನೆಯ ಪ್ರಚೋದಕ. ಇದು ಒಬ್ಬರ ಮನಸ್ಸು ಆ ರೂಢಿಯೊಂದಿಗೆ ಸಂಬಂಧಿಸುವ ಏನಾದರೂ ಆಗಿರಬಹುದು ಮತ್ತು ಇದು ಒಂದು ರೂಢಿಯು ಮೇಲ್ಮೈಗೆ ಸ್ವಯಂಚಾಲಿತವಾಗಿ ಬರುವಂತೆ ಮಾಡುತ್ತದೆ. ವರ್ತನೆಯು ಒಬ್ಬರು ಪ್ರದರ್ಶಿಸುವ ನೈಜ ರೂಢಿ, ಮತ್ತು ಪ್ರತಿಫಲವು ಒಂದು ಸಕಾರಾತ್ಮಕ ಅನಿಸಿಕೆಯಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Butler, Gillian; Hope, Tony. Managing Your Mind: The mental fitness guide. Oxford Paperbacks, 1995