ವಿಷಯಕ್ಕೆ ಹೋಗು

ಪಿ.ಬಿ.ದಾಸಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ. ಪಿ.ಬಿ ದೇಸಾಯಿ ಕರ್ನಾಟಕದ ಹೆಸರಾಂತ ಪುರಾತತ್ತ್ವ ತಜ್ಞರು. ಸಂಶೋಧರಾಗಿದ್ದರು.[]

ಬಾಲ್ಯ ಮತ್ತು ಜೀವನ

[ಬದಲಾಯಿಸಿ]

ಅವರು ಕೊಪ್ಪಳ ಜಿಲ್ಲೆಯ ಕುಕುನೂರಿನಲ್ಲಿ ೨,ಡಿಸೆಂಬರ್‌ ೧೯84ರಂದು. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.ತಂದೆ ಭೀಮರಾವ್‌, ತಾಯಿ ಭಾಗೀರತಿಬಾಯಿ.ಅವರ ತಂದೆ, ನಿಜಾಮರ ಸರ್ಕಾರದಲ್ಲಿ ಕಂದಾಯ ಅಧಿಕಾರಿಯಾಗಿದ್ದರು.[]

ಶಿಕ್ಷಣ

[ಬದಲಾಯಿಸಿ]

ಅವರ ಪ್ರಾಥಮಿಕ ಶಿಕ್ಷಣ ಗುಲ್ಬರ್ಗಾ ಜಿಲ್ಲೆಯ ಸೇಡಂನಲ್ಲಿ ,ಮಾಧ್ಯಮಿಕ ಶಿಕ್ಷಣವು ಗುಲ್ಬರ್ಗಾದಲ್ಲಿ ಮುಗಿಸಿದರು. ಆಗಿನ ರಾಜ್ಯ ಭಾಷೆ ಉರ್ದು.ನಿಜಾಮರ ರಾಜ್ಯದಲ್ಲಿ ಆ ಭಾಗದಲ್ಲಿ ಕನ್ನಡ ಮಕ್ಕಳು ಮರಾಠಿ ಮಾಧ್ಯಮದಲ್ಲೇ ಕಲಿಯ ಬೇಕಿತ್ತು. ಅವರಿಗೆ ಕನ್ನಡ, ಮರಾಠಿ, ಉರ್ದು ಮತ್ತು ಇಂಗ್ಲಿಷ್‌ ಭಾಷೆಗಳು ಬರುತ್ತಿದ್ದುವು. ಅವರಿಗೆ ಪುರಾತನ ಇತಿಹಾಸ, ಶಾಸನ ಶಾಸ್ತ್ರ ಮತ್ತು ಹಸ್ತಪ್ರತಿ ಶಾಸ್ತ್ರಗಳಲ್ಲಿ ಆಸಕ್ತಿ ಇತ್ತು. ಮುಂಬಯಿ ವಿಶ್ವ ವಿದ್ಯಾಲಯದ ಇಂಟರ್‌ ಪರೀಕ್ಷೆಗೆ ಕುಳಿತವರು ಅನಾರೋಗ್ಯದ ನಿಮಿತ್ತ ತಮ್ಮ ಶಿಕ್ಷಣವನ್ನು ಪದವಿ ಪಡೆಯುವ ಮುನ್ನವೇ ಬಿಡಬೇಕಾಯಿತು.

ಕಾಲೇಜು ಬಿಟ್ಟು ಹಳ್ಳಿಗೆ ಹಿಂತಿರುಗಿದರು.ಅವರ ಅಣ್ಣ ರಾಘವೇಂದ್ರರಾವ್‌ ಮಕ್ಕಳಿಗೆ ಸ್ವದೇಶಾಭಿಮಾನ ಕುಕನೂರಿನಲ್ಲಿ ರಾಷ್ಟ್ರೀಯ ವಸತಿಶಾಲೆ ತೆರೆದಿದ್ದರು. ಅಲ್ಲಿ ಬೋಧನೆಯ ಪ್ರಾರಂಭಿಸಿದರು.

ಸ್ವಯಂ-ಅಧ್ಯಯನ

[ಬದಲಾಯಿಸಿ]

ಕುಕುನೂರು ಗ್ರಾಮದಲ್ಲಿ ಪುರಾತನ ದೇಗುಲಗಳು ಸಮೂಹವೇ ಇದೆ. ಅಲ್ಲಿನ ಮಹಾಮಾಯಿ ದೇವಾಲಯ ಬಹುಪ್ರಖ್ಯಾತ. ಅಲ್ಲಿರುವ ಶಾಸನಗಳ ಸಂಖ್ಯೆ ಬಹಳ. ಮೊದಮೊದಲು ಕುತೂಹಲದಿಂದ ನೋಡುತಿದ್ದ ದೇಸಾಯರು ನಂತರ ಓದುವುದನ್ನು ರೂಢಿಸಿಕೊಂಡರು. ಕ್ರಮೇಣ ಅವುಗಳ ಓದಿದರೆ ಅರ್ಥ ಮಾಡಿಕೊಳ್ಳುವ ಹಂತ ತಲುಪಿದರು. ಇದರಿಂದ ಶಾಸನ ಶಾಸ್ತ್ರದ ಪ್ರಾಯೋಗಿಕ ಪಾಠ ಎಳವೆಯಲ್ಲೇ ಆಯಿತು. ಅವರ ಇತಿಹಾಸ ಆಸಕ್ತಿ ಇನ್ನೂ ಹೆಚ್ಚಾಯಿತು. ಕ್ರಮೇಣ ಪಾಂಡುರಂಗನು ಅ ಶಿಲಾಶಾಸನಗಳನ್ನು ಸರಾಗವಾಗಿ ಒದಿದರು.

ಐದೇ ವರ್ಷದಲ್ಲಿ ಸ್ವಯಂ-ಅಧ್ಯಯನ ಮಾಡಿ ಶಾಸನ ತಜ್ಞನಾಗಿ ಹೊರ ಹೊಮ್ಮಿದರು. ಯಾವುದೇ ಗುರು ಶಿಕ್ಷಣವಿಲ್ಲದಿದ್ದರೂ ಅಭ್ಯಾಸ ಬಲದಿಂದ ಶಾಸನಗಳನ್ನು ತಡವರಿಸದೆ ಓದಿ ಅರ್ಥ ಮಾಡಿಕೊಳ್ಳುವ ಶಕ್ತಿ ಸತತ ಅಧ್ಯಯನದಿಂದ ಅವರಿಗೆ ಬಂದಿತ್ತು. ಅವರ ಆಸಕ್ತಿ ಹೆಚ್ಚಿದಂತೆ ಶಾಸನ ಸಂಗ್ರಹದ ಹವ್ಯಾಸವೂ ಬೆಳೆಯಿತು.

ಕುಕುನೂರ ಮತ್ತು ಸುತ್ತಮುತ್ತಲ ಗ್ರಾಮಗಳ ಸುಮಾರು ೨೦೦ ಶಾಸನಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಬಲ್ಲ ಶಕ್ತಿ ಮಾಡಿದರು. ಹಾಗೆ ಓದುವಾಗ ಒಂದು ಕಾಲಘಟ್ಟದಿಂದ ಇನ್ನೊಂದು ಕಾಲಘಟ್ಟಕ್ಕೆ ಬದಲಾದ ಲಿಪಿ ಮತ್ತು ಭಾಷೆಯನ್ನು ಗುರುತಿಸುವ ಸಾಮರ್ಥ್ಯ ಬಂದಿತ್ತು. ಎಲ್ಲವೂ ಅನುಭವ ಜನ್ಯ. ಶತಮಾನಗಳಲ್ಲಿ ಆಗುವ ಲಿಪಿ ವಿಕಾಸವನ್ನು ಸುಲಭವಾಗಿ ಗುರುತಿಸುವ ಶಕ್ತಿಯೂ ಬಂದಿತ್ತು. ಅವರ ಕುತೂಹಲವು ಈಗ ಅಭಿಲಾಷೆಯಾಯಿತು.ಬರಿ ಶಾಸನ ಓದುವುದರಲ್ಲಿಯೇ ತೃಪ್ತರಾಗದೇ ಅದರ ಜೊತೆಗೆ ದೇವಸ್ಥಾನಗಳ ವಾಸ್ತು, ಶಿಲ್ಪ, ಮತ್ತು ವೀರಗಲ್ಲುಗಳ ಅಧ್ಯಯನವನ್ನೂ ಮಾಡಿದರು. ಐದು ವರ್ಷದಲ್ಲಿ ಹಣಕಾಸಿ ಪರಿಸ್ಥಿತಿ ತುಸು ಸುಧಾರಿಸಿತು

ಕರ್ನಾಟಕ ಕಾಲೇಜು

[ಬದಲಾಯಿಸಿ]

ಅವರು ಮತ್ತೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ತರಗತಿಗೆ ಸೇರಿದರು. ಇತಿಹಾಸ ಮತ್ತು ಸಂಸ್ಕೃತ ವಿಷಯಗಳನ್ನು ಆಯ್ದುಕೊಂಡರು. ಬಿ. ಎ. ಪದವಿ 1935ರಲ್ಲಿ ಪಡೆದರು. ಸಂಸ್ಕೃತದಲ್ಲಿ ಅತ್ಯತ್ತಮ ಸ್ಥಾನ ಗಳಿಸಿದ್ದರು. ಎಂ. ಎ. ನಲ್ಲಿ ಲಿಪಿಶಾಸ್ತ್ರವೂ ಒಂದು ವಿಷಯವಾಗಿತ್ತು. ೧೯೧೦ರಂದುಆ ಸಂದರ್ಭದಲ್ಲಿ ಅವರು ಬರೆದ ಕೃತಿ "ವಿಜಯ ನಗರ ಸಾಮ್ರಾಜ್ಯದ ಇತಿಹಾಸ" ( History of Vijayanagar Empire ) ಅಪಾರ ಮನ್ನಣೆ ಗಳಿಸಿತು. ಕನ್ನಡದ ಈ ಕೃತಿಯು ಅವರಿಗೆ ಚಿಕ್ಕವಯಸ್ಸಿನಲ್ಲಿಯೇ ಲೇಖಕನೆಂಬ ಖ್ಯಾತಿ ತಂದಿತು.

ಅವರ ಎರಡನೆಯ ಪುಸ್ತಕ ಶಿವಾಜಿಯನ್ನು ಕುರಿತದ್ದು. ಅವರು ಶಿವಾಜಿಯ ಜೀವನವನ್ನು ಪ್ರಮುಖವಾಗಿ ಕನ್ನಡದ ಮೂಲಗಳಿಂದಲೇ ಪಡೆದಿದ್ದರು ಎರಡೂ ಪುಸ್ತಕಗಳೂ ಬಹಳ ವರ್ಷಗಳಕಾಲ ಪಠ್ಯ ಪುಸ್ತಕಗಳಾಗಿದ್ದವು.

ಲಿಪಿಶಾಸ್ತ್ರಜ್ಞನಾಗಿ

[ಬದಲಾಯಿಸಿ]

ಭಾರತ ಸರ್ಕಾರದ ಪುರಾತತ್ವ ಇಲಾಖೆಯ ಶಾಸನಶಾಸ್ತ್ರ ವಿಭಾಗದಲ್ಲಿ ೧೯೩೯ರಲ್ಲಿ ಸಹಾಯಕ ಲಿಪಿಶಾಸ್ತ್ರಜ್ಞನಾಗಿ ಕೆಲಸಕ್ಕೆ ಸೇರಿದರು.ಅವರು ಊಟಿಯಲ್ಲಿಯೇ ನೆಲಸಿದರು. ಅವರು ೧೭ ವರ್ಷ ಆಳವಾಗಿ ಶಾಸನಗಳ ಅಧ್ಯಯನ ಮಾಡಿದರು. ಅವರು ಸಂಗ್ರಹಿಸಿದ, ಅಧ್ಯಯನ ಮಾಡಿದ ಶಾಸನಗಳ ಸಂಖ್ಯೆ ೧೦೦೦ ಕ್ಕೂ ಮಿಗಿಲು. ವಿಶೇಷವಾಗಿ ಮುಂಬಯಿ ಕರ್ನಾಟಕದ ನಾಲ್ಕೂ ಜಿಲ್ಲೆಗಳ ಶಾಸನ ಅಧ್ಯಯನ ಮಾಡಿದರು. ಅದರಲ್ಲಿ ತಮಿಳು ಮತ್ತು ತೆಲುಗು ಶಾಸನಗಳೂ ಸೇರಿದ್ದವು. ಜಾನ್‌.ಎಫ್. ಫ್ಲೀಟ್‌ಮಾಡಿದ್ದ ಶಾಸನ ಸಂಗ್ರಹ ಕೆಲಸವನ್ನು ಇವರು ಯಶಸ್ವಿಯಾಗಿ ಮುಂದುವರಿಸಿದರು.

ಜರ್ನಲ್ ಮತು ಬೋಧನೆ

[ಬದಲಾಯಿಸಿ]

ಇಲಾಖೆಯ ಜರ್ನಲ್ ಆದ ಅಂತರಾಷ್ಟ್ರೀಯ ಖ್ಯಾತಿವೆತ್ತ ಎಪಿಗ್ರಫಿಯಾ ಇಂಡಿಕಾಗೆ ಅವರು ನಿರಂತರ ಲೇಖನ ನೀಡುತಿದ್ದರು. ಅವರ ಆಳವಾದ ಸಂಸ್ಕೃತ ಜ್ಞಾನ ಮತ್ತು ದಕ್ಷಿಣ ಭಾರತದ ಭಾಷೆಗಳ ಮೇಲಿನ ಪ್ರಭುತ್ವದಿಂದ ಪುರಾತನ ಶಿಲಾಲಿಖಿತ ಬರಹಗಳ ಅವರ ವಿಶ್ಲೇಣೆಯು ಪ್ರಶ್ನಾತೀತವಾಗಿರುತಿತ್ತು.

ಅವರು ೧೯೫೭ ರಲ್ಲಿ ಕರ್ನಾಟಕ ವಿಶ್ವ ವಿದ್ಯಾನಿಲಯದ ಬೋಧನಾ ಹೊಣೆಯನ್ನು ವಹಿಸಿಕೊಂಡರು. ಇಲ್ಲಿ ಅವರಿಗೆ ತಾವು ಸಂಗ್ರಹಿಸಿದ ಅಪಾರ ಶಾಸನಗಳ ಅಧ್ಯಯನಕ್ಕೆ ಸಾಕಷ್ಟು ಸಮಯ ದೊರೆಯಿತು. ಅದರಿಂದ ಹೈದ್ರಾಬಾದಿನ ಕನ್ನಡ ಶಾಸನ ಸಂಗ್ರಹ ". "A corpus of Kannada inscriptions from Hyderabad", "Jainism in South India and some Jaina Inscriptions" ಎಂಬಗ್ರಂಥಕ್ಕೆ ಡಿ.ಲಿಟ್‌. ಪದವಿ ದೊರೆಯಿತು.ಮತ್ತು "Basaveshvara and His times" ಮೊದಲಾದ ವಿದ್ವತ್‌ಪೂರ್ಣ ಗ್ರಂಥಗಳನ್ನು ರಚಿಸಲು ಅನುವಾಯಿತು.

ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ತುಂಬ ಉಪಯುಕ್ತವಾದ "ಶಾಸನ ಪರಿಚಯ" ಮಾಲಿಕೆಯಲ್ಲಿ ಸುಮಾರು ಹತ್ತು ಕಿರುಪುಸ್ತಕ ಪರಿಚಯಿಸಿದರು. ವಿದ್ಯಾರ್ಥಿಗಳಿಗಾಗಿ ಭವ್ಯ ಭಾರತ ಚರಿತ್ರೆ,ಹಬ್ಬಹುಣ್ಣಿವೆಗಳು,ಕುಕ್ಕುನೂರಿನ ಮಹಾಮಾಯೆ,ಕನ್ನಡ ನಾಡಿನ ಶಾಸನಗಳು, ಹಂಪೆ ಮೊದಲಾದ ಚಿಕ್ಕಪುಸ್ತಕಗಳನ್ನು ರಚಿಸಿದ್ದಾರೆ. ಪ್ರೊಫೆಸರ್‌ ಆದ ಮೇಲೆ ಸ್ನಾತಕೋತ್ತರ ಮಟ್ಟದಲ್ಲಿ ಶಾಸನ ಶಾಸ್ತ್ರವನ್ನು ಒಂದು ವಿಷಯವಾಗಿ ಪುರಾತನ ಇತಿಹಾಸದ ಪಠ್ಯಕ್ರಮದಲ್ಲಿ ಸೇರಿಸಿದರು.ಅದರಿಂದ ಅನೇಕ ಕಿರಿಯರು ಶಾಸನತಜ್ಞರಾಗಿ ಹೊರಹೊಮ್ಮಿ ಆ ಕ್ಷೇತ್ರದಲ್ಲಿ ಹೆಸರು ಮಾಡಲು ಅವಕಾಶವಾಯಿತು. ಅವರು ಪ್ರಾಚೀನ ಭಾರತದ ಇತಿಹಾಸ , ಎಂಬ ಪುಸ್ತಕವನ್ನು, ಡಾ. ಶ್ರೀನಿವಾಸ ರಿತ್ತಿ ಮತ್ತು ಡಾ. ಬ.ರಾ ಗೋಪಾಲ್‌ ಅವರ ಸಹಯೋಗದಲ್ಲಿ ರಚಿಸಿದರು. ಅದರಿಂದ ದಶಕಗಳವರೆಗಿನ ಅಧಿಕೃತ ಕನ್ನಡ ಪಠ್ಯ ಪುಸ್ತಗಳ ಕೊರತೆ ನೀಗಿತು.

ಉತ್ಖನನ ಕಾರ್ಯ

[ಬದಲಾಯಿಸಿ]

ದೇಸಾಯಿಯವರು ಕನ್ನಡ ಸಂಶೋಧನ ಸಂಸ್ಥೆಯ ನಿರ್ದೇಶಕಾಗಿದ್ದಾಗ ಪುರಾತತ್ತ್ವ ವಸ್ತುಸಂಗ್ರಹಾಲಯ ರೂಪಿಸಿದರು.ಬಳ್ಳಾರಿ ಜಿಲ್ಲೆಯ ಸಂಗನ ಕಲ್ಲು ಮತ್ತು ಹಾವೇರಿಯ ಹಳ್ಳೂರುಗಳಲ್ಲಿ ಉತ್ಖನನ ಕಾರ್ಯ ಮಾಡಿ ಪ್ರಾಗ್ಯೇತಿಹಾಸ ವಸ್ತುಗಳ ಪತ್ತೆ ಮಾಡಿ. ಆಂಧ್ರಪ್ರದೇಶ ಸರ್ಕಾರದ ಮನವಿಯ ಮೇರೆಗೆ " ಕನ್ನಡ ಇನ್‌ಸ್ಕ್ರಿಪ್ಶನ್ಸ್‌ ಅಫ್ ಆಂಧ್ರ ಪ್ರದೇಶ' ಮತ್ತು "ಸೆಲೆಕ್ಟ್ ಇನ್‌ಸ್ಕ್ರಿಪ್ಶನ್ಸ್ ಅಫ್ ಆಂಧ್ರ ಪ್ರದೇಶ" ಎಂಬ ಗ್ರಂಥಗಳನ್ನು ಸಂಪಾದಿಸಿ ಕೊಟ್ಟರು.[][]

ಡಾ. ದೇಸಾಯಿಯವರ ಶಾಸನಗಳ ಸಂಪಾದನೆಯ ಕಾರ್ಯದ ಜೊತೆಗೆ ಅವರ ಮಹತ್ವದ ಕಾಣಿಕೆ ಎಂದರೆ ಕರ್ನಾಟಕದಲ್ಲಿನ ಬೌದ್ಧ ಕೇದ್ರಗಳ ಅನ್ವೇಷಣೆ. ಶಾಕ್ತ ಪಂಥದ ಮೇಲಿನ ಕೃತಿಗಳು, ಪಂಡರಾಪುರದ ಪಾಂಡುರಂಗನ ಮೇಲಿನ ಮತ್ತು ಸ್ಥಳ ನಾಮಗಳ ಕುರಿತಾದ ಕೃತಿಗಳು ಪ್ರಮುಖವಾಗಿವೆ. ತಮ್ಮ ಅವಿರತ ಬರವಣಿಗೆಯಿಂದ ಕನ್ನಡ ನಾಡಿನ ಕಂಪನ್ನು ಹರಡುವಲ್ಲಿ ಅವರು ಯಶಸ್ವಿಯಾದರು.. ಅವರ ೬೦ ನೇ ವಯಸ್ಸಿನಲ್ಲಿ ಆರುನೂರು ಪುಟದ ಅಭಿನಂದನ ಗ್ರಂಥವನ್ನು ಅರ್ಪಿಸಲಾಯಿತು. "Studies in Indian history and culture" ನಲ್ಲಿ ವಿದ್ಯಾರ್ಥಿಗಳ ,ಸ್ನೇಹಿತರ , ವಿದ್ವಾಂಸರ ಬರಹಗಳು ಇವೆ.[][]

ಪುಸ್ತಕ

[ಬದಲಾಯಿಸಿ]

೩೦ ಕನ್ನಡ , ೧೦ ಇಂಗ್ಲಿಷ್‌. ೧ ಮರಾಠಿ ಪುಸ್ತಕ ಬರೆದುದಲ್ಲದೆ ಜೊತೆಗೆ ಮಕ್ಕಳ ಸಾಹಿತ್ಯ ರಚಿಸಿರುವರು. ಅನೇಕ ಐತಿಹಾಸಿಕ ಕಾದಂಬರಿಗಳನ್ನೂ ಬರೆದಿರುವರು. ಕುಂತಳೇಶ್ವರ, ಮದಗಜ ಮಲ್ಲ. ನಾಗರ ಮರಿ, ಜಯ ಗೋದಾವರಿ ಮೊದಲಾದ ಐತಿಹಾಸಿಕಾದಂಬರಿಗಳು ಓದುಗರ ಮನ ಸೆರೆ ಹಿಡಿಯುತ್ತವೆ.

ಕರ್ನಾಟಕದ ಕಳಚುರಿಗಳು,ಮಿಂಚಿದ ಮಹಿಳೆಯರು ಹಬ್ಬ ಹುಣ್ಣಿಮೆಗಳು, ಶಾಸನ ಪರಿಚಯ ಮೊದಲಾದ ಗ್ರಂಥಗಳನ್ನು ಬರೆದರು, ಅಲ್ಲದೆ "ಶಿವಚರಿತ್ರ ವೃತ್ತಸಂಗ್ರಹ " ಎಂಬ ಮರಾಠಿ ಕೃತಿಯನ್ನೂ ರಚಿಸಿದರು ಅವರುಅವುಗಳಲ್ಲಿ ಇಂಗ್ಲಿಷ್‌ಲೇಖನಗಳು ೧೦೫, ಕನ್ನಡದಲ್ಲಿ ೨೩೦, ಮರಾಠಿಯಲ್ಲಿ ೪೦, ಲೇಖನಗಳಿವೆ. ಒಟ್ಟು ಸುಮಾರು ೪೦೦ ಲೇಖನಗಳನ್ನು ಬರೆದಿರುವರು.

ನಿವೃತ್ತಿ

[ಬದಲಾಯಿಸಿ]

ನಿವೃತ್ತರಾದ ಮೇಲೂ ವಿಶ್ವ ವಿದ್ಯಾಲಯ ಧನಸಹಾಯ ಆಯೋಗದ ಪ್ರಾಧ್ಯಾಪಕರಾಗಿದ್ದರು. ೧೯೭೩ರಲ್ಲಿ ಅಖಿಲಭಾರತ ಇತಿಹಾಸ ಸಮ್ಮೇಳನದಲ್ಲಿ ಶಾಸನ ಶಾಸ್ತ್ರವಿಭಾಗದ ಅಧ್ಯಕ್ಷರಾಗಿದ್ದರು.ಬಹುಭಾಷಾ ಶಾಸನ ತಜ್ಞರಾದ ಅವರು ೧೯೭೪ ಮಾರ್ಚ್ ೫ರಂದು ಕಾಲವಶರಾದರು.

ಉಲ್ಲೇಖಗಳು

[ಬದಲಾಯಿಸಿ]
  1. Jainism in South India and some Jaina Epigraphs. By Desai P. B.
  2. "Epigraphist P. B. Desai by Jyotsna Kamat". www.kamat.com ,14 November 2017.
  3. "DESAI P.B., 1910-1976". www.shastriyakannada.org ,14 November 2017. Archived from the original on 29 ಸೆಪ್ಟೆಂಬರ್ 2020. Retrieved 14 ನವೆಂಬರ್ 2017.
  4. "ANANDAMANGALAM Jain vestiges". www.frontline.in. Retrieved 14 November 2017.
  5. "P. B. DESAI, DHARWAR". whatisindia.com. Retrieved 14 November 2017.
  6. "Ignoring Vijnaneshwara - There can't be a greater crime!". www.deccanchronicle.com , 14 November 2017.