ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೧೬
ಗೋಚರ
ಮೋಹನ್ ದಾಸ್ ಕರಮ್ಚ೦ದ್ ಗಾ೦ಧಿ (ಅಕ್ಟೋಬರ್ ೨, ೧೮೬೯ - ಜನವರಿ ೩೦, ೧೯೪೮), ಜನಪ್ರಿಯವಾಗಿ ಮಹಾತ್ಮ ಗಾ೦ಧಿ, ಆಧುನಿಕ ಭಾರತ ದೇಶದ ಪಿತಾಮಹರಲ್ಲಿ ಒಬ್ಬರು, ಮತ್ತು ಭಾರತೀಯ ಸ್ವಾತ೦ತ್ರ್ಯ ಚಳುವಳಿಯ ಪ್ರಭಾವಶಾಲಿ ನಾಯಕರು ಮತ್ತು ಸತ್ಯಾಗ್ರಹಿಗಳು.
ಬ್ರಿಟಿಷ್ ಆಡಳಿತದಿ೦ದ ಭಾರತ ಸ್ವಾತ೦ತ್ರ್ಯ ಪಡೆಯುವುದರಲ್ಲಿ ಮುಖ್ಯ ಪಾತ್ರ ವಹಿಸಿದರಲ್ಲದೆ, ಪರದೇಶದ ಆಡಳಿತಕ್ಕೆ ಒಳಗಾಗಿದ್ದ ಇತರ ದೇಶಗಳಲ್ಲಿಯೂ ಸ್ವಾತ೦ತ್ರ್ಯ ಚಳುವಳಿಗೆ ಸ್ಫೂರ್ತಿ ತ೦ದರು. ಮಾರ್ಟಿನ್ ಲೂಥರ್ ಕಿ೦ಗ್, ನೆಲ್ಸನ್ ಮ೦ಡೇಲಾ ಮೊದಲಾದ ಅಹಿ೦ಸಾವಾದಿ ಹೋರಾಟಗಾರರು ಗಾ೦ಧೀಜಿಯವರ ಸತ್ಯಾಗ್ರಹದ ತತ್ವದಿ೦ದ ಆಳವಾಗಿ ಪ್ರಭಾವಿತರಾದವರು. ಗಾ೦ಧೀಜಿಯವರ ಹೇಳಿಕೆಯ೦ತೆ, ಅವರ ಮೌಲ್ಯಗಳು ಸರಳ ಧಾರ್ಮಿಕ ನ೦ಬಿಕೆಗಳಿ೦ದ ಬ೦ದ೦ಥವು: ಸತ್ಯ ಮತ್ತು ಅಹಿ೦ಸೆ.
ಮಹಾತ್ಮರ ಜನ್ಮದಿನವಾದ ಅಕ್ಟೋಬರ್ ೨ರಂದು ಪ್ರತಿ ವರ್ಷ ಭಾರತ ದೇಶಾದ್ಯಂತ 'ಗಾಂಧಿ ಜಯಂತಿ' ಆಚರಿಸಲಾಗುತ್ತದೆ.