ವಿಷಯಕ್ಕೆ ಹೋಗು

2017 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
2017 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಸ್
.

22 ನೇ ಆವೃತ್ತಿ ಭಾರತದ ಭುವನೇಶ್ವರ್‍ದಲ್ಲಿ

[ಬದಲಾಯಿಸಿ]
  • 2017 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ ಚಾಂಪಿಯನ್ಶಿಪ್ ನ 22 ನೇ ಆವೃತ್ತಿಯಾಗಿದೆ. ಇದು ಭಾರತದ ಭುವನೇಶ್ವರ್ ನ ಕಳಿಂಗ ಕ್ರೀಡಾಂಗಣದಲ್ಲಿ 6 ಜುಲೈ ರಿಂದ 9 ಜುಲೈ 2017 ವರೆಗೆ ನಡೆಯಯಿತು. ಏಷ್ಯನ್ ಚಾಂಪಿಯನ್ಷಿಪ್ಗಳನ್ನು ಆಯೋಜಿಸುವ ಭುವನೇಶ್ವರ್ ಮೂರನೇ ಭಾರತೀಯ ನಗರವಾಗಿದೆ, 45 ದೇಶಗಳಿಂದ ಸುಮಾರು 800 ಕ್ರೀಡಾಪಟುಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದರು.
  • 22 ನೇ ಏಷ್ಯಾದ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಸ್ ಅನ್ನು ಮೂಲತಃ ಜಾರ್ಖಂಡ್ನ ರಾಂಚಿಯಲ್ಲಿ ಆಯೋಜಿಸಲಾಗಇತ್ತು. ಈ ಸಮಾರಂಭವನ್ನು ಆಯೋಜಿಸಲು ರಾಂಚಿಯ ಅಸಾಮರ್ಥ್ಯದ ನಂತರ, ಭುವನೇಶ್ವರವನ್ನು ಈ ಕಾರ್ಯಕ್ರಮದ ಸ್ಥಳವಾಗಿ ಆಯ್ಕೆ ಮಾಡಲಾಯಿತು. ಮಾರ್ಚ್ 30, 2017 ರಂದು ಏಷಿಯನ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಕೌನ್ಸಿಲ್ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಗೆ ಆತಿಥ್ಯ ವಹಿಸಲು ಭುವನೇಶ್ವರ ಅಧ್ಯಕ್ಷ ಎಎಫ್ಐ ಅಧ್ಯಕ್ಷ ಅಡಿಲ್ಲೆ ಸುಮಾರಿವಲ್ಲಾ ಅವರು ಒಂದು ವಿವರವಾದ ಪ್ರಸ್ತುತಿಯನ್ನು ಪ್ರಕಟಿಸಿದರು. ಚಾಂಪಿಯನ್ಷಿಪ್ನ ಹಿಂದಿನ ಆವೃತ್ತಿಯನ್ನು 3-7 ಜೂನ್ 2015 ರಿಂದ ಚೀನಾದ ವೂಹಾನ್ನಲ್ಲಿ ನಡೆಸಲಾಯಿತು.[]
  • ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಗಳನ್ನು ಏಷಿಯನ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಆಯೋಜಿಸುತ್ತದೆ. ಪ್ರತಿ ಎರಡು ವರ್ಷಗಳಿಗೊಮ್ಮೆ. ಭುವನೇಶ್ವರ 1989 ರಲ್ಲಿ ದೆಹಲಿಯೊಂದಿಗೆ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಆಯೋಜಿಸಿದ್ದ ಮೂರನೆಯ ಭಾರತೀಯ ನಗರವಾಗಿದ್ದು, ಇದು 2013 ರಲ್ಲಿ ಮೊದಲ ಮತ್ತು ಪುಣೆಯಲ್ಲಿ ನದೆದಿದ್ದು ಅದು ಎರಡನೆಯ ಭಾರತೀಯ ನಗರವಾಗಿದೆ.
ಕಳಿಂಗ ಕ್ರೀಡಾಂಗಣದ ಟ್ರ್ಯಾಕ್ -AAC 17

ಕನ್ನಡಿಗ ವಿಕಾಸ್

[ಬದಲಾಯಿಸಿ]
2017 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಸ್,ಪ್ರಾರಂಭೋತ್ಸವ: ಭಾರತದ ಅಥ್ಲಟ್‍ಗಳು (AAC 2017 Opening Ceremony 49)
  • ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಿರುವ ಕೂಟದಲ್ಲಿ 45 ವಿವಿಧ ರಾಷ್ಟ್ರಗಳ 800ಕ್ಕೂ ಹೆಚ್ಚು ಅಥ್ಲೀಟ್‌ಗಳು ಪದಕಗಳಿಗಾಗಿ ಪೈಪೋಟಿ ನಡೆಸಲಿದ್ದಾರೆ. 42 ವಿಭಾಗಗಳಲ್ಲಿ ಸ್ಪರ್ಧೆಗಳು ಜರುಗಲಿವೆ. ಕರ್ನಾಟಕದ ವಿಕಾಸ್‌ ಅವರು 2013 ಮತ್ತು 2015ರಲ್ಲಿ ಚಿನ್ನಕ್ಕೆ ಗೆದ್ದಿದ್ದರು. ಹಾಸನದ 34 ವರ್ಷದ ಅಥ್ಲೀಟ್‌ ವಿಕಾಸ್‌ ಅವರಿಗೆ ಈ ಬಾರಿ ಇರಾನ್‌ನ ಎಹಸಾನ್‌ ಹದಾದಿ ಮತ್ತು ಇರಾಕ್‌ನ ಮುಸ್ತಾಫ ಅಲ್‌ಸಾಮಹ ಅವರಿಂದ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇತ್ತು.
  • ಐದು ಚಿನ್ನದ ನಿರೀಕ್ಷೆ: ಪುರುಷರ ಜಾವೆಲಿನ್‌ ಥ್ರೋ, 400 ಮೀಟರ್ಸ್‌ ಓಟ, ಡಿಸ್ಕಸ್‌ ಥ್ರೋ , ಮಹಿಳೆಯರ ಶಾಟ್‌ಪಟ್‌ ಮತ್ತು 4X400 ಮೀಟರ್ಸ್‌ ಓಟದ ಸ್ಪರ್ಧೆಗಳಲ್ಲಿ ಭಾರತ ತಂಡ ಚಿನ್ನ ಗೆಲ್ಲುವ ನಿರೀಕ್ಷೆ ಇತ್ತು.
  • ಪುರುಷರ ಜಾವೆಲಿನ್‌ ಥ್ರೋ ಸ್ಪರ್ಧೆ ಯಲ್ಲಿ ಆತಿಥೇಯರ ಸವಾಲು ಎತ್ತಿ ಹಿಡಿಯಲಿರುವ ನೀರಜ್‌, ಮೊದಲ ದಿನವೇ ದೇಶಕ್ಕೆ ಚಿನ್ನ ಗೆದ್ದುಕೊಡುವ ಭರವಸೆ ಹೊಂದಿದ್ದಾರೆ. ಜೂನಿಯರ್‌ ವಿಭಾಗದಲ್ಲಿ ವಿಶ್ವ ದಾಖಲೆ ಬರೆದ ಹೆಗ್ಗಳಿಕೆ ಹೊಂದಿರುವ ನೀರಜ್‌ ಅವರು ಚಿನ್ನದ ಹಾದಿಯಲ್ಲಿ ಚೀನಾ ತೈಪೆಯ ಹುವಾಂಗ್‌ ಶಿಗ್‌ ಫೆಂಗ್‌ ಮತ್ತು ಚಾವೊ ಸುನ್‌ ಅವರ ಸವಾಲನ್ನು ಎದುರಿಸಬೇಕಿದೆ. ಹುವಾಂಗ್‌ ಅವರು ಹಿಂದಿನ ಆವೃತ್ತಿಯಲ್ಲಿ ಮೊದಲ ಸ್ಥಾನ ಗಳಿಸಿದ್ದರು.
  • ಮಹಿಳೆಯರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಕಣದಲ್ಲಿರುವ ಅನು ರಾಣಿ ಕೂಡ ಪದಕದ ಭರವಸೆ ಹೊಂದಿದ್ದಾರೆ. ಪುರುಷರ 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಮಹಮ್ಮದ್‌ ಅನಾಸ್‌ ಅವರು ಭಾರತದ ಭರವಸೆಯಾಗಿದ್ದಾರೆ. ಮಹಿಳೆಯರ ಶಾಟ್‌ಪಟ್‌ನಲ್ಲಿ ಕಣಕ್ಕಿಳಿಯುತ್ತಿರುವ ಮನ್‌ಪ್ರೀತ್‌ ಕೌರ್‌ ಅವರೂ ಚಿನ್ನದ ಗೆಲ್ಲುವ ಅಥ್ಲೆಟ್ .
  • ಪುರುಷರ ಶಾಟ್‌ಪಟ್‌ನಲ್ಲಿ ತೇಜಿಂದರ್‌ ಪಾಲ್‌ ಸಿಂಗ್‌ ತೂರ್‌ ಅವರು ಚಿನ್ನಕ್ಕೆ ಕೊರಳೊಡ್ಡುವ ಉತ್ಸಾಹದಲ್ಲಿದ್ದಾರೆ. ಹೋದ ಆವೃತ್ತಿಯಲ್ಲಿ ಇಂದರ್‌ಜೀತ್‌ ಸಿಂಗ್‌ ಚಿನ್ನ ಜಯಿಸಿದ್ದರು. ಉದ್ದೀಪನಾ ಮದ್ದು ಸೇವನೆ ಪ್ರಕರಣದಡಿ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಅವರು ಈ ಬಾರಿ ಕಣಕ್ಕಿಳಿಯಲಿಲ್ಲ.

ಕಳಿಂಗ ಕ್ರೀಡಾಂಗಣ

[ಬದಲಾಯಿಸಿ]
  • 5 ಜುಲೈ 2017 ರಂದು ಚ್ಯಾಂಪಿಯನ್ಶಿಪ್ ಗಳ ಉದ್ಘಾಟನಾ ಸಮಾರಂಭದಲ್ಲಿ 500 ಕ್ಕೂ ಹೆಚ್ಚು ಕಲಾವಿದರ ಪ್ರದರ್ಶನ ನಡೆಸಲಾಯಿತು. 400 ಒಡಿಸ್ಸಿ ನೃತ್ಯಗಾರರು ಕಳಿಂಗ ಯುದ್ಧದಿಂದ ಚಕ್ರವರ್ತಿ ಖರವೇಲಾರ ವರೆಗಿನ ಘಟನೆ ಪ್ರದರ್ಶಿಸಸಿದರು. ಶಂಕರ್ ಮಹಾದೇವನ್ ಅವರ ತಂಡವು ಸಂಬಾಲ್ಪುರಿ ನೃತ್ಯ ಗುಂಪಿನೊಂದಿಗೆ ರಂಗಬತಿ ಹಾಡನ್ನು ಹಾಡಿದರು.[]
ಕಳಿಂಗ ಕ್ರೀಡಾಂಗಣ ಭುವನೇಶ್ವರ .
  • ಮಹಿಳೆಯರ 4X400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲೂ ಭಾರತ ಚಿನ್ನ ಗೆಲ್ಲುವ ನೆಚ್ಚಿನ ತಂಡವಾಗಿದೆ. ಈ ತಂಡದಲ್ಲಿ ಕರ್ನಾಟಕದ ಎಂ.ಆರ್‌. ಪೂವಮ್ಮ, ಜಿ.ಕೆ. ವಿಜಯಕುಮಾರಿ, ನಿರ್ಮಲಾ, ಜಿಸ್ನಾ ಮ್ಯಾಥ್ಯೂ, ಸರಿತಾ ಬೆನ್‌ ಗಾಯಕ್ವಾಡ್‌ ಮತ್ತು ದೇವಶ್ರೀ ಮಜುಂದಾರ್‌ ಅವರು ಇದ್ದಾರೆ. ಮಹಿಳೆಯರ 100 ಮತ್ತು 200 ಮೀಟರ್ಸ್‌ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿರುವ ಒಡಿಶಾದ ದ್ಯುತಿ ಚಾಂದ್‌ ಅವರು ತವರಿನ ಅಭಿಮಾನಿಗಳ ಎದುರು ಶ್ರೇಷ್ಠ ಸಾಮರ್ಥ್ಯ ತೋರಲು ಉತ್ಸುಕರಾಗಿದ್ದಾರೆ.
  • ಪ್ರಮುಖರ ಗೈರು: ಮುಂದಿನ ತಿಂಗಳು ವಿಶ್ವ ಚಾಂಪಿ ಯನ್‌ಷಿಪ್‌ ಆಯೋಜನೆಯಾಗಿರುವ ಕಾರಣ ಅಥ್ಲೆಟಿಕ್ಸ್‌ನಲ್ಲಿ ಏಷ್ಯಾ ಖಂಡದ ಶಕ್ತಿ ಕೇಂದ್ರಗಳೆನಿಸಿರುವ ಚೀನಾ ಮತ್ತು ಕತಾರ್‌ನ ಪ್ರಮುಖ ಸ್ಪರ್ಧಿಗಳೆಲ್ಲರೂ ಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದಿದ್ದಾರೆ. ಹೀಗಿದ್ದರೂ ಈ ಬಾರಿ ಚೀನಾದ ಸ್ಪರ್ಧಿಗಳೇ ಪ್ರಾಬಲ್ಯ ಮೆರೆಯುವ ಸಾಧ್ಯತೆ ಇದೆ. ಪಾಕಿಸ್ತಾನ ತಂಡ ಭಾಗಿ: ಪಾಕಿಸ್ತಾನ ತಂಡ ಚಾಂಪಿಯನ್‌ಷಿಪ್‌ ನಲ್ಲಿ ಭಾಗವಹಿಸುವುದು ಖಾತ್ರಿಯಾಗಿದೆ. ಆರು ಸದಸ್ಯರ ಪಾಕ್‌ ತಂಡಕ್ಕೆ ವೀಸಾ ಸಿಕ್ಕಿದೆ.

ಅಗ್ರ ಮೂರರೊಳಗೆ ಸ್ಥಾನ ಗಳಿಸುವ ಗುರಿ

[ಬದಲಾಯಿಸಿ]
  • ಭಾರತ ತಂಡ ಹಿಂದಿನ ಆವೃತ್ತಿಯಲ್ಲಿ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿತ್ತು. ಈ ಬಾರಿ ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ (ಎಎಫ್‌ಐ) 95 ಸದಸ್ಯರ ತಂಡವನ್ನು ಪ್ರಕಟಿಸಿದೆ. ಹೀಗಾಗಿ ಆತಿಥೇಯರು ಅಗ್ರ ಮೂರರೊಳಗೆ ಸ್ಥಾನ ಗಳಿಸುವ ಗುರಿ ಹೊಂದಿದ್ದಾರೆ. ತಂಡದಲ್ಲಿ 46 ಮಂದಿ ಮಹಿಳೆಯರು ಇದ್ದಾರೆ.

ಚಿನ್ನ ಗೆದ್ದರೆ ನೇರ ಅರ್ಹತೆ

[ಬದಲಾಯಿಸಿ]
  • ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲುವ ಅಥ್ಲೀಟ್‌ಗಳು ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ನೇರ ಅರ್ಹತೆ ಗಳಿಸಲಿದ್ದಾರೆ.

ಕಣದಲ್ಲಿರುವ ಕನ್ನಡಿಗರು

[ಬದಲಾಯಿಸಿ]
  • ಕರ್ನಾಟಕದ ಅಭಿಷೇಕ್‌ ಶೆಟ್ಟಿ (ಡೆಕಥ್ಲಾನ್‌), ಎಂ.ಆರ್‌. ಪೂವಮ್ಮ (400 ಮೀ ಓಟ) ಮತ್ತು (4X400 ಮೀ. ರಿಲೇ), ಜಿ.ಕೆ. ವಿಜಯಕುಮಾರಿ (4X400 ಮೀ. ರಿಲೇ), ಸಹನಾ ಕುಮಾರಿ (ಹೈ ಜಂಪ್‌), ಜಾಯಲಿನ್‌ ಮುರಳಿ ಲೋಬೊ (ಟ್ರಿಪಲ್‌ ಜಂಪ್‌), ರೀನಾ ಜಾರ್ಜ್‌ (4X100 ಮೀ. ರಿಲೇ) ಅವರೂ ಕಣದಲ್ಲಿದ್ದಾರೆ.[]

ಪದಕ ಗಳಿಕೆ ಪಟ್ಟಿ

[ಬದಲಾಯಿಸಿ]

೧೦-೭-೨೦೧೭

  • ಮಹಿಳಾ 3000 ಮೀ ಸ್ಟೀಪಲ್ ಚೇಸ್ 9 ನಿಮಿಷ 59.47 ಸೆಕೆಂಡುಗಳಲ್ಲಿ ಸುಧಾ ಸಿಂಗ್ ಚಿನ್ನದ ಪದಕವನ್ನು ಗೆದ್ದುಕೊಂಡರು .ಈ ಚಿನ್ನದ ಪದಕವನ್ನು ಭಾರತ 7 ಪದಕ, 3 ಬೆಳ್ಳಿ ಮತ್ತು 6 ಕಂಚಿನ ಪದಕ ಗಳಿಸಿದೆ. 8-7-2017ಕ್ಕೆ
ಶ್ರೇಣಿ ರಾಷ್ಟ್ರ ಗೋಲ್ಡ್ ಸಿಲ್ವರ್ ಕಂಚಿ ಒಟ್ಟು
1 ಭಾರತ 12 5 12 29
2 ಚೀನಾ 8 7 5 20
3 ಕಝಾಕಿಸ್ತಾನ್ 4 2 2 8
4 ಇರಾನ್ 4 0 1 5
5 ವಿಯೆಟ್ನಾಂ 2 2 0 4
6 ದಕ್ಷಿಣ ಕೊರಿಯಾ 2 1 1 4
7 ಕುವೈತ್ 2 1 0 3
8 ಕಿರ್ಗಿಸ್ತಾನ್ 2 0 1 3
9 ಶ್ರೀಲಂಕಾ 1 4 0 5
10 ಥೈಲ್ಯಾಂಡ್ 1 2 2 5
10 ಫಿಲಿಪೈನ್ಸ್ 1 1 1 3
11 ಚೀನೀ ತೈಪೆ 1 1 1 3
13 ತಜಾಕಿಸ್ಥಾನ್ 1 0 0 1
13 ಉಜ್ಬೇಕಿಸ್ತಾನ್ 1 0 0 1
15 ಕತಾರ್ 0 6 1 7
16 ಜಪಾನ್ 0 5 9 14
17 ಹಾಂಗ್ ಕಾಂಗ್ 0 2 1 3
18 ಸಂಯುಕ್ತ ಅರಬ್ ಸಂಸ್ಥಾಪನೆಗಳು 0 1 0 1
18 ಮಲೇಷಿಯಾ 0 1 0 1
18 ಉತ್ತರ ಕೊರಿಯಾ 0 1 0 1
21 ಸೌದಿ ಅರೇಬಿಯಾ 0 0 3 3
22 ಸಿರಿಯಾ 0 0 1 1
22 ಒಮನ್ 0 0 1 1
ಒಟ್ಟು 42 42 42 126

[]

ಭಾರತದ ಸಾಧನೆ : ಸಂಕ್ಷಿಪ್ತ ವಿವರ

[ಬದಲಾಯಿಸಿ]

(ಅಪೂರ್ಣ:ಪೂರ್ಣಗೊಳಿಸಿ-)

ಕ್ರೀಡೆಗಳು ಹೆಸರು ಪ್ರಥಮ- ಚಿನ್ನ ದ್ವತೀಯ-ಬೆಳ್ಳಿ ತೃತೀಯ-ಕಂಚು ೪ರಘಟ್ಟ ಒಟ್ಟು
400 ಮೀಟರ್-ಮಹಿಳೆ ನಿರ್ಮಲಾ ಶಿಯೊರಾನ್ ಚಿನ್ನ(52.01 ಸೆ.) - - -
400 ಮೀಟರ್-ಪುರುಷ ಮುಹಮ್ಮದ್ ಅನಾಸ್ ಚಿನ್ನ (45.77 ಸೆ.)
400 ಮೀಟರ್-ಪುರುಷ ರಾಜೀವ್ ಅರೋಕಿಯ ಬೆಳ್ಳಿ
400 ಮೀಟರ್-ಮಹಿಳೆ ಜಿಸ್ನಾ ಮ್ಯಾಥ್ಯೂ ಕಂಚು(53.32)
ಪುರುಷರ 1500 ಮೀ ಓಟ ಪಿ. ಯು. ಚಿತ್ರಾ ಚಿನ್ನ(4ನಿ. 17.92 ಸೆ)
ಮಹಿಳಾ 1500 ಮೀ.ಓಟ ಅಜಯ್ ಕುಮಾರ್ ಸರೋಜ್ ಚಿನ್ನ(3 ನಿಮಿಷ 45.85 ಸೆ)
ಮಹಿಳಾ 100 ಮೀಟರ್ ದುತೀ ಚಾಂದ್, ಕಂಚು
" ಎಂ.ಆರ್ ಪೂವಮ್ಮ 53.36 ಸೆಕೆಂ
5000 ಮೀಟರ್ ಲಕ್ಷ್ಮಣ್ ಗೋವಿಂದನ್ ಚಿನ್ನ(14: 54.48ಸೆ.)
ಗುಂಡು ಎಸೆತ ಮನ್ಪ್ರೀತ್ ಕೌರ್ ಚಿನ್ನ (18.28 ಮೀ)
3,000 ಮೀ.ಓಟ ಸುಧಾ ಸಿಂಗ್‌ ಚಿನ್ನ (9 ನಿಮಿಷ 59.47 ಸೆ)
ಮಹಿಳೆಯರ 400 ಮೀಟರ್ಸ್‌ ಹರ್ಡಲ್ಸ್‌ ಅನು ರಾಘವನ್‌ ಬೆಳ್ಳಿ (57.22 ಸೆ)
ಮಹಿಳೆಯರ ಟ್ರಿಪಲ್‌ ಜಂಪ್‌ ಎನ್‌.ವಿ. ಶೀನಾ (ಕಂಚು)13.42 ಮೀಟರ್ಸ್‌
ಪುರುಷರ 400 ಮೀಟರ್ಸ್‌ ಹರ್ಡಲ್ಸ್‌ ಎಂ.ಪಿ. ಜಾಬಿರ್‌ ಕಂಚು(50.22 ಸೆ.)
4X100 ಮೀಟರ್ಸ್‌ ರಿಲೇ ದ್ಯುತಿ ಚಾಂದ್‌, ತಂಡ* ಕಂಚು(44.57)
ಪುರುಷರ 110 ಮೀಟರ್ಸ್‌ ಹರ್ಡಲ್ಸ್‌ ಸಿದ್ದಾರ್ಥ್‌ ತಿಂಗಳಾಯ (13.72 ಸೆ) ಐದನೇ ಸ್ಥಾನ
ಶಾಟ್ ಪುಟ್ ತೇಜೇಂದ್ರ ಪಾಲ್ ಸಿಂಗ್ ಬೆಳ್ಳಿ (19.77ಮೀ.)
ಡಿಸ್ಕಸ್ ತ್ರೋ ವಿಕಾಸ್ ಗೌಡ ಕಂಚು (60.81 ಮೀ)
5000 ಮೀಟರ್ಸ್ ಸಂಜೀವಿನಿ ಜಾದವ್ ಕಂಚು ( 16:00.24ನಿ.)
ಹೆಪ್ಟಾಥ್ಲಾನ್ ಪಶ್ಚಿಮ ಬಂಗಾಳದ ಸ್ವಪ್ನಾ ಬರ್ಮನ್‌ ಚಿನ್ನ(5942ಪಾಯಿಂಟ್)
ಜಾವೆಲಿನ್‌ ಥ್ರೋ ನೀರಜ್ ಚೋಪ್ರಾ ಚಿನ್ನ (83.29 ಮೀ)
4x400 ಮೀಟರ್ಸ್‌ ರಿಲೇ ಕುಂಞು ಮಹಮ್ಮದ್‌, ತಂಡ*$ ಚಿನ್ನ(3:2.92 ಸೆ)
4x400 ಮೀಟರ್ಸ್‌ ರಿಲೇ ಕರ್ನಾಟಕದ ಎಂ.ಆರ್‌.ಪೂವಮ್ಮ ತಂಡ ಚಿನ್ನ ( 3:31.34-ನಿ.ಸೆ.)
10,000 ಮೀ' ಗೋಪಿ ಥೋನಕಲ್ ಬೆಳ್ಳಿ(29:58.89ನಿ.ಸೆ.)
ಲಾಂಗ್ ಜಂಪ್ ನೆಲ್ಲಿಕಲ್ ವಿ. ನೀನಾ ಬೆಳ್ಳಿ (6.54ಮೀ.)
  • 4X100 ಮೀಟರ್ಸ್‌ ರಿಲೇ :ದ್ಯುತಿ ಚಾಂದ್‌, ತಂಡ: ದ್ಯುತಿ ಚಾಂದ್‌, ಶ್ರಬಾನಿ ನಂದಾ, ಹಿಮಾಶ್ರೀ ರಾಯ್‌ ಮತ್ತು ಮರ್ಲಿನ್‌ ಕೆ. ಜೋಸೆಫ್‌.
  • $4X100 ಮೀಟರ್ಸ್‌ ರಿಲೇ:ಕುಂಞು ಮಹಮ್ಮದ್‌, ಮಹಮ್ಮದ್ ಅನಾಸ್‌, ರಾಜೀವ ಆರೋಕ್ಯ ಮತ್ತು ಅಮೋಜ್ ಜೇಕಬ್ ಅವರನ್ನು ಒಳಗೊಂಡ ಭಾರತ ತಂಡ

[] [] []

ವಿಜೇತರಿಗೆ ಸನ್ಮಾನ

[ಬದಲಾಯಿಸಿ]
  • ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತದ ಅಥ್ಲೀಟ್‌ಗಳನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ ದಿ.10 ಜುಲೈ,2017 ಸೋಮವಾರ ನಗದು ಬಹುಮಾನ ನೀಡಿ ಗೌರವಿಸಿದರು. ಚಿನ್ನದ ಪದಕ ಗೆದ್ದವರಿಗೆ ತಲಾ ರೂ.10 ಲಕ್ಷ, ಬೆಳ್ಳಿ ಗೆದ್ದವರಿಗೆ ತಲಾ ರೂ.7.5 ಲಕ್ಷ ಹಾಗೂ ಕಂಚಿನ ಪದಕ ಗಳಿಸಿದ ವರಿಗೆ ತಲಾ ರೂ.5 ಲಕ್ಷ ನೀಡಲಾಗಿದೆ.
  • ಚಾಂಪಿಯನ್‌ಷಿಪ್‌ನಲ್ಲಿ ಭಾರತ 12 ಚಿನ್ನ, ಐದು ಬೆಳ್ಳಿ ಮತ್ತು 12 ಕಂಚಿನ ಪದಕ ಗೆದ್ದುಕೊಂಡಿತ್ತು. ಈ ಮೂಲಕ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಇದೇ ಮೊದಲ ಬಾರಿ ಅಗ್ರಸ್ಥಾನಕ್ಕೆ ಏರಿತ್ತು. ಚೀನಾದ ಪ್ರಾಬಲ್ಯವನ್ನು ಮುರಿದಿತ್ತು.[]

ಹೆಪತ್ಲಾನ ಪಟು ಸ್ವಪ್ನಾ ಬರ್ಮನ್ ಪರಿಚಯ

[ಬದಲಾಯಿಸಿ]
  • ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಹೆಪ್ಟಥ್ಲಾನ್‌ನಲ್ಲಿ ಚಿನ್ನದ ಪದಕ ಗೆದ್ದ ಸ್ವಪ್ನಾ ಬರ್ಮನ್ ಅವರ ತಂದೆ ಪಂಚ ನನ್ ಬರ್ಮನ್. ಉತ್ತರ ಬಂಗಾಳದ ಜಲಪೈ ಗುರಿಯಲ್ಲಿ ತಳ್ಳುಗಾಡಿ ನಡೆಸುತ್ತಾ ಜೀವನ ನಿರ್ವಹಣೆಗೆ ಹಣ ಗಳಿಸುತ್ತಿದ್ದ ಪಂಚನನ್ ಅವರು ಕೆಲವು ವರ್ಷ ಗಳಿಂದ ಪಾರ್ಶ್ವವಾಯುವಿನಿಂದ ಬಳಲು ತ್ತಿದ್ದಾರೆ. ಅದರಿಂದಾಗಿ ಕುಟುಂಬದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಸ್ವಪ್ನಾ ಅವರ ತಾಯಿ ಬಸನಾ ಅವರು ಚಹಾ ತೋಟದಲ್ಲಿ ಕೂಲಿಕೆಲಸ ಮಾಡು ತ್ತಾರೆ. ಅದರಿಂದ ಬರುವ ಹಣವೇ ಈ ಕುಟುಂಬಕ್ಕೆ ಆಧಾರವಾಗಿದೆ. ಸ್ವಪ್ನಾ ಅವರಿಗೆ ಇಬ್ಬರು ಅಕ್ಕಂದಿರು ಮತ್ತು ಒಬ್ಬ ಅಣ್ಣ ಇದ್ದಾರೆ. ಸ್ವಪ್ನಾ ಅವರನ್ನು ಅಭ್ಯಾಸ ಮಾಡಲು ಸಮೀಪದ ಕ್ಲಬ್‌ಗೆ ಬಸನಾ ಅವರು ಸೈಕಲ್‌ನಲ್ಲಿ ಕರೆದುಕೊಂಡು ಹೋಗಿ ಬರುತ್ತಿದ್ದರು. ಸ್ವಪ್ನಾ ಅವರು ಶಾಲೆಯಲ್ಲಿ ಓದುವಾಗ ದೈಹಿಕ ಶಿಕ್ಷಣ ಶಿಕ್ಷಕ ವಿಸ್ವಜೀತ್ ಮಜುಮ್‌ದಾರ್ ಅವರು ತರಬೇತಿ ನೀಡಿದ್ದರು. ಸದ್ಯ 20 ವರ್ಷ ವಯಸ್ಸಿನ ಸ್ವಪ್ನಾ ಅವರು ಕೋಲ್ಕತ್ತದ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ದಲ್ಲಿ ತರಬೇತಿ ಪಡೆಯುತ್ತಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. Bhubaneswar to host Asian Athletics Championships in July;PTI | Mar 14, 2017,
  2. Asian Athletics Championships:
  3. ಇಂದಿನಿಂದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌;ಕನ್ನಡಿಗ ವಿಕಾಸ್‌ಗೆ ‘ಹ್ಯಾಟ್ರಿಕ್‌’ ಚಿನ್ನದ ಕನಸು;ಪಿಟಿಐ;6 Jul, 2017
  4. ೪.೦ ೪.೧ ಭಾರತ ಅಥ್ಲೀಟ್‌ಗಳ ಐತಿಹಾಸಿಕ ಸಾಧನೆ;ಪ್ರಜಾವಾಣಿ ವಾರ್ತೆ;10 Jul, 2017
  5. "ಆರ್ಕೈವ್ ನಕಲು". Archived from the original on 2017-07-08. Retrieved 2017-07-08.
  6. http://www.prajavani.net/news/article/2017/07/09/504771.htmlಭಾರತದ[permanent dead link] ಸುಧಾಗೆ ಚಿನ್ನದ ಸಂಭ್ರಮ;ಪ್ರಜಾವಾಣಿ ವಾರ್ತೆ;9 Jul, 2017
  7. "ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಭಾರತದ ಅಥ್ಲೀಟ್‌ಗಳಿಗೆ ಸನ್ಮಾನ;ಪ್ರಜಾವಾಣಿ ವಾರ್ತೆ;11 Jul, 2017". Archived from the original on 2017-07-10. Retrieved 2017-07-11.
  8. http://www.prajavani.net/news/article/2017/07/12/505411.html

ಉಲ್ಲೇಖ

[ಬದಲಾಯಿಸಿ]