ಅಜ್ಞಾತ ನಾಮಕತ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಜ್ಞಾತ ನಾಮಕತ್ವ ಅಂದರೆ "ಹೆಸರಿಲ್ಲದಿರುವುದು" ಅಥವಾ "ಅನಾಮಧೇಯತೆ". ಆಡುಮಾತಿನಲ್ಲಿ, ಅನಾಮಧೇಯ ಪದವನ್ನು ಕರ್ತೃ ವ್ಯಕ್ತಿಯ ಹೆಸರು ಅಜ್ಞಾತವಾಗಿರುವ ಪರಿಸ್ಥಿತಿಗಳನ್ನು ವಿವರಿಸಲು ಬಳಸಲಾಗುತ್ತದೆ. ಅನಾಮಧೇಯತೆ, ತಾಂತ್ರಿಕವಾಗಿ ಸರಿಯಿದ್ದರೂ, ಅಜ್ಞಾತ ನಾಮಕತ್ವದ ಸಂದರ್ಭಗಳಲ್ಲಿ ಹೆಚ್ಚು ಕೇಂದ್ರೀಯವಾಗಿ ಈಡಿನಲ್ಲಿರುವುದನ್ನು ಗ್ರಹಿಸುವುದಿಲ್ಲ ಎಂದು ಕೆಲವು ಬರಹಗಾರರು ವಾದಿಸಿದ್ದಾರೆ. ಇಲ್ಲಿ ಪ್ರಧಾನ ಉದ್ದೇಶವೆಂದರೆ ಒಬ್ಬ ವ್ಯಕ್ತಿ ಗುರುತಿಸಲಾಗದಂತಿರುವುದು, ಅಗಮ್ಯವಾಗಿರುವುದು, ಅಥವಾ ಹಿಂಬಾಲಿಸಲಾಗದಿರುವುದು.[೧] ಅಜ್ಞಾತ ನಾಮಕತ್ವವನ್ನು ಒಂದು ತಂತ್ರವಾಗಿ, ಅಥವಾ ಗೌಪ್ಯತೆ, ಅಥವಾ ಸ್ವಾತಂತ್ರ್ಯದಂತಹ ಇತರ ನಿರ್ದಿಷ್ಟ ಮೌಲ್ಯಗಳನ್ನು ಸಾಧಿಸುವ ಒಂದು ರೀತಿಯಾಗಿ ಕಾಣಲಾಗುತ್ತದೆ.

ಮುಕ್ತ ಚುನಾವಣೆಗಳಲ್ಲಿನ ಮತವು ಅಜ್ಞಾತ ನಾಮಕತ್ವಕ್ಕೆ ಒಂದು ಪ್ರಧಾನ ಉದಾಹರಣೆಯಾಗಿದೆ ಏಕೆಂದರೆ ಅದು ಸಂರಕ್ಷಿತವಷ್ಟೇ ಅಲ್ಲ, ಕಾನೂನಿನಿಂದ ಜಾರಿಮಾಡಲ್ಪಟ್ಟಿರುವುದು ಕೂಡ. ಅನೇಕ ಇತರ ಸಂದರ್ಭಗಳಲ್ಲಿ (ಉದಾ. ಅಪರಿಚಿತರ ನಡುವಿನ ಸಂಭಾಷಣೆ, ಅಂಗಡಿಯಲ್ಲಿ ಯಾವುದಾದರೂ ಉತ್ಪನ್ನ ಅಥವಾ ಸೇವೆಯ ಖರೀದಿ), ಅಜ್ಞಾತ ನಾಮಕತ್ವವನ್ನು ಸಾಂಪ್ರದಾಯಿಕವಾಗಿ ಸಹಜ ಎಂದು ಸ್ವೀಕರಿಸಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಗುರುತನ್ನು ನೀಡದಿರಲು ಆಯ್ಕೆಮಾಡಬಹುದಾದ ವಿವಿಧ ಸಂದರ್ಭಗಳೂ ಇವೆ. ದಾನಿಗಳು ಗುರುತಿಸಿಕೊಳ್ಳದಿರಲು ಬಯಸಿದಾಗ ದಾನದ ಕ್ರಿಯೆಗಳನ್ನು ಅನಾಮಧೇಯವಾಗಿ ಮಾಡಲಾಗಿದೆ. ಬೆದರಿಕೆ ಅನುಭವಿಸುವ ವ್ಯಕ್ತಿಯು ಆ ಬೆದರಿಕೆಯನ್ನು ಅಜ್ಞಾತ ನಾಮಕತ್ವದ ಮೂಲಕ ತಗ್ಗಿಸಲು ಪ್ರಯತ್ನಿಸಬಹುದು. ಅಪರಾಧದ ಸಾಕ್ಷಿಯು, ಉದಾಹರಣೆಗೆ, ಅನಾಮಧೇಯವಾಗಿ ಅಪರಾಧ ನೇರ ಸಂಪರ್ಕ ಕೇಂದ್ರಕ್ಕೆ ಕರೆಮಾಡಿ, ಪ್ರತೀಕಾರ ತಪ್ಪಿಸಲು ಪ್ರಯತ್ನಿಸಬಹುದು. ಅಪರಾಧಿಗಳು ಒಂದು ಅಪರಾಧದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಮುಚ್ಚಿಡಲು ಅನಾಮಧೇಯವಾಗಿ ಮುಂದುವರಿಯಬಹುದು. ಅಜ್ಞಾತ ನಾಮಕತ್ವವು ಅನುದ್ದೇಶಪೂರ್ವಕವಾಗಿಯೂ ಸೃಷ್ಟಿಯಾಗಬಹುದು, ಕಾಲದ ಸರಿಯುವಿಕೆ ಅಥವಾ ವಿನಾಶಕಾರಿ ಘಟನೆಯ ಕಾರಣದಿಂದ ಗುರುತಿಸುವ ಮಾಹಿತಿಯ ನಷ್ಟದ ಮೂಲಕ.

ನಿರ್ದಿಷ್ಟ ಸಂದರ್ಭಗಳಲ್ಲಿ, ಅನಾಮಧೇಯವಾಗಿರುವುದು ಕಾನೂನುಬಾಹಿರವಾಗಿರಬಹುದು. ಅಮೇರಿಕದಲ್ಲಿ, ೨೪ ರಾಜ್ಯಗಳು ಕಾನೂನು ಜಾರಿ ಅಧಿಕಾರಿ ಕೋರಿದಾಗ ತಡೆಯಲ್ಪಟ್ಟ ವ್ಯಕ್ತಿಗಳು ತಮ್ಮ ಗುರುತನ್ನು ಹೇಳುವ ಅಗತ್ಯವಿರುವ ನಿಲ್ಲಿಸಿ ಗುರುತಿಸು ಕಾಯಿದೆಗಳನ್ನು ಹೊಂದಿವೆ. ಜರ್ಮನಿಯಲ್ಲಿ, ಜನರು ತಮ್ಮ ಮನೆಗಳ ಬಾಗಿಲಿನ ಮೇಲೆ ತಮ್ಮ ಹೆಸರುಗಳನ್ನು ತೋರಿಸಬೇಕು.

"ಅನಾಮಧೇಯ ಸಂದೇಶ" ಪದ ಸಾಮಾನ್ಯವಾಗಿ ಅದರ ರವಾನೆಗಾರನನ್ನು ಬಹಿರಂಗಗೊಳಿಸದ ಸಂದೇಶವನ್ನು ಸೂಚಿಸುತ್ತದೆ. ಅನೇಕ ದೇಶಗಳಲ್ಲಿ, ಅನಾಮಧೇಯ ಪತ್ರಗಳು ಕಾನೂನಿನಿಂದ ರಕ್ಷಿಸಲ್ಪಟ್ಟಿವೆ ಮತ್ತು ಅವನ್ನು ನಿಯಮಾನುಕ್ರಮವಾದ ಪತ್ರಗಳಾಗಿ ತಲುಪಿಸಬೇಕು.

ಉಲ್ಲೇಖಗಳು[ಬದಲಾಯಿಸಿ]

  1. Wallace, Kathleen A. 1999. “Anonymity,” Ethics and Information Technology 1, 23-35; Nissenbaum, Helen. 1999. “The Meaning of Anonymity in an Information Age,” The Information Society, 15, 141-144; Matthews, Steve, 2010, "Anonymity and the Social Self," American Philosophical Quarterly, 47, 351-363.