ವಿಷಯಕ್ಕೆ ಹೋಗು

ಸ್ವಾಮಿ ಸರ್ವಪ್ರಿಯಾನಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ವಾಮಿ ಸರ್ವಪ್ರಿಯಾನಂದರು, [] ಅಮೆರಿಕನ್ಯೂಯಾರ್ಕ್ ನಗರದ ವೇದಾಂತ ಸೊಸೈಟಿಯ ಮೇಲಧಿಕಾರಿ,ಅಧ್ಯಾತ್ಮಿಕ ಮುಂದಾಳಾಗಿ, ೬, ಜನವರಿ, ೨೦೧೭ ರಿಂದ ತಮ್ಮ ಕಾರ್ಯಭಾರ ಸಂಭಾಳಿಸುತ್ತಿದ್ದಾರೆ. ಇದಕ್ಕೆ ಮೊದಲು ೩ ಡಿಸೆಂಬರ್, ೨೦೧೫ ರಿಂದ ಅವರು ಅಮೆರಿಕದ ಕ್ಯಾಲಿಫೋರ್ನಿಯದ ವೇದಾಂತ ಸೊಸೈಟಿಯ ಸಹಾಯಕ ಆಡಳಿತಾಧಿಕಾರಿಯಾಗಿ ಕೆಲಸ ಮಾಡಿದ್ದರು.

ವಿದ್ಯಾಭ್ಯಾಸ

[ಬದಲಾಯಿಸಿ]

ಒಡಿಶಾರಾಜ್ಯದ ಭುವನೇಶ್ವರ ನಗರದ (XIMB) 'ಸೇಂಟ್ ಝೇವಿಯರ್ಸ್ ಇನ್ಶ್ಟಿಟ್ಯೂಟ್ ಆಫ್ ಮ್ಯಾನೇಝ್ಮೆಂಟ್ ಕಾಲೇಜಿ'ನಿಂದ ಬಿಝಿನೆಸ್ ಮ್ಯಾನೇಜ್ಮೆಂಟ್ ಪದವಿ ಗಳಿಸಿದ್ದಾರೆ. ಅವರ ಇತರ ಆಸಕ್ತಿಗಳು, ಅಧ್ಯಾತ್ಮವಿದ್ಯೆ, ತತ್ವಶಾಸ್ತ್ರ,ಮ್ಯಾನೇಜ್ಮೆಂಟ್,ವಿಜ್ಞಾನ ಮತ್ತು ಶಿಕ್ಷಣ. ೧೯೯೪ ರಲ್ಲಿ ಸ್ವಾಮಿಗಳು, ರಾಮಕೃಷ್ಣ ಮಠ ಮತ್ತು ಮಿಶನ್ ಗೆ ಪಾದಾರ್ಪಣೆಮಾಡಿದರು. ೨೦೦೪ ರಲ್ಲಿ ಸನ್ಯಾಸ ಸ್ವೀಕರಿಸಿದರು. (ವೇದಾಂತ ಸೊಸೈಟಿ ಆಫ್ ಸದರನ್ ಕ್ಯಾಲಿ ಫೋರ್ನಿಯದ VSSC’s Hollywood Temple) ಗೆ ಸೇರುವ ಮೊದಲು, ಅವರು ಕೊಲ್ಕೊಟ್ಟಾದ್ದ ಬೇಲೂರ್ ಮಠದಲ್ಲಿ ಆಚಾರ್ಯರ ಪದವಿಯಲ್ಲಿ ತಮ್ಮ ಕಾರ್ಯಚಟುವಟಿಗೆಗಳಲ್ಲಿ ತೊಡಗಿದ್ದರು. ಇದಕ್ಕೆ ಮೊದಲು ರಾಮಕೃಷ್ಣ ಮಠ ಹಾಗೂ ಮಿಶನ್ ನ ಹಲವಾರು ಹುದ್ದೆಗಳಲ್ಲಿ ತಮ್ಮಯೋಗದಾನಮಾಡಿದ್ದರು. ಅವುಗಳು ಹೀಗಿವೆ :

  • ಝಾರ್ಖಂಡ್ ರಾಜ್ಯದ ದೇವ್ ಘರ್ ವಿದ್ಯಾಪೀಠ,ಹೈಯರ್ ಸೆಕೆಂಡರಿ ಸ್ಕೂಲ್ ನ, ವೈಸ್ ಪ್ರಾಂಶುಪಾಲರಾಗಿ,
  • ಬೇಲೂರು ಮಠದ ವಿವೇಕಾನಂದ ವಿಶ್ವವಿದ್ಯಾನಿಲಯದ ಮೊದಲನೆಯ ಕುಲಪತಿಗಳ ಹುದ್ದೆಯಲ್ಲಿದ್ದರು.
  • ಬೇಲೂರು ಮಠದ ಶಿಕ್ಷಣ ಮಂದಿರ ಟೀಚರ್ಸ್ ಎಜುಕೇಶನ್ ಕಾಲೇಜಿನ ಪ್ರಾಂಶುಪಾಲರಾಗಿ, ಸೇವೆಸಲ್ಲಿಸಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. ಸ್ವಾಮಿ ಸರ್ವಪ್ರಿಯಾನಂದರ ವಿದ್ಯಾಭ್ಯಾಸ ಹಾಗೂ ವೃತ್ತಿಜೀವನ, zoom info, ೦೨,೦೬,೨೦೧೫

ಬಾಹ್ಯಸಂಪರ್ಕಗಳು

[ಬದಲಾಯಿಸಿ]
  1. ಸ್ವಾಮಿ ಸರ್ವಪ್ರಿಯಾನಂದರ ಉಪನ್ಯಾಸಗಳ ವೀಡಿಯೋಗಳು