ದುಃಖ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದುಃಖ ಒಂದು ಭಾವನೆ, ಅನಿಸಿಕೆ, ಅಥವಾ ಚಿತ್ತವೃತ್ತಿ. ದುಃಖ ದುಮ್ಮಾನಕ್ಕಿಂತ ಹೆಚ್ಚು ತೀವ್ರವಾಗಿರುತ್ತದೆ... ಅದು ಒಂದು ದೀರ್ಘಾವಧಿಯ ಸ್ಥಿತಿಯನ್ನು ಸೂಚಿಸುತ್ತದೆ.[೧] ಅದೇ ಸಮಯದಲ್ಲಿ "ದುಃಖ — ಆದರೆ ಅಸಂತೋಷವಲ್ಲ — ತೊರೆತದ ಒಂದು ಹಂತವನ್ನು ಸೂಚಿಸುತ್ತದೆ... ಇದರಿಂದ ದುಃಖಕ್ಕೆ ಮಹತ್ವದ ಅದರ ವಿಶಿಷ್ಟ ಅರ್ಥವನ್ನು ಕೊಡುತ್ತದೆ.

ಮೇಲಾಗಿ, "ಮನೋಭಾವದ ವಿಷಯದಲ್ಲಿ, ದುಃಖ ದುಮ್ಮಾನ (ಸ್ವೀಕರಿಸುವುದು) ಮತ್ತು ಯಾತನೆ (ತಿರಸ್ಕರಿಸುವುದು) ನಡುವೆ ಅರೆಹಾದಿಯಲ್ಲಿದೆ ಎಂದು ಹೇಳಬಹುದು".

ದುಃಖ ಅನಿಸದಿರುವುದು ನಮ್ಮ ಜೀವನಗಳಲ್ಲಿ ಭಯವನ್ನು ಬರಮಾಡಿಕೊಡುತ್ತದೆ. ನಾವು ದುಃಖದ ಅನಿಸಿಕೆಯನ್ನು ಮತ್ತಷ್ಟು ವಿಳಂಬಿಸಿ ಮುಂದೂಡಿದಷ್ಟು, ಅದರ ಬಗ್ಗೆ ನಮ್ಮ ಭಯ ಮತ್ತಷ್ಟು ದೊಡ್ಡದಾಗುತ್ತದೆ. ಅನಿಸಿಕೆಯ ಅಭಿವ್ಯಕ್ತಿಯನ್ನು ಮುಂದೂಡುವುದು ಅದರ ಶಕ್ತಿಯ ಬೆಳವಣಿಗೆಗೆ ಕಾರಣವಾಗುತ್ತದೆ.[೨]

ದುಮ್ಮಾನ ಶ್ಯಾಂಡ್‍ನ ಪದ್ಧತಿಯಲ್ಲಿ ನಾಲ್ಕು ಅಂತರಸಂಬಂಧಿತ ಚಿತ್ತವೃತ್ತಿಗಳಲ್ಲಿ ಒಂದು, ಭಯ, ಕೋಪ ಮತ್ತು ನಲಿವು ಉಳಿದವು. ಈ ಪದ್ಧತಿಯಲ್ಲಿ, ಯಾವುದೋ ಪ್ರಮುಖ ವಸ್ತುವಿನ ಕಡೆಗಿನ ಆವೇಗಯುಕ್ತ ಪ್ರವೃತ್ತಿಯನ್ನು ಅಡ್ಡಿಪಡಿಸಿದಾಗ, ದುಃಖ ಪರಿಣಾಮಕ ಚಿತ್ತವೃತ್ತಿಯಾಗಿರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Anna Wierzbicka, Emotions across Languages and Cultures (1999) p. 66
  2. Erika M. Hunter, Little Book of Big Emotions (London 2004) p. 115
"https://kn.wikipedia.org/w/index.php?title=ದುಃಖ&oldid=846348" ಇಂದ ಪಡೆಯಲ್ಪಟ್ಟಿದೆ