ಅನುಪಮಾ ಮಂಗಳವೇಧೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆನುಪಮಾ ಮಂಗಳವೇಧೆ,[೧] ಒಬ್ಬ ಕನ್ನಡ ಸುದ್ದಿಪತ್ರಿಕೆಗಳ ಸಂಪಾದಕಿ, ಹಾಗೂ ಭರತನಾಟ್ಯಕಲಾವಿದೆ,[೨] ಅಮೆರಿಕನ್ನಡಿತಿ. ಬೆಂಗಳೂರಿನ ಭಾರತೀಯ ವಿದ್ಯಾಭವನದ 'ನೃತ್ಯ ನಮನ'ಎಂಬ ಭರತನಾಟ್ಯ ಪ್ರಾಕಾರವನ್ನು ಪ್ರಸ್ತುತಿಪಡಿಸಿದ್ದರು.[೩] ೨೦೦೭ ರಲ್ಲಿ ಅಮೆರಿಕದ ಶಿಕಾಗೋನಗರದ ಕನ್ನಡ ಕೂಟದ ವಸಂತೋತ್ಸವ ಸಮಾರಂಭದಲ್ಲಿ, ಹಾಗೂ ೨೦೦೮ ರ ಅಕ್ಕವಿಶ್ವಕನ್ನಡ ಸಮ್ಮೇಳನದಲ್ಲಿ ನಿರೂಪಕಿಯಾಗಿ [೪]ಸಮರ್ಥವಾಗಿ ಕೆಲಸಮಾಡಿದರು. .

ಜನನ[ಬದಲಾಯಿಸಿ]

ಅನುಪಮಾ ಮಂಗಳವೇಧೆಯವರು, ಕರ್ನಾಟಕ ರಾಜ್ಯದ ಚನ್ನರಾಯಪಟ್ಟಣದಲ್ಲಿ ಜನಿಸಿದರು. ಮಲೆನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿಗಳಿಸಿ, ಅಜಿತ್ ಮಂಗಳವೇಧೆಯವರನ್ನು ಮದುವೆಯಾಗಿ,ಅಮೆರಿಕದೇಶಕ್ಕೆ ಪಾದಾರ್ಪಣೆಮಾಡಿದರು. ಅನುಪಮರವರು, ಐಟಿ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಅನುಪಮಾರಿಗೆ ಮೇಘನಾ, ಮಾನಸಿ,ಎಂಬ ಇಬ್ಬರು ಹೆಣ್ಣು ಮಕ್ಕಳು.[೫] ಪತಿ ಮಂಗಲವೇಧೆಯವರು ಬೆಂಗಳೂರಿನಲ್ಲಿ ಜನಿಸಿದರು.ಅಮೇರಿಕಾದಲ್ಲಿ ಪಿ.ಎಚ್.ಡಿ.ಗಳಿಸಿ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ವಾಷಿಂಗ್ಟನ್ ಡಿಸಿ.ನಗರದ ಕಾವೇರಿ ಕನ್ನಡ ಸಂಘದ ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಕಾರ್ಯಕ್ರಮಕ್ಕೆ ಮಕ್ಕಳನ್ನು ಸಿದ್ದತೆಮಾಡುವ ಕೆಲಸವವನ್ನು ಸಮರ್ಥವಾಗಿ ನಿಭಾಯಿಸಿದರು.

ಇಶಾ ಅನುಯಾಯಿ[ಬದಲಾಯಿಸಿ]

ಸದ್ಗುರು ಜಗ್ಗಿವಾಸುದೇವರ ಸಂಸ್ಥೆಯಾದ 'ಇಶಾ'ದಡಿಯಲ್ಲಿ ಕೊಯಮತ್ತೂರು, ಅಮೇರಿಕಾದ ಟೆನ್ನಿಸಿನಗರ ಈಶ ಪ್ರತಿಷ್ಠಾನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ೨೦೦೯ ರಲ್ಲಿ ಸದ್ಗುರು ಜಗ್ಗಿಯವರ ತಂಡದೊಂದಿಗೆ ಭಾರತದ ಹಿಮಪರ್ವತವೇರಿ ಕೈಲಾಸಮಾನಸ ಸರೋವರದ ಯಾತ್ರೆಯನ್ನು ಮಾಡಿಬಂದರು. ಶಿಕಾಗೋ ನಗರದ ವಿದ್ಯಾರಣ್ಯ ಕನ್ನಡಕೂಟದ [೬]ಸಕ್ರಿಯ ಸದಸ್ಯೆ, ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳ ಕಾರ್ಯದರ್ಶಿಯಾಗಿ ಕೆಲಸಮಾಡುತ್ತಿದ್ದಾರೆ. ಕನ್ನಡಕೂಟದ 'ದಿಂಡಿಮ ಸುದ್ದಿಪತ್ರ', 'ಸಂಗಮ' ಸಂಚಿಕೆಯ ಸಂಪಾದಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅತ್ಯುತ್ತಮ ಗಾಯಕಿ,ಹಾಗೂ ನೃತ್ಯಪಟುವಾಗಿರುವ ಅನುಪಮಾ ಮಂಗಳವೇಧೆಯವರು, ನಗೆನಾಟಕ, ವೃಂದಗಾನ,ನೃತ್ಯರೂಪಕ ಪ್ರಸ್ತುತಿಗಳಲ್ಲಿ ಇತರ ಕಲಾವಿದರರಲ್ಲದೆ ತಮ್ಮ ಪರಿವಾರದ ಸದಸ್ಯರನ್ನೂ ಪಾಲ್ಗೊಳ್ಳಲು ಪ್ರೇರೇಪಿಸಿದ್ದಾರೆ. ವಾರಾಂತ್ಯದಲ್ಲಿ ಅಮೆರಿಕದಲ್ಲಿರುವ ಕನ್ನಡದ ಮಕ್ಕಳಿಗೆ ಓದು,ಬರಹ,ಮತ್ತು ಮಾತಾಡುವ ಕಲೆ ಕಲಿಸಲು 'ಸಿರಿಗನ್ನಡ ಶಾಲೆ' ನಡೆಸಿದರು. ಮಕ್ಕಳಿಂದ ಕೈಬರಹದ ಪತ್ರ ಬರೆಸಿ ಕನ್ನಡಕೂಟದ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ.

ರಿಯಾಲಿಟಿ ಶೋ ನಲ್ಲಿ ನಿರೂಪಕಿಯಾಗಿ[ಬದಲಾಯಿಸಿ]

ಸಾಗರದಾಚೆ ಸಪ್ತಸ್ವರ ರಿಯಾಲಿಟಿ ಶೋ ನಲ್ಲಿ ನಿರೂಪಕಿಯಾಗಿ ದುಡಿದರು. ಅನುಪಮಾ ಅಭಿನಯಿಸಿದ ಕಿತ್ತೂರುರಾಣಿ ಚೆನ್ನಮ್ಮ, ಶಕುಂತಲಾ ಪಾತ್ರಾಭಿನಯಕ್ಕೆ ಮೆಚ್ಚುಗೆ ಬಂದು ಪ್ರಶಸ್ರ 'ರಂಗನಾವಿಕ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. ಅನುಪಮ ಉತ್ಸಾಹದ ಬುಗ್ಗೆ, ಈ ಅಮೆರಿಕನ್ನಡತಿ ! Sunday, 08.01.2017, ಶ್ರೀವತ್ಸ ಜೋಶಿ[ಶಾಶ್ವತವಾಗಿ ಮಡಿದ ಕೊಂಡಿ]
  2. (ವರ್ಷ ೨೦೧೫ ರಲ್ಲಿ, ತಮ್ಮ ೩೫ ನೆಯ ವಯಸ್ಸಿನಲ್ಲಿ ಭರತನಾಟ್ಯವನ್ನು ಕಲಿತು, ರಂಗಪ್ರವೇಶಮಾಡಿದರು)
  3. ಎರಡುಮಕ್ಕಳ ತಾಯಿಯಾದ ಬಳಿಕೆ ನೃತ್ಯಪಟುವಾದರು. ವಿಶ್ವವಾಣಿ,ನೂರೆಂಟು ವಿಶ್ವ-ವಿಶ್ವೇಶ್ವರ ಭಟ್, ೦೫-0೧-೨೦೧೭
  4. Prasad-Oneindia(Kn), ಅಕ್ಕ: ಕಾರ್ಯಕ್ರಮ ನಿರೂಪಕಿ ಅನುಪಮಾ. August 26, 2010
  5. Asian media, USA, Hindu Temple Celebrates the Lord of Dance on Mahashivaratri March 13, 2013
  6. ವಿದ್ಯಾರಣ್ಯ ಕನ್ನಡ ಕೂಟದಲ್ಲಿ 'ವಸಂತ ಸಾಹಿತ್ಯೋತ್ಸವ': ವಿ.ಕೆ.ಕೆ ಸಾಹಿತ್ಯೋತ್ಸವ ಸಮಿತಿ,: One India, Kannada, Wednesday, May 21, 2014,

ಬಾಹ್ಯಸಂಪರ್ಕಗಳು[ಬದಲಾಯಿಸಿ]