ಸದಸ್ಯ:ಅನುಷ.ಆನಂದ sandbox3
ಬಸವಣ್ಣ ಮತ್ತು ಸ್ತ್ರೀ ಸಮಾನತೆ: ಬಸವಣ್ಣನವರು ವರ್ಣಭೇದ ವರ್ಗಭೇದಗಳನ್ನು ಯಾವ ಮಟ್ಟದಲ್ಲಿ ಖಂಡಿಸಿದರೋ, ಸ್ತ್ರೀ-ಪುರುಷರ ನಡುವಿನ ತಾರತಮ್ಯವನ್ನು ಅಷ್ಟೇ ತೀವ್ರವಾಗಿ ಖಂಡಿಸಿದರು. ಅವರಿಗೆ ತಾವು ಜನ್ಮ ತಾಳಿದ ವೈದಿಕ ಧರ್ಮದತ್ತ ವಿಮುಖತೆ ಉಂಟಾಗಲು ಸ್ತ್ರೀ ವಿರೋಧಿ ಶೋಷಕ ನಿಯಮ ನಿಬಂಧನೆಗಳೂ ಕಾರಣವಾಗಿದ್ದಿರಬೇಕು.ಸ್ತ್ರೀ ಬ್ರಾಹ್ಮಣ,ವೈಶ್ಯ,ಕ್ಷತ್ರಿಯರಂಥ ಉಚ್ಚಕುಲಗಳಲ್ಲಿ ಜನ್ಮ ತಾಳಿದರೂ, ಅವಳಿಗೆ ಓರ್ವ ಅಸ್ಪೃಶ್ಯಶೂದ್ರ ಸ್ತ್ರೀಗೆ ದೊರಕುವ ನೀಚಸ್ಥಾನವಷ್ಟೆ ದೊರಕುತ್ತಿದ್ದಿತು. ಅವಳು ವಿದ್ಯಾವಿಹೀನಗಳಾಗಿ, ಪುರುಷನ ಭೋಗ ವಸ್ತುವಾಗಿದ್ದಳು. ವಿವಾಹದಲ್ಲಿ ಆಕೆಗೆ ಆಯ್ಕೆಗಳಿರಲಿಲ್ಲ. ಸ್ವಂತಮನೆಯಲ್ಲಿ ಆಕೆಗಿದ್ದುದು ಸೇವಕಿಯ ಸ್ಥಾನ.ಸಂಸ್ಕೃತ ಶ್ಲೋಕಗಳು ಉತ್ತಮ ಸ್ತ್ರೀಗೆ ಆರೋಪಿಸಿರುವ ಆರು ಗುಣಗಳು ಪುರುಷನ ಸೌಖ್ಯಕ್ಕೆ ಪೂರಕವದವುಗಳೇ ಹೊರತು ಸ್ತ್ರೀಯ ವ್ಯಕ್ತಿತ್ವದ ವಿಕಸನಕ್ಕಾಗಿ ಅಲ್ಲ.ಉಚ್ಚಕುಲದವರ ಮನೆಯಿಂದ ಶೂದ್ರ ಹೊರಗಿದ್ದರೆ,ಸ್ವಕುಲದ ಸ್ತ್ರೀ ಮನೆಯೊಳಗೆ ಇರುತ್ತಿದ್ದಳೆಂಬುದಷ್ಟೆ ವ್ಯತ್ಯಾಸ. ವೇದಧ್ಯಯನ ಉಪನಯನ ಅಷ್ಟೇ ಏಕೆ ಪತಿಯ ಅಂತ್ಯದ ಬಳಿಕ ಅವಳ ಅಂತ್ಯವೂ ಆಗಿಯೇ ಹೋಗುತ್ತಿದ್ದಿತು. ಬಸವಣ್ಣನವರ ವೀರಶೈವ ಧರ್ಮದಲ್ಲಿ ಸ್ತ್ರಿ ಪುರುಷರ ಅಸಮಾನತೆಗೆ ಆಸ್ಪದವೇ ಇರಲಿಲ್ಲ. ಈ ಭಕ್ತಿಪಂಥದಲ್ಲಿ ಪತಿ ಅಥವಾ ಒಡೆಯ ಎಂಬ ಅಗ್ಗಳಿಕೆಯನ್ನು ಶಿವನಿಗೇ ಆರೋಪಿಸಲಾಗಿದೆ,ಹಾಗಾಗಿ ಪುರುಷ ಸ್ತ್ರೀ ಯರಿರ್ವರೂ ಶರಣಸತಿಯರು ಲಿಂಗಪತಿಗೆ ಅಧೀನರು.ಬಸವಣ್ಣನವರ ಪತ್ನಿಯರಾದ ಗಂಗಾಂಬಿಕೆ,ನೀಲಾಂಬಿಕೆಯರಿರ್ವರೂ ಶರಣರನ್ನು ಸತ್ಕರಿಸುವುದಕ್ಕಷ್ಟೇ ಮೀಸಲಾಗಿದ್ದವರಲ್ಲ.ಶರಣರೊಂದಿಗೆ ಚರ್ಚಾಗೋಷ್ಟಿಗಳಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಪ್ರಕಟಿಸುತ್ತಿದ್ದರು.ಗಂಗಾಂಬಿಕೆ ವಚನಕಾರ್ತಿಯೂ ಆಗಿದ್ದಳು. ಬಸವಣ್ಣನವರು ಬಹುಪತ್ನಿತ್ವದ ಸಮರ್ಥಕರಲ್ಲ ಬಿಜ್ಜಳನ ಸಾಕುತಂಗಿ ನೀಲಲೋಚನೆಯು ಬಸವಣ್ಣನವರ ಕೈ ಹಿಡಿಯಲು ಪ್ರಾಣ ತ್ಯಾಗ ಮಾಡುವಷ್ಟು ಉತ್ಕಟತೆಯನ್ನು ಪ್ರೇಮದಲ್ಲಿ ಹೊಂದಿದವಳಾಗಿದ್ದಾಳು.ಬಸವಣ್ಣನವರು ಧೃಡವಾಗಿ ತಿರಸ್ಕರಿಸಿದ್ದಲ್ಲಿ,ಅವಳ ಆತ್ಮಾರ್ಪಣವೋ ಅಥವಾ ಬಲವಂತದ ವಿವಾಹವೋ ಘಟಿಸುವ ಸಾಧ್ಯತೆಗಳಿದ್ದವು. ವಿಷಯ ಸುಖಗಳತ್ತ ವಿಮುಖರಾಗಿಯೇ ಇದ್ದ ಬಸವಣ್ಣನವರು ತಮ್ಮ ಅಭಿಪ್ರಾಯಕ್ಕಿಂತಲೂ ಆ ಹೆಣ್ಣುಮಗಳ ಇಷ್ಟಾನಿಷ್ಟಾಗಳನ್ನು ಗೌರವಿಸಿದರೆಂದು ಈ ವಿವಾಹ ತಿಳಿಸುತ್ತದೆ. ಬಸವಣ್ಣನವರು ಸ್ತ್ರೀಯರನ್ನು ಲಿಂಗದೀಕ್ಷೆಯಿಂದಾಗಲೀ ಶರಣ ಸಂಸ್ಕೃತಿಯ ನೆಲೆಯೂ,ವಿಚಾರತೋಷ್ಟಿಯೂ ಆದ 'ಅನುಭವ ಮಂಟಪ' ದಿಂದಲೇ ಆಗಲೀ ಹೊರಗಿಡಲಿಲ್ಲ.ಅವರ ಕಾಲದ ಶರಣೆಯಲ್ಲಿ ವಚನಕಾರ್ತಿಯಲ್ಲಿ ಅಮ್ಮವ್ವೆ, ದೊಸೆಕಾಯಕದ ಪಿಟ್ಟವ್ವೆ,ಕದಿಕ ತಿಮ್ಮವ್ವೆ ಸೋಮವ್ವೆ,ತೊಂಗಿನ ಮಹಾದೇವಿ ,ವೀರದೇವಮ್ಮ ಸೂಳೆಸಂಕವ್ವ,ಆಯ್ದಕ್ಕಿ ಲಕ್ಕಮ್ಮ ಪ್ರಸಿದ್ದರು. ಅಕ್ಕಮಹಾದೇವಿಯವರು ಈ ಎಲ್ಲರಿಗಿಂತಲೂ ತಮ್ಮ ವಿಭಿನ್ನ ಜೀವನ ಸಿದ್ದಾಂತ ಮತ್ತು ಶರಣ ಸತಿ-ಲಿಂಗಪತಿ ಎಂಬ ತತ್ವಾನುಸಾರವಾಗಿ ತನ್ನನ್ನು ಚನ್ನಮಲ್ಲಿಕಾರ್ಜುನನಿಗೆ ವಧುವಾಗಿಸಿಕೊಂಡು ಹೆಜ್ಜೆಗೊಂದು ವಚನರಚಿಸಿದ ಮಹಾನ್ ಸ್ತ್ರೀ.ಪುರುಷರ ವಚನಕಾರಕ ವಚನಗಳಲ್ಲಿ ಸಮಾಜದ ವಿವಿಧ ಮುಖಗಳ ವಿವರಗಳು ಕಂಡು ಬರುತ್ತವೆ.