ವಿಷಯಕ್ಕೆ ಹೋಗು

ಸದಸ್ಯ:Letisha Thomas/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Myntra
ಸಂಸ್ಥೆಯ ಪ್ರಕಾರE-commerce
(Online shopping)
ಮಾಲೀಕ(ರು)Flipkart

ಎಲೆಕ್ಟ್ರಾನಿಕ್ ಕಾಮರ್ಸ್, ಸಾಮಾನ್ಯವಾಗಿ ಇ-ಕಾಮರ್ಸ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಉತ್ಪನ್ನಗಳ ಅಥವಾ ಸೇವೆಗಳ ವ್ಯಾಪಾರ ನಡೆಯುತ್ತದೆ. ಇದನ್ನು ಇಂಟರ್ನೆಟ್ ಅಥವಾ ಆನ್ಲೈನ್ ಸಾಮಾಜಿಕ ಜಾಲ, ಕಂಪ್ಯೂಟರ್ ಜಾಲಗಳಲ್ಲಿ ಬಳಸಬಹುದು. ಆನ್ಲೈನ್ ಅಂಗಡಿಗಳು ಸಾಮಾನ್ಯವಾಗಿ ಒಂದು ದಿನ ೨೪ ಗಂಟೆಗಳು ಲಭ್ಯವಿದೆ. ಆನ್ಲೈನ್ ಶಾಪಿಂಗಿನ ಒಂದು ಪ್ರಯೋಜನವೆಂದರೆ ತ್ವರಿತವಾಗಿ ವಿವಿಧ ವಸ್ತುಗಳನ್ನು ಮತ್ತು ಸೇವೆಯನ್ನು ಹುಡುಕಬಹುದು.

ಪರಿಚಯ

[ಬದಲಾಯಿಸಿ]

ಮಿಂತ್ರ ಒಂದು ದೊಡ್ಡ ಭಾರತೀಯ ಫ್ಯಾಷನ್ ಕಾಮರ್ಸ್ ಮಾರುಕಟ್ಟೆ ಕಂಪನಿಯಾಗಿದೆ. ಇದರ ಕೇಂದ್ರ ಕಾರ್ಯಾಲಯವು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ಈ ಕಂಪನಿಯನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪದವೀಧರರು ೨೦೦೭ರಲ್ಲಿ ಸ್ಥಾಪಿಸಿದ್ದರು. ಇವರ ದೃಷ್ಟಿಯು ಉಡುಗೊರೆ ವಸ್ತುಗಳ ವೈಯಕ್ತೀಕರಣದ ಮೇಲಿತ್ತು. ಮಿಂತ್ರ ೨೦೧೦ರಲ್ಲಿ ತನ್ನ ಗಮನವನ್ನು ಬ್ರಾಂಡೆಡ್ ಉಡುಪುಗಳ ಆನ್ಲೈನ್ ಚಿಲ್ಲರೆಗೆ ಬದಲಾಯಿಸಿದರು. ಜೂನ್ ೨೦೧೩ರಲ್ಲಿ ಅಮೆಜಾನ್ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದಾಗ ಅದರ ವಿರುದ್ಧ ಸ್ಪರ್ಧಿಸಲು ಮೇ ೨೦೧೪ರಲ್ಲಿ ಮಿಂತ್ರ ಫ್ಲಿಪ್ಕಾರ್ಟಿನ ಜೊತೆ ವಿಲೀನಗೊಂಡಿತು. ಅಶುತೋಷ್ ಮತ್ತು ವಿನೀತ್ ಸಕ್ಸೇನಾ ಜೊತೆಗೆ ಮುಖೇಶ್ ಬನ್ಸಾಲ್ ಈ ಕಂಪನಿಯ ಸಂಸ್ಥಾಪಕರಾಗಿದ್ದಾರೆ.

ಇತಿಹಾಸ

[ಬದಲಾಯಿಸಿ]

ಆರಂಭಿಕ ವರ್ಷಗಳಲ್ಲಿ ಈ ಕಂಪನಿಯ ಕಾರ್ಯಾಚರಣೆ ಮುಖ್ಯವಾಗಿ ವ್ಯಾಪಾರ-ವ್ಯವಹಾರಕ ಮಾದರಿಯಲಿತ್ತು. ೨೦೦೭ ಮತ್ತು ೨೦೧೦ರ ನಡುವೆ ಆನ್ಲೈನ್ ಪೋರ್ಟಲ್ ಗ್ರಾಹಕರಿಗೆ ಟಿ ಶರ್ಟ್, ಮೌಸ್ ಪ್ಯಾಡ್, ಕ್ಯಾಲೆಂಡರ್ಗಳು, ಕೈಗಡಿಯಾರಗಳು, ಮದ್ಯದ ಲೋಟಗಳು ಮುಂತಾದ ಉತ್ಪನ್ನಗಳನ್ನು ವೈಯಕ್ತೀಕರಿಸಲು ಅವಕಾಶ ನೀಡುತ್ತಿದ್ದರು. ೨೦೧೧ರಲ್ಲಿ ಮಿಂತ್ರ ಫ್ಯಾಷನ್ ಮತ್ತು ಜೀವನ ಶೈಲಿಯ ಉತ್ಪನ್ನಗಳನ್ನು ಸೇರಿಸಲು ಅದರ ಕ್ಯಾಟಲಾಗ್ ವಿಸ್ತರಿಸಿತು ಮತ್ತು ದೂರ ವೈಯಕ್ತೀಕರಣ ತೆರಳಿದರು. ಮಿಂತ್ರ ೨೦೧೨ರಲ್ಲಿ ೩೫೦ ಭಾರತೀಯ ಮತ್ತು ಅಂತಾರಾಷ್ಟ್ರೀಯ ಬ್ರಾಂಡ್ಗಳ ಉತ್ಪನ್ನಗಳನ್ನು ನೀಡಿದರು. ಮಿಂತ್ರದಲ್ಲಿ ಸಹ ಬ್ರ್ಯಾಂಡ್ನಂತಹ ಪುರುಷ ಮತ್ತು ಮಹಿಳೆಯರ ಕ್ಯಾಶುಯಲ್ಸ್ ಹೊಂದಿತ್ತು. ಮಿಂತ್ರ ತನ್ನ ಮಾರುಕಟ್ಟೆಯ ಶೇರು ೫೦ರಿಂದ ೭೦ರಷ್ಟು ಹೆಚ್ಚಿಸಲು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಮಿಂತ್ರ ಮೇ ೨೦೧೫ರಲ್ಲಿ ಅಪ್ಲಿಕೇಶನ್ ಮಾತ್ರ ವ್ಯವಹಾರ ಮಾದರಿಗೆ ತೆರಳಿದ್ದರು, ಇದರಲ್ಲಿ ಗ್ರಾಹಕರಿಗೆ ತಮ್ಮ ಸೈಟಿನಿಂದ ಸ್ಮಾರ್ಟ್ಫೋನ್ ಮೂಲಕ ಖರೀದಿ ಮಾಡಬಹುದು. ಮಿಂತ್ರ ಅಪ್ಲಿಕೇಶನ್ ಮಾತ್ರ ವ್ಯವಹಾರಕ್ಕೆ ತೆರಳಿದ್ದಾಗ ಇವರಿಗೆ ಮಿಶ್ರ ಪ್ರತಿಕ್ರಿಯೆ ಲಭಿಸಿತ್ತು ಮತ್ತು ಆರಂಭದಲ್ಲಿ ಮಾರಾಟದಲ್ಲಿ ೧೦% ಅದ್ದು ಕಂಡಿತು. ಆದರೆ ಫೆಬ್ರವರಿ ೨೦೧೬ರಲ್ಲಿ ಕಳೆದುಕೊಂಡ ಗ್ರಾಹಕರನ್ನು ಗೆಲಲ್ಲು ತನ್ನ ಅಪ್ಲಿಕೇಶನ್ ಮಾತ್ರ ಮಾದರಿಯನ್ನು ಹಿಂತೆಗೆದುಕೊಂಡಿದರು. ಮಿಂತ್ರ ೨೦೧೬ರಲ್ಲಿ ಭಾರತದ ಅತ್ಯಂತ ಮೆಚ್ಚುಗೆಯ ಮತ್ತು ಅಮೂಲ್ಯ ಪವರ್ ಬ್ರಾಂಡ್ ಪ್ರಶಸ್ತಿಗೆ ಚುನಾಯಿಸಲಾಯಿತು.

ಸ್ವಾಧೀನಗಳು ಮತ್ತು ಹೂಡಿಕೆಗಳನ್ನು

[ಬದಲಾಯಿಸಿ]

ಇದರ ಕಾರ್ಯಾಚರಣೆ ಸಂಕೀರ್ಣ ವ್ಯವಹಾರ ಮಾದರಿಯ ಮೂಲಕ ನಿರ್ವಹಿಸಲಾಗುತ್ತದೆ. ವೆಕ್ಟರ್ ಇ - ಕಾಮರ್ಸ್ ಪ್ರೈ. ಲಿಮಿಟೆಡ್ ಎಂಬ ಕಂಪನಿ ಮಿಂತ್ರ.ಕಾಮ ಮತ್ತು ಮಿಂತ್ರ ಅಪ್ಲಿಕೇಶನ ಎಲ್ಲಾ ಕಾರ್ಯನಿರ್ವಹಣೆಯನ್ನು ನಿರ್ವಹಿಸುತ್ತದೆ. ಅಶುತೋಷ್ ಮತ್ತು ಪ್ರಭಾಕರ್ ಸುಂದರ್ ಬದಲಿಗೆ ವಿಷ್ಣು ಹಝಾರಿ ಮತ್ತು ರಘುನಾಥ್ ಲಕ್ಷ್ಮಣನ್ ವೆಕ್ಟರ್ ಇ - ಕಾಮರ್ಸಿನ ನಿರ್ದೇಶಕರಾಗಿದ್ದರು. ಅಕ್ಟೋಬರ್ ೨೦೦೭ರಲ್ಲಿ ಮಿಂತ್ರ ತನ್ನ ಆರಂಭಿಕ ಬಂಡವಾಳವನ್ನು ಮುಂಬೈ ಏಂಜಲ್ಸ್, ವೆಂಚರ್ ಫಂಡ್ ಮತ್ತು ಕೆಲವು ಇತರ ಹೂಡಿಕೆದಾರರಿಂದ ಪಡೆದರು. ನವೆಂಬರ್ 2008 ರಲ್ಲಿ, ಮಿಂತ್ರ ಎನ್.ಇ.ಎ ವೆಂಚರ್ಸ್ ಮತ್ತು ಏ.ಡಿ.ಜಿ ವೆಂಚರ್ಸಿನಿಂದ ಸುಮಾರು $೫ ಮಿಲಿಯನ್ ಹಾಗು ಸೀರೀಸ್ 'ಬಿ' ಸುತ್ತಿನಲ್ಲಿ $೧೪ ಮಿಲಿಯನ್ ನಷ್ಟು ಸಂಗ್ರಹಿಸಿತು. ಈ ಸುತ್ತಿನಲ್ಲಿ ಹೂಡಿಕೆಯ ನೇತೃತ್ವವನ್ನು ಟೈಗರ್ ಗ್ಲೋಬಲ್, ಖಾಸಗಿ ಷೇರುಗಳ ಸಂಸ್ಥೆ ವಹಿಸಿದರು ಇದರೊಂದಿಗೆ ಅಸ್ತಿತ್ವದಲ್ಲಿರುವ ಹೂಡಿಕೆದಾರರ ಏ.ಡಿ.ಜಿ ವೆಂಚರ್ಸ್ ಮತ್ತು ಸಹವರ್ತಿಗಳು ಧನಸಹಾಯ ಮಾಡುವುದರಲ್ಲಿ ಗಮನಾರ್ಹ ಪ್ರಮಾಣದ ಇರಿಸಲಾಯಿತು. ೨೦೧೧ರ ಕೊನೆಯಲ್ಲಿ, ಟೈಗರ್ ಗ್ಲೋಬಲಿನ ನೇತೃತ್ವದಲ್ಲಿ ಮಿಂತ್ರ ಅದರ ಮೂರನೇ ಸುತ್ತಿನಲ್ಲಿ $೨೦ ಮಿಲಿಯನ್ ನಷ್ಟು ಸಂಗ್ರಹಿಸಿತು. ಪ್ರೇಮ್ಜಿ ಇನ್ವೆಸ್ಟ್ ಮತ್ತು ಕೆಲವು ಖಾಸಗಿ ಹೂಡಿಕೆದಾರರಿಂದ ಹೆಚ್ಚುವರಿ $೫೦ ಮಿಲಿಯನ್ ಹಣ ಏರಿಸಲಾಯಿತು. ಜುಲೈ ೨೦೧೬ರಲ್ಲಿ, ಮಿಂತ್ರ ಅದರ ತಂತ್ರಜ್ಞಾನ ತಂಡವನ್ನು ವಿಸ್ತರಿಸಲು ಮತ್ತು ಬಲಪಡಿಸಲು, ಮೊಬೈಲ್ ಆಧಾರಿತ ವಿಷಯ ಗುಂಪುಗೂಡುವಿಕೆಮೂಲಕ ವೇದಿಕೆ ಕ್ಯೂಬಿಟನ್ನು ಸ್ವಾಧೀನಪಡಿಸಿಕೊಂಡಿತ. ಜುಲೈ, ೨೦೧೬ರಲ್ಲಿ ಭಾರತದ ದೊಡ್ಡ ಫ್ಯಾಷನ್ ಪ್ಲಾಟ್ಫಾರ್ಮ್ ಆಗಲು ಮಿಂತ್ರ ತಮ್ಮ ಪ್ರತಿಸ್ಪರ್ಧಿಯಾದ ಜಾಬಾಂಗನ್ನು ಗಳಿಸಿಕೊಂಡಿದರು.

ನಿಯಂತ್ರಣಾ ಕ್ರಮ ಮತ್ತು ಮೊಕದ್ದಮೆಗಳು

[ಬದಲಾಯಿಸಿ]

ಜಾರಿ ನಿರ್ದೇಶನಾಲಯ ವಿದೇಶಿ ವಿನಿಮಯ ಉಲ್ಲಂಘನೆ ಬಗ್ಗೆ ನ್ಯಾಯಾಲಯದಲ್ಲಿ ತನಿಖೆ ನಡೆಸುತ್ತಿದ್ದೇವೆ. ಜನವರಿ ೨೦೧೬ರಲ್ಲಿ, ಜಾರಿ ನಿರ್ದೇಶನಾಲಯ ಮಿಂತ್ರದ ಮಾಲೀಕರಾದ ಫ್ಲಿಪ್ಕಾರ್ಟಿಗೆ ನೋಟಿಸ್ ನೀಡಿದೆ.

ಕಾರ್ಮಿಕ ಸಮಸ್ಯೆಗಳು

[ಬದಲಾಯಿಸಿ]

ಜುಲೈ ೨೦೧೫ರಲ್ಲಿ, ಮಿಂತ್ರ ಮತ್ತು ಫ್ಲಿಪ್ಕಾರ್ಟಿನ ಜಾರಿ ಸಿಬ್ಬಂದಿ ಮೂಲಭೂತ ಉದ್ಯೋಗಿ ಸೌಲಭ್ಯಗಳು ಮತ್ತು ಬಡ ಕೂಲಿ ಕೊರತೆ ಕಾರಣ ಮುಷ್ಕರ ಹೂಡಿದರು.

ಗೋ ಹತ್ಯೆ ಪ್ರಚಾರ ಆರೋಪಗಳು

[ಬದಲಾಯಿಸಿ]

ಮಿಂತ್ರ ಕಂಪನಿ ಉತ್ಪಾದಿಸುವ ಅನೇಕ ಶೂಗಳು ಹಸುವಿನ ಕೂದಲು ಮತ್ತು ಚರ್ಮದಿಂದ ತಯಾರಿಸಲಾಗುತ್ತದೆ. ಇದು ಗೋಹತ್ಯೆ ಉದ್ಯಮದ ಒಂದು ಉತ್ಪನ್ನವಾಗಿದೆ. ಮಿಂತ್ರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ಹಸುವಿನ ಹೈಡ್ ಉತ್ಪನ್ನಗಳ ಬೇಡಿಕೆ ಹೆಚ್ಚಿಸಿ ಗೋಹತ್ಯೆ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ. 'ಪೂಮಾ ಭಾರತ ೨೦೧೧- ೨೦೧೨' ಅತ್ಯುತ್ತಮ ಇ-ವಾಣಿಜ್ಯ ಪಾಲುದಾರ' ಪ್ರಶಸ್ತಿಯನ್ನು ಮಿಂತ್ರಕ್ಕೆ ನೀಡಲಾಯಿತು. ಗುರುತಿನ ಕಳವು ಇನ್ನೂ ಗ್ರಾಹಕರಿಗೆ ಒಂದು ಸಮಸ್ಯೆಯಾಗಿದೆ. ಆನ್ಲೈನ್ ಚಿಲ್ಲರೆ ಸೇವೆಗಳನ್ನು ಬಳಸುವಾಗ ಸಂಪನ್ಮೂಲಗಳನ್ನು ಗ್ರಾಹಕರು ಹೇಗೆ ತಮ್ಮನ್ನು ರಕ್ಷಿಸಿಕೊಳ್ಳುವುದೆಂದು ಸಲಹೆ ನೀಡುತ್ತವೆ. ವೈಯಕ್ತಿಕ ಮಾಹಿತಿಯ ಗೌಪ್ಯತೆಯನ್ನು ಕೆಲವು ಗ್ರಾಹಕರಿಗೆ ಗಮನಾರ್ಹ ವಿಷಯವಾಗಿದೆ. ಅನೇಕ ಗ್ರಾಹಕರು ಸ್ಪ್ಯಾಮ್ ಮತ್ತು ಟೆಲಿಮಾರ್ಕೆಟಿಂಗ್, ಆನ್ಲೈನ್ ವ್ಯಾಪಾರಿಗೆ ಸಂಪರ್ಕ ಮಾಹಿತಿ ಪೂರೈಕೆಯು ತಡೆಯಲು ಬಯಸುತ್ತದೆ. ಆದ್ದರಿಂದ ಅನೇಕ ವ್ಯಾಪಾರಿಗಳು ಯಾವುದೇ ಉದ್ದೇಶಗಳಿಗಾಗಿ ಗ್ರಾಹಕ ಮಾಹಿತಿಯನ್ನು ಬಳಸುವುದಿಲ್ಲ ಎಂದು ಭರವಸೆ ನೀಡಿದರು. ಹಲವಾರು ವೆಬ್ಸೈಟ್ಗಳು ಗ್ರಾಹಕ ಶಾಪಿಂಗ್ ಅಭ್ಯಾಸಗಳ ಜಾಡನ್ನು ವೀಕ್ಷಿಸಿ ಇತರ ವಸ್ತುಗಳ ಮತ್ತು ವೆಬ್ಸೈಟ್ಗಳನ್ನು ಸೂಚಿಸುತ್ತದೆ.

ಉಲ್ಲೇಖ

[ಬದಲಾಯಿಸಿ]

[][]

  1. https://en.wikipedia.org/wiki/Myntra
  2. http://www.myntra.com/