ವಿಷಯಕ್ಕೆ ಹೋಗು

ಎಲ್. ನಾರಾಯಣ ರೆಡ್ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಲ್. ನಾರಾಯಣ ರೆಡ್ಡಿ
ನಾರಾಯಣ
ನಾರಾಯಣ ರೆಡ್ಡಿಯವರು
Born(೧೯೩೫-೦೯-೧೮)೧೮ ಸೆಪ್ಟೆಂಬರ್ ೧೯೩೫
DiedJanuary 14, 2019(2019-01-14) (aged 83)
Nationalityಭಾರತ
Known forಸಾವಯವ/ಸಹಜ ಕೃಷಿ
Awardsರಾಜ್ಯೋತ್ಸವ ಪ್ರಶಸ್ತಿ

ಎಲ್. ನಾರಾಯಣ ರೆಡ್ಡಿಯವರು ಸಾವಯವ ಕೃಷಿಯಲ್ಲಿ ಸಾಧನೆ ಮಾಡಿರುವಂತಹ ಪ್ರಗತಿಪರ ರೈತ ಮತ್ತು ಕೃಷಿತಜ್ಞರಾಗಿದ್ದರು[]. ಇವರು ಕೃಷಿರಂಗದಲ್ಲಿ ಮಾರ್ಗದರ್ಶಕರಾಗಿದ್ದರು.ದೊಡ್ಡಬಳ್ಳಾಪುರ ಸಮೀಪದ ಸೋರಹುಣಸೆ ಗ್ರಾಮದಲ್ಲಿ ನೆಲೆಸಿದ್ದ ಇವರು ಸಾವಯವ ಕೃಷಿಯ ಸಾಧನೆಗಾಗಿ 'ನಾಡೋಜ ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ.

ಸೋರಹುಣಸೆ ಗ್ರಾಮದ ನಾರಾಯಣ ರೆಡ್ಡಿಯವರು ಹುಟ್ಟಿದ್ದು ೧೮ ಸೆಪ್ಟೆಂಬರ್ ೧೯೩೫. ತಂದೆ ಲಕ್ಷ್ಮಯ್ಯ ರೆಡ್ಡಿ, ತಾಯಿ ಎಲ್ಲಮ್ಮ. ಹೆಂಡತಿ ಸರೋಜಮ್ಮ. ಮಕ್ಕಳು ಮಂಜುನಾಥ, ನಿತ್ಯಾನಂದ ಮತ್ತು ಸಾಯಿನಾಥ. ರೆಡ್ಡಿಯವರು ಎಸ್.ಎಸ್.ಎಲ್.ಸಿ. ವರೆಗಿನ ವಿದ್ಯಾಭ್ಯಾಸ ಮಾಡಿದ್ದಾರೆ.[]

ಪ್ರಶಸ್ತಿ, ಗೌರವಗಳು

[ಬದಲಾಯಿಸಿ]
  • ಹಂಪಿ ವಿಶ್ವವಿದ್ಯಾನಿಲಯದ 'ನಾಡೋಜ ಪ್ರಶಸ್ತಿ' (೨೦೦೪)
  • ರಾಜ್ಯೋತ್ಸವ ಪ್ರಶಸ್ತಿ (೧೯೯೪)
  • ತಾಲ್ಲೂಕು, ಜಿಲ್ಲಾ, ರಾಜ್ಯ ಕೃಷಿ ಸಾಧಕ ಪ್ರಶಸ್ತಿ (೧೯೭೭, ೭೮, ೭೯)
  • ಎಚ್. ಡಿ. ಚೌಡಯ್ಯ ಪ್ರತಿಷ್ಠಾನ ಪ್ರಶಸ್ತಿ (೨೦೦೪)
  • ಡಾ|| ಆರ್. ದ್ವಾರಕಾನಾಥ್ ಶ್ರೇಷ್ಠ ಕೃಷಿಕ ಪ್ರಶಸ್ತಿ (೨೦೧೧)

ನಿರ್ವಹಿಸಿದ ಸ್ಥಾನಗಳು

[ಬದಲಾಯಿಸಿ]
  • ೧೧ನೇ ಪಂಚವಾರ್ಷಿಕ ಯೋಜನೆಯ ಸಲಹಾ ಸಮಿತಿಯ ಸದಸ್ಯರು
  • 'ಸಾವಯವ ಕೃಷಿ ಮಿಷನ್' ಸದಸ್ಯರು
  • ಸಾವಯವ ಕೃಷಿ ಸಲಹಾ ಸಮಿತಿ ಸದಸ್ಯರು
  • ಕರ್ನಾಟಕ ರಾಜ್ಯ ಪರಿಸರ ಸಂರಕ್ಷಣಾ ಸಮಿತಿ ಸದಸ್ಯ
  • ಕೆನರಾ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಲಹಾಲೋಚನ ಕೇಂದ್ರದ ಸದಸ್ಯರು
  • ಹುಲಿಕೋಟೆ ಎಚ್.ಕೆ.ಪಾಟೀಲ್ ಪ್ರತಿಷ್ಠಾನ ಮತ್ತು ಕೊಡೈಕೆನಾಲ್ ಕೋಲೆ ಶಾಲೆಯ ಗೌರವಾನ್ವಿತ ಟ್ರಸ್ಟಿ

ನಾರಾಯಣ ರೆಡ್ಡಿಯವರು ೧೪ಜನವರಿ೨೦೧೯ರಂದು ನಿಧನರಾದರು. ಅವರಿಗೆ ೮೩ ವರ್ಷ ವಯಸ್ಸಾಗಿತ್ತು.[][]

ಉಲ್ಲೇಖಗಳು/ಆಕರಗಳು

[ಬದಲಾಯಿಸಿ]
  1. ವಿಜಯಕರ್ನಾಟಕ ಸುದ್ದಿಲೋಕ, ಜನವರಿ ೧೩, ೨೦೧೫
  2. ನೆಲದೊಡಲ ಚಿಗುರು. ಬೆಂಗಳೂರು: ನವಕರ್ನಾಟಕ ಪ್ರಕಾಶನ. ISBN 81-8467-331-0.
  3. ಸಾವಯವ ಕೃಷಿಕ, ನಾಡೋಜ ಎಲ್ ನಾರಾಯಣ ರೆಡ್ಡಿ ನಿಧನ, ಒನ್ ಇಂಡಿಯಾ ಕನ್ನಡ
  4. ಸಾವಯವ ಕೃಷಿಕ ನಾರಾಯಣರೆಡ್ಡಿ ಇನ್ನಿಲ್ಲ


ಹೊರಸಂಪರ್ಕ ಕೊಂಡಿಗಳು

[ಬದಲಾಯಿಸಿ]

ಹೆಚ್ಚಿನ ಓದು

[ಬದಲಾಯಿಸಿ]
  • ಪು: ಈ ಭೂಮಿ ಈ ಸಸ್ಯ - ಡಾ. ನಾರಾಯಣ ರೆಡ್ಡಿಯವರ ಕೃಷಿ ವಿಚಾರಗಳು, ನಿರೂಪಣೆ: ಬಂದಗದ್ದೆ ರಾಧಾಕೃಷ್ಣ, ನವಕರ್ನಾಟಕ ಪ್ರಕಾಶನ