ಶಿಥಿಲ ದ್ವಿತ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿಥಿಲ ದ್ವಿತ್ವ ಎಂದರೆ ಒತ್ತಿ ಉಚ್ಚರಿಸದೆ ತೇಲಿಸಿ ಉಚ್ಚರಿಸುವ ಒತ್ತಕ್ಷರ. ಛಂದಸ್ಸಿನಲ್ಲಿ ಒತ್ತಕ್ಷರದ ಹಿಂದಿನ ಅಕ್ಷರವು ಗುರುವಾಗುತ್ತದೆ. ಆದರೆ ಆ ಒತ್ತಕ್ಷರವು ಶಿಥಿಲ ದ್ವಿತ್ವವಾಗಿದ್ದರೆ ಅದು ಗುರುವಾಗುವುದಿಲ್ಲ - ಲಘುವಾಗಿಯೇ ಉಳಿಯುತ್ತದೆ.[೧]

ಲಘು= u , ಗುರು=
  • ಕೆಲವು ಶಬ್ದಗಳಲ್ಲಿ ಶೈಥಿಲ್ಯವು ಸಹಜವಾಗಿರುತ್ತದೆ. ಉದಾ : ಬರ್ದಿಲಂ, ಗರ್ದುಗು, ಅಮರ್ದು, ಎದೇ, ಬರ್ದುಂಕು ಎರ್ದೆವಾಯ್,
  • ದ್ವಿ- ಲಘುಯುಕ್ತವಾದ ರಳ, ಕುಳ, ರೇಫಾಂತ [ಕೆಸ [ರು]+ಗಳ್=ಕೆಸರ್ಗಳ್, ಎಂಬಲ್ಲಿ ಶಬ್ದಾಂತ್ಯದಲ್ಲಿ 'ರು’ ಇದ್ದರೂ ‘ಗಳ್’ ಸೇರುವಾಗ ಅದಕ್ಕೆ ‘ರ್’ ಆದೇಶವಾಗಿ ಬರುವುದರಿಂದ ಶೈಥಿಲ್ಯವುಂಟಾಗಿದೆ]
ಶಬ್ದಗಳಿಗೆ ಗ, ದ, ವ, ಜ, ಗಳು ಪರವಾದಾಗ ವಿಕಲ್ಪವಾಗಿ ಶಿಥಿಲತೆ ಬರುತ್ತದೆ. ಇದು ಕೆಲವು ನಾಮಪದಗಳಲ್ಲಿಯೂ ಸಮಾಸ ಶಬ್ದಗಳಲ್ಲಿಯೂ ಕಂಡುಬರುತ್ತದೆ.
  • ನಾಮಪದಗಳಲ್ಲಿ - ಬಹುವಚನ ‘ಗಳ್’ ಚತುರ್ಥಿಯ ‘ಗೆ’ ಇವು ಪರವಾದಾಗ,
ಉದಾ : ಅಗಳ್ವಳ್, ಕನರ್ಗಳ್, ನವಿರ್ಗೆ,ಇತ್ಯಾದಿ.
  • ಬಾಸಳ್ಗಳ್ ಎಂಬಲ್ಲಿ ಬಾಸುಳ್ ಎಂಬುದು ‘ರಳಾಂತ’ವಾಗಿದ್ದರೂ ದ್ವಿಲಘು ಯುಕ್ತತವಾಗಿರದೆ ಆದ್ಯಕ್ಷರವು ಗುರುವಾಗಿರುವುದರಿಂದ ಅದಕ್ಕೆ ‘ಗಳ್’ ಸೇರಿದಾಗ ಶಿಥಿಲತೆಯುಂಟಾಗುವುದಿಲ್ಲ. ಆದಿ ದೀರ್ಘವಿದ್ದರೂ ಅಪೂರ್ವವಾಗಿ ಕೆಲವೆಡೆಗಳಲ್ಲಿ ಶಿಥಿಲತೆ ಬರುವುದುಂಟು.
ಉದಾ : ಕಾದಲರ್ಗಳ್, ತಾಪಸರ್ಗೆ, ಇಲ್ಲಿ ಅಂತ್ಯ ಯಪಾಂತ್ಯ ಸ್ವರಗಳು ಲಘುವಾಗಿವೆ.
  • ಕ್ರಿಯಾಪದಗಳಲ್ಲಿ – ಕಾಲವಾಚಕಗಳಾದ ದ, ದಪ, ವ, ಗುಂ, - ವಿದ್ಯರ್ಥದ ‘ಗೆ ಇವು ಪರವಾದಾಗ – ಜಗುಳ್ದಂ, ತೊಡರ್ದಪಂ, ನಿಮಿರ್ವಂ, ಅಮರ್ಗು, ನುಸುಳ್ಗೆ

ಸಮಾಸ ಶಬ್ದಗಳಲ್ಲಿ

ಉದಾ : ಪೊಗರ್ವಚ್ಚೆ, ಕುಳಿರ್ಗಾಳಿ, ಅಮಳ್ದೊಂಗಳ್, ಅಮಳ್ಜಂತ್ರಂ.

ಉಲ್ಲೇಖ[ಬದಲಾಯಿಸಿ]

  1. ಕೇಶಿರಾಜಶಬ್ದಮಣಿದರ್ಪಣ