ವಿಷಯಕ್ಕೆ ಹೋಗು

ಸದಸ್ಯ:Kavyat1431/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಾರ್ಕಿಕ

[ಬದಲಾಯಿಸಿ]

ವಿಕಿಪೀಡಿಯದ ಲೇಖನಗಳಲ್ಲಿ ಇರುವ ಜೀವಂತ ವ್ಯಕ್ತಿಯ ಬಗ್ಗೆಗಿನ ವಿಷಯವು ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ವಿಕಿಪೀಡಿಯವು ಮುಖ್ಯ ಹತ್ತು ವೆಬ್ಸೈಟ್‌ಗಳಲ್ಲಿ ಒಂದು ಮತ್ತು ಈ ವೆಬ್ಸೈಟ್‌ನ ಪ್ರಮುಖ್ಯತೆ ಅದರ ಜವಬ್ದಾರಿಯಿಂದ ಬರುತ್ತದೆ. ವಿಕಿಪೀಡಿಯವು ಒಂದು ಸಾಮನ್ಯ ಯೋಜನೆ, ವಿಶ್ವದ ಸುಧಾರಾಣೆ ಇದರ ಮುಖ್ಯ ಉದ್ದೇಶವಾಗಿದೆ. ಅಂದರೆ ವ್ಯಕಿಯ ಬಗ್ಗೆಗಿನ ಲೇಖನಗಳು ಸಹಾನುಭೂತಿ, ಅನುಗ್ರಹ ಮತ್ತು ತಿಳುವಳಿಕೆಗಳಿಂದ ತುಂಬಿರಬೇಕು.

ಜೀವಂತ ವ್ಯಕ್ತಿಯ ಬಗ್ಗೆಗಿನ ವಿಷಯವು ತಪ್ಪಾದ ಅಥವಾ ವಿಕೃತ ಲೇಖನಗಳಾಗಿರುವುದರಿಂದ ಜನ ಬೇಸರಗೊಂಡು ಫೌಂಡೇಶನ್‌ಗೆ ಮತ್ತು ಜಿಂಬೊ ವೇಲ್ಸ್‌ಗೆ ದಿನವು ದೂರುಗಳು ನೀಡುತ್ತಿದ್ದಾರೆ. ಈ ದೂರುಗಳನ್ನು ಯಶಸ್ವಿಗೊಳಿಸುವುದು ಭಾವುಕರ ವಿಷಯವಾಗಿದೆ.

ಒಬ್ಬ ವ್ಯಕ್ತಿಯು ತನ್ನ ಬಗ್ಗೆ ಇರುವ ಲೇಖನವನ್ನು ತಾನೆ ಬದಲಾಹಿಸಲು ಸಾಧ್ಯವಿಲ್ಲ ಏಕೆಂದರೆ ಅವರು ವಿಕಿಪೀಡಿಯದ ಸಾಮನ್ಯ ಸದಸ್ಯನಾಗಿರುವುದಿಲ್ಲ ಮತ್ತು ಅವರಿಗೆ ಯವುದೇ ರೀತಿಯ ನೀತಿಗಳು ತಿಳಿದಿರುವುದಿಲ್ಲ. ಅವರು ಒಳ್ಳೆ ರೀತಿಯಲ್ಲಿ ಬದಲಿಸುವುದು ಸಹ ದೊಡ್ದ ಅಪರಾಧವಾಗುತ್ತದೆ.


ವಿಕಿಪೀಡಿಯದಲ್ಲಿ ಜೀವಂತ ವ್ಯಕ್ತಿಯ ಬಗ್ಗೆ ಲೇಖನ ಬರೆಯುವಾಗ ಸಂಪಾದಕರು ಬಹಳ ಕಾಳಜಿಯನ್ನು ವಹಿಸಿರಬೇಕು.ಕೆಳಗಿನ ಅಂಶಗಳನ್ನು ತಲೆಯಲ್ಲಿ ಇಟ್ಟುಕೊಂಡು ಲೇಖನಗಳನ್ನು ಸೃಷ್ಟಿಸಬೇಕು.

  • ಲೇಖನವು ಸ್ವತಃ ಸಂವೇದನೆಯನ್ನು ಮತ್ತು ನಮ್ಮ ನೀತಿಗಳನ್ನು ಆದಾರದ ಹಂತದೊಂದಿಗೆ ಸಂಪಾದನೆ ಮಾಡಬೇಕು;
  • ಲೇಖನಕ್ಕೆ ಸಂಬಂಧ ಪಟ್ಟ ವ್ಯಕ್ತಿಯು ವಿಷಯವನ್ನು ಸಂಪಾದಿಸಲು ಪ್ರಯತ್ನಿಸಿದಾಗ ಅದನ್ನು ಒಳ್ಳೆಯ ರೀತಿಯಲ್ಲಿ ಮತ್ತು ವಿನಯವಾದ ರೀತಿಯಲ್ಲಿ ವ್ಯವಹಾರಿಸಬೇಕು
  • ಒಂದು ಅನಾಮದೇಯ ಐಪಿ ವಿಳಾಸ ಅಥವಾ ಒಂದು ಹೊಸ ಖಾತೆಯಿಂದ ಜೀವಂತ ವ್ಯಕ್ತಿಯ ಬಗ್ಗೆಗಿನ ಲೇಖನ ಅಥವಾ ಅದರ ಒಂದು ವಿಭಾಗ ಬಗ್ಗೆ ಖಾಲಿ ಆದ ವೇಳೆ ಆ ವ್ಯಕ್ತಿಯನ್ನು ಆಕ್ರಮಿಸದೇ ಅವರನ್ನು ಸಂಭಾಷಣೆಗೆ ಒಳಮಾಡಬೇಕು ಮತ್ತು ಆ ಲೇಖನದಲ್ಲಿ ಯವುದೇ ರೀತಿಯ ಮೂಲವಿಲ್ಲದ ತಪ್ಪಾದ ವಿಷಯವು ಕಂಡಲ್ಲಿ ಅದನ್ನು ಅಳಿಸಬೇಕು.

ಮೂಲಗಳು

[ಬದಲಾಯಿಸಿ]

ನಂಬಲಾರ್ಹ ಮೂಲಗಳು

[ಬದಲಾಯಿಸಿ]

ಜೀವನಚರಿತ್ರೆ ಅಥವಾ ಆತ್ಮಚರಿತ್ರೆಯಲ್ಲಿ ಯಾವುದಾದರು ಪ್ರತಿಪಾದನೆಗಳು ಮತ್ತು ಸುಳ್ಳಿನ ವಿಷಯಗಳು ಕಂಡು ಬಂದರೆ ಅದು ಮಾನನಷ್ಟಕರ. ನಂಬಲಾರ್ಹ ಮೂಲಗಳು,ತೃತೀಯ ಮೂಲಗಳು ಮತ್ತು ಯಾವುದೇ ಮೂಲ ಸಂಶೋಧನೆ ಮತ್ತು ಪರಿಶೀಲನೆ ಸಾಧ್ಯತೆ ಇಲ್ಲದೆ ಸೃಷ್ಟಿಸುವ ಲೇಖನಗಳು ನಮ್ಮ ವಿಷಯ ನೀತಿಯನ್ನು ಉಲ್ಲಂಘಿಸುತ್ತದೆ ಮತ್ತು ಮಾನನಷ್ಟ ಹಕ್ಕಿಗೆ ಕಾರಣವಾಗಬಹುದು. ಪಕ್ಷಪಾತ ವೆಬ್ಸೈಟ್‌‌ನಲ್ಲಿ ಇರುವ ಮತ್ತು ಅಸ್ಪಷ್ಟ ಪತ್ರಿಕೆಯಲ್ಲಿ ಇರುವ ವಿಷಯವನ್ನು ಹಾಕುವಾಗ ಎಚ್ಚರಿಕೆಯನ್ನು ವಹಿಸಬೇಕು. ಅದು ಅವಹೇಳನಕಾರಿಯಾಗಿದರೆ ಅದನ್ನು ಹಾಕಲೇಬಾರದು. ಸ್ವಯಂ ಬರೆದ ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ, ವೆಬ್ಸೈಟ್‌‌‌ನಲ್ಲಿ ಮತ್ತು ಬ್ಲಾಗ್ಸ್‌ನಲ್ಲಿ ಇರುವ ವಿಷಯಗಳನ್ನು ಬಳಸಲೇ ಬಾರದು. ಈ ಮೂಲಗಳು ಬಿಎಲ್‌ಪಿನಲ್ಲಿ ಬಾಹ್ಯ ಕೊಂಡಿಗಳಿಗೆ ಸೇರಬಾರದು.

ಎಲ್ಲಾ ವಾರ್ತಪತ್ರಿಕೆಗಳು ಮತ್ತು ಮ್ಯಗಜಿನ್‌ಗಳು ನಂಬಲಾರ್ಹ ಮಾಹಿತಿಗಳನ್ನು ನೀಡುವುದಿಲ್ಲ. ಕೆಲವು ವಾರ್ತಪತ್ರಿಕೆಗಳು ಮತ್ತು ಮ್ಯಗಜಿನ್‌ಗಳು ಸುಳ್ಳು ಪುಕಾರುಗಳನ್ನು ಪ್ರಕಟಿಸುತ್ತದೆ. ಅಂತಹ ವಿಷಯಗಳಿಗೆ ಲೇಖನಗಳಲ್ಲಿ ಜಾಗವಿರುವುದಿಲ್ಲ. ಅಂತಹ ವಿಷಯವನ್ನು ಹಾಕುವುದಕ್ಕೂ ಮುನ್ನ ಅದು ನಿಜವಾದುದೇ, ನಂಬಲಾರ್ಹ ವಿಷಯವೇ ಮತ್ತು ಆ ವಿಷಯ ವಿಶ್ವಕೋಶೀಯ ಲೇಖನದಲ್ಲಿ ಪ್ರಕಟಿತವಾಗಿದೆಯೇ ಎಂದು ಪರಿಶೀಲಿಸಿ ಅನಂತರ ಆ ವಿಷಯವನ್ನು ಹಾಕಬೇಕಾಗುತ್ತದೆ.


ವಿಷಯವನ್ನು ಸ್ವ-ಪ್ರಕಟಿತ ಮೂಲವಾಗಿ ಬಳಸುವುದು

[ಬದಲಾಯಿಸಿ]

ವ್ಯಕ್ತಿಯು ತಮ್ಮ ಬಗ್ಗೆ ತಾವೇ ಬರೆದುಕೊಳೊವರೆಗು ಸ್ವ-ಪ್ರಕಟಿತ ಮೂಲವು ಬಿಎಲ್‌ಪಿನ ಕೆಳಗಡೆ ಬರುವುದಿಲ್ಲ. ವ್ಯಕ್ತಿಯ ಬಗ್ಗೆಗಿನ ವಿಷಯವು ಪತ್ರಿಕ ಬಿಡುಗಡೆ, ವೈಯಕ್ತಿಕ ವೆಬ್ಸೈಟ್‌‌‌ಗಳಲ್ಲಿ ಅಥವಾ ಬ್ಲಾಗ್‌ಗಳಿಂದ ತಿಳಿಯಬಹುದು. ಸ್ವ-ಪ್ರಕಟಿತ ವಿಷಯವನ್ನು ಲೇಖನಕ್ಕೆ ಹಾಕಬೇಕಾದರೆ ಅದು

  • ವ್ಯಕ್ತಿಯ ಪ್ರಾಧಾನ್ಯಕ್ಕೆ ಸಂಬಂಧ ಪಟ್ಟದಾಗಿರಬೇಕು;
  • ವಿವಾದಾಸ್ಪದವಾಗಿರ ಬಾರದು;
  • ಅನುಚಿತವಾಗಿ ಸ್ವಯಂ ಸೇವೆಯಾಗಿರಬಾರದು;
  • ಮೂರನೇ ಪಕ್ಷಗಳ ಬಗ್ಗೆ ಹಕ್ಕು ಒಳಗೊಳ್ಳದ ಅಥವಾ ನೇರವಾಗಿ ವಿಷಯಕ್ಕೆ ಸಂಬಂಧವಿಲ್ಲದ ಘಟನೆಗಳ ಬಗ್ಗೆ ಇರಬಾರದು;
  • ಯಾರು ಬರೆದರೆಂದು ಸಂಪೂರ್ಣವಾಗಿ ತಿಳಿಯಬೇಕು;

ಈ ನಿಬಂಧನೆಗಳನ್ನು ವಿಶ್ವಾಸಾರ್ಹ ತೃತೀಯ ಪ್ರಕಾಶಕರು ಪ್ರಕಟಿಸಿದ ಪ್ರಜೆಗಳ ಆತ್ಮಚರಿತ್ರೆ ಅನ್ವಯಿಸುವುದಿಲ್ಲ.ಇದನ್ನು ನಂಬಲಾರ್ಹ ಮೂಲವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಸ್ವ-ಪ್ರಕಟಿತವಲ್ಲ. ಸ್ವ-ಪ್ರಕಟಿತವಾದ ಬ್ಲಾಗ್ ಅಥವಾ ವೈಯಕ್ತಿಕ ವೆಬ್ಸೈಟ್‌‌‌ಗಳಲ್ಲಿ ದೊರೆಯುವ ವ್ಯಕ್ತಿಯ ಬಗ್ಗೆಗಿನ ವಿಷಯವು ಬಾಹ್ಯ ಕೊಂಡಿಗಳು / ಹೆಚ್ಚಿನ ಓದಿಗಾಗಿ ವಿಭಾಗದಲ್ಲಿ ಸೇರಿಸಲಾಗುತ್ತದೆ ಅಥವಾ ಅದನ್ನು ಲೇಖನದ ಮೂಲವಾಗಿ ಬಳಸಲಾಗುತ್ತದೆ.

ಏಕಂತ ಪರವಾದ ಭಾವನೆ

[ಬದಲಾಯಿಸಿ]

ಜೀವಂತ ಜನರ ಜೀವನಚರಿತ್ರೆ ಸಂಪ್ರದಾಯ ಮತ್ತು ವ್ಯಕ್ತಿಯ ಗೌಪ್ಯತೆಗೆ ಸಂಬಂಧಿಸಿದಂತೆ ಬರೆಯಬೇಕು.

ವಿಕಿಪೀಡಿಯ ಒಂದು ವಿಶ್ವಕೋಶ ಟ್ಯಾಬ್ಲಾಯ್ಡ್ ಅಲ್ಲ. ಒಂದು ವಿಷಯವನ್ನು ಉದ್ರೇಕಕಾರಿ ಮಾಡುವುದು ವಿಕಿಪೀಡಿಯದ ಕೆಲಸವಲ್ಲ ಅಥವಾ ಜನರ ಜೀವನದ ಬಗ್ಗೆ ಹಕ್ಕುಗಳನ್ನು ನೀರೂರಿಸುವ, ಹರಡುವ ಪ್ರಾಥಮಿಕ ವಾಹನ ಅಲ್ಲ. ವ್ಯಕ್ತಿಯ ಪ್ರತಿ ವಿವರ ಸೇರಿದಂತೆ ಒಂದು ಅಥವಾ ಎರಡು ಘಟನೆಗಳ ಬಗ್ಗೆ ಬರೆಯುವಾಗ ಸಮಸ್ಯೆಗಳಿಗೆ ಕಾರಣವಾಗಬಹುದು. ಅತ್ಯುತ್ತಮ ಸಂದರ್ಭದಲ್ಲಿ ಇದು ವಿಶ್ವಕೋಶವಲ್ಲದ ಲೇಖನಕ್ಕೆ ಕಾರಣವಾಗಬಹುದು. ಕೆಟ್ಟ ಸಂದರ್ಭದಲ್ಲಿ, ಈ ತಟಸ್ಥ ನಮ್ಮ ನೀತಿಗಳ ಗಂಭೀರ ಉಲ್ಲಂಘನೆ ಮಾಡಬಹುದು. ಸಂಶಯದ ಸಮಯದಲ್ಲಿ ಜೀವನಚರಿತ್ರೆ ಸಂಪೂರ್ಣವಾಗಿ ಮೂಲದ ತಟಸ್ಥ ಮತ್ತು ವಿಷಯ ರೂಪಕ್ಕೆ ತರಬೇಕು.


ತುಲನಾತ್ಮಕವಾಗಿ ಅಪರಿಚಿತ ಜನರು

[ಬದಲಾಯಿಸಿ]

ವಿಕಿಪೀಡಿಯದಲ್ಲಿ ಹೆಸರುವಾಸಿ ಆಗದೆ ಇರುವವರ ಬಗ್ಗೆಯು ಜೀವನಚರಿತ್ರೆಯ ಲೇಖನವನ್ನು ಸೃಷ್ಟಿಸಲಾಗಿರುತ್ತದೆ. ಈ ಲೇಖನವನ್ನು ಸಂಪಾದಿಸುವ ಸಂಪಾದಕರು ಬಹು ಎಚ್ಚರದಿಂದ ಇರುವ ವಿಷಯವನ್ನು ಹಾಕಬೇಕಾಗುತ್ತದೆ. ಈ ಲೇಖನಗಳನ್ನು ಸೃಷ್ಟಿಸಬೇಕಾದರೆ ಮೊದಲು ಪ್ರಾಥಮಿಕ ಮೂಲವನ್ನು ಮತ್ತು ದ್ವೀತಿಯಾ ಮೂಲವನ್ನು ಬಳಸಿ ವಿಷಯವನ್ನು ಹಾಕಿದ ಬಳಿಕ ತೃತೀಯ ಪ್ರಾಥಮಿಕ ಮೂಲಗಳಿಂದ ದೊರೆತ ವಿಷಯವನ್ನು ಹಾಕಬೇಕಾಗುತ್ತದೆ.

ಹುಟ್ಟಿದ ದಿನದ ಗೌಪ್ಯತೆ

[ಬದಲಾಯಿಸಿ]

ವಿಕಿಪೀಡಿಯ ಕೆಲವು ಪ್ರಸಿದ್ಧ ಜನರ ನಿಖರ ಜನನ ದಿನಾಂಕ ಒಳಗೊಂಡಿದೆ. ಈ ದಿನಾಂಕಗಳನ್ನು ನೀಡುವಾಗ ಬಹಳ ಎಚ್ಚರಿಕೆಯಿಂದ ಚೆನ್ನಾಗಿ ತಿಳಿದುಕೊಂಡು ಹಾಕಬೇಕಾಗುತ್ತದೆ. ಹೆಸರಾಂತ ವ್ಯಕ್ತಿಗಳ ಹುಟ್ಟಿದ ದಿನವು ದೇಶದ ಸಾಮಾನ್ಯ ಜನರಿಗೆ ಲಭ್ಯವಾಗಿ ಸಿಗುತ್ತದೆ. ಬೇರೆಯವರ ಹುಟ್ಟದ ದಿನದಲ್ಲಿ ತಪ್ಪುಗಳು ಇರಬುಹುದು. ಇತ್ತೀಚ್ಛಿನ ದಿನಗಳಲ್ಲಿ ಹುಟ್ಟ ದಿನಾಂಕವು ಬಹಳ ಗೌಪ್ಯತೆಯ ವಿಷಯವಾಗಿದೆ. ಹುಟ್ಟಿದ ದಿನ ಸರಿಯಾಗಿ ತಿಳಿದಿರದ ಸಮಯದಲ್ಲಿ ಮತ್ತು ದಿನಾಂಕದ ಬಗ್ಗೆ ಯಾವುದಾದರು ದೂರು ಬಂದಾಗ ಹುಟ್ಟಿದ ವರ್ಷವನ್ನು ಹಾಕಿದರೆ ಸಾಕು.

ಪಕ್ಷಪಾತ ಅಥವಾ ದುರುದ್ದೇಶಪೂರಿತ ವಿಷಯ

[ಬದಲಾಯಿಸಿ]

ಸಂಪಾದಕರು ಪಕ್ಷಪಾತ ಅಥವಾ ದುರುದ್ದೇಶಪೂರಿತ ವಿಷಯದ ಬಗ್ಗೆ ಚೆನ್ನಾಗಿ ಆನ್ವೇಷಣೆ ಮಾಡಿ ಅನಂತರ ಜೀವನಚರಿತ್ರಯಲ್ಲಿ ಬರೆಯಬೇಕು. ಯಾರದರು ಅವರ ಕೆಲಸಗಳನ್ನು ವೀಕ್ಷಿಸಿ ಪಕ್ಷಪಾತ ಪಾಯಿಂಟ್‌ ಹಾಕಿದಾಗ ವಿಶ್ವಾಸಾರ್ಹ ಮೂರನೇ ಪಕ್ಷದ ಮೂಲಗಳು ಪ್ರಕಟಿಸಿ ಅವರ ಉನ್ನತ ಹೆಸರನ್ನು ಉಳಿಸಬೇಕು.

ಟ್ರಿವಿಯ ವಿಭಾಗಗಳು

[ಬದಲಾಯಿಸಿ]

ಜೀವಂತ ವ್ಯಕಿಯ ಜೀವನಚರಿತ್ರೆ ಲೇಖನಗಳು ಟ್ರಿವಿಯ ವಿಭಾಗದಿಂದ ತುಂಬಿರಬಾರದು. ಈ ಲೇಖನಗಳು ಸಂಬಂಧಿತ ಮೂಲದ ಹಕ್ಕುಗಳಿಂದ ಹೊಂದಿರಬೇಕು.


BLP ಅಳಿಸುವಿಕೆಗೆ ಗುಣಮಟ್ಟಗಳು

[ಬದಲಾಯಿಸಿ]

ಅರೆ ಗಮನಾರ್ಹ BLPs ಬಗ್ಗೆ AfDs ಮುಚ್ಚುವಾಗ ನಿರ್ವಾಹಕ ಲೇಖನಕ್ಕೆ ಸಂಬಂಧ ಪಟ್ಟ ವ್ಯಕ್ತಿಯ ಇಚ್ಛೆಯನ್ನು ತಿಳಿದುಕೊಳ್ಳುವುದು ಮುಖ್ಯ. ಇಷ್ಟು ಮಟ್ಟಿಗೆ ವ್ಯಕ್ತಿಯ ಇಚ್ಛೆಯನ್ನು ತಿಳಿದುಕೊಳ್ಳಬೇಕು ಎಂಬ ಒಮ್ಮತವಿಲ್ಲ.ಆದ್ದುದರಿಂದ ಇದು ನಿರ್ವಾಹಕನ ನಿರ್ಧರದ ಮೇಲೆ ಅವಲಂಭಿಸಿರುತ್ತದೆ. ಅಳಿಸಲಾದ BLPನಲ್ಲಿ ಇರುವ ವಿಷಯವನ್ನು ಬೇರೆ ಲೇಖನಕ್ಕೆ ಸೇರಿಸಲು ಸಾಧ್ಯವಿಲ್ಲ. ಈ ನಿಯಮ ವಿಕಿಪೀಡಿಯದ ಎಲ್ಲಾ ಪುಟ್ಟಗಳಿಗೂ ಅನ್ವಹಿಸುತ್ತದೆ. ಒಂದು ವೇಳೆ ಬಿ ಎಲ್ ಪಿ(BLP)ನಲ್ಲಿ ಇರುವ ವಿಷಯವನ್ನು ಬೇರೆ ವಿಷಯದೊಂದಿಗೆ ಹಾಕಬೇಕಾದರೆ ಅದರ ಇತಿಹಾಸವನ್ನು GFDL ಮುಖಾಂತರ ಸಂರಕ್ಷಿಸಿರಬೇಕು.

ಲೇಖನ ಅಳಿಸಿದ ನಂತರ ಎ ಎಫ್ ಡಿ(AFD)ನಲ್ಲಿ ಕೃಪೆ ಖಾಲಿಮಾಡುವುದು

[ಬದಲಾಯಿಸಿ]

ಲೇಖನ ಅಳಸುವಿಕೆ ಚರ್ಚೆಯಿಂದ ಅಳಿಸಲಾದ ಜೀವಂತ ವ್ಯಕ್ತಿಯ ಜೀವನಚರಿತ್ರೆಯು AFD ಪುಟ್ಟದಿಂದ ಮತ್ತು ಸಂಬಂಧ ಪಟ್ಟ ಮೂಲಗಳಿಲ್ಲದ ಲೇಖನಗಳಿಂದ ಅಳಿಸಲಾಗುತ್ತದೆ. ಬಿ ಎಲ್ ಪಿ(BLP) ಅಳಿಸುವಿಕೆಗೆ ನಂತರ ಯಾವುದಾದರು ನಿರ್ವಾಹಕ ಆ ಲೇಖನದ ಮರುಸೃಷ್ಟಿಯಿಂದ ರಕ್ಷಿಸಲು ಆಯ್ಕೆ ಮಾಡಿಕೊಳ್ಳಬಹುದು.

ಟೆಂಪ್ಲೇಟ್ಗಳು

[ಬದಲಾಯಿಸಿ]

ಜೀವಂತ ವ್ಯಕ್ತಿಯ ಜೀವನಚರಿತ್ರೆಯು ಲೇಖನಕ್ಕೆ ಸಂಬಂಧ ಪಟ್ಟ ವ್ಯಕ್ತಿಗೆ ಅಲ್ಲದೇ ಎಲ್ಲ ಜೀವಂತ ವ್ಯಕ್ತಿಗಳಿಗೂ ಅನ್ವಹಿಸುತ್ತದೆ. ಲೇಖನದಲ್ಲಿ ಉಲ್ಲೇಖಿಸಲಾದ ವ್ಯಕ್ತಿಯ ಬಗ್ಗೆಗಿನ {{Blp}}ಯನ್ನು ಲೇಖನಗಳ ಚರ್ಚಪುಟ್ಟಕ್ಕೆ ಸೇರಿಸಲಾಗುತ್ತದೆ ಮತ್ತು ಇದು ಜೀವಂತ ವ್ಯಕ್ತಿಯ ಜೀವನಚರಿತ್ರೆಯ ಚರ್ಚಪುಟ್ಟದಲ್ಲಿ ಸೇರಿಸಲಾಗುತ್ತದೆ ಆದ್ದುದರಿಂದ ಸಂಪಾದಕರು, ಓದುಗಾರರು ಮತ್ತು ಲೇಖನಕ್ಕೆ ಸಂಬಂಧ ಪಟ್ಟ ವ್ಯಕ್ತಿಗೆ ನೀತಿಗಳ ಬಗ್ಗೆ ಎಚ್ಚರಿಕೆಯನ್ನು ನೀಡಬಹುದು. ಜನರು ಬಿ ಎಲ್ ಪಿ(BLP) ಉಲ್ಲಂಘಿಸಿದ ಸಮಸ್ಯೆಗಳನ್ನು, ನೀವು ಈ ಟೆಂಪ್ಲೆಟ್ಗಳನ್ನು ಬಳಸಬಹುದು:

  • {{Blp0}} ಮತ್ತು {{Blp0-n}}
  • {{Blp1}} ಮತ್ತು {{Blp1-n}}
  • {{Blp2}} ಮತ್ತು {{Blp2-n}}
  • {{Blp3}} ಬ್ಲಾಕ್ ನೀಡಿದಾಗ ಉಪಯೋಗಿಸಿ

{{BLPC}} ಗಮನಾರ್ಹ ಪುಟ್ಟಗಳಿಗೆ ಇದನ್ನು ಉಪಯೋಗಿಸಿ