ಈಜಿಪ್ಟಿನ ಆಡಳಿತ ವ್ಯವಸ್ಥೆ
ಸಂವಿಧಾನ: 1964ರ ಮಾರ್ಚ್ 25 ರಂದು ಜಾರಿಗೆ ಬಂದ ಸಂವಿಧಾನ ತಾತ್ಪೂರ್ತಿಕ. ಸ್ಥಾಯೀ ಸಂವಿಧಾನವೊಂದು ರಚಿತವಾಗಿ, ಸ್ವೀಕೃತವಾಗುವವರೆಗೆ ಇದು ಜಾರಿಯಲ್ಲಿರುತ್ತದೆ. ಇದರ ಪ್ರಕಾರ ಸಂಯುಕ್ತ ಅರಬ್ಬೀ ಗಣರಾಜ್ಯ ಒಂದು ಪ್ರಜಾತಾಂತ್ರಿಕ ಸಮಾಜವಾದಿ ರಾಜ್ಯ. ಎಲ್ಲ ಉತ್ಪಾದನೆ ಸಾಧನಗಳೂ ಪ್ರಜೆಗಳ ಅಧೀನವಾದವು. ಕಾನೂನಿನೆದುರು ಎಲ್ಲರೂ ಸಮಾನ; ಕಾನೂನಿನ ವ್ಯಾಪ್ತಿಗೆ ಒಳಪಟ್ಟಂತೆ ಸ್ವಾತಂತ್ರ್ಯವುಂಟು. ಎಲ್ಲ ಈಜಿಪ್ಟಿಯನ್ನರಿಗೂ ಮತಾಧಿಕಾರವಿದೆ.
ಗಣರಾಜ್ಯದ ಅಧ್ಯಕ್ಷ
[ಬದಲಾಯಿಸಿ]ಗಣರಾಜ್ಯದ ಅಧ್ಯಕ್ಷನೇ ರಾಜ್ಯದ ಮುಖ್ಯಾಧಿಕಾರಿ. ರಾಷ್ಟ್ರೀಯ ಸಭೆಗೆ ಶಾಸನಾಧಿಕಾರವಿದೆ. ಸಂವಿಧಾನಕ್ಕನುಗುಣವಾಗಿ ಕಾರ್ಯಾಂಗ ನಿಯಂತ್ರಿಸುವುದು ಈ ಸಭೆಯ ಹೊಣೆ. ಇದರ ಸದಸ್ಯರು ಸಾರ್ವತ್ರಿಕ ಚುನಾವಣೆಗಳಲ್ಲಿ ಆಯ್ಕೆ ಹೊಂದುತ್ತಾರೆ. ಗುಪ್ತ ಮತದಾನ ಪದ್ಧತಿ ಜಾರಿಯಲ್ಲಿದೆ. ಈ ಸಭೆಯ ಸದಸ್ಯನಾಗಲು ಕನಿಷ್ಠ ವಯೋಮಿತಿ 30. ಹತ್ತು ಸದಸ್ಯರನ್ನು ನೇಮಿಸುವ ಅಧಿಕಾರ ಅಧ್ಯಕ್ಷನಿಗಿದೆ. ರಾಷ್ಟ್ರೀಯ ಸಭೆಯ ಸದಸ್ಯರಲ್ಲಿ ಅರ್ಧದಷ್ಟು ಭಾಗ ಕಾರ್ಮಿಕರು ಹಾಗೂ ವ್ಯವಸಾಯಗಾರರಾಗಿರಬೇಕು. ಸಭೆಯ ಅವಧಿ ಅದರ ಪ್ರಥಮ ಅಧಿವೇಶನದಿಂದ 5ವರ್ಷ. ಅನಂತರ 60ದಿನಗಳಲ್ಲಿ ಮತ್ತೆ ಚುನಾವಣೆ ನಡೆಯಲೇಬೇಕು. ಗಣರಾಜ್ಯದ ಅಧ್ಯಕ್ಷನಿಗೆ ಸಭೆ ಕರೆಯುವ ಹಾಗೂ ಮುಕ್ತಾಯಗೊಳಿಸುವ ಅಧಿಕಾರವಿದೆ. ಆದರೆ ಅಯವ್ಯಯಕ್ಕೆ ಒಪ್ಪಿಗೆ ದೊರಕುವ ಮುನ್ನ ಅದನ್ನು ಮುಕ್ತಾಯಗೊಳಿಸುವಂತಿಲ್ಲ. ವರ್ಷಕ್ಕೊಮ್ಮೆಯಲ್ಲದೆ ಅಗತ್ಯವೆನಿಸಿದಾಗ ಅಧ್ಯಕ್ಷನಿಂದ ಅಥವಾ ಬಹು ಸದಸ್ಯರ ಆಗ್ರಹದ ಮೇರೆಗೆ ಈ ಸಭೆ ಕರೆಯಬೇಕು. ಸರ್ಕಾರ ಈ ಸಭೆಗೆ ಹೊಣೆಯಾಗಿರುತ್ತದೆ. ಪ್ರಧಾನಮಂತ್ರಿ ಹಾಗೂ ಇತರ ಮಂತ್ರಿಗಳಿಗೆ ಸಭೆಯನ್ನು ಉದ್ದೇಶಿಸಿ ಮಾತನಾಡುವ ಅಧಿಕಾರವಿದೆ. ಸದಸ್ಯರಿಗೆ ಮಂತ್ರಿಗಳನ್ನು ಪ್ರಶ್ನಿಸುವ ಹಕ್ಕು ಇದೆ. ಪ್ರಧಾನಮಂತ್ರಿ ಸಭೆಯ ಬೆಂಬಲ ಕಳೆದುಕೊಂಡಲ್ಲಿ ಗಣರಾಜ್ಯದ ಅಧ್ಯಕ್ಷನಿಗೆ ರಾಜೀನಾಮೆ ಸಲ್ಲಿಸಬೇಕಾಗುತ್ತದೆ.[೧]
ರಾಷ್ಟ್ರದ ಅಧ್ಯಕ್ಷತೆಗ
[ಬದಲಾಯಿಸಿ]ರಾಷ್ಟ್ರದ ಅಧ್ಯಕ್ಷತೆಗೆ ಅಭ್ಯರ್ಥಿಯನ್ನು ರಾಷ್ಟ್ರೀಯ ಸಭೆ ತನ್ನ ಮುಕ್ಕಾಲುಪಾಲು ಸದಸ್ಯರ ಅನುಮತಿಯೊಂದಿಗೆ ನೇಮಿಸಬೇಕು. ಆ ಅಭ್ಯರ್ಥಿ ಅನಂತರ ದೇಶದ ಮತದಾರ ನಾಗರಿಕರಿಂದ ಬಹುಮತ ಪಡೆದಲ್ಲಿ ಗಣರಾಜ್ಯದ ಅಧ್ಯಕ್ಷನಾಗಲು ಅರ್ಹ. ಅಭ್ಯರ್ಥಿಯಾದವನು ಈಜಿಪ್ಟ್ ಸಂಜಾತ ಈಜಿಪ್ಟಿಯನ್ ಆಗಿದ್ದು 35 ವರ್ಷಕ್ಕೆ ಮೇಲ್ಪಟ್ಟಿರಬೇಕು. ಅಧ್ಯಕ್ಷನ ಮೇಲೆ ಆರೋಪ ಹೊರಿಸುವ ಅಧಿಕಾರ ಇದೆ. ಸಭೆ ಬಹುಮತ ಆರೋಪ ಹೊರಿಸುವ ಅಧಿಕಾರ ಇದೆ. ಸಭೆಬಹುಮತ ಆರೋಪ ಹೊರಿಸಿದಲ್ಲಿ ಅಧ್ಯಕ್ಷ ತನ್ನ ಅಧಿಕಾರ ಕಳೆದುಕೊಳ್ಳುತ್ತಾನೆ. ಪ್ರಧಾನಮಂತ್ರಿ ಹಾಗೂ ಇತರ ಮಂತ್ರಿಗಳನ್ನು ನೇಮಿಸುವ ಹಾಗೂ ತೆಗೆಯುವ ಅಧಿಕಾರ ಅಧ್ಯಕ್ಷನದು. ತುರ್ತುಪರಿಸ್ಥಿತಿಯಲ್ಲಿ ವಿಶೇಷ ಆಜ್ಞೆ ಹೊರಡಿಸುವ ಅಧಿಕಾರವೂ ಆತನಿಗುಂಟು. ಅಂಥ ಆಜ್ಞೆಗಳನ್ನು ರಾಷ್ಟ್ರೀಯ ಆರಂಭವಾದ 15 ದಿನಗಳೊಳಗಾಗಿ ಅದರ ಮುಂದೆ ಮಂಡಿಸಬೇಕು. ಗಣರಾಜ್ಯದ ಅಧ್ಯಕ್ಷನೇ ರಾಷ್ಟ್ರೀಯ ರಕ್ಷಣಾ ಮಂಡಲಿಯ ನಿರ್ವಹಣಾಧಿಕಾರಿ ಪ್ರಧಾನಮಂತ್ರಿ, ಉಪಮಂತ್ರಿಗಳು ಹಾಗೂ ಮಂತ್ರಿಗಳನ್ನೊಳಗೊಂಡ ಸರ್ಕಾರ ಆಡಳಿತ ನಿರ್ವಹಿಸುತ್ತದೆ.ದೇಶದ ಆಡಳಿತ ಸೌಕರ್ಯಕ್ಕಾಗಿ ಅದನ್ನು ಅನೇಕ ವಿಭಾಗ ಮಾಡಲಾಗಿದೆ. ರಾಜ್ಯದ ಯೋಜನೆಗಳನ್ನು ಕಾರ್ಯಗತಗೊಳಿಸುವ ಕಾರ್ಯದಲ್ಲಿ ಈ ವಿಭಾಗಗಳು ಭಾಗವಹಿಸುತ್ತವೆ. ನ್ಯಾಯಾಧೀಶರು ತೀರ್ಪುಕೊಡುವಲ್ಲಿ ಸ್ವತಂತ್ರರಾಗಿರುತ್ತಾರೆ. ಕಾನೂನಲ್ಲದೆ ಅದರ ಮೇಲೆ ಯಾವ ನಿರ್ಬಂಧವೂ ಇಲ್ಲ.ಗಣರಾಜ್ಯದ ಅಧ್ಯಕ್ಷ ಹಾಗೂ ರಾಷ್ಟ್ರೀಯ ಸಭೆಗೆ ಸಂವಿಧಾನದಲ್ಲಿ ತಿದ್ದುಪಡಿ ಮಾಡುವ ಅಧಿಕಾರವಿದೆ.[೨]
ವಿದೇಶಾಂಗ ನೀತಿ
[ಬದಲಾಯಿಸಿ]ಈಜಿಪ್ಟಿನ ಸ್ವತಂತ್ರ ವಿದೇಶಾಂಗ ನೀತಿ ಆರಂಭವಾದದ್ದು 1952ರ ಅನಂತರ, ಮೊಟ್ಟಮೊದಲು ಈಜಿಪ್ಟಿನ ಗಮನ ಸೆಳೆದದ್ದೆಂದರೆ ಅದಕ್ಕೆ ಬ್ರಿಟನ್ ನೊಂದಿಗಿದ್ದ ಸಂಬಂಧ. 1954ರ ಒಪ್ಪಂದದಂತೆ ಬ್ರಿಟನ್ನು ಸೂಯೆeóï ಕಾಲುವೆಯಿಂದ ತನ್ನ ಸೈನ್ಯ ಹಿಂತೆಗೆದುಕೊಂಡಿತು. 1955ರ ಮತ್ತು 1956ರ ಘಟನೆಗಳ ಫಲವಾಗಿ ಈಜಿಪ್ಟ್ ಸೈನಿಕ ರಾಷ್ಟ್ರವಾಗಿ ಪರಿವರ್ತನೆ ಹೊಂದಿತು. ಈಜಿಪ್ಟಿನ ಅಲಿಪ್ತ ನೀತಿಗೂ ಸೂಯೆಜ್ó ಘಟನೆಯೇ ಕಾರಣ. ಬಾಗ್ದಾದ್ ಒಪ್ಪಂದ, ಬಾಂಡುಂಗ್ ಸಮ್ಮೇಳನ ಹಾಗೂ ಅಮೆರಿಕದ ಮನೋವೃತ್ತಿ-ಇವುಗಳಿಂದ ಈಜಿಪ್ಟಿನ ಧೋರಣೆಯಲ್ಲಿ ಸಂಭವಿಸಿದ ಬದಲಾವಣೆ ಅಗಾಧ. ಮಧ್ಯಪ್ರಾಚ್ಯಕ್ಕೆ ಪಶ್ಚಿಮ ರಾಷ್ಟ್ರಗಳ ಸೈನಿಕ ಸಹಾಯ ಅಗತ್ಯವೆಂದು ಪಾಶ್ಚಾತ್ಯ ರಾಷ್ಟ್ರಗಳ ವಾದಕ್ಕೆ ಈಜಿಪ್ಟಿನ ಒಪ್ಪಿಗೆಯಿಲ್ಲ. 1955ರ ಬಾಂಡುಂಗ್ ಸಮ್ಮೇಳನದಲ್ಲಿ ಈಜಿಪ್ಟ್ ಭಾರತದ ಅಲಿಪ್ತ ನೀತಿಯಿಂದ ಪ್ರಭಾವಿತವಾಯಿತು.1955ರವರೆಗೆ ಅಮೆರಿಕದಿಂದ ಸಾಮಗ್ರಿ ಹಾಗೂ ಶಸ್ತ್ರಗಳನ್ನು ಪಡೆದು ಇಸ್ರೇಲಿನ ವಿರುದ್ಧ ರಕ್ಷಣೆ ಪಡೆಯಲು ಪ್ರಯತ್ನ ನಡೆಸುತ್ತಿದ್ದ ಈಜಿಪ್ಟ್ ಅದು ದೊರೆಯದಂತೆ ಕಂಡುಬಂದಾಗಲಿ ಸೋವಿಯತ್ ಬಣದತ್ತ ತಿರುಗಿದ್ದು. ಅದು ಜೆóಕೊಸ್ಲೊವಾಕಿಯದೊಂದಿಗೆ ಶಸ್ತ್ರಾಸ್ತ್ರ ಒಪ್ಪಂದವನ್ನು ಮಾಡಿಕೊಂಡದ್ದು 1955ರಲ್ಲಿ.
ಈಜಿಪ್ಟ್ ಆಸ್ವಾನ್ ಕಟ್
[ಬದಲಾಯಿಸಿ]ಮೊದಲಿಂದಲೂ ಈಜಿಪ್ಟ್ ಆಸ್ವಾನ್_ಕಟ್ಟೆಗಾಗಿ ಪಶ್ಚಿಮ ರಾಷ್ಟ್ರಗಳಿಂದ ಹಣ ಸಹಾಯ ಕೇಳುತ್ತಿತ್ತು. ಅಮೆರಿಕ, ಬ್ರಿಟನ್ ಹಾಗೂ ವಿಶ್ವಬ್ಯಾಂಕ್ ಹಣ ಒದಗಿಸಬೇಕೆಂದು ಇದರ ಇಚ್ಛೆ. ಆದರೆ ಅಮೆರಿಕದ ನೆರವು ಮುಂದುವರಿಯಲಿಲ್ಲ. ಈಜಿಪ್ಟ್ ಸೋವಿಯತ್ ಬಣದ ನೆರವನ್ನು ಪಡೆದದ್ದೇ ಇದಕ್ಕೆ ಕಾರಣ. ಸೂಯೆಜ್ ಕಾಲುವೆಯ ರಾಷ್ಟ್ರೀಕರಣವಾದದ್ದರ ಪರಿಣಾಮವಾಗಿ ಇಂಗ್ಲೆಂಡ್, ಫ್ರಾನ್ಸ್. ಇಸ್ರೇಲ್ಗಳು ಈಜಿಪ್ಟಿನ ಮೇಲೆ ದಾಳಿ ಮಾಡಿದುವು. ಇದರಿಂದಾಗಿ ಈಜಿಪ್ಟ್-ಸೋವಿಯತ್ ಸಂಬಂಧ ಇನ್ನೂ ಬಲವಾಯಿತಾದರೂ ಈಜಿಪ್ಟ್ ತನ್ನ ಅಲಿಪ್ತ ನೀತಿ ಬಿಟ್ಟುಕೊಟ್ಟಿಲ್ಲ.ಅನಂತರ ಪದೇ ಪದೇ ಇಸ್ರೇಲಿನ ಆಕ್ರಮಣಕ್ಕೊಳಗಾಗುತ್ತ ಬಂದಿರುವ ಈಜಿಪ್ಟ್ ತನ್ನ ಹೋರಾಟ ಮುಂದುವರಿಸುತ್ತಲೇ ಬಂದಿದೆ. ಇಸ್ರೇಲು ಗಾeóÁ ನೆಲಪಟ್ಟಿಯನ್ನೂ ಸಿನಾಯ್ ಪ್ರದೇಶವನ್ನೂ ಆಕ್ರಮಿಸಿಕೊಂಡು ಸೂಯೆeóï ದಡದ ವರೆಗೂ ಬಂದು ನಿಂತಿತು.
ಸಾಮಾಜಿಕ ವ್ಯವಸ್ಥೆ
[ಬದಲಾಯಿಸಿ]ಈಜಿಪ್ಟಿನ ಸ್ವಾಭಾವಿಕ ವಿಭಾಗಗಳು ಇದರ ಸಾಮಾಜಿಕ ವಿಭಾಗಗಳು ಇದರ ಸಾಮಾಜಿಕ ಜೀವನದ ಮೇಲೂ ತಮ್ಮ ಪ್ರಭಾವ ಬೀರಿವೆ. ನೈಲ್ನದಿಯ ಮಹಾಪೂರವೂ ಹಳೆಯ ಕಾಲದ ನೀರಾವರಿ ಪದ್ಧತಿಯೂ ಆಗಿನ ಸಾಮಾಜಿಕ ಸಂಘಟನೆಗಳನ್ನು ರೂಪಿಸಲು ಕಾರಣವಾಗಿದ್ದುವು. ಜಮೀನು ಗ್ರಾಮೀಣ ಗುಂಪುಗಳಿಗೆ ಸೇರಿತ್ತು. ಉಗಿಪಂಪುಗಳನ್ನು ನೀರಾವರಿಗಾಗಿ ಬಳಸಲಾರಂಭಿಸಿದ್ದು ಹತ್ತೊಂಬತ್ತನೆಯ ಶತಮಾನದಿಂದೀಚೆಗೆ. ಅನಂತರ ಅನೇಕ ಸಾಧನೆಗಳು ಬಳಕೆಗೆ ಬಂದುವು. ಈಗ ಸಿದ್ಧವಾಗಿರುವ ಅಸ್ವಾನ್ ಕಟ್ಟೆ ದೇಶದ ಸಾಮಾಜಿಕ ರಚನೆಯನ್ನೇ ಬದಲಾಯಿಸಿದೆ. ನೈಲ್ನದಿಯ ಪ್ರವಾಹವನ್ನು ತಡೆಹಿಡಿಯಲಾದದ್ದರಿಂದ ವ್ಯವಸಾಯಕ್ಕೆ ಹೆಚ್ಚು ಅನುಕೂಲವುಂಟಾಗಿದೆ. ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿ ಉದ್ಯೋಗಗಳಿಗಾಗಿ ಉಪಯೋಗಿಸಲಾಗುತ್ತಿದೆ.ಮೊದಲಿನ ಸಾಮಾಜಿಕ ರಚನೆ ಇಂದು ಸಡಿಲವಾಗುತ್ತದೆ. ಪ್ರವಾಹ ಭಯ ಇಲ್ಲದ್ದರಿಂದ ಈಗ ಎಲ್ಲಿ ಬೇಕಾದರೂ ವಾಸಿಸುವುದು ಸಾಧ್ಯ. ಇದರಿಂದಾಗಿ ಹೊಸ ಹೊಸ ಪಟ್ಟಣಗಳೇಳುತ್ತಿವೆ. ಆದರೆ ಗ್ರಾಮಗಳು ಇಂದಿಗೂ ಸಮಾಜದ ಮೂಲಘಟಕಗಳು. ಜಮೀನುದಾರಿ ಪದ್ಧತಿ ಇಂದು ಇಲ್ಲ. ಜಮೀನುಗಳನ್ನು ವ್ಯವಸಾಯಗಾರರಲ್ಲಿ ಹಂಚಲಾಗಿದೆ. ಆದರೆ ಬೆಳೆಯುತ್ತಿರುವ ಜನಸಂಖ್ಯೆಯದು ಒಂದು ಸಮಸ್ಯೆ.ಮೊದಲಿನಿಂದಲೂ ಈಜಿಪ್ಟಿನ ಸಮಾಜದಲ್ಲಿ ಕುಟುಂಬದ್ದು ಮಹತ್ತ್ವದ ಪಾತ್ರ. ಸಮಾಜದ ಅನೇಕ ಕಾರ್ಯಗಳನ್ನು ನಿರ್ವಹಿಸುವ ಹೊಣೆ ಅದರದೇ. ಕುಟುಂಬ ರಾಜಕೀಯ ಶಕ್ತಿಯ ಕೇಂದ್ರವೂ ಹೌದು. ವ್ಯಕ್ತಿತ್ವ ರೂಪುಗೊಳ್ಳಲು ಕುಟುಂಬವೇ ಸಾಧನ. ಕುಟುಂಬದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಪ್ರತಿಯೊಬ್ಬನ ಕರ್ತವ್ಯ.
ಪಾಶ್ಚಾತ್ಯ ಸಂಸ್ಕøತಿ ಶಿಕ್ಷಣ
[ಬದಲಾಯಿಸಿ]ಪಾಶ್ಚಾತ್ಯ ಸಂಸ್ಕøತಿ ಶಿಕ್ಷಣಗಳ ಪ್ರಭಾವದಿಂದ ಪಟ್ಟಣಗಳ ಸ್ಥಿತಿಯಲ್ಲೂ ಜೀವನಕ್ರಮದಲ್ಲೂ ಬದಲಾವಣೆಯಾಗುತ್ತಿದೆ. ಈಜಿಪ್ಟಿಯನ್ನರು ಪಟ್ಟಣಗಳಲ್ಲಿ ದೊರಕುವ ಶೈಕ್ಷಣಿಕ ಹಾಗೂ ಆರ್ಥಿಕ ಸೌಲಭ್ಯಗಳಿಗೆ ಮಾರು ಹೋಗುತ್ತಿದ್ದಾರೆ. ಪಾಶ್ಚಾತ್ಯ ಮಾದರಿಯ ಸಂಸ್ಥೆಗಳು ಪಟ್ಟಣಗಳಲ್ಲಿ ಬೇರೂರುತ್ತಿವೆ. ಆಧುನಿಕ ಶಾಲೆಗಳಿಗೂ ಹೊಸ ಔದ್ಯೋಗಿಕ ಕೇಂದ್ರಗಳಿಗೂ ವಾಣಿಜ್ಯ ಶಾಖೆಗಳಿಗೂ ಪಟ್ಟಣಗಳೇ ಕೇಂದ್ರ. ಹೀಗಾಗಿ ಪಟ್ಟಣಗಳ ಹೊಟ್ಟೆ ಉಬ್ಬುತ್ತಿವೆ. ಕೈರೊ, ಅಲೆಕ್ಸಾಂಡ್ರಿಯ ಮುಂತಾದ ಪಟ್ಟಣಗಳು ಹಳತು-ಹೊಸತುಗಳ ಸಂಗಮ. ಒಂದೆಡೆ ಹಳ್ಳಿಗರ ಹಳೆ ಪದ್ಧತಿ; ಇನ್ನೊಂದೆಡೆ ಪಟ್ಟಣಿಗರ ಹೊಸ ಜೀವನ ರೀತಿ. ಈ ಎರಡಕ್ಕೂ ಅಂತರವಿದೆ. ಹೊಸ ವಾತಾವರಣದಲ್ಲಿ ಬೆಳೆದ ತರುಣರ ಪೀಳಿಗೆಯಲ್ಲಿ ಹೆಚ್ಚು ವಿಚಾರಶೀಲತೆಯನ್ನೂ ಕ್ರಿಯಾಶೀಲತೆಯನ್ನೂ ಕಾಣಬಹುದು. ಸಮಾಜದಲ್ಲಿ ಹೆಣ್ಣುಮಕ್ಕಳ ಸ್ಥಾನಮಾನಗಳೂ ಸುಧಾರಿಸುತ್ತಿವೆ. ಅವರೂ ವೈದ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ವೃತ್ತಿ ಹಿಡಿಯುತ್ತಿದ್ದಾರೆ.
ಆರ್ಥಿಕ ಪ್ರಗತಿ
[ಬದಲಾಯಿಸಿ]ಆರ್ಥಿಕ ಪ್ರಗತಿ, ಜನಜೀವನ ಮಟ್ಟದ ಸುಧಾರಣೆ. ಸಕಲರಿಗೆ ಶಿಕ್ಷಣ, ರಾಜಕೀಯ ಒಗ್ಗಟ್ಟು ಮುಂತಾದವುಗಳನ್ನು ಸಾಧಿಸಲು ಈಜಿಪ್ಟ್ ಸರ್ಕಾರ ಶ್ರಮಿಸುತ್ತಿದೆ. ಕಳೆದ ದಶಕದಲ್ಲಿ ಶಾಲೆ ಮತ್ತು ವಿಶ್ವವಿದ್ಯಾಲಯಗಳ ಕ್ಷೇತ್ರವನ್ನು ವಿಸ್ತರಿಸಲಾಯಿತು. 1961ರಲ್ಲಿ ಆಯವ್ಯಯದ 16.5% ರಷ್ಟು ಭಾಗ ಶಿಕ್ಷಣಕ್ಕಾಗಿ ವ್ಯಯವಾಯಿತು. ಆದರೂ ನಿರ್ದಿಷ್ಟ ಗುರಿಯನ್ನೂ ಮುಟ್ಟಿಲ್ಲ.ಪ್ರಜೆಗಳು ರಾಜಕೀಯದಲ್ಲಿ ಭಾಗವಹಿಸಲು ನಡೆಸಿದ ಪ್ರಯತ್ನಗಳು ವಿಫಲಗೊಳ್ಳುತ್ತಿದೆ. ಕೆಲ ಸಾಮಾಜಿಕ ಹಾಗೂ ಧಾರ್ಮಿಕ ಪಕ್ಷಗಳು ಪ್ರಜಾತಂತ್ರವನ್ನೂ ಪಾಶ್ಚಾತ್ಯ ಶಿಕ್ಷಣಪದ್ಧತಿಯನ್ನೂ ವಿರೋಧಿಸುತ್ತವೆ. ಈ ರಾಷ್ಟ್ರದ ಪ್ರಗತಿಗೆ ಇಸ್ರೇಲ್ ವಿರಸವೊಂದು ದೊಡ್ಡತಡೆ. ಈಜಿಪ್ಟಿನ ಆಡಳಿತ ಇಂದು ಆಂತರಿಕ ವಿರೋಧವನ್ನೂ ನೆರೆದೇಶದ ವೈರವನ್ನೂ ಪಾಶ್ಚಾತ್ಯ ರಾಷ್ಟ್ರಗಳ ಅಸಮಾಧಾನವನ್ನೂ ಏಕಕಾಲದಲ್ಲಿ ಎದುರಿಸಬೇಕಾಗಿದೆ.
ಉಲ್ಲೇಖಗಳು
[ಬದಲಾಯಿಸಿ]