ಕಡಲ ಗಿಣಿ
ಕಡಲ ಗಿಣಿ
[ಬದಲಾಯಿಸಿ]ಕೆರಾಡ್ರಿಫಾರ್ಮಿಸ್ ಗಣದ ಆಲ್ಸಿಡೀ ಕುಟುಂಬಕ್ಕೆ ಸೇರಿದ ಹಕ್ಕಿ (ಪಫಿನ್). ಇದರ ಆಕಾರ ಗಿಣಿಯಂತಿದ್ದು ಕಡಲ ಸಮೀಪದಲ್ಲಿ ವಾಸಮಾಡುವುದರಿಂದ ಇದಕ್ಕೆ ಈ ಹೆಸರು. ಇದು ಸದಾ ನೀರಿನಲ್ಲಿ ಬೆಂಡಿನಂತೆ ತೇಲುತ್ತ-ಮುಳುಗುತ್ತ ಕಾಲ ಕಳೆಯುತ್ತದೆ. ಉತ್ತರ ಮತ್ತು ದಕ್ಷಿಣ ಅಮೆರಿಕದ ಕೆಲವು ಪ್ರದೇಶದಲ್ಲಿ ಇದು ಸಾಮಾನ್ಯ. ಇದು ಆಕ್ ಹಕ್ಕಿಯ ಸಂಬಂಧಿ. ಇದರ ಕಾಲುಗಳು ಬಹಳ ಹಿಂದಕ್ಕಿರುವುದರಿಂದ ಭೂಮಿಯ ಮೇಲೆ ನಿಂತಾಗ ಕುಳಿತ ಮನುಷ್ಯನಂತೆ ಕಾಣುವುದು. ಹಕ್ಕಿ ದೊಡ್ಡ ಗಾತ್ರದ್ದು. ತಲೆಯೂ ಸಹ ಶರೀರಕ್ಕೆ ಹೋಲಿಸಿದರೆ ಮಿತಿಮೀರಿ ಬೆಳೆದಂತೆ ಕಾಣುತ್ತದೆ. ತಲೆಯ ಇಕ್ಕೆಡೆಗಳಲ್ಲಿ ಬಿಳಿಮಚ್ಚೆಯಿದೆ. ಕಣ್ಣಿನ ಹಿಂಭಾಗದಲ್ಲಿ ಬಂಗಾರದ ಬಣ್ಣದ ಪುಕ್ಕಗಳಿವೆ. ಕೊಕ್ಕು ತುಂಬ ದೊಡ್ಡದಾಗಿದ್ದು ಮುಖವಾಡದಂತೆ ಕಾಣುತ್ತದೆ. ಇದರಿಂದಾಗಿ ಹಕ್ಕಿ ಅಷ್ಟು ಆಕರ್ಷಕವಾಗಿಲ್ಲ. ಕೊಕ್ಕಿನ ವಿಚಿತ್ರವಾದ ರಚನೆಗೆ ಕಾರಣ ಗೊತ್ತಿಲ್ಲ. ಇದು ಸಮುದ್ರದಡದಲ್ಲಿ ಗೂಡನ್ನು ಕಟ್ಟಿ ಮೊಟ್ಟೆಯಿಡುತ್ತದೆ. ಸಮುದ್ರದಲ್ಲಿ ಸಿಗುವ ಮೀನು ಮುಂತಾದ ಪ್ರಾಣಿಗಳು[೧][೨]
ಕಡಲ ಗಿಣಿಯ ಆಹಾರ
[ಬದಲಾಯಿಸಿ]ಕಡಲ ಗಿಣಿಗಳು ಯಾವಾಗಲೂ ನೀರಲ್ಲಿ ವಾಸಮಾಡುವುದರಿಂದ ಈಜುವುದಕ್ಕೆ ಅನುಕೂಲಕರವಾದ ಅಂಗರಚನೆಗಳನ್ನು ಪಡೆದಿವೆ. ದೋಣಿಯಾಕಾರದ ದೇಹ, ಜಾಲಪಾದಗಳುಳ್ಳ, ಕಾಲುಗಳು-ಇವು ಈಜಲು ಸಹಕಾರಿಯಾಗಿವೆ. ಮೈತುಂಬ ಪುಕ್ಕಗಳಿರುವುದಲ್ಲದೆ ಚರ್ಮದ ಅಡಿಯಲ್ಲಿ ಒಂದು ಪದರ ಕೊಬ್ಬು ಇರುವುದರಿಂದ ದೇಹದಲ್ಲಿ ಉಷ್ಣತೆಯನ್ನು ಕಾಪಾಡುವುದು ಸುಲಭ. ಅಲ್ಲದೆ ಇವು ಯಾವಾಗಲೂ ಈಜುತ್ತಲೇ ಇರುವುದರಿಂದ ರೆಕ್ಕೆಗಳು ಅನುಪಯುಕ್ತವಾಗಿ ಕ್ಷೀಣಗೊಂಡಿವೆ.[೩][೪]
ಉಲ್ಲೇಖಗಳು
[ಬದಲಾಯಿಸಿ]- ↑ https://www.tripadvisor.in/Hotel_Review-g2627607-d595664-Reviews-Sea_Parrot_Ocean_View_Manor-Indian_Brook_Cape_Breton_Island_Nova_Scotia.html
- ↑ http://www.seaparrotinn.com/
- ↑ https://www.tripadvisor.in/Hotel_Review-g2627607-d595664-Reviews-Sea_Parrot_Ocean_View_Manor-Indian_Brook_Cape_Breton_Island_Nova_Scotia.html
- ↑ http://www.seaparrotinn.com/