ಸದಸ್ಯ:Gururaj veerabhadrappa Ghattad

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುರುರಾಜ ಘಟ್ಟದ ಇವರು ‌೧೫ ಅಕ್ಟೋಬರ್ ೧೯೮೩ ರಂದು ಬಾಗಲಕೋಟೆ ಜಿಲ್ಲೆಯ ಚಿಕ್ಕಶೆಲ್ಲಿಕೇರಿ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ವೀರಭದ್ರಪ್ಪ ತಾಯಿ ಕಸ್ತೂರಿಬಾಯಿ. ತಂದೆ ಅಂಚೆ ಕಛೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರು ಆಗಿ ಕಾರ್ಯನಿರ್ವಹಿಸಿದರು. ಶ್ರೀ ಗುರುರಾಜ ಅವರು ಚಿಕ್ಕಂದಿನಿಂದಲೇ ತುಂಬಾ ಚಟುವಟಿಕೆಯಿಂದ ಸದಾಕಾಲವೂ ಕೆಲಸದಲ್ಲಿಯೇ ಇರುತ್ತಿದ್ದರು.ಇವರ ಪ್ರಾಥಮಿಕ ವಿದ್ಯಾಭ್ಯಾಸ ಸ್ವಂತ ಊರಾದ ಚಿಕ್ಕಶೆಲ್ಲಿಕೇರಿಯಲ್ಲಿಯೇ ಮುಗಿಸಿದರು. ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಹಾಗು ಕಾಲೆಜು ಶಿಕ್ಷಣವನ್ನು ನೆರೆಯ ಊರಾದ ನೀರಬೂದಿಹಾಳದಲ್ಲಿ ಮುಗಿಸಿದರು. ಪದವಿಯನ್ನು ಬಾಗಲಕೋಟೆಯ ಶ್ರೀ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮುಗಿಸಿದರು. ಇವರು ಉದಯ ಟಿ ವಿ ಯ ಅಕ್ಷರಮಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇವರು ತಮ್ಮ ಬಿ ಎಡ್ ಪದವಿಯನ್ನು ಜಮಖಂಡಿಯ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯವದಲ್ಲಿ ಪೂರೈಸಿದರು. ಇವರ ಧರ್ಮಪತ್ನಿ ಶ್ರೀಮತಿ ಸೀತಾಗುರುರಾಜ ಮತ್ತು ಪುತ್ರಿ ತೇಜಶ್ವಿನಿ‌.ಪುತ್ರ ಸೃಜನ್ ಚಿಕ್ಕ ಕುಟುಂಬ.ಇವರು ನನ್ನೊಲವೆ,ಬೆಳದಿಂಗಳು,ಹಸಿ ಮನಸಿನ ಹುಸಿ ನಗೆ,ಮನಸಿನ ಕತ್ತಲು,ನೆನಪಿನಂಗಳ ಮುಂತಾದ ಕವನ ಸಂಕಲನಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಇವರಿಗೆ ೨೦೧೬-೧೭ ನೇ ಸಾಲಿನ "ಯುವ ಕವಿಗಳು" ಎಂಬ ಪ್ರಶಸ್ತಿಗೆ ಬಾಜನರಾಗಿದ್ದಾರೆ.ಇವರು ಜೀವಶಾಸ್ತ್ರದಲ್ಲಿ ಎಮ್ ಎಸ್ ಸಿ ಪದವಿಯನ್ನು ಪಡೆದಿದ್ದಾರೆ. ಸಕಲ ಕಲಾ ವಲ್ಲಭ ಎಂದು ಇವರ ಗೆಳೆಯರ ಬಳಗದವರು ಪ್ರೀತಿಯಿಂದ ಕರೆಯುತ್ತಾರೆ.ಸಾಹಿತ್ಯ. ಸಂಗೀತ ಚಿತ್ರಕಲೆ,ನಿರೂಪಣೆ.ಕಾರ್ಯಕ್ರಮ ಸಂಯೋಜನೆ ಮುಂತಾದ ಸಮಾಜ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಸದ್ಯ ಇವರು ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮೆಳ್ಳಿಗೇರಿ. ತಾಲೂಕು ಮುಧೋಳ ಇಲ್ಲಿ ವಿಜ್ಞಾನ ಸಹ ಶಿಕ್ಷಕರಾಗಿ ಸುಮಾರು ಹತ್ತು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳಿಗೆ ನೀತಿ ಶಿಕ್ಷಣ, ಆರೋಗ್ಯ ಶಿಕ್ಷಣ,ವ್ಯಕ್ತಿತ್ವ ಸುಧಾರಣೆ, ಸಾಮಾಜಿಕ, ಆರ್ಥಿಕ, ಮಾನಸಿಕ ವಿಷಯಗಳ ಬಗ್ಗೆಯೂ ಬೊಧನೆ ಮಾಡಿ ಶಾಲೆಯ ಎಲ್ಲ ಮಕ್ಕಳಿಗೂ ಇಷ್ಟವಾದ ಗುರುಗಳಾಗಿದ್ದಾರೆ.ಇವರ ನಿಸ್ವಾರ್ಥ ಸೇವೆ ಶ್ಲಾಘನೀಯ.ಇವರು‌ ನಾಟಕಗಳನ್ನು ಬರೆದಿದ್ದಾರೆ ಹಾಗೂ ಅಭಿನಯಿಸಿದ್ದಾರೆ.ಇವರ ನನ್ನೊಲವೆ ಕವನ ಸಂಕಲನದಲ್ಲಿನ ಹಲವಾರು ಗೀತೆಗಳ ಸ್ವತಃ ದ್ವನಿಮುದ್ರಿಸಿ ಬಿಡುಗಡೆಗೊಳಿಸಿದ್ದಾರೆ. ಇವರ ನಿಷ್ಟಗೆ ಕರ್ನಾಟಕ ಸರ್ಕಾರ ಸಾಹಿತಿಗಳ ಗುಂಪಿಗೆ ಸೇರಿಸುವುದೊಂದೆ ಬಾಕಿ ಉಳಿದಿದೆ.೨೦೦೭ ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯನ್ನು ಮುಧೋಳಕ್ಕೆ ಮೊಟ್ಟಮೊದಲ ಬಾರಿಗೆ ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಗೆಳೆಯರ ಜೊತೆ ಹಲವಾರು ಕಾರ್ಯಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿದ್ದಾರೆ.ಇವರು ತಮ್ಮ ಜೀವನದ ಅಮೂಲ್ಯ ರತ್ನವಾದ ತಮ್ಮ ಪೂಜ್ಯ ತಂದೆಯವರನ್ನು ದಿನಾಂಕ 28-05-2022 ರಂದು ಕಳೆದುಕೊಂಡರು, ತಡೆದುಕೊಳ್ಳಲಾರದಷ್ಟು ದುಃಖ ಅನುಭವಿಸಲಾರದ ನೋವು ಅವರನ್ನು ಕಾಡಿತು ಹಾಗೂ ತುಂಬಾ ನಲುಗಿಹೋದರು. ಆಸರೆಯಾಗಿದ್ದ ಅಪ್ಪಾಜಿ ಒಮ್ಮೆಲೆ ಅವರನ್ನು ಅಗಲಿದಾಗ ತುಂಬಾ ನೊಂದುಕೊಂಡು ಅವರ ನೆನಪಿನಲ್ಲೇ ಜೀವನ ನಡೆಯುತ್ತಿದೆ. ದೇವರು ತುಂಬಾ ಕ್ರೂರಿ ಎನ್ನುವ ಸತ್ಯ ಮಾನವರಿಕೆಯಾಗಿ ಮಾನಸಿಕವಾಗಿ ಕುಗ್ಗಿಹೋದರು. ಅವರ ನಡೆ, ನುಡಿ, ಅಚಾರ, ವಿಚಾರ, ಆತ್ಮ ವಿಶ್ವಾಸ, ಎಲ್ಲವೂ ನೆನಪಾಗಿ ಹಾಗೂ ಅವರ ವ್ಯಕ್ತಿತ್ವ ಎಲ್ಲವೂ ನೆನೆಪಿನ ಅಂಗಳದಲ್ಲಿ ಅಚ್ಚಳಿಯದಂತೆ ಉಳಿದುಹೋಯಿತು. ಮರೆಯಲಾಗದ ಮಾಣಿಕ್ಯ ಮರೆಯಾಯಿತು. ಅಪ್ಪಾ ಮತ್ತೊಮ್ಮೆ ಬಾರೋ ಅನ್ನೋ ಆಸರೆಯ ಕೂಗನ್ನು ಆಶ್ರಯಿಸಿ ಬದುಕಬೇಕಾಗಿದೆ.