ರೋಟ ವೈರಸ್
'ರೋಟ ವೈರಸನ್ನು ೧೯೭೩ರಲ್ಲಿ ರೂಥ್ ಮತ್ತು ತಂಡದಿಂದ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಿಂದ ಕಂಡುಹಿಡಿದರು. ಈ ಸಮಯದಲ್ಲಿ ಆಸ್ಫತ್ರೆಗೆ ಸೇರುವ ಶೇಕಡ ಐವತ್ತರಷ್ಟು ಜನ ಈ ವೈರಸ್ಸಿನ ದಾಳಿಗೆ ತುತ್ತಾಗಿದ್ದರು. ಈ ವೈರಸ್ಸಿನಲ್ಲಿ ಏಂಟು ಬಗೆಗಳಿವೆ,ಅವುಗಳೆಂದರೆ ಏ,ಬಿ,ಸಿ,ಡಿ,ಈ,ಎಫ಼್,ಜಿ ಮತ್ತು ಏಚ್ ರೋಟ ವೈರಸ್ ಗಳಿವೆ.ಇದು ರಿಯೋವಿರಿಡೆಯೆಂಬ ಎರಡು ಕಂಬದ ಅರ್.ಎನ್.ಎ (ರೈಬೋ ನ್ಯೂಕ್ಲಿಕ್ ಆಮ್ಲ) ವೈರಸ್ಸಿನ ಜಾತಿಗೆ ಸೇರಿದೆ. ಈ ವೈರಸ್ ಪ್ರಾಣಿಗಳಲ್ಲಿಯೂ ಸಹ ಸೋಂಕನುಂಟುಮಾಡುತ್ತದೆ. ಈ ವೈರಸ್ ಚಿಕ್ಕ ಮಕ್ಕಳಲ್ಲಿ ಬಹಳ ಹಾನಿಯನ್ನು ಉಂಟು ಮಾಡುತ್ತದೆ. ಕ್ರಮೇಣ,ಪ್ರಪಂಚದಲ್ಲಿನ ಎಲ್ಲಾ ಮಕ್ಕಳು,ಐದು ವರ್ಷ ತುಂಬುವ ಮೊದಲೇ ಈ ವೈರಸ್ಸಿನ ಹಾನಿಗೊಳಗಾಗುತ್ತಾರೆ. ರೋಟ ವೈರಸ್ ಸಾಮಾನ್ಯವಾಗಿ ಎಳೆಯ ಮಕ್ಕಳಲ್ಲಿ ಅತಿರೇಕದ ವಾಂತಿ,ಅತಿಸಾರ ಮತ್ತು ಬೇದಿಯನ್ನು ಉಂಟುಮಾಡುತ್ತದೆ. ವಯಸ್ಕರಲ್ಲಿ ಈ ವೈರಸ್ ತುಂಬಾ ಕಡಿಮೆ ಕ್ರಮೇಣದಲ್ಲಿ ಸೋಂಕನ್ನು ಉಂಟುಮಾಡುತ್ತದೆ. ಈ ವೈರಸ್ ಸಣ್ಣಕರುಳಿನಲ್ಲಿರುವ ಜೀವಕೋಶಗಳನ್ನು ನಾಶ ಮಾಡಿ 'ರೋಟವೈರಸ್ ಗ್ಯಾಸ್ಟ್ರೊಎನ್ಟರಿಟಿಸ್ ರೋಗವನ್ನು ಉಂಟುಮಾಡುತ್ತದೆ. ಚಿಕ್ಕಮಕ್ಕಳಲ್ಲಿ ರೋಟ ವೈರಸ್ ಸಾಮಾನ್ಯವಾಗಿ ಒಂದು ಸರಳ ಖಾಯಿಲೆಯಾಗಿದ್ದರು,ಬಹಳಷ್ಟು ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಅಮೇರಿಕದಲ್ಲಿ ಈ ಖಾಯಿಲೆ ಬಹಳ ಮಾರಣಾಂತಿಕವಾಗಿ ತುಂಬ ಜನರನ್ನು ಬಲಿಪಡಿಯುತ್ತಿದ್ದರಿಂದ ಅಲ್ಲಿನ ಸರ್ಕಾರ, ಈ ಖಾಯಿಲೆಗೆ ಪುನರ್ಜಲೀಕರಣ ಚಿಕಿತ್ಸೆಯನ್ನು ಕೊಡಲು ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ತೆರೆಯಿತು.
ಚಿಹ್ನೆಗಳು ಮತ್ತು ರೋಗಲಕ್ಷಣಗಳು
[ಬದಲಾಯಿಸಿ]"'ರೋಟ ವೈರಸ್ ಗ್ಯಾಸ್ಟ್ರೊಎನ್ಟರಿಟಿಸ್" ಖಾಯಿಲೆ,ಅಲ್ಪದಿಂದ ತೀವ್ರ ಜ್ವರವನ್ನು ಉಂಟುಮಾಡುತ್ತದೆ,ಜೊತೆಯಲ್ಲಿ ಬೇದಿ,ಅತಿಸಾರ,ವಾಂತಿ ಮತ್ತು ಆಯಾಸವನ್ನು ಉಂಟುಮಾಡುತ್ತದೆ.ಮನುಷ್ಯನ ದೇಹದಲ್ಲಿಈ ವೈರಸ್ಸಿನ ಬೆಳವಣಿಗೆಯ ಕಾಲ ಎರಡು ದಿನ ಇರುತ್ತದೆ,ಆನಂತರ ಖಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.ಈ ಜ್ವರದ ಸಮಯ ಬಹಳ ಕಡಿಮೆ ಇರುತ್ತದೆ.ಈ ಖಾಯಿಲೆಯ ಮುಖ್ಯ ಪರಿಣಾಮಗಳೆಂದರೆ ವಾಂತಿ ಹಾಗು ನಾಲ್ಕರಿಂದ ಎಂಟು ದಿನಗಳ ಕಾಲ ನಿಲ್ಲದ ಬೇದಿ.ನಿರ್ಜಲೀಕರಣ[೧],ಈ ಕಾಯಿಲೆಯ ಮೂಖ್ಯ ಲಕ್ಷಣ ಹಾಗೂ ಇದು ಸಾವನ್ನು ಸಹ ತರಬಹುದು.'ರೋಟ ವೈರಸ್-ಎ ಮನುಷ್ಯನ ಜೀವನದಲ್ಲಿ ಯಾವಗಲಾದರು ಬರಬಹುದು;ಮೋದಲು ಅವು ಲಕ್ಷಣಳನ್ನು ತೋರಿಸುತ್ತವೆ.ನಮ್ಮ ದೇಹ ವೈರಸ್ಸಿನಿಂದ ಸಹಾಯ ಮಾಡುವುದರಿಂದ,ಪದೆ-ಪದೆ ಈ ಖಾಯಿಲೆಗೆ ತುತ್ತಾದರು ಸಹ ತುಂಬ ಕಡಿಮೆ ಅಥವ ಯಾವುದೆ ರೀತಿಯ ಸಹ್ನೆಗಳನ್ನು ತೋರಿಸದೆ ಸಹ ಇರಬಹುದು.ಆದರು ಏರಡು ವರುಷಗಳಿಗಿಂತ ಕಡಿಮೆ ವಯಸ್ಸಿನಲ್ಲಿರುವ ಮಕ್ಕಳಲ್ಲಿ ಈ ಖಾಯಿಲೆ ತುಂಬ ತೊಂದರೆಯನ್ನು ಉಂಟುಮಾಡಬಹುದು ಮತ್ತುಈ ಖಾಯಿಲೆಯ ಪರಿಣಾಮಗಳು,೪೫ ವಯಸ್ಸಿನವರೆಗು ಸರಿಪ್ರಮಾಣದಲ್ಲಿ ಇಳಿಯುತ್ತಾ ಹೋಗುತ್ತದೆ.ಚಿಕ್ಕಮಕ್ಕಳು ಹಾಗೂ ಬಹಳ ವಯಸ್ಸಾದವರ ನಿರೋಧಕ ವ್ಯವಸ್ಥೆಯೂ ನಿಶ್ ಕ್ರಿಯೆಗೊಂಡಿರುವುದರಿಂದ ಈ ಖಯಿಲೆಯ ಪರಿಣಾಮವು ಅವರಲ್ಲಿ ಹೆಚ್ಚಾಗಿರುತ್ತದೆ.
ಪ್ರಸರಣ
[ಬದಲಾಯಿಸಿ]ರೋಟ ವೈರಸ್ ಮಲದ ಮೂಲಕ ಹರಡುತ್ತದೆ.ವೈರಲ್ ಬೇದಿ ಬಹಳ ಮಾರಣಾಂತಿಕ.ಈ ರೋಗ ಹೊಂದಿದ ಮನುಷ್ಯನ ಮಲದಲ್ಲಿ ಹತ್ತು ಮಿಲಿಯನ್ ಗಿಂತ ಹೆಚ್ಚು ರೋಗ ಕಣಗಳಿರುತ್ತವೆ ಇರುತ್ತವೆ,ಇದರಲ್ಲಿ ಸೋಕುಹರದಲು ನೂರಕ್ಕಿಂತ ಕಡೀಮೆ ಕಣಗಳು ಸಾಕು.ಸಾದರಣ ವಾತಾವರಣದಲ್ಲಿ ರೋಟ ವೈರಸ್ ಬಹಳ ಆಯಾಗಿ ವಾಸಿಸಬಹುದು ಮತ್ತು ಇವು ನೀರು ನಿಂತಿರುವ ಹಳ್ಳಗಳಲ್ಲಿಯೊ ಸಹ ಇರುತ್ತದೆ.ಕೊಳಚೆ ಅಳ್ಳಗಳಲ್ಲಿ ಶೇಕಡ (೧-೫)% ರಷ್ಟು ಖಾಯಿಲೆತರುವ ರೋಟ ವೈರಸ್ ಜೀವಕೋಶಗಳಿರುತ್ತವೆ.ಈ ವೈರಸ್ ನಮ್ಮ ಸಾದಾರಣ ವಾತಾವರಣದಲ್ಲಿ ೯ರಿಂದ ೧೯ದಿನಗಳ ಕಾಲ ಬದುಕಬಹುದು.ಈ ಕಾರಣಗಳಿಂದಾಗಿ ನಾವು ಸರಿಯಾದ ಸಮಯದಲ್ಲಿ ನಮ್ಮ ಸುತ್ತಾ-ಮುತ್ತಾ ವಾತಾವರಣವನ್ನು ಸ್ವಚ್ಛತೆಮಾಡಿದರು ಸಹ ಇವುಗಳ ಖಾಯಿಲೆಯಿಂದ ಬಹಳ ಸುಲಬವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಆದುದರಿಂದ ಗರಿಷ್ಠ ಹಾಗೂ ಕನಿಷ್ಠ ಆರೋಗ್ಯ ವಾತಾವರಣಗಳಿರುವ ಎಲ್ಲಾ ದೇಶಗಳಲ್ಲಿಯೂ,ರೋಟಾ ವೈರಸ್ ಒಂದೇ ಪರಿಣಾಮವನ್ನು ಉಂಟುಮಾಡುತ್ತದೆ.
ನಿವಾರಣೆ
[ಬದಲಾಯಿಸಿ]ರೊಟವೈರಸ್ ಸೋಂಕು ರೋಗ ಸಾಮಾನ್ಯವಾಗಿ ವಿಪರೀತ ಅತಿಸಾರ ಕಾರಣ ಜಠರ ರೋಗ ಅನುಸರಿಸುತ್ತದೆ,ಆದರಿಂದ ಮೊದಲು ಜಠರ ರೋಗವನ್ನು ವಾಸಿಮಡಬೇಕು.ಕಿಣ್ವ ಇಮ್ಯೂನಸೆmedical-dictionary.thefreedictionary.com/enzyme+immuno+assay ಮೂಲಕ,ಮಕ್ಕಳ ಮಲಲ್ಲಿರುವ 'ರೋಟ ವೈರಸ್-ಎ' ಅನ್ನು ಕಂಡುಹಿಡಿದು ಗುಣಪಡಿಸಲಾಗುತ್ತದೆ.ಮಾರ್ಕೆಟ್ಟಿನಲ್ಲಿ ಪರವಾನಗಿ ದೂರಕುವ ಕೆಲವು ವೈದ್ಯಕೀಯ ಸಧನಗಳು,'ರೋಟ ವೈರಸ್-ಎ'ಗೆ ಏಕಪ್ರಕಾರ ಸೂಕ್ಷ್ಮ ಆಗಿರುತ್ತವೆ ಹಾಗೂ ಇದರಿಂದ 'ರೋಟ ವೈರಸ್-ಎ'ನ ಎಲ್ಲಾಏಕಪ್ರಕಾರಗಳನ್ನು ಕಂಡುಹಿಡಿಯಬಹುದು.ಈ ವೈರಸ್ ಅನ್ನು ಕಂಡುಹಿಡಿಯಲು ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಮತ್ತು ಪಿ.ಸಿಆರ್(ಪಾಲಿಮರೇಸ್ ಚೇನ್ ರಿಯಾಕ್ಷನ್)ನಂತಹ ಹಲವಾರು ವಿಧಾನಗಳನ್ನು ಪರಿಶೋಧನೆಯ ಪ್ರಯೋಗಾಲಯಗಳಲ್ಲಿ ಉಪಯೋಗಿಸುತ್ತಾರೆ.ಆರ್.ಟಿ-ಪಿ.ಸಿ.ಆರ್(ರಿವರ್ಸ್ ಟ್ರಾನ್ಸ್ ಕ್ರಿಪ್ ಶನ್-ಪಾಲಿಮರೇಸ್ ಚೇನ್ ರಿಯಾಕ್ಷನ್)ನ ಮೂಲಕ,ಮನುಷ್ಯನಿಗೆ ರೋಗ ತರುವ ಎಲ್ಲಾ ವಿಧದ ರೋಟ ವೈರಸ್ ಅನ್ನು ಕಂಡು ಹಿಡಿಯಬಹುದು.
ಚಿಕಿತ್ಸೆ
[ಬದಲಾಯಿಸಿ]ಸಣ್ಣ ಪ್ರಮಾಣದ ರೋಟ ವೈರಸ್ ಸೋಂಕನ್ನು ಗುಣಪಡಿಸಲು ವ್ಯವಸ್ಥೆಇಲ್ಲ,ಆದುದರಿಂದ ,ಖಾಯಿಲೆಯಿಂದ ಬಂದ ಕೆಲವು ಲಕ್ಷಣಗಳುನ್ನು ಗುಣಪಡಿಸಬಹುದು.ಬಹಳ ಮುಖ್ಯವಗಿ ದೇಹದಲ್ಲಿನ ನೀರಿನಾಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.ಸರಿಯಾದ ಸಮಯದಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡದಿದ್ದರೆ ತೀವ್ರ ಅತಿಸಾರದಿಂದ ಸಾವನ್ನಪುವ ಸಾಧ್ಯತೆ ಇದೆ.ವಾಂತಿ-ಬೇದಿಯ ತೀವ್ರತೆಯ ಅನುಗುಣವಾಗಿ ಚಿಕಿತ್ಸೆಯಲ್ಲಿ ಪುನರ್ಜಲೀಕರಣ ಸಹ ಹೊಂದಿರುತ್ತದೆ.ಈ ಸಮಯದಲ್ಲಿ ಮಕ್ಕಳಿಗೆ ಕುಡಿಯಲು ಉಪ್ಪು ಮತ್ತು ಸಕ್ಕರೆ ಹೊಂದಿರುವ ನೀರನ್ನು ನೀಡಲಾಗುತ್ತದೆ.೨೦೦೪ರಲ್ಲಿ ಡಬ್ಲು.ಎಚ್.ಒ(ವಿಶ್ವ ಆರೋಗ್ಯ ಸಂಸ್ಥೆ) ಮತ್ತು ಯೂನಿಸೆಫ಼್(ವಿಶ್ವಸಂಸ್ಥೆಯ ಮಕ್ಕಳ ನಿಧಿ)ಸಂಸ್ಥೆಗಳು,ಸಣ್ಣ ಪ್ರಮಾಣದ ಬೇದಿಯನ್ನು ನಿಲ್ಲಿಸಲು ಕಡಿಮೆ ಆಸ್ಮೊಲಾರಿಟಿಯುಳ್ ಪುನರ್ಜಲೀಕರಣ ಪರಿಹಾರವನ್ನು ಮತ್ತು 'ಜಿಂಕ್' ಅಂಶವಿರುವ ಅಹಾರವನ್ನು ತೆಗೆದುಕೊಳ್ಳಲು ಸಲಹೆ ನೀಡಿತ್ತು.ಕೆಲ ಲಕ್ಷಣಗಳು ಬಹಳ ಕಠಿಣವಾಗಿರುತ್ತವೆ,ಇಂತವುಗಳನೆಲ್ಲ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಬೇಕಾಗುತ್ತದೆ,ಈ ಕಾಲದಲ್ಲಿ ವೈದ್ಯರು ಮಗುವಿನ ಎಲೆಕ್ಟ್ರೋಲೈಟ್ಸ್ ಮತ್ತು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಪ್ರಯತ್ನ ಮಾಡುತ್ತಾರೆ.
ತಡೆಗಟ್ಟುವಿಕೆ
[ಬದಲಾಯಿಸಿ]ಮಕ್ಕಳಲ್ಲಿನ 'ರೋಟ ವೈರಸ್-ಎ' ಸೋಂಕನ್ನು ತಡೆಗಟ್ಟಲು ಎರಡು ಬಗೆಯ ಲಸಿಕೆಗಳು ಬಹಳ ಸಹಾಯ ಮಡುತ್ತವೆ, ಅವುಗಳೆಂದರೆ ೧)ವ್ಯಾಕ್ಸೋ ಕಂಡಿಡಿದಿರುವ,ರೋಟಾರಿಕ್ಸ್ ಹಾಗು ೨)ಮಾರ್ಕ್ ಕಂಡಿಡಿದಿರುವ ರೋಟಾ ಟೆಕ್.ರೋಟ ವೈರಸ್ ಲಸಿಕೆಗಳು ದೇಶದ ಎಲ್ಲಾ ನ್ಯಾಷನಲ್ ಇಮ್ಮ್ಯೂನಿಸಷನ್ ಪ್ರೋಗ್ರಾಂಗಳಲ್ಲಿ ಒಳಗೊಂಡಿರಬೇಕೆಂದು,೨೦೦೯ರಲ್ಲಿ ಡಭ್ಲ್ಯು.ಎಚ್.ಒ(ವಿಶ್ವ ಆರೋಗ್ಯ ಸಂಸ್ಥೆ) ಹೊಸ ನಿಯಮವನ್ನು ಜಾರಿಗೊಳ್ಳಿಸಿದೆ. ಪ್ರಸ್ತುತ ದಿನಗಳಲ್ಲಿ ರೋಟಾ ವೈರಸ್ಸಿನ ಸೋಂಕು ಪ್ರಪಂಚದಲ್ಲೆಡೆ ಇಳಿಮುಕಗೊಂಡಿವೆ ಎನ್ನಲಾಗಿದೆ.ಈ ಲಸಿಕೆಯಿಂದಾಗಿ ಹಲವಾರು ದೇಶಗಳಲ್ಲಿ ರೋಟ ವೈರಸ್ ದಾಳಿಗೊಳಗಾಗಿರುವವರ ಸಂಖ್ಯೆ ಬಹಳ ಇಳಿದಿದೆ ಹಾಗೂ ಇವು ಲಸಿಕೆ ಮಾಡಿದ ಮಕ್ಕಳಲ್ಲಿಯೂ ಹಲವಾರು ತೊಂದರೆಗಳನ್ನು ನಿಯಂತ್ರಿಸಿದೆ.ರೋಟ ವೈರಸ್ ಲಸಿಕೆಯ ಲೈಸೆನ್ಸ್ಅನ್ನು ನೊರಕ್ಕಿಂತ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗಿವೆ.ಈ ಲಸಿಕೆ ಕೊಟ್ಟಿರುವುದರಿಂದ ಆಫ಼್ರಿಕಾ ಮತ್ತು ಮಾಲವಿ ದೇಶಗಳಲ್ಲಿ ರೋಟವೈರಸ್ಸಿನ ರೋಗಗಳು ಕಡಿಮೆಯಾಗಿವೆ.ಈ ಏರಡು ದೇಶಗಳ ಜೋತೆಗೆ ಏಶಿಯಾದಲ್ಲು ರೋಟವೈರಸ್ಸಿನ ರೋಗಗಳ ತೀವ್ರತೆ ಬಹಳ ಕಡಿಮೆಯಾಗಿದೆ.೨೦೧೩ರಲ್ಲಿ,ಈ ಲಸಿಕೆಗಳನ್ನು ಇಂಗ್ಲ್ಯ್ಂಡಿನಲ್ಲಿರುವ ಎಲ್ಲಾ ಎಳೆಯ ಮಕ್ಕಳಿಗೆ[ಏರಡು ತಿಂಗಳೋಳಗಿನ] ಕೊಟ್ಟಿರುವುದರಿಂದ ಶೇಕಡ ೭೦%ರಷ್ಟು ಪರಿಣಾಮಕಾರಿಯಾಗಿದೆ.
ಉಲ್ಲೇಖನಗಳು
[ಬದಲಾಯಿಸಿ]