ಸದಸ್ಯ:ನಿಶ್ಮಿತ
ದೇಶೀಯ ಶಿಕ್ಷಣ ಜಗತ್ತಿನ ಶ್ರೇಷ್ಠ ಶಿಕ್ಷಣ ಪದ್ಧತಿ ಯಾವುದು ಇತ್ತು ಎಂದರೆ ಅದು ಭಾರತೀಯ ಶಿಕ್ಷಣ ಪದ್ಧತಿ. ಇಲ್ಲಿಯ ಜ್ಞಾನ ಹಂಚುವ ಪದ್ಧತಿ ಎಷ್ಟು ಶ್ರೇಷ್ಠವಾಗಿತ್ತು ಎಂದರೆ ಇಲ್ಲಿಯ ಜ್ಞಾನ ಪಡೆದುಕೊಳ್ಳುವುದ್ದಕ್ಕೆ ಮೆಗಾಸ್ತಾನಿಸನ್ ಎನ್ನುವ ಯಾತ್ರಿಕ ವಿದೇಶದಿಂದ ಭಾರತ ದೇಶಕ್ಕೆ ಬಂದಿದ್ದ. ಸ್ತಾಯಿಯಾನ್ ಎನ್ನುವ ಚೀನಾದ ಯಾತ್ರಿಕ ಈ ದೇಶಕ್ಕೆ ಬಂದ. ಬರಬೇಕಾದರೆ ೧೩ ವರ್ಷಗಳ ಕಾಲ ಯಾತ್ರೆ ಮಾಡಿಕೊಂಡು ಬಂದನಂತೆ. ೧೩ ವರ್ಷಗಳ ಕಾಲ ಅವನ ಯಾತ್ರೆ ಹೇಗಿತ್ತು ಅಂತ ಒಬ್ಬ ಇತಿಹಾಸಕಾರ ತುಂಬಾ ಚೆನ್ನಾಗಿ ವರ್ಣನೆ ಮಾಡುತ್ತಾನೆ.
ಯೌವನಕಾಲದಲ್ಲಿ ಬಂದಿದ ೧೫ ವರ್ಷ ವಯಸ್ಸಿನ ಅವನು ತಾನು ಭಾರತವನ್ನು ನೋಡಲೇಬೇಕು, ಅಲ್ಲಿಯ ಜ್ಞಾನವನ್ನು ಪಡೆಯಲೇಬೇಕು ಎಂದು ಭಾರತವನ್ನು ಹುಡುಕಿಕೊಂಡು ಬಂದವನು ಅವನ ದಾರಿಯುದ್ಧಕ್ಕೂ ಮನುಷ್ಯರನ್ನು ಕಂಡರೆ ತಿನ್ನುವಂತಹ ಜನಾಂಗ ಇತ್ತು. ಹೀಗಾಗಿ ಸ್ತಾಯಿಯಾನ ರಾತ್ರಿ ನಡೆಯುತ್ತಿದ್ದ. ಬೆಳಗಾದ ಕೂಡಲೇ ಕಾಡಿನಲ್ಲಿ ಅವಿತುಕೊಳ್ಳುತ್ತಿದ್ದ. ಸ್ತಾಯಿಯಾನ ರಾತ್ರಿಯ ಪ್ರಯಾಣ ಮಾಡಿಕೊಂಡು ೧೩ ವರ್ಷಗಳ ನಂತರ ಭಾರತವನ್ನು ಸೇರಿಕೊಂಡನು ಅಂತ ಒಬ್ಬ ಇತಿಹಾಸಕಾರ ಹೇಳುತ್ತಾನೆ. ಭಾರತದ ಜ್ಞಾನ ಹಂಚುವ ಪದ್ಧತಿ ಎಷ್ಟು ವಿಶಿಷ್ಟವಾಗಿತ್ತು ಎಂದರೆ ಜಗತ್ತಿನ ಜನ ಭಾರತವನ್ನು ಶಿಕ್ಷಣ ಪಡೆಯುವುದಕ್ಕಾಗಿ ಹುಡುಕಿಕೊಂಡು ಬರುತ್ತಿದ್ದರು.
ಇಲ್ಲಿಯ ಗುರುಕುಲ ಪದ್ದತಿ ಹೇಗಿತ್ತು ಅಂದರೆ ಗುರುಕುಲಕ್ಕೆ ಶಿಕ್ಷಣಾರ್ಥಿಗಳು ಬರುತ್ತಿದ್ದರು. ಗುರುಗಳ ಜೊತೆ ಇರುತಿದ್ದರು. ಗುರುಗಳು ಬೋಧನೆಯನ್ನು ಬಾಯಿಯಿಂದ ಹೇಳೋದು ಎಷ್ಟೋ ಅದಕ್ಕಿಂತ ಹೆಚ್ಚಾಗಿ ತಾವು ಬದುಕಿ ತೋರಿಸುವುದರ ಮೂಲಕ ಶಿಕ್ಷಣವನ್ನು ಕೊಡುತ್ತಿದ್ದರು. ಅದು ಭಾರತದ ಶ್ರೇಷ್ಟತೆ. ಎಷ್ಟೋ ಬಾರಿ ಗುರುಗಳು ಮಾತಾಡ್ತಾನೆ ಇರಲಿಲ್ಲವಂತೆ, ಮಾತನಾಡದೆ ಶಿಕ್ಷಣವನ್ನು ಕೊಡುವಂತಹ ವೈಶಿಷ್ಟತೆ ನಮ್ಮ ಗುರುಗಳಿಗೆ ಇತ್ತು.