ವಿಷಯಕ್ಕೆ ಹೋಗು

ಸದಸ್ಯ:ದಿವ್ಯಶ್ರೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಣೆಯಾದ ನಾಲ್ಕಾಣೆಯ ಬಗ್ಗೆ

ರಿಸರ್ವ್ ಬ್ಯಾಂಕಿನ ನಿರ್ದೇಶನದಂತೆ ನಾಲ್ಕಾನೆಯ ನಾಣ್ಯದ ಚಲಾವಣೆ ೨೦೧೧ರ ಜೂನ್ ೩೦ ಕ್ಕೆ ಕೊನೆಗೊಂಡಿದೆ. ಇನ್ನು ಐವತ್ತು ಪೈಸೆಯ ನಾಣ್ಯವೇ ಕಡಿಮೆ ಮೌಲ್ಯದ ನಾಣ್ಯವಾಗಲಿದ್ದು ಅದರ ಗಾತ್ರ ಈಗಿನ ಐವತ್ತು ಪೈಸೆಯ ನಾಣ್ಯದಷ್ಟಾಗಿದೆ.

ಇದು ರಿಸರ್ವ್ ಬ್ಯಾಂಕಿನ ಡೆಪ್ಯುಟಿ ಗವರ್ನರ್ ಅವರ ಆದೇಶದಂತೆ ಜಾರಿಗೆ ಬಂದಿರುವ ಆರ್ಥಿಕ ಸೂತ್ರದ ಮುಖ್ಯಾಂಶ. ಇದರಲ್ಲೇನು ವಿಶೇಷ? ಆರ್ಥಿಕ ಏರಿಳಿತಗಳಿಗನುಗುನವಾಗಿಕಡಿಮೆ ಮೌಲ್ಯದ ನಾಣ್ಯದ ಚಲಾವಣೆಯನ್ನು ಹಿಂಪಡೆಯುವುದು ಹೊಸ ಬೆಳವಣಿಗೆಯೇನಲ್ಲ. ಪ್ರಪಂಚದ ಎಲ್ಲಾ ದೇಶಗಳಲ್ಲೂ ನಡೆಯುವ ಸಹಜವಾದ ವಿದ್ಯಮಾನ ಇದು. ಭಾರತದಲ್ಲೇ ೧ ಪೈಸೆ, ೨ ಪೈಸೆ, ೩ ಪೈಸೆ, ೫ ಪೈಸೆ, ೧೦ ಪೈಸೆ ಮತ್ತು ೨೦ ಪೈಸೆ ನಾಣ್ಯಗಳನ್ನು ಹಿಂದೆ ಚಲಾವಣೆಯಿಂದ ಹಿಂಪಡೆಯಲಾಗಿತ್ತು. ಆದರೆ ನಾಲ್ಕಾಣೆಯ ವಿಷಯವೇ ಬೇರೆ. ಇದು ಇತರ ನಾಣ್ಯಗಳಂತಲ್ಲ. ಇದರ ಹಿಂದೆ ರೋಚಕ ಇತಿಹಾಸವೇ ಇದೆ.

ಏನಿದು ರೋಚಕ ಇತಿಹಾಸ ? ನಾಲ್ಕಾಣೆಯ ಮೌಲ್ಯದ ನಾಣ್ಯದ ಕಥೆ ಆರಂಭವಾಗಿರುವುದು ೧೮೫೩ರಲ್ಲಿ ಇದನ್ನು ಜಾರಿಗೆ ತಂದದ್ದು ಈಸ್ಟ್ ಇಂಡಿಯಾ ಕಂಪೆನಿ. ಆಗ ಭಾರತದ ವಿವಿಧ ಸಂಸ್ಥಾನಗಳನ್ನು ಈಸ್ಟ್ ಇಂಡಿಯಾ ಕಂಪೆನಿ ಒಂದೊಂದಾಗಿ ವಶಪಡಿಸಿಕೊಳ್ಳುತ್ತಲಿತ್ತು. ಒಂದೊಂದು ಸಂಸ್ಥಾನದಲ್ಲಿ ಒಂದೊಂದು ಮಾದರಿ ನಾಣ್ಯ ಪದ್ಧತಿ ಇದ್ದುದರಿಂದ ತನ್ನದೇ ಆದ ನಾಣ್ಯ ಪದ್ಧತಿಯನ್ನು ಅದು ರೂಪಿಸಿತು. ಅದೇ ಆಣೆಗಳ ಪದ್ಧತಿ. ಈ ಆಣೆಗಳು ೧೯೪೭ರ ಬಳಿಕ ಸ್ವತಂತ್ರ ಭಾರತದಲ್ಲಿ ಕೆಲಕಾಲ ಅಸ್ತಿತ್ವದಲ್ಲಿದ್ದ ಆಣೆಗಳಲ್ಲ. ಇದರ ಮೌಲ್ಯವೇ ಬೇರೆಯಾಗಿತ್ತು. ಈಸ್ಟ್ ಇಂಡಿಯಾ ಕಂಪೆನಿ ಜಾರಿಗೆ ತಂದ ನಾಣ್ಯಗಳಲ್ಲಿ ಅತಿ ಹೆಚ್ಚು ಮೌಲ್ಯದ ನಾಣ್ಯವೆಂದರೆ ನಾಲ್ಕಾಣೆ. ಚಲಾವಣೆಯಿಂದ ಹೊರದಬ್ಬಿಸಿಕೊಂಡಿರುವ ನಾಣ್ಯ ಆಗಿನ ಅತಿ ಹೆಚ್ಚು ಮೌಲ್ಯದ ನಾಣ್ಯ.