ತೊನ್ನಕ್ಕಲ್ ಗೋಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತೊನ್ನಕ್ಕಲ್ ಗೋಪಿ
ತೊನ್ನಕ್ಕಲ್ ಗೋಪಿ ಭಾರತವನ್ನು ೨೦೧೬ ಬೇಸಿಗೆ ಒಲಿಂಪಿಕ್ಸ್, ರಿಯೊನಲ್ಲಿ ಪ್ರತಿನಿಧಿಸುತ್ತಿರುವ ಮ್ಯಾರಥಾನ್ ಕ್ರೀಡಾಪಟು
ಜನನ (1988-05-24) ೨೪ ಮೇ ೧೯೮೮ (ವಯಸ್ಸು ೩೫)
ರಾಷ್ಟ್ರೀಯತೆಭಾರತ
ಉದ್ಯೋಗಕ್ರೀಡಾಪಟು

ತೊನ್ನಕ್ಕಲ್ ಗೋಪಿ, ತಂನ್ನಕ್ಕಲ್ ಗೋಪಿ (ಜನನ: ೨೪ ಮೇ ೧೯೮೮) [೧]  ೨೦೧೬ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಮ್ಯಾರಥಾನ್ ಸ್ಪರ್ಧೆಯಲ್ಲಿ ಪ್ರತಿನಿಧಿಸಲು ಅರ್ಹತೆ ಹೊಂದಿರುವ ಕ್ರೀಡಾಪಟು [೨].  ಇವರು ಭಾರತೀಯ ಸೇನೆಯಲ್ಲಿ ಸಹ ಕೆಲಸ ಮಾಡುತ್ತಾರೆ [೩] [೪] [೫]

ವೃತ್ತಿ[ಬದಲಾಯಿಸಿ]

೨೧ನೇ ವಯಸ್ಸಿನಲ್ಲಿ, ಸಾಮಾನ್ಯ ನೇಮಕಾತಿ  ಅಡಿಯಲ್ಲಿ ಸೇನೆ ಸೇರಿಕೊಂಡರು. ಹೈದರಾಬಾದ್ ನ ಸೇನಾ ಈ ಫಿರಂಗಿ ತೋಪು ಕೇಂದ್ರದಲ್ಲಿ, ಒಬ್ಬ ಹವಾಲ್ದಾರ್ ಆಗಿ ೯ ತಿಂಗಳ ಕಡ್ಡಾಯ ಸೇನಾ ತರಬೇತಿಯನ್ನು ಮುಗಿಸಿದರು [೬].

ಸಾಮಾನ್ಯವಾಗಿ ಇವರು  ೧೦೦೦೦ ಮೀಟರ್ ಓಟಗಾರರು, ನಿತೇಂದ್ರ ರಾವತ್ ರವರು ೦೨:೧೫ ಗಂಟೆಯ ಅರ್ಹತ ಸಮಯದ ಜೋತೆ, ಒಲಿಂಪಿಕ್ಸ್ ಅರ್ಹತೆ ಪಡೆಯಲು,  ೨೦೧೬ ಮುಂಬಯಿ ಮ್ಯಾರಥಾನ್ ನಲ್ಲಿ, ಅವರನ್ನು ಮೊದಲ ೩೦ ಕೀ ಮೀ  ಓಟದಲ್ಲಿ ಇರಿಸಿಕೊಳ್ಳುವ ಉದ್ದೇಶದಿಂದ ತೊನ್ನಕ್ಕಲ್ ಗೋಪಿ ಅವರನ್ನುಓಟಕ್ಕೆ ಇಳಿಸಲಾಯಿತು. ಆದಾಗ್ಯೂ, ಗೋಪಿ ಅವರಿಗೆ ಈ ಮ್ಯಾರಥಾನ್ ದೂರ ಓಡಬಹುದು ಎನ್ನಿಸಿತು ಮತ್ತು ಅವರು ತಮ್ಮ ಓಟ ಮುಂದುವರಿಸಿದರು,ಇವರು ಮ್ಯಾರಥಾನ್  ಪೂರ್ಣಗೊಳಿಸಿದ ೨ ನೇ ಭಾರತೀಯರಾ ಗಿ ರಾವತ್ ಹಿಂದೆ ಸ್ಪರ್ಧೆ ಪೂರ್ಣಗೊಳಿಸಿದರು (೧೧ ಒಟ್ಟಾರೆ, ಹಿಂದೆ ರಾವತ್). ಅವರು ತಮ್ಮ ದೇಹವನ್ನು ಕೊನೆಯ ೫ ಕೀ ಮೀಟರ್ ಗೆ ಸಿದ್ದಪಡಿಸಿಕೊಂಡರು, ಆದರೆ ಅವರಿಗೆ ೫ ಕಿಮೀನಲ್ಲಿ ನಿರೀಕ್ಷಿತ ಆಯಾಸ ಅನಿಸಿಲ್ಲ ಎಂದು ಹೇಳುತ್ತಾರೆ. ಇವರ ವಿಓ೨ ಗರಿಷ್ಠ ಸುಮಾರು ೮೪ (ಲ್ಯಾನ್ಸ್ ಆರ್ಮ್ಸ್ಟ್ರಾಂಗ್ ಹೋಲಿಸದರೆ,ಮಿಲಿ ಆಮ್ಲಜನಕ ಬಳಕೆ, ಒಂದು ನಿಮಿಷಕ್ಕೆ, ಪ್ರತಿ ಕೆಜಿ ದೇಹತೂಕಕ್ಕೆ), ೪೫ ಬಿ.ಪಿ.ಎಮ್. ಹೃದಯದ ವಿರಾಮದ ಬಡಿತದ ಜೊತೆ.

೨೦೧೪ರಲ್ಲಿ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ನ ೧೦೦೦೦ ಮೀಟರ್ ಓಟದಲ್ಲಿ ಚಿನ್ನದ ಪದಕ ಗೆಲ್ಲುವುದರ ಜೊತೆಗೆ, ೨೦೧೬ರಲ್ಲಿ ದಕ್ಷಿಣ ಏಷ್ಯನ್ ಗೇಮ್ಸ್ ನಲ್ಲಿ ಹೊಸ ಆಟದ ದಾಖಲೆ ಜೊತೆ ಚಿನ್ನದ ಪದಕ ಪಡೆದರು ಮತ್ತು ೨೦೧೬ರ ಏಷ್ಯನ್ ಕ್ರಾಸ್ ಕಂಟ್ರಿ ಚಾಂಪಿಯನ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ೨೦೧೬ ಮುಂಬಯಿ ಮ್ಯಾರಥಾನ್‌ನಲ್ಲಿ ೦೨:೧೬:೧೫ ಸಮಯದ ಜೊತೆ  ೨೦೧೬ ಬೇಸಿಗೆ ಒಲಿಂಪಿಕ್ಸ್ , ಇತರ ಎರಡು ಭಾರತೀಯ ಮ್ಯಾರಥಾನ್ ಓಟಗಾರರಾದ ಖೇತ ರಾಮ್ ಮತ್ತು ನಿತೇಂದ್ರ ಸಿಂಗ್ ರಾವತ್ ಜೋತೆ ಅರ್ಹತೆ ಪಡೆದರು.

ಸ್ಪರ್ಧೆಯ ದಾಖಲೆಗಳು[ಬದಲಾಯಿಸಿ]

ವರ್ಷದ ಸ್ಪರ್ಧೆ ಪಂದ್ಯ ನಡೆಯುವ ಸ್ಥಳ ಸ್ಥಾನವನ್ನು ಸ್ಪರ್ಧೆ ಸಮಯ ರೆಫರೆನ್ಸ್
೨೦೧೪ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಹೊಸ ದೆಹಲಿ, ಭಾರತ ೧ ನೇ ೧೦,೦೦೦ ಮೀಟರ್ ೨೯:೩೨:೨೬ [೭]
೨೦೧೫ ಏರ್ಟೆಲ್ ದೆಹಲಿ ಹಾಫ್ ಮ್ಯಾರಥಾನ್ ಹೊಸ ದೆಹಲಿ, ಭಾರತ ೨ ನೇ ಭಾರತೀಯ / ೧೯ ನೇ ಒಟ್ಟಾರೆ ಹಾಫ್ ಮ್ಯಾರಥಾನ್ ೧:೦೨:೪೫ [೮]
೨೦೧೬ ಮುಂಬಯಿ ಮ್ಯಾರಥಾನ್ ಮುಂಬಯಿ, ಭಾರತ ೨ ನೇ ಭಾರತೀಯ / ೧೧ ನೇ ಒಟ್ಟಾರೆ ಮ್ಯಾರಥಾನ್ ೨:೧೬:೧೫ [೫]

[೯][೧೦] [೧೧] [೧೨] [೧೩]

೨೦೧೬ ದಕ್ಷಿಣ ಏಷ್ಯನ್ ಗೇಮ್ಸ್ ಗುವಾಹಾಟಿ, ಭಾರತ ೧ ನೇ ೧೦೦೦೦ ಮೀಟರ್ ೨೯:೧೦:೫೬ [೧೪]

ವೈಯಕ್ತಿಕ ಜೀವನ[ಬದಲಾಯಿಸಿ]

ಇವರು ವಯನಾಡ್ ರೈತರ ಮಗ, ಗೋಪಿಯವರು ಬಾಲ್ಯದಲ್ಲಿ  ಅವರ ಚಿಕ್ಕ ಭೂಮಿಯಲ್ಲಿ, ರ್ಪೋಷಕರಿಗೆ ಅಕ್ಕಿ  ಮತ್ತು ಶುಂಠಿ ಬೆಳೆಯಲು ಸಹಾಯ ಮಾಡುವ ಏಕ ಮಾತ್ರ ಮಗುವಾಗಿದರು. ಗೋಪಿ ಅವರು ಕಾಕವಯಲ್‌ನ ಸರ್ಕಾರಿ ಪ್ರೌಢಶಾಲೆ ಹೋಗುತ್ತಿದರು [೩] ಮತ್ತು ಸತತವಾಗಿ ಶಾಲೆ ಮತ್ತು ಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸಿತಿದ್ದರು [೬].  ಇವರು ಕೇರಳದ ಕೊತಮಂಗಳಮ್‌ನ ಮಾರ್ ಅಥನಸಿಯಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪದವಿ ವಿದ್ಯಾಭ್ಯಾಸ ಶುರು ಮಾಡಿದರು , ಆದರೆ ೨೧ನೇ ವಯಸ್ಸಿನಲ್ಲಿ  ಸೇನಾ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣವಾಗಿ ಸೇನೆ ಸೇರಿಕೊಂಡಿದರಿಂದ, ತಮ್ಮ ಪದವಿ ವಿದ್ಯಾಭ್ಯಾಸವನ್ನು ಎರಡನೇ ವರುಷಕ್ಕೆ ಬಿಟ್ಟರು [೬]. ಅತಿ ಹೆಚ್ಚು ಸಂಖ್ಯೆಯ ಟ್ರ್ಯಾಕ್ ಕ್ರೀಡಾಪಟುಗಳು ಬರುವುದು ಇವರ ತವರು ರಾಜ್ಯವಾದ ಕೇರಳದಿಂದ [೩] [೬].

ಅವರು ತಮ್ಮ ಕುಟುಂಬದ ಏಕಮಾತ್ರ ದುಡಿಯುವ ಸದಸ್ಯ ಮತ್ತು ಇವರು ತಮ್ಮ ಉಳಿತಾಯದ ಹಣವನ್ನು, ಅವರ ಪೋಷಕರು, ಪತ್ನಿ ಮತ್ತು ಇಬ್ಬರು ಮಕ್ಕಳಿಗಾಗಿ ಮನೆಗೆ ಕಳುಹಿಸಿಕೊಡುತ್ತಾರೆ.ಅವರು ತಿಂಗಳಿಗೆ ಓಡುವ ಮೈಲಿ ದೂರವನ್ನು ಸರಿಹೊಂದಿಸಲು, ಅವರು ಮಾಡುವ ಮಾಸಿಕ ಶೂಗಳ ಖರೀದಿ ಅವರ ದುಡಿಮೆಯಲ್ಲಿ ಅತಿ ದೊಡ್ಡ ವೆಚ್ಚ (ಪ್ರತಿ ಜೋಡಿಗೆ ಬೆಲ ಸುಮಾರು ೧೦.೦೦೦ರೂ), ೨೦೧೬ರ ಮಧ್ಯದ ವರೆಗೆ, ಅವರು ಯಾವುದೇ ಕಾರ್ಪೊರೇಟ್ ಪ್ರಾಯೋಜಕತ್ವದ ಹೊಂದಿಲ್ಲ ಮತ್ತು ಅವರು ತನ್ನ ಶೂಗಳನ್ನು ಅವರೆ ಖರೀದಿ ಮಾಡುತಿದ್ದಾರೆ [೬].  ಅವರು ಮತ್ತು ಅವರ ಸಹವರ್ತಿ ಕ್ರೀಡಾಪಟುಗಳು ವರ್ಷದಲ್ಲಿ ೧೨ ರಲ್ಲಿ ೧೧ ತಿಂಗಳುಗಳು ಕಾಲ ತಮ್ಮ ಕುಟುಂಬವನ್ನು ಬೇಟಿಯಾಗದೆ ಮನೆಯಿಂದ ದೂರ ಇರುತ್ತಾರೆ, ವಿಶ್ವ ವೇದಿಕೆಯಲ್ಲಿ ಪೈಪೋಟಿ ಮಾಡವ ಸಲುವಾಗಿ ಅವರು ಮಾಡಲೇ ಬೇಕಾಡ ಒಂದು ತ್ಯಾಗ [೬]

ಉಲ್ಲೇಖಗಳು[ಬದಲಾಯಿಸಿ]

  1. "Thanackal Gopi". Archived from the original on 17 ಆಗಸ್ಟ್ 2016. Retrieved 14 August 2016.
  2. "Indian Marathoners – Bharat at Rio '16 – Track and Field Sports News". Archived from the original on 2018-04-07. Retrieved 2016-07-29.
  3. ೩.೦ ೩.೧ ೩.೨ Marar, Nandakumar (17 January 2016). "Gopi hits marathon jackpot in first attempt". sportstarlive.com. Retrieved 29 July 2016.
  4. "Indian Marathoners – Bharat at Rio '16 – Track and Field Sports News". trackfield.in. Archived from the original on 7 ಏಪ್ರಿಲ್ 2018. Retrieved 29 July 2016.
  5. ೫.೦ ೫.೧ Gopi, Thanackal. "IAAF Profile". Retrieved 29 July 2016.
  6. ೬.೦ ೬.೧ ೬.೨ ೬.೩ ೬.೪ ೬.೫ "Cool Runnings: India's marathon men".
  7. "ಆರ್ಕೈವ್ ನಕಲು". Archived from the original on 2016-03-14. Retrieved 2016-08-16.
  8. "Race Results - Airtel Delhi Half Marathon". Archived from the original on 2016-08-05. Retrieved 2016-08-01.
  9. "Gopi, Kheta Ram qualify for Olympics; Rawat sets course record - Times of India". Retrieved 2016-08-01.
  10. "Gopi, Kheta Ram qualify for Olympics; Rawat sets course record". The Hindu. 2016-01-17. ISSN 0971-751X. Retrieved 2016-08-01.
  11. "More than 40,000 people participate in the Mumbai Marathon 2016 - Firstpost". 2016-01-17. Retrieved 2016-08-01.
  12. "Rawat sets course record; Gopi, Kheta Ram qualify for Rio". Retrieved 2016-08-01.
  13. "Gopi T, Kheta Ram seal Rio berths | The Asian Age". Retrieved 2016-08-01.
  14. "2016 South Asian Games Results" (PDF). Archived from the original (PDF) on 2016-02-23.