ಕ್ರಕ್ಸ್
ಗೋಚರ
ಕ್ರಕ್ಸ್ ದಕ್ಷಿಣಾಕಾಶದ ಒಂದು ಹೆಸರಾಂತ ನಕ್ಷತ್ರಪುಂಜ. ತ್ರಿಶಂಕು ಎಂಬುದು ಇದರ ಪರ್ಯಾಯನಾಮ.
ವ್ಯಾಪ್ತಿ
[ಬದಲಾಯಿಸಿ]ಇದರ ವ್ಯಾಪ್ತಿ ವಿಷುವದಂಶ 11 ಗಂ. 55ಮಿ.-12ಗಂ.55ಮಿ. ಮತ್ತು ಘಂಟಾವೃತ್ತಾಂಶ 550 ದ.-640 ದ.ಕ್ರಕ್ಸ್ ಪುಂಜದ ಆಕಾರ ತಲೆಕೆಳಗಾದ ಶಿಲುಬೆಯಂತೆ. ಈ ಕಾರಣದಿಂದ ಇದಕ್ಕೆ ದಕ್ಷಿಣದ ಶಿಲುಬೆ (ಸದರ್ನ್ ಕ್ರಾಸ್) ಎಂಬ ಹೆಸರು ಸಹ ರೂಢಿಯಲ್ಲಿದೆ. ಉತ್ತರಾಕಾಶದ ಲಘು ಸಪ್ತರ್ಷಿಗೆ ಇದು ಸಂವಾದಿ ಎಂಬುದು ಕೆಲವರ ಮತ. ಇದರಲ್ಲಿನ ನಾಲ್ಕು ಪ್ರಮುಖ ನಕ್ಷತ್ರಗಳ ಪೈಕಿ ಶಿಲುಬೆಯ ಬುಡದಲ್ಲಿರುವುದು α-ಕ್ರೂಸಿಸ್; ಇದಕ್ಕೆ ಆಕ್ರಕ್ಸ್ ಎಂಬ ಮತ್ತೊಂದು ಹೆಸರೂ ಉಂಟು. ಈ ನಕ್ಷತ್ರದ ಸಹಾಯದಿಂದ ದಿಕ್ಕಿನ ನಿರ್ದೇಶನವನ್ನು ನಾವಿಕರು ಪಡೆಯುತ್ತಿದ್ದರು. ಹೀಗಾಗಿ ಇದನ್ನು ನಾವಿಕನಕ್ಷತ್ರವೆಂದೂ (ನ್ಯಾವಿಗೇಷನಲ್ ಸ್ಪಾರ್) ಕರೆಯುವುದಿದೆ. ಶಿಲುಬೆಯ ಶಿರೋಭಾಗದಲ್ಲಿರುವ ನಕ್ಷತ್ರ ( ಗ್ಯಾಕ್ರಕ್ಸ್. ಈ ಎರಡೂ ನಕ್ಷತ್ರಗಳನ್ನು ಸೇರಿಸುವ ಸರಳರೇಖೆ ಹೆಚ್ಚು ಕಡಿಮೆ ಖಗೋಳೀಯ ದಕ್ಷಿಣಧ್ರುವದ ದಿಕ್ಕನ್ನು ನಿರ್ದೇಶಿಸುತ್ತದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Southern Cross Starry Night Photography.
- Star Tales – Crux
- Finding the South Pole in the sky
- Southern Cross Archived 2008-10-14 ವೇಬ್ಯಾಕ್ ಮೆಷಿನ್ ನಲ್ಲಿ. in Te Ara – the Encyclopedia of New Zealand
- Tell time from the position of the southern cross http://puggle.byethost14.com/homepage/cruxstuff.html
- Letter of Andrea Corsali 1516-1989: with additional material ("the first description and illustration of the Southern Cross, with speculations about Australia ...") digitised by the National Library of Australia.
- The Deep Photographic Guide to the Constellations: Crux.
- The Cambridge Guide to the Constellations, Michael E. Bakich, Cambridge University Press, 1995, pg. 85.
- Universe (book)|Universe: The Definitive Visual Dictionary, Robert Dinwiddie and others., DK Adult Publishing, (2005), pg. 396.
- The Sign of the Southern Cross Black Sabbath
- Ian Ridpath and Wil Tirion (2007). Stars and Planets Guide, Collins, London. ISBN 978-0-00-725120-9. Princeton University Press, Princeton. ISBN 978-0-691-13556-4.
- Crux Constellation at Constellation Guide
- [೧] Andrea Corsali - Letter to Giuliano de Medici, 1516, with additional material, 1989