ವಿಷಯಕ್ಕೆ ಹೋಗು

ಕ್ಯೂಫಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Cuphea
Cuphea nudicostata
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಕುಲ:
Cuphea

Species

Some 260, see text

Synonyms

Cuphaea Moench, orth. var.
Melanium P.Browne
Melvilla A.Anderson
Parsonsia P.Browne[]

Cuphea ignea flowers resemble a tiny burning cigar in color, hence the common name "cigar plant"


ಕ್ಯೂಫಿಯ ಲೈತ್ರೇಸೀ ಕುಟುಂಬದ ಕ್ಯೂಫಿಯ ಮಿನಿಯೇಟ ಎಂಬ ವೈಜ್ಞಾನಿಕ ಹೆಸರಿನ ವಾರ್ಷಿಕ ಸಸ್ಯ. ಇದರ ಹೊಳಪಿನ ಎಲೆಗಳ ಮತ್ತು ನಸುಗೆಂಪು ಹೂವಿನ ಅಲಂಕಾರಕ್ಕಾಗಿ ಈ ಸಸ್ಯ ತೋಟಗಾರಿಕೆಯಲ್ಲಿ ಪ್ರಾಮುಖ್ಯ ಪಡೆದಿದೆ. 12"-15" ಎತ್ತರಕ್ಕೆ ಬೆಳೆಯುವ ಈ ಸಸ್ಯವನ್ನು ಕುಂಡದಲ್ಲಿ ಅಥವಾ ಮಡಿಗಳಲ್ಲಿ ಬೆಳೆಸಬಹುದು.

ಲಕ್ಷಣಗಳು

[ಬದಲಾಯಿಸಿ]

ಅಭಿಮುಖ ಜೋಡಣೆಯನ್ನು ತೋರುವ ಅಂಡಾಕಾರದ ಇಲ್ಲವೆ ಭರ್ಜಿಯಾಕಾರದ ಸರಳ ಎಲೆಗಳು, ರೆಸೀಮ್ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿರುವ ದ್ವಿಲಿಂಗಿ ಹೂಗಳು ಕ್ಯೂಫಿಯದ ಮುಖ್ಯ ಲಕ್ಷಣಗಳಲ್ಲಿ ಕೆಲವು. ದಳಗಳ ಸಂಖ್ಯೆಯಲ್ಲಿ ಗಮನಾರ್ಹವಾದ ವ್ಯತ್ಯಾಸಗಳನ್ನು ನೋಡಬಹುದು.

ಪ್ರಬೇಧಗಳು

[ಬದಲಾಯಿಸಿ]
Cuphea cyanea flowers
Cuphea procumbens fruits

ಕ್ಯೂ.ಇಗ್ನಿಯ ಎಂಬ ಪ್ರಭೇದದಲ್ಲಿ ದಳಗಳೇ ಇಲ್ಲ. ಬದಲಿಗೆ ಕಣ್ಣುಕೋರೈಸುವಂಥ ಬಣ್ಣವುಳ್ಳ ಪುಷ್ಪಗಳಿವೆ. ಕ್ಯೂ. ಹಿಸೋಪಿಫೋಲಿಯ ಎಂಬುದರಲ್ಲಿ ಸಮಗಾತ್ರದ 6 ದಳಗಳಿವೆ. ಇವೆರಡು ಬಗೆಗಳ ನಡುವೆ 2 ದೊಡ್ಡ ಹಾಗೂ 4 ಚಿಕ್ಕ ದಳಗಳನ್ನು ಪಡೆದಿರುವ ಪ್ರಭೇದಗಳೂ (ಕ್ಯೂ.ಪ್ರೊಕಂಬೆನ್ಸ್) ಎರಡು ದಳಗಳನ್ನು ಮಾತ್ರ ಹೊಂದಿರುವ ಪ್ರಭೇದಗಳೂ (ಕ್ಯೂ.ಲಾವಿಯ) ಇವೆ. 12 ದಳಗಳಿರುವ ಭೇದಗಳೂ ಇಲ್ಲದಿಲ್ಲ (ಉದಾ: ಕ್ಯೂ.ಮೈಕ್ರೊಪೆಟಾಲ).

ಅಭಿವೃದ್ಧಿ

[ಬದಲಾಯಿಸಿ]

ಕ್ಯೂಫಿಯವನ್ನು ಬೀಜಗಳ ಮೂಲಕ ವೃದ್ಧಿಸಲಾಗುತ್ತದೆ. ಬೀಜಗಳನ್ನು ಮೊದಲು ಬಿತ್ತನೆ ಮಾಡಿ, 25-26ನೆಯ ದಿನದ ಸಸಿಗಳನ್ನು, 12"ನ ಕುಂಡಗಳಲ್ಲೊ ಇಲ್ಲವೆ ಮಡಿಗಳಲ್ಲಿ 9"-12" ಅಂತರ ಕೊಟ್ಟೊ ನೆಡಬೇಕು. 45, 60 ಮತ್ತು 75ನೆಯ ದಿನ ಒಂದು ಸಾರಿ ತುದಿಯನ್ನು ಜಿಗುಟ ಬೇಕು. 90-105 ದಿನಗಳಲ್ಲಿ ಗಿಡ ಹೂ ಬಿಡಲು ಆರಂಭಿಸುತ್ತದೆ. 140 ದಿನಗಳಲ್ಲಿ ಬೀಜವನ್ನು ಬಿಡಿಸಬಹುದು.

ಉಪಯೋಗಗಳು

[ಬದಲಾಯಿಸಿ]
False Heather (C. hyssopifolia) fruit with seeds

ಇದನ್ನು ಅಲಂಕಾರಕ್ಕಾಗಿ ಬೆಳೆಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "Cuphea P. Browne". Germplasm Resources Information Network. United States Department of Agriculture. 1994-09-07. Archived from the original on 2012-10-10. Retrieved 2010-07-09.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕ್ಯೂಫಿಯ&oldid=1054669" ಇಂದ ಪಡೆಯಲ್ಪಟ್ಟಿದೆ