ಪಂಜಾಬಿ ಹಬ್ಬಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Basant kite

ಪಂಜಾಬಿಗಳು ಅನೇಕ ಹಬ್ಬಗಳನ್ನು ಆಚರಿಸುತ್ತಾರೆ. ಅವುಗಳೆಲ್ಲವೂ ಧಾರ್ಮಿಕ ಆಚರಣೆಗಿಂತ ಹೆಚ್ಚಾಗಿ ಜಾತ್ಯತೀತ ರೂಪಪಡೆದು ಸಾಂಸ್ಕೃತಿಕ ಆಚರಣೆಗಾಗಿ ಎಲ್ಲಾ ಧರ್ಮಗಳ ಜನರಿಂದ ಆಚರಿಸಲ್ಪಡುತ್ತವೆ. ಹಬ್ಬಗಳ ಆಚರಣೆಗೆ ದಿನಗಳು ಪಂಜಾಬಿ ಕ್ಯಾಲೆಂಡರ್‍ನ ಆಧಾರದಲ್ಲಿ ನಡೆಯುತ್ತವೆ.

ಈ ಕೆಳಗಿನವು ಪಂಜಾಬಿ ಹಬ್ಬಗಳ ಪಟ್ಟಿ.

ಪಂಜಾಬಿ ಹಬ್ಬಗಳು[ಬದಲಾಯಿಸಿ]

ಮಾಘಿ[ಬದಲಾಯಿಸಿ]

Kheer for Maghi

ಮಕರ ಸಂಕ್ರಾಂತಿ ಹಬ್ಬವು ಪಂಜಾಬಿಗರಲ್ಲಿ 'ಮಾಘಿ' ಎಂಬ ಹೆಸರಿನಿಂದ ಆಚರಿಸಲ್ಪಡುತ್ತದೆ. ಜನರು ಗುರುದ್ವಾರ ಅಥವ ಗುಡಿಗಳಿಗೆ ಭೇಟಿ ನೀಡುತ್ತಾರೆ. ಹಾಲಿನಲ್ಲಿ ಕುದಿಸಿ ಮಾಡಿದ ಅಕ್ಕಿಯ ಖೀರು ಆ ದಿನದ ವಿಶೇಷ ತಿನಿಸು. [೧] ಈ ಸಂದರ್ಭದಲ್ಲಿ ಅನೇಕ ಕ್ರೀಡಾ ಆಚರಣೆಗಳು ನಡೆಯುತ್ತವೆ.

ಲೋಹ್ರಿ[ಬದಲಾಯಿಸಿ]

Lohri fire

ಲೋಹ್ರಿಯು ಪಂಜಾಬ್ ಪ್ರಾಂತ್ಯದ ಚಳಿಗಾಲದ ಸುಗ್ಗಿ ಹಬ್ಬ. ಚಳಿಗಾಲದಲ್ಲಿ ಕಬ್ಬಿನ ಸುಗ್ಗಿಯ ಸಮಯ. ಇದು ಚಳಿಗಾಲದ ಮಕರ ಸಂಕ್ರಾಂತಿಯ (ವರ್ಷದಲ್ಲಿನ ಅತ್ಯಂತ ಕಡಿಮೆ ಹಗಲುಳ್ಳ ದಿನ) ಸಾಂಕೇತಿಕ ಆಚರಣೆಯೂ ಆಗಿದೆ. ಇದು ರೈತರ ಆರ್ಥಿಕ ವರ್ಷದ ಕೊನೆಯ ದಿನ.[೨]

ವಸಂತ ಹಬ್ಬ (ಬಸಂತ್ ಗಾಳಿಪಟದ ಹಬ್ಬ)[ಬದಲಾಯಿಸಿ]

Kite flying on Basant

ವಸಂತ ಋತುವಿನ ಸ್ವಾಗತಕ್ಕಾಗಿ ಇದನ್ನು ಆಚರಿಸಲಾಗುತ್ತದೆ.[೩] ಹಳದಿ ಬಣ್ಣ ಆ ದಿನಾಚರಣೆಯ ಸಾಂಪ್ರದಾಯಿಕ ಬಣ್ಣವಾಗಿದ್ದು, ಕೇಸರಿ ಅನ್ನ ಆ ದಿನದ ವಿಶೇಷ ತಿನಿಸಾಗಿರುತ್ತದೆ.

ಹೋಳಿ[ಬದಲಾಯಿಸಿ]

India - Colour Powder stalls on Holi- 7242

ಹೋಳಿ ಹಬ್ಬ ಬಣ್ಣಗಳ ಹಬ್ಬವಾಗಿದ್ದು ಪರಸ್ಪರ ಬಣ್ನಗಳನ್ನು ಎರಚಿಕೊಂಡು ಆಚರಿಸಲ್ಪಡುತ್ತದೆ. ಇದು ಪಂಜಾಬಿ ಚಾಂದ್ರಮಾನ ಕ್ಯಾಲೆಂಡರ್‍ನ ಮೊದಲ ಮಾಸವಾದ ಚೇತ್‍ನ ಮೊದಲ ದಿನದಂದು ಆಚರಿಸಲ್ಪಡುತ್ತದೆ ಮತ್ತು ವಸಂತ ಋತುವಿನ ಆರಂಭವನ್ನು ಸೂಚಿಸುತ್ತದೆ.

ವೈಶಾಖಿ[ಬದಲಾಯಿಸಿ]

Mela

ಇದು ಪಂಜಾಬಿ ಹೊಸವರ್ಷ ಮತ್ತು ಸುಗ್ಗಿಯ ಹಬ್ಬ. ಈದಿನದಂದು ಪಂಜಾಬಿನೆಲ್ಲೆಡೆ ಜಾತ್ರೆಗಳ ನಡೆಯುತ್ತವೆ.

ರಾಖ್ರಿ[ಬದಲಾಯಿಸಿ]

Threads of love Rakhri

ಅಣ್ಣ-ತಂಗಿಯರ ಹಬ್ಬವಾದ ರಕ್ಷಾ ಬಂಧನ ಹಬ್ಬವು ಪಂಜಾಬಿನಲ್ಲಿ 'ರಾಖ್ರಿ' ಎಂಬ ಹೆಸರಿನಿಂದ ಆಚರಿಸಲ್ಪಡುತ್ತದೆ.

ತೀಯಾ (ತೀಜ್)[ಬದಲಾಯಿಸಿ]

ಈ ಹಬ್ಬದಲ್ಲಿ ಹುಡುಗಿಯರು ಮರಗಳಿಗೆ ಕಟ್ಟಿರುವ ಜೋಕಾಲಿಗಳನ್ನು ಆಡುವುದರ ಮೂಲಕ ಆಚರಿಸುತ್ತಾರೆ.

ತೀಯಾ ಹಬ್ಬದ ಆಚರಣೆ.[೪]

ಇದು ಮುಂಗಾರನ್ನು ಸ್ವಾಗತಿಸುವ ಹಬ್ಬ. ಈ ಆಚರಣೆಯು ತೀಜ್ ದಿನದಿಂದ ಆರಂಭವಾಗಿ ಹದಿಮೂರು ದಿನಗಳ ಕಾಲ ನಡೆಯುತ್ತದೆ. ಹುಡುಗಿಯರು ಮತ್ತು ಹೆಂಗಸರು 'ಗಿಧಾ' ನೃತ್ಯವನ್ನು ಮಾಡುತ್ತಾರೆ ಮತ್ತು ಬಂಧು ಬಳಗವನ್ನು ಭೇಟಿ ಮಾಡುತಾರೆ.

ಉಲ್ಲೇಖಗಳು[ಬದಲಾಯಿಸಿ]

ಹೊರಕೊಂಡಿಗಳು[ಬದಲಾಯಿಸಿ]

  1. Sundar mundarye ho by Assa Singh Ghuman Waris Shah Foundation ISBN B1-7856-043-7
  2. [೧] Singh, Hazara: Seasonal Festivals and Commemorative Days. Publisher: Hazara Singh Publications
  3. ASPECTS OF PUNJABI CULTURE S. S. NARULA Published by PUNJABI UNIVERSITY, INDIA, 1991
  4. About Teej