ರೂಪನಗರ
Rupnagar
ਰੂਪਨਗਰ Ropar | |
---|---|
Archeological Site and Historical City | |
Nickname: Ropar | |
Country | India |
State | Punjab |
District | Rupnagar |
Government | |
• Type | municipal council |
• Body | Ropar MC |
Elevation | ೨೬೨ m (೮೬೦ ft) |
Population (2001) | |
• Total | ೪೮,೧೬೫ |
Languages | |
• Official | Punjabi |
Time zone | UTC+5:30 (IST) |
PIN | 140 001 |
Telephone code | 91-1881 |
Vehicle registration | PB 12 |
Website | rupnagar |
ರೊಪರ್ (ಪಂಜಾಬಿ:ਰੂਪਨਗਰ)ಎಂದೇ ಕರೆಯಲ್ಪಡುತ್ತಿದ್ದ ರೂಪನಗರ, ಸಟಲಜ್ ನದಿಯ ಎಡಭಾಗದಲ್ಲಿ, ಉಪಸ್ಥಿತವಿರುವ ಪುರಾತನ ನಗರ. ಈ ನಗರವನ್ನು, 11 ನೇ ಶತಮಾನದಲ್ಲಿ ಆಳಿದ ರಾಜಾ ರೋಕೇಶ್ವರ್ ನ ಮಗನಾದ ರಾಜಾ ರೂಪಸೇನನ ನಂತರ ಹೆಸರಿಸಲಾಗಿದೆ. ಇದು ಇಂಡಸ್ ವ್ಯಾಲಿ ನಾಗರೀಕತೆಯ ನಗರಗಳಲ್ಲಿ, ಒಂದು ಮುಖ್ಯ ನಗರವಾಗಿತ್ತು. ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆ ನಡೆಸಿದ ಸಂಶೋಧನ ಕಾರ್ಯದಲ್ಲಿ, ಸುಮಾರು ಆರು ವಿವಿಧ ಕಾಲದ ನಾಗರೀಕತೆಯ ಅವಶೇಷಗಳು ಲಭ್ಯವಾಗಿದ್ದವು. ಇಲ್ಲಿ ದೊರೆತ ಅವಶೇಷಗಳನ್ನು ಕಾಪಾಡಿ, ಸಂರಕ್ಷಿಸಲು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆ ಒಂದು ವಿಶೇಷವಾದ ಸಂಗ್ರಹಾಲಯವನ್ನು ಕಟ್ಟಿಸಿತು. ಇದು ರೂಪನಗರ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.[೧]
ರೂಪನಗರ ಸುತ್ತಮುತ್ತಲಿನ ಪ್ರವಾಸಿ ತಾಣಗಳು
[ಬದಲಾಯಿಸಿ]ರಾಜ್ಯದ ಗಡಿ ಭಾಗದ ಸಮೀಪಕ್ಕೆ, ಉಪಸ್ಥಿತವಿರುವ ಇದು, ಪೂರ್ವ ಭಾಗದಲ್ಲಿ ಸಟ್ಲಜ್ ನದಿ ಮತ್ತು ಶಿವಾಲಿಕ ಸಾಲು ಬೆಟ್ಟಗಳ ನಡುವೆ ನೆಲೆಗೊಂಡಿದೆ. ಈ ನಗರವು, ಅನೇಕ ಪ್ರವಾಸಿ ತಾಣಗಳಿಗೆ ಮನೆಯಾಗಿದೆ. ಅವು ಯಾವುವೆಂದರೆ ಆನಂದಪುರ ಸಾಹಿಬ್, ಭಾಕ್ರನಂಗಲ್ ಅಣೆಕಟ್ಟು, ಜತೇಶ್ವರ ಮಹಾದೇವ ಮಂದಿರ, ಕಿರಾತ್ ಪುರ ಸಾಹಿಬ್ ಮುಂತಾದವುಗಳು. ರೂಪನಗರ ಪ್ರವಾಸ ಕೈಗೊಂಡಾಗ, ಪ್ರವಾಸಿಗರು ಸಮೀಪದ ಇತರ ಪ್ರವಾಸಿ ಸ್ಥಳಗಳಿಗೂ ಭೇಟಿ ಕೊಡಬಹುದು. ರೂಪನಗರದಿಂದ ರಾಜ್ಯದ ರಾಜಧಾನಿಯಾಗಿರುವ ಚಂದಿಗಡ್ ಕೆಲವೇ ಗಂಟೆಗಳ ಪ್ರಯಾಣ. ಅಲ್ಲಿ ಪ್ರವಾಸಿಗರು ಹಾಯಾಗಿ ತಂಗಬಹುದು. ಇದನ್ನು ಹೊರತು ಪಡಿಸಿಯೂ ಪ್ರವಾಸಿಗರು, ಅನೇಕ ಪ್ರವಾಸಿ ತಾಣಗಳಾದ ಶಿಮ್ಲಾ(125 ಕಿ.ಮಿ) ಮತ್ತು ಕಸೌಲಿಗೆ (98 ಕಿ.ಮಿ) ಭೇಟಿ ಕೊಡಬಹುದು.
ರೋಚಕತೆಗಳು ಮತ್ತು ಸೌಲಭ್ಯಗಳು
[ಬದಲಾಯಿಸಿ]ನಗರದ ನಿವಾಸಿಗಳು ಅನೇಕ ಹಬ್ಬಗಳನ್ನು ಹೆಚ್ಚಿನ ಹುರುಪು ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಇದು ಇಲ್ಲಿನ ಜನರ ಕೋಮು ಸೌಹಾರ್ದತೆಯನ್ನು ಪ್ರತಿಬಿಂಬಿಸುತ್ತದೆ. ಈ ನಗರದಲ್ಲಿ ಹೊಲ್ಲಮೊಹಲ್ಲಾ ಎಂಬ ದೊಡ್ಡ ಹಬ್ಬವನ್ನು ಆಚರಿಸುತ್ತಾರೆ. ಇದನ್ನು, ಪ್ರತಿ ವರ್ಷ ಹೋಲಿ ಹಬ್ಬದ ನಂತರ ಆನಂದಪುರ ಸಾಹಿಬ್ ನಲ್ಲಿ ಆಚರಿಸಲಾಗುತ್ತದೆ. ದೇಶದೆಲ್ಲಡೆ ಇರುವ ಸಿಖ ಸಮುದಾಯದವರು ಮೂರು ದಿವಸಗಳ ಕಾಲ ನಡೆಯುವ ಈ ಜಾತ್ರೆಗೆ ಆಗಮಿಸುತ್ತಾರೆ. ಕಡೆಯ ದಿವಸ ನಿಹಂಗರು ಅಂದರೆ, ಸಿಖ ಯೋಧರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಆಯುಧಗಳನ್ನು ಹಿಡಿದು ಹೋಲಗಡ ಕೋಟೆಯ ಹತ್ತಿರ ನಡೆಯುತ್ತಾರೆ. ಈ ಸಂದರ್ಭದಲ್ಲಿ ಗುಡಾರ ಹೂಡಿಕೆ, ಕತ್ತಿ ವರಸೆ, ಕುದುರೆ ಸವಾರಿಯನ್ನು ಚರಣ ಗಂಗಾದ ಮರಳು ಹಾಸಿಗೆಯಲ್ಲಿ ಪ್ರದರ್ಶಿಸುತ್ತಾರೆ. ಈ ನಗರವು ಅನೇಕ ಹೊಟೆಲ್ ಗಳನ್ನು ಮತ್ತು ರೆಸ್ಟೋರೆಂಟ್ ಗಳನ್ನು ಒಳಗೊಂಡಿದೆ. ಇದರ ಜೊತೆಗೆ, ರಸ್ತೆ ಬದಿಯ ಪಕ್ಕಾ ಪಂಜಾಬಿ ಧಾಬಾಗಳೂ ಲಭ್ಯವಿದೆ. ಈ ಎಲ್ಲಾ ವೈವಿಧ್ಯತೆ, ರೂಪನಗರ ಪ್ರವಾಸೊದ್ಯಮವನ್ನು ಜನಪ್ರಿಯವನ್ನಾಗಿ ಮಾಡಿದೆ.
ರೂಪನಗರವನ್ನು ತಲುಪುವ ಬಗೆ
[ಬದಲಾಯಿಸಿ]ರಾಷ್ಟ್ರೀಯ ಹೆದ್ದಾರಿ 21 ರೂಪನಗರದಲ್ಲಿ ಹಾಯುವುದರಿಂದ, ಈ ನಗರವು ಪಂಜಾಬಿನ ಬಹುತೇಕ ಎಲ್ಲಾ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಹಾಗೆ, ರಾಷ್ಟ್ರ ರಾಜಧಾನಿಯಾದ ನವದೆಹಲಿ ಸಹ ನಗರದಿಂದ 297 ಕಿ.ಮಿ ದೂರದಲ್ಲಿದೆ ಮತ್ತು ರಾಜ್ಯದ ರಾಜಧಾನಿಯಾದ ಚಂದಿಗಡ ರೂಪನಗರದಿಂದ 45 ಕಿ.ಮಿ ದೂರದಲ್ಲಿದೆ. ಪ್ರವಾಸಿಗರು ಹತ್ತಿರದ ಅಂತಾರಾಷ್ಟ್ರೀಯ ಹಾಗು ರಾಷ್ಟ್ರೀಯ ಅಂದರೆ, ಕ್ರಮವಾಗಿ ಅಮೃತ್ಸರ ಹಾಗು ಚಂದಿಗಡಿನ ವಿಮಾನನಿಲ್ದಾಣದಿಂದ ವಾಯು ಯಾನದ ಸೌಲಭ್ಯ ಪಡೆದು ಸುಲಭವಾಗಿ ಪ್ರಯಾಣಿಸಬಹುದು. ಭಾರತದ ಅನೇಕ ನಗರಗಳಿಗೆ, ರೂಪನಗರವು ಉತ್ತಮ ಸಂಪರ್ಕ ಹೊಂದಿರುವುದರಿಂದ ಪ್ರವಾಸಿಗರು ರೈಲು ಮಾರ್ಗವಾಗಿ ಕೂಡ ಪ್ರಯಾಣಿಸಬಹುದು.
ರೂಪನಗರಕ್ಕೆ ಭೇಟಿ ಕೊಡಲು ಸೂಕ್ತ ಸಮಯ
[ಬದಲಾಯಿಸಿ]ಉತ್ತರ ಭಾರತದ ಇತರ ಪ್ರದೇಶಗಳಂತೆ, ರೂಪನಗರ ಹವಾಮಾನವು ಬೇಸಿಗೆಯಲ್ಲಿ ಸುಡುವ ಬಿಸಿಲು, ಮಳೆಗಾಲದಲ್ಲಿ ಭಾರಿ ಮಳೆ ಹಾಗು ಚಳಿಗಾಲದಲ್ಲಿ ಕೊರೆಯುವ ಚಳಿಯನ್ನು ಹೊಂದಿರುತ್ತದೆ. ಹಾಗಾಗಿ ರೂಪನಗರಕ್ಕೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಸೆಪ್ಟೆಂಬರ್ ನಿಂದ ನವೆಂಬರ್ ವರೆಗಿನ ಅವಧಿ.
ಉಲ್ಲೇಖಗಳು
[ಬದಲಾಯಿಸಿ]