ಬಟಿಂಡಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Bathinda
ਬਠਿੰਡਾ
The heart of Malwa region
City
Qila Mubarak,the landmark of Bathinda City
Qila Mubarak,the landmark of Bathinda City
CountryIndia
StatePunjab
DistrictBathinda
Government
 • BodyMunicipal Corporation
 • CommissionerSh. Anil Garg
 • Member of ParliamentHarsimrat Kaur Badal (Shiromani Akali Dal)
 • MayorSh. Balwant Rai Nath
Elevation
೨೧೦ m (೬೯೦ ft)
Population
 (2011)
 • Total೨,೮೫,೭೮೮
 • Rank5th in Punjab
Languages
 • OfficialPunjabi
Time zoneUTC+5:30 (IST)
PIN
151001
Telephone code+91-164-XXX XXXX
Vehicle registrationPB 03
Railways Stations in CityBathinda railway station,Bathinda Cantt, Behman Dewana Railway Station, Goniana Railway Station, Bhucho Mandi Railway Station
Websitewww.bathinda.nic.in

ಬಟಿಂಡಾವು(Punjabi: ਬਠਿੰਡਾ) (ಹಿಂದಿ: बठिंडा) ಪಂಜಾಬಿನಲ್ಲಿರುವ ಒಂದು ಪ್ರಸಿದ್ಧವಾದ ಪ್ರಾಚೀನ ನಗರವಾಗಿದೆ. ಇದು ಮಾಳ್ವ ಪ್ರಾಂತ್ಯದ ಹೃದಯಭಾಗದಲ್ಲಿದೆ. ಆರನೆಯ ಶತಮಾನದಲ್ಲಿ ಈ ನಗರವನ್ನು ಆಳಿದ ಭಾಟಿ ರಜಪೂತರಿಂದಾಗಿ ಈ ಹೆಸರು ಬಂದಿದೆ. ತನ್ನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯಿಂದಾಗಿ ಈ ಊರು ದೇಶ - ವಿದೇಶಗಳಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.

ಬಟಿಂಡಾದ ಸುತ್ತ- ಮುತ್ತ ಇರುವ ಪ್ರವಾಸಿ ಆಕರ್ಷಣೆಗಳು[ಬದಲಾಯಿಸಿ]

ಬಟಿಂಡಾದಲ್ಲಿ ಹಲವಾರು ದೇವಾಲಯಗಳು ಮತ್ತು ಗುರುದ್ವಾರಗಳಿದ್ದು, ಈ ಊರನ್ನು ಧಾರ್ಮಿಕ ದೃಷ್ಟಿಯಿಂದ ಒಂದು ಪ್ರಮುಖ ಕೇಂದ್ರವಾಗಿ ಮಾಡಿದೆ. ಇವುಗಳಲ್ಲಿ ಅತ್ಯಂತ ಪ್ರಮುಖವಾದುದು ಕಿಲಾ ಮುಬಾರಕ್. ಚಿಕ್ಕ ಚಿಕ್ಕ ಇಟ್ಟಿಗೆಗಳಿಂದ ನಿರ್ಮಾಣಗೊಂಡ ಈ ಕೋಟೆಯು ತನ್ನ ವಾಸ್ತುಶಿಲ್ಪದ ದೃಷ್ಟಿಯಿಂದ ಅತ್ಯಂತ ಪ್ರಮುಖ ಸ್ಮಾರಕವಾಗಿ ಗುರುತಿಸಿಕೊಂಡಿದೆ. ಗುರುದ್ವಾರ ಲಖಿ ಜಂಗಲ್ ಸಾಹಿಬ್ ದೇಶದಲ್ಲಿ ನೆಲೆಗೊಂಡಿರುವ ಸಿಖ್ಖರ ಪಾಲಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಕಾಡಿನ ನಡುವೆ ನೆಲೆಗೊಂಡಿರುವ ಈ ಗುರುದ್ವಾರವು ಬಟಿಂಡಾದ ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.[೧]

ಚೇತಕ್ ಪಾರ್ಕ್, ಡಂಡಮ ಸಾಹಿಬ್, ಬಟಿಂಡಾ ಕೆರೆ, ಮೈಸೆರ್ ಖಾನಾ, ಪ್ರಾಣಿ ಸಂಗ್ರಹಾಲಯ, ದೋಬಿ ಬಜಾರ್ ಮತ್ತು ಪೀರ್ ಹಾಜಿ ರಟ್ಟನ್‍ರವರ ಮಝಾರ್ ಇಲ್ಲಿ ನೆಲೆಗೊಂಡಿರುವ ಇನ್ನಿತರ ಪ್ರವಾಸಿ ತಾಣಗಳಾಗಿವೆ. ಪ್ರವಾಸಿಗರು ಉಳಿದುಕೊಳ್ಳಲು ಐಶಾರಾಮಿ ವಸತಿಯನ್ನು ಬಯಸುವಂತಿದ್ದಲ್ಲಿ, ಅವರು ಬಟಿಂಡಾ ಕೋಟೆಗೆ ಭೇಟಿ ನೀಡಬಹುದು. 1930ರಲ್ಲಿ ನಿರ್ಮಾಣಗೊಂಡ ಈ ಕೋಟೆಯನ್ನು ಪಟಿಯಾಲ ಎಸ್ಟೇಟಿನ ಮಹಾರಾಜ ಭೂಪಿಂದರ್ ಸಿಂಗ್‍ರವರ ಸೇನೆಯ ವಸತಿಯನ್ನಾಗಿ ಬಳಸಲಾಗುತ್ತಿತ್ತು. ಇದನ್ನು ಇಂದು ಚತುರ್ತಾರ ಹೋಟೆಲ್ ಆಗಿ ಪರಿವರ್ತಿಸಲಾಗಿದೆ.[೨]

ಬಟಿಂಡಾಗೆ ತಲುಪುವುದು ಹೇಗೆ[ಬದಲಾಯಿಸಿ]

ದೆಹಲಿಯಿಂದ 326 ಕಿ.ಮೀ ದೂರದಲ್ಲಿರುವ ಬಟಿಂಡಾಗೆ ರಸ್ತೆಯ ಮೂಲಕ 6 ಗಂಟೆಗಳ ಪ್ರಯಾಣವಧಿ ತಗುಲುತ್ತದೆ. ಪಂಜಾಬಿನ ಪ್ರಮುಖ ನಗರಗಳಿಂದ ಬಟಿಂಡಾಗೆ ಬಸ್, ಕ್ಯಾಬ್ ಮತ್ತು ಟ್ಯಾಕ್ಸಿಗಳ ಮೂಲಕ ತಲುಪಬಹುದು. ದೇಶದ ಪ್ರಮುಖ ನಗರಗಳಿಂದ ಬಟಿಂಡಾಗೆ ರೈಲುಗಳ ಸಂಪರ್ಕವಿದೆ. ಪ್ರವಾಸಿಗರು ಲೂಧಿಯಾನಗೆ ವಿಮಾನದ ಮೂಲಕ ತಲುಪಿ ಅಲ್ಲಿಂದ ಬಟಿಂಡಾಗೆ ಬಸ್ ಅಥವಾ ಟ್ಯಾಕ್ಸಿಯಲ್ಲಿ ತೆರಳಬಹುದು.

ಬಟಿಂಡಾಗೆ ಭೇಟಿ ನೀಡಲು ಅತ್ಯುತ್ತಮ ಕಾಲ[ಬದಲಾಯಿಸಿ]

ಬಟಿಂಡಾಗೆ ಭೇಟಿ ನೀಡಬೇಕಾಂದದಲ್ಲಿ ಅಕ್ಟೊಬರ್ ನಿಂದ ಮಾರ್ಚ್ ನಡುವಿನ ಅವಧಿಯಲ್ಲಿ ಭೇಟಿ ನೀಡುವುದು ಉತ್ತಮ.

ಉಲ್ಲೇಖಗಳು[ಬದಲಾಯಿಸಿ]

  1. "Raziya Sultan". Archived from the original on 2012-03-31. Retrieved 2016-07-05.
  2. "ಆರ್ಕೈವ್ ನಕಲು". Archived from the original on 2009-11-26. Retrieved 2016-07-05.
"https://kn.wikipedia.org/w/index.php?title=ಬಟಿಂಡಾ&oldid=1085892" ಇಂದ ಪಡೆಯಲ್ಪಟ್ಟಿದೆ