ವಿಷಯಕ್ಕೆ ಹೋಗು

ಸದಸ್ಯ:Aishwarya prakash/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೈಬೀರಿಯನ್ ಹಸ್ಕಿ

[ಬದಲಾಯಿಸಿ]

ಈಶಾನ್ಯ ಸೈಬೀರಿಯಾ, ರಶಿಯಾದಲ್ಲಿ ಹುಟ್ಟಿಕೊಂಡ ಒಂದು ಮಧ್ಯಮ ಗಾತ್ರದ ಕೆಲಸ ಮಾಡುವ ಶ್ವಾನ ತಳಿ. ತಳಿ ಸ್ಪಿಟ್ಜ್ ಆನುವಂಶಿಕ ಕುಟುಂಬಕ್ಕೆ ಸೇರಿದ್ದು ಇದರ ದಟ್ಟವಾದ ಉಣ್ಣೆಯ ಡಬಲ್ ಕೋಟ್ ಗುರುರತಿಸಲ್ಪಡುತ್ತದೆ...ತ್ರಿಕೋನ ಕಿವಿ ಇದರ ಒಂದು ಗುಣವಾಗಿದೆ. ಸೈಬೀರಿಯನ್ ಹಸ್ಕೀಗಳನ್ನುಅಲ್ಲಿಯ ಚುಕ್ಚಿ ಜನರು ಸಾಕುತ್ತಾರೆ. ಸಕ್ರಿಯ,ಶಕ್ತಿಯುತ, ಚೇತರಿಸಿಕೊಳ್ಳುವ ಇವರ ಪೂರ್ವಿಕರು, ಸೈಬೀರಿಯನ್ ಆಕ್ಟ್ರಿಕ್ ಅತ್ಯಂತ ಶೀತ ಮತ್ತು ಕಠಿಣ ವಾತಾವರಣದಲ್ಲಿ ವಾಸಿಸುತ್ತಿದ್ದ ತಳಿಯಾಗಿದ್ದರು.

ವಂಶಾವಳಿಯ ಸಂಪಾದನೆ

[ಬದಲಾಯಿಸಿ]

೧೯೭೯ ರಲ್ಲಿ ಒಂದು ಅಧ್ಯಯನದ ಪ್ರಕಾರ ಇವುಗಳನ್ನು ಸಣ್ಣ ಮುಖದ ತೋಳುಗಳು" ಎಂದು ಗುರುತಿಸಲಾಯಿತು. ತದನಂತರ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಇವುಗಳನ್ನು ಎರಡು ಬಗೆಗೆ ವಿಂಗಡಿಸಿದರು.ಒಂದು ತೋಳದ ಮುಖವುಳ್ಳದ್ದು,ಇನ್ನೊಂದು ನಾಯಿಯ ಮುಖವುಳ್ಳದ್ದು. ಹಾಗೆಯೆ ಗ್ರೀನ್ ಲ್ಯಾಂಡ್ ಮತ್ತು ಸೈಬೀರಿಯಾದಲ್ಲಿ ಇದ್ದ ಒಂದು ತರಹದ ನಾಯಿ,ಎಸ್ಕಿಮೊ ಶ್ವಾನಗಳಿಗೆ ಇದನ್ನು ಹೋಲಿಸಲಾಯಿತು. ಒಂದು ಸೈಬೀರಿಯನ್ ಹಸ್ಕಿ ಕೋಟ್ ಇತರೆ ನಾಯಿಗಳಿಗಿಂತ ವಿಬ್ಭಿನ್ನವಾಗಿ ಇರುತ್ತದೆ.ಏಕೆಂದರೆ ಸೈಬೀರಿಯನ್ ಹುಸ್ಕಿಗಳಿಗೆ ಎರಡು ಕೋಟ್ ಗಳು ಇರುತ್ತದೆ. ದಟ್ಟವಾದ ಒಳ ಅಂಗಿ ಮತ್ತು ಸಣ್ಣದಾದ ನೇರ ಸಿಬ್ಬಂದಿ ಕೂದಲುಗಳ ಮುಂದೆ ಮೇಲಂಗಿ ಚಳಿಗಾಲದಲ್ಲಿ ನಾಯಿಗಳನ್ನು ರಕ್ಶಿಸುತ್ತದೆ. ಆದರೆ ಕೋಟ್ ಬೇಸಿಗೆಯಲ್ಲಿ ಶಾಖ ಪ್ರತಿಬಿಂಬಿಸುತ್ತದೆ. ಇದು ಕಡಿಮೆ ಅಂದರು ೫೦-೬೦ ಡಿಗ್ರೀ ತಾಪಮಾನವನ್ನು ತಡೆದುಕೊಳ್ಳುತ್ತದೆ.

ವರ್ಣನೆ

[ಬದಲಾಯಿಸಿ]

ಕೋಟ್:ಸೈಬೀರಿಯನ್ ಹಸ್ಕಿ ಜಾತಿಯ ನಾಯಿಯು ವಿವಿಧ ಬಣ್ಣ ಹಾಗು ವಿವಿಧ ರೋಪಗಳಲ್ಲಿ ಕಾಣಸಿಗುತ್ತದೆ. ಸಾಮಾನ್ಯವಾಗಿ ಅದರ ರೋಪವು ಹೀಗಿರುತ್ತದೆ, ಬಿಳಿ ಪಾದ,ಬಿಳಿ ಕಾಲು ಮುಖದ ಮೇಲೆ ಕಲೆಗಲು ಹಾಗೂ ಬಾಲದ ತುದಿಯು ಕೋದಲಿನಿಂದ ಕೂಡಿದ್ದು ನುಣುಪಾಗಿರುತ್ತದೆ.ಅದರ ಮೇಲ್ಹೊದ್ದಿಗೆಯು ಕಪ್ಪು,ಬಿಳಿ,ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿ ಕಾಣುತ್ತದೆ.ಮೇಲ್ಹೊದ್ದಿಗೆಯ ಕೂದಲು ಒಮ್ಮೊಮ್ಮೆ ಉದುರಿ ಹೋಗುತ್ತದೆ.ಅದಕ್ಕಗಿ ವಾರಕ್ಕೆ ಒಂದು ಬಾರಿಯಾದರು ಅದರ ಮೇಲ್ಹೊದ್ದಿಗೆಯನ್ನು ಬಾಚಬೇಕಾಗುತ್ತದೆ.

ಕಣ್ಣುಗಳು

[ಬದಲಾಯಿಸಿ]

ಅಮೇರಿಕನ್ ಕೆನಲ್ ಕ್ಲಬ್ ವರ್ಣಿಸುವ ಹಾಗೆ ಸೈಬೀರಿಯನ್ ಹಸ್ಕಿಗಳಿಗೆ ಕಣ್ಣುಗಲು ಬಾದಾಮಿ ಆಕಾರದಲ್ಲಿದ್ದು ಚಿಕ್ಕದಾಗಿ ಹೊಳ್ಳಗಳಲ್ಲಿ ಕೂತಿರುತ್ತದೆ.ಅದರ ಕಣ್ಣುಗಳು ಎರಡು ಬಣ್ಣಗಳಲ್ಲಿ ಕಂಡು ಬರುತ್ತದೆ.ಬೂದು ಹಾಗು ನೀಲಿ,ಈ ಎರಡು ಬಣ್ಣಗಳು ಕಣ್ಣಿನ ಅರ್ಧ ಬಾಗಕ್ಕೆ ಮಾತ್ರ ನೀಮಿತವಾಗಿದ್ದು ಅದರ ನೋಟಕ್ಕೆ ಹಾನಿಯನ್ನುಂಟು ಮಾಡುವುದಿಲ್ಲ.

ಸೈಬೀರಿಯನ್ ಹಸ್ಕಿಗಳ ಮೂಗುಗಳು ಚೌಕಾಕಾರದಲ್ಲಿ ಇದ್ದು ಕಪ್ಪು ಬಣ್ಣದಿಣ್ದ ಕೂಡಿರುತ್ತದೆ.ಕೆಲವೊಂದು ನಾಯಿಗಳಲ್ಲಿ ಮೂಗು ಸ್ವಲ್ಪ ಮಟ್ಟಿಗೆ ಬೂದು ಬಣ್ಣದಿಂದ ಕೂಡಿದ್ದು ಇದನ್ನು ಹೈಪೊಪಿಗ್ಮೆಂಟೇಶನ್ ಎಂದು ಕರೆಯುತ್ತರೆ.ಈ ಹೈಪೊಪಿಗ್ಮೆಂಟೇಶನ್ ನಲ್ಲಿ ನಾಯಿಗಳು ಸಮ್ಮರ್ ನೋಸ್ ಹಾಗು ವಿಂಟರ್ ನೋಸ್ ಪ್ರಕ್ರಿಯೆಯನ್ನು ತೋರ್ಪಡಿಸುತ್ತವೆ.

ಸೈಬೀರಿಯನ್ ಹಸ್ಕಿ ನಾಯಿಗಳಿಗೆ ಬಾಲವು ದಪ್ಪವಾಗಿ ,ಒತ್ತು ಕೋದಲಿನಿಂದ ಕೂಡಿದ್ದು ಕೆಲವೊಮ್ಮೆ ಚಳಿಗಾಲದಲ್ಲಿ ಅದನ್ನು ಸುತ್ತುವರೆದು ತನ್ನ ಮೈಯನ್ನು ಬೆಚ್ಚಗೆ ಇರಿಸಿಕೊಂಡು ಚಳಿಯಿಂದ ರಕ್ಷಿಸಿಕೊಳ್ಳುತ್ತದೆ.

ಗಾತ್ರ

[ಬದಲಾಯಿಸಿ]

ಸೈಬೀರಿಯನ್ ಜಾತಿಯ ಗಂಡು ನಾಯಿಗಳು ೨೧-೨೪ ಇಂಚು ಉದ್ದವಿರುತ್ತದೆ ಹಾಗೆಯೆ ೪೫-೬೦ ಪೌಂಡ್ ಗಳಷ್ಟು, ಅದೇ ರೀತಿ ಹೆಣ್ಣು ನಾಯಿಗಳು ೨೦-೨೨ ಇಂಚು ಉದ್ದವಿದ್ದು ೩೫-೫೦ ಪೌಂಡ್ ಗಳ ತೊಕವಿರುತ್ತದೆ.

ಸ್ವಭಾವಗಳು

[ಬದಲಾಯಿಸಿ]

ಹಸ್ಕಿಗಳು ಬೊಗಳುವುದಕ್ಕಿಂತ ಹೆಚ್ಚು ನರಿಯ ಹಾಗೆ ಊಳು ಇಡುತ್ತದೆ.ಈ ನಾಯಿಗಳು ಬೇಟೆಗಾರರಿಂದ ತಪ್ಪಿಸಿಕೊಳ್ಳಲು ಮಣ್ಣು ತೆಗೆದು ಹಳ್ಳದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ.ಈ ಜಾತಿಯ ನಾಯಿಗಳಿಗೆ ೬ ಇಂಚು ಉದ್ದದ ಬೇಲಿಯನ್ನು ಹಾಕಿ ಕಾಪಾಡುತ್ತಾರೆ.ಕೆಲವರು ತರಬೇತಿಗಾರರನ್ನು ಕರೆಸಿ ಈ ನಾಯಿಗಳಿಗೆ ತರಬೇತಿ ಕೊಡಿಸುತ್ತಾರೆ.

ಆರೋಗ್ಯ

[ಬದಲಾಯಿಸಿ]

ಈ ನಾಯಿಗಳಿಗೆ ೧೨-೧೪ ವರ್ಷದ ಜೀವಾವದಿ ಇರುತ್ತದೆ.ಈ ನಾಯಿಗಳು ಕಾಟರಾಕ್ಟ್ ಡಿಸ್ಟ್ರೋಫಿ ಕ್ಯಾನ್ ಗ್ಲೊಕ್ಯುಮ ಮತ್ತು ಬ್ರೋಂಕೈಟಿಸ್ ರೀತಿಯ ಕಾಯಿಲೆಗಳಿಗೆ ಒಳಗಾಗುತ್ತಿದೆ.ಹಿಪ್ಸ್ ಡಿಸ್ಪ್ಲಾಸಿಯ ರೋಗವು ಸಾಮಾನ್ಯವಾಗಿ ಈ ನಾಯಿಗಳಲ್ಲಿ ಕಾಣುವುದಿಲ್ಲ.ಆದರೆ ಗಾತ್ರದಲ್ಲಿ ದೊಡ್ಡದಾಗಿರುವ ನಾಯಿಗಾಳಲ್ಲಿ ಕಾಣಿಸಿಕೊಂಡರೆ ಏನು ಅನುಮಾನವಾಗುವುದ್ದಿಲ್ಲ.ಒಂದು ಅಧ್ಯಯನ ಹೇಳುವಂತೆ ಹಸ್ಕಿಗಳಿಗೆ ಶೇಖಡ ೨%ರಷ್ಟು ಮಾತ್ರ ಈ ರೋಗವು ಕಾಣಿಸಿಕೊಳ್ಳುತದ್ದೆ.ಈ ನಾಯಿಗಳ್ಳನ್ನು ರೇಸ್ ಗಳ್ಳಲ್ಲಿ ಉಪಯೋಗಿಸುವುದರಿಂದ ಇವುಗಳಿಗೆ ಗ್ಯಾಸ್ಟ್ರಿಕ್ ತೊಂದರೆಗಲು ಉಂಟಾಗಬಾಹುದು.

ಜೀವಿಸುವ ಸ್ಥಳ

[ಬದಲಾಯಿಸಿ]

ಸಾಮಾನ್ಯವಾಗಿ ಹಸ್ಕಿಗಳನ್ನು ಕೆಲವರು ಮಾತ್ರ ಮನೆಯಲ್ಲಿ ಸಾಕುತ್ತಾರೆ.ಸಾಕುವಾಗ ಗಮನದಲ್ಲಿ ಇರಬೇಕಾದ ವಿಷಯವೇನೆಂದರೆ,ಅವುಗಳ್ಳನ್ನು ಒಂದು ಕಡೆ ಕೂಡಿಹಾಕಬಾರದು.ಅವುಗಳನ್ನು ಅದರ ಪಾಡಿಗೆ ಇರಲು ಬಿಟ್ಟು ಅದರ ವಾಸಕ್ಕೆ ಆಗುವಂತೆ ಒಂದು ಪುಟ್ಟ ಮನೆಯನ್ನು ಕಟ್ಟಬೇಕು.ಆದರೆ ಈ ನಾಯಿಯು ಆ ಮನೆಯಲ್ಲಿ ಮಲಗುವುದನ್ನು ಬಿಟ್ಟು ,ಮನೆಯ ಮೇಲೆ ಮಲಗುವುದು ಸಾಮಾನ್ಯವಾಗಿ ಕಂಡು ಬರುತ್ತದೆ

ಆಹಾರ ಪದ್ಧತಿ

[ಬದಲಾಯಿಸಿ]

ಹಸ್ಕಿಗಳ್ಳನ್ನು ಸಾಕಲೂ ಬಹುದು ಆದರೆ ಅದರ ಆಹಾರ ಪದ್ಧತಿಗಳ್ಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಬೇಕು.ಅವುಗಳನ್ನು ಕೆಲಸ ಮಾಡಲು ಉಪಯೋಗಿಸುವುದರಿಂದ ಅದರ ಆಹಾರ ಪದ್ದತಿಯನ್ನು ಸರಿಯಾಗಿ ನೋಡಿಕೊಳ್ಳುವುದು ಮುಖ್ಯವಾಗುತ್ತದೆ.ಇದರ ನಿಟ್ಟಿನಲ್ಲಿ ಅವುಗಳಿಗೆ ಏನನ್ನು ತಿನ್ನಿಸಬೇಕು,ಏನನ್ನು ತಿನ್ನಿಸಬಾರದು,ಎಷ್ಟು ತಿನ್ನಿಸಬೇಕು,ಯಾವಗ ತಿನ್ನಿಸಬೇಕು ಎಂಬುದು ಗಮನದಲ್ಲಿರಿಸಿಕೊಳ್ಳಬೇಕು.ಸಾಮಾನ್ಯವಾಗಿ ಮೂರು ತರಹದ ಆಹಾರ ಪದ್ಧತಿಗಳನ್ನು ಅನುಸರಿಸುತ್ತಾರೆ,ಹಸಿ ಆಹರ ಕೊಡುವುದು,ನಾಯಿಗಳ ಆಹಾರ,ಅಥವಾ ಎರಡರ ಮಿಶ್ರಣ.ಹಾಗೆಯೇ ಈ ನಾಯಿಗಳಿಗೂ ಎಲ್ಲ ನಾಯಿಗಳ ಹಾಗೆ ಮಾಂಸಹಾರಿ ಆಹಾರಗಳನ್ನು ಕೊಡಬಹುದು.ಒಂದು ಗಮನದಲ್ಲಿರಬೇಕಾದ ವಿಷಯವೇನೆಂದರೆ,ಹಸಿ ಆಹಾರ ಮತ್ತು ಮಾಂಸ ಪದ್ಧಾರ್ಥಗಳನ್ನು ಒಟ್ಟಿಗೆ ತಿನ್ನಿಸಬಾರದು.

ಕೆಲವು ಉಪಯುಕ್ತ ವಿಚಾರಗಳು

[ಬದಲಾಯಿಸಿ]

ಇವುಗಳಿಗೆ ಎಲ್ಲಾ ತರಹದ ತರುಣ,ತರುಣಿಯರು,ವಯಸ್ಸಾದವರು..ಎಲ್ಲಾ ತರಹದ ಜನರು ಹಿಡಿಸುತ್ತಾರೆ.ಇವುಗಳಿಗೆ ಎಲ್ಲರ ಜೊತೆ ಬೆರೆಯುವುದೆಂದರೆ ಅಚ್ಚುಮೆಚ್ಚು.ಈ ನಾಯಿಗಳು ಚುರುಕಾಗಿ ವರ್ತಿಸುತ್ತದೆ.ಇವುಗಳ ಮೈಯಿಂದ ಬೀರೆ ನಾಯಿಗಳ ಹಾಗೆ ಯಾವುದೇ ವಾಸನೆ ಬರುವುದಿಲ್ಲ.ಇವುಗಳು ಬೊಗಳುವುದು ಕಡಿಮೆಯಾದರೂ ಬೇಕಾದ ಸಮಯದಲ್ಲಿ ಬೊಗಳುವುದನ್ನು ಕಾಣಬಹುದು.ಇವುಗಳಿಗೆ ಹೆಚ್ಚು ಪ್ರಮಾಣದಲ್ಲಿ ಆಹಾರ ಬೇಡವಾಗುತ್ತದೆ.

ಕೆಲವು ಉಪಯುಕ್ತ ಅಲ್ಲದಿರುವ ವಿಚಾರಗಳು

[ಬದಲಾಯಿಸಿ]

ಇವುಗಳಿಗೆ ಮನುಷ್ಯರನ್ನು ಕಂಡರೆ ಪ್ರೀತಿ ಹಾಗು ಕಾಳಜಿ ಇರುವುದರಿಂದ ಯಾವುದೆ ಜನರನ್ನು ಕಂಡರೂ ಸುಮ್ಮನೆ ಇದ್ದುಬಿಡುತ್ತದೆ.ಇದು ಸಹಜವಾಗಿ ಸಾಕುವವರಿಗೆ ಇಷ್ಟವಾಗುವುದಿಲ್ಲ.ಈ ನಾಯಿಗಳಿಗೆ ತೋಡುವ ಅಭ್ಯಾಸವಿರುವುದರಿಂದ,ಸಿಕ್ಕ ಕಡೆಯೆಲ್ಲ ತೋಡುವುದನ್ನು ಕಾಣಬಹುದು.

ಉಲ್ಲೇಖನಗಳು

[ಬದಲಾಯಿಸಿ]