ಸದಸ್ಯ:Shreya kshatriya/sandbox
ಸಂಜೆ ಮಲ್ಲಿಗೆ
[ಬದಲಾಯಿಸಿ]ಸಂಜೆ ಮಲ್ಲಿಗೆ ಅಥವ ಮಿರಾಬಿಲಿಸ್ ಜಲಪ ಅಥವ ನಾಲ್ಕು ಗಂಟೆ ಹೂವು ಎಂದು ಕರೆಯಲಾಗುತ್ತದೆ.ಇದು ವಿವಿದ ಬಣ್ಣಗಳಲ್ಲಿ ದೊರೆಯುತ್ತದೆ.ಲಾಟಿನ್ನಲ್ಲಿ ಮಿರಾಬಿಲಿಸ್ ಎಂದರೆ ಅದ್ಬುತ ಎಂದಥ೯.ಉತ್ತರ ಅಮೇರಿಕಾದಲ್ಲಿ 'ಜಲಪ' ಊರಿನ ಹೆಸರು.ಸಂಜೆ ಮಲ್ಲಿಗೆಯನ್ನು ಅಲಂಕಾರಕ್ಕಾಗಿ ಬೆಳದದ್ದು. ಇದನ್ನು ಪೆರುವಿಯನ್ ಅನ್ಡಸ್ ನಿಂದ ೧೫೦೦ ರಲ್ಲಿ ರಫ್ತು ಮಾಡಲಾಗಿದೆ.
ಹೂಗಳ ಬಣ್ಣ
[ಬದಲಾಯಿಸಿ]ಸಂಜೆ ಮಲ್ಲಿಗೆಯ ಕುತೂಹಲಕರ ಅಂಶವೆಂದರೆ ವಿವಿಧ ಬಣ್ಣಗಳ ಹೂವುಗಳು ಒಂದೇ ಗಡದಲ್ಲಿ ಏಕಕಾಲದಲ್ಲಿ ಬೆಳೆಯುವದಾಗಿದೆ. ಇದರೊಂದಿಗೆ ಒಂದೇ ಹೂ ಬೇರೆ ಬೇರೆ ರೀತಿಯ ಬಣ್ಣಗಳಲ್ಲಿ ಚಿಗುರೊಡಿಯುತ್ತದೆ. ಹೂವಿನ ಮಾದರಿಗಳನ್ನು ಕ್ಷೇತ್ರಗಳಲ್ಲಿ, ಕಣಗಳ ಮತ್ತು ಜಾಗ ಗಳನ್ನಾಗಿ ವಿಂಗಡಿಸಲಾಗಿದೆ. ಒಂದು ಹೂ ಹರಿಶಿನ,ಗುಲಾಬಿ ಅಥವಾ ಬಿಳಿ ಬಣ್ಣದಲ್ಲಿ ಇರಬಹುದು. ಈ ಗಿಡದ ಒಂದು ಸಾಮಾನ್ಯ ಹೂಗಳ ಮೇಲೆ ಹರಿಶಿನ, ಗುಲಾಬಿ ಅಥವ ಬಿಳಿ ಬಣ್ಣದ ಪಟ್ಟೆ, ಕಲೆಗಳ ರೂಪದಲ್ಲಿ ಮಿಶ್ರಣವಾಗಿರುತ್ತದೆ.ಇದೇ ರೀತಿ ಬೇರೆ ಬೇರೆ ಸಂಯೋಜನೆಗಳ ಹೂಗಳು ಒಂದೇ ಗಿಡದಲ್ಲಿ ಅರಳುತ್ತದೆ. ಮಿರಾಬಿಲಿಸ್ ಜಲಪದ ಹೂವಿನ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಬಣ್ಣ ಬದಲಿಸುವ ವಿದ್ಯಮಾನ ಹೊಂದಿದೆ.ಉದಾಹರಣೆಗೆ ಹರಿಶಿನ ಬಣ್ಣದ ಹೂವಿನ ಮಿರಾಬಿಲಿಸ್ ಗಿಡ ಪಕ್ವತೆಯ ನಂತರ ಆ ಹೂವು ಅದರ ಬಣ್ಣವನ್ನು ಕಪ್ಪು ಗುಲಾಬಿ ಬಣ್ಣಕ್ಕೆ ಬದಲಾವಣೆಗೊಳ್ಳುತದೆ.ಅದೇ ರೀತಿ ಬಿಳಿ ಬಣ್ಣದ ಹೂಗಳು ತಿಳಿ ನೇರಳೆ ಬಣ್ಣಕ್ಕೆ ಬದಲಾವಣೆಗೊಳ್ಳುತ್ತದೆ. ಮುಸ್ಸಂಜೆ ವೇಳೆಯಲ್ಲಿ ಈ ಹೂವು ಅರಳುತ್ತದೆ.ಆದ್ದರಿಂದ ಈ ಹೂವಿಗೆ ನಾಲ್ಕು ಗಂಟೆ ಹೂವು ಎಂದು ನಾಮಪದ ಪಡೆದುಕೊಂಡಿದೆ.ಈ ಹೂವು ತಮಸ್ಸು ಕಾಲದಲ್ಲಿ ಬಲವಾದ,ಸಿಹಿ ಸುಗಂಧ ಬರಿತವಾದ ಸುವಾಸನೆಯನ್ನು ಬೀರುತ್ತಾ,ಮುಂಜಾನೆ ಹೊತ್ತಿಗೆ ಸುಗಂಧವಾದ ದ್ರವ್ಯವನ್ನು ಕಂಪಿಸುವುದನ್ನು ಮುಕ್ತಿಗೊಳಿಸುತ್ತದೆ.ಮುಂಜಾನೆಯ ನಂತರ ಹೊಸ ಹೂಗಳು ಅರಳುತ್ತವೆ.ಹೂಗಳ ಇಂತಹ ಸುಗಂಧದಿಂದ ಆಕರ್ಷಿತವಾದ ಸಿಂಹನಾರಿ ಪತಂಗಗಳು ಅಥವ ಗಿಡುಗ ಪತಂಗಗಳು ಮತ್ತು ಊದ್ದ ನಾಲಗೆಯ ಪತಂಗಗಳು ಪರಾಗಸ್ಪರ್ಶ ಮಾಡುತ್ತದೆ.
ಆವಾಸಸ್ಥಾನ ಮತ್ತು ಕೃಷಿ
[ಬದಲಾಯಿಸಿ]ಸಂಜೆ ಮಲ್ಲಿಗೆ ದಕ್ಷಿಣ ಅಮೆರಿಕಾದಿಂದ ಬಂದಿದೆ. ಆದರೆ ಉಷ್ಣವಲಯದ ಬೆಚ್ಚಗಿನ ಸಮಶೀತೋಷ್ಣದ ಪ್ರದೇಶಗಳಲ್ಲಿ ದೇಶೀಕರಿಸಿದ ಮಾರ್ಪಟ್ಟಿದೆ. ತಂಪಾದ ಸಮಶೀತೋಷ್ಣ ಪ್ರದೇಶಗಳಲ್ಲಿ, ಮತ್ತೆ ಮೊದಲ ಮಂಜಿನಿಂದ, ಗಡ್ಡೆಯ ಮೂಲಗಳಿಂದ ಕೆಳಗಿನ ವಸಂತಕಾಲದಲ್ಲಿ ಸಾಯುತ್ತವೆ.ಸಸ್ಯ ಸೂರ್ಯನ ಬೆಳಕಿನಲ್ಲಿ ಅತ್ಯುತ್ತಮ ಬೆಳೆಯುತ್ತದೆ. ಇದು ಸುಮಾರು 0.೯ ಮೀ ಎತ್ತರ ಬೆಳೆಯುತ್ತದೆ. ಏಕದಳ ಸಸ್ಯವು ಗುಂಡಾಗಿ, ಸುಕ್ಕಾಗಿ ಹಸಿರು ಮಿಶ್ರಿತ ಹಳದಿ ಬಣ್ಣದಲ್ಲಿ ಆರಂಭವಾಗಿ ನಂತರ ಗೋಲಾಕಾರದ ಸುಕ್ಕುಗಟ್ಟಿದ ಮತ್ತು ಕಪ್ಪು ಬಣ್ಣದಿಂದ ಮುಕ್ತಾಯಗೊಳ್ಳುತ್ತದೆ. ಒಂದು ತೋಟದಲ್ಲಿ ಇದನ್ನು ಪರಿಶೀಲಿಸದೆ ಬಿಟ್ಟರೆ ಸಸ್ಯ ಸ್ವಯಂ ಬೀಜ ಶೀಘ್ರದಲ್ಲಿ ಹರಡುವುದು ಕಾಣುತ್ತದೆ. ಕೆಲವು ತೋಟಗಾರರು ಬೀಜಗಳನ್ನು ನೆಡುವ ಮೊದಲು ಸಸ್ಯವನ್ನು ನೆನೆಸಿ ನೆಡಬೇಕು ಎಂದು ಶಿಫಾರಸು ಮಾಡುತ್ತಾರೆ, ಆದರೆ ಅದು ಸಂಪೂರ್ಣವಾಗಿ ಅನಿವಾರ್ಯವಲ್ಲ. ಉತ್ತರ ಅಮೆರಿಕಾದಲ್ಲಿ, ಸಸ್ಯ ಬೆಚ್ಚಗಿನ, ಕರಾವಳಿದ ಪರಿಸರದಲ್ಲಿ ವರುಷವಿಡಿ ಬೆಳೆಯುತ್ತದೆ.ಬೆಳಗ್ಗಿನ ಜಾವ ಇದರ ಸುವಾಸನೆಯನ್ನು ನೋಡಬಹುದು.ಸಾಮಾನ್ಯವಾಗಿ ಈ ಹೂ ಹರಿಶಿನ,ಗುಲಾಬಿ ಹಾಗು ಬಿಳಿ ಬಣ್ಣದಲ್ಲಿ ಇರುತ್ತದೆ.
ವಂಶವಾಹಿ ಅಧ್ಯಯನಗಳು
[ಬದಲಾಯಿಸಿ]೧೯೦೦ ರ ಸುಮಾರಿಗೆ, ಕಾರ್ಲ್ ಕೋರೆನ್ಸ ಸೈಟೋಪ್ಲಾಸ್ಮಿಕ್ ಇನ್ಹೆರಿಟೆನ್ಸ್ ಅಧ್ಯಯನದಲ್ಲಿ ಮಾಡಲ್ ಆರ್ಗಾನಿಸಮ್ ಆಗಿ ಸಂಜೆ ಮಲ್ಲಿಗೆಯನ್ನು ಬಳಸಲಾಗಿತ್ತು.ಅವರು ಮೆಂಡೆಲ್ನ ಸಿದ್ಧಾಂತಗಳನ್ನು[೧] ವಿವರಿಸಿರಲ್ಲಿಲ್ಲ,ಅದೇ ರೀತಿಯಲ್ಲಿ ನ್ಯೂಕ್ಲಿಯಸ್ ಪರಿಣಾಮ ಫಿನೋಟೈಪ್ ಹೊರಗೆ ಕೆಲವು ಅಂಶಗಳು ಎಲೆಗಳ ಬಣ್ಣ ಬದಲಾಗಿಸಿತ್ತು.ಮಿರಾಬಿಲಿಸ್ನ ಎಲೆಯ ಬಣ್ಣ ಅನುವಂಶಿಯವಾಗಿ ಬಂದಿರುವುದು ಎಂದು ಕೋರ್ರೆನ್ಸ್ ತಿಳಿಸಿದ.
ಅಲ್ಲದೆ, ಕೆಂಪು ಹೂಗಳ ಸಸ್ಯಗಳು ಮತ್ತು ಬಿಳಿ-ಪುಷ್ಪಗಳ ಸಸ್ಯಗಳನ್ನು ದಾಟಿ ಮಾಡಿದಾಗ ತಿಳಿ ಗುಲಾಬಿ ಬಣ್ಣದ ಹೂಗಳು ಕೊಟ್ಟವು,ಕೆಂಪು ಹೂವುಗಳನ್ನು ಕೊಡಲ್ಲಿಲ್ಲ.ಇದು ಮೆಂಡಲ್ನ ಲಾ ಆಫ್ ಡಾಮಿನೆನ್ಸ ನನ್ನು ಅನುಸರಿಸಲಿಲ್ಲ.ಇದ್ದನು ಇನ್ಕಂಪ್ಲೀಟ್ ಡಾಮಿನೆನ್ಸ ಎಂದು ಕರೆಯಲಾಗುತ್ತದೆ.
ಉಪಯೋಗಗಳು
[ಬದಲಾಯಿಸಿ]ಹೂಗಳನ್ನು ಆಹಾರದ ಬಣ್ಣ ಬದಲಿಸಲು ಬಳಸಲಾಗುತ್ತದೆ.[೨] ಎಲೆಗಳನ್ನು ಬೇಯಿಸಿ ಅಥವಾ ಹಾಗೆ ಸೇವಿಸಬಹುದು, ಆದರೆ ತುರ್ತು ಆಹಾರವಾಗಿ ಮಾತ್ರ. ತಿನ್ನಲುಯೋಗ್ಯವಾದ ಕಡುಗೆಂಪು ಬಣ್ಣದ ಡೈಯನ್ನು ಕೇಕ್ ಮತ್ತು ಜೆಲ್ಲಿ ಗಳ ಬಣ್ಣ ಬದಲಿಸಲು ಬಳಸಬಹುದು. ಇದನ್ನು ಡಾಪ್ಸಿ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದರ ಎಲೆಗಳು ಊತ ಕಡಿಮೆ ಮಾಡಲು ಬಳಸಲಾಗುತ್ತದೆ. ಎಲೆಗಳಿಂದ ಮಾಡಿದ ಕಷಾಯ ಹುಣ್ಣುಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ ಹಾಗೆ ಎಲೆಯ ರಸ ಗಾಯಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.ಬೀಜಗಳನ್ನು ವಿಷಕಾರಿಯಾಗಿ ಪರಿಗಣಿಸಲಾಗುತ್ತದೆ.ಪುಡಿಮಾಡಿದ ಕಲವು ವಿಧಧ ಬೀಜಗಳನ್ನು ಕಾಸ್ಮೆಟಿಕ್ ಮತ್ತು ಡೈಯಾಗಿ ಬಳಸಲಾಗುತ್ತದೆ.
ಸಾಮಾನ್ಯ ಹೆಸರುಗಳು
[ಬದಲಾಯಿಸಿ]ಬಾಂಗ್ಲಾದೇಶಿನಲ್ಲಿ ಇದನ್ನು ಸಂಧ್ಯಮಲತಿ ಎನ್ನುತ್ತಾರೆ. ಪಾಕಿಸ್ತಾನದಲ್ಲಿ ಇದನ್ನು ಹಂಡ್ರಿರಿಕಾ ಎನ್ನುತ್ತಾರೆ. ತಮಿಳುನಾಡಿನಲ್ಲಿ ಇದನ್ನು ಅಂದಿ ಮಂದಾರೈ ಎನ್ನುತ್ತಾರೆ. ಆಂಧ್ರಪ್ರದೇಶಿನಲ್ಲಿ ಇದನ್ನು ಚಂದ್ರಕಾಂತ ಇಂದ್ರಗಾಂತಿ ಎನ್ನುತ್ತಾರೆ. ಬುಲೇರಿಯಾದಲ್ಲಿ ಇದನ್ನು ನಶ್ಟನ ಕ್ರಾಶ್ರಾವಿಕಾ ಎನ್ನುತ್ತಾರೆ. ಕೇರಳಾನಲ್ಲಿ ನಾಲುಮನಿ ಮಾವು ಎನ್ನುತ್ತಾರೆ. ಮಹಾರಾಷ್ಟ್ರದಲ್ಲಿ ಇದನ್ನು ಗುಲಾಬಕ್ಷೀ ಎನ್ನುತ್ತಾರೆ. ಅಸ್ಸಾಮಿನಲ್ಲಿ ಇದನ್ನು ಗೋದುಲಿ ಗೋಪಾಲ್ ಎನ್ನುತ್ತಾರೆ. ಒರಿಯಾದಲ್ಲಿ ಇದನ್ನು ರಂಗಾನಿ ಎನ್ನುತ್ತಾರೆ. ಮೆಕ್ಸಿಕೊನಲ್ಲಿ ಇದನ್ನು ಮರವಲ್ಲ ಎನ್ನುತ್ತಾರೆ.
ಉಲ್ಲೇಖನಗಳು
[ಬದಲಾಯಿಸಿ]- https://en.wikipedia.org/wiki/Mirabilis_jalapa
- http://www.gardening.cornell.edu/homegardening/scene1d6d.html
https://www.britannica.com/plant/four-oclock http://www.pfaf.org/user/Plant.aspx?LatinName=Mirabilis+jalapa