ವಿಷಯಕ್ಕೆ ಹೋಗು

ಕೊಂಡ ಮಾವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hill Mango
Commiphora caudata
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
Commiphora
ಪ್ರಜಾತಿ:
C. caudadta
Binomial name
Commiphora caudata
(Wight & Arn.) Engl.
Synonyms
  • Amyris acuminata Roxb.
  • Balsamea caudata Engl.
  • Balsamodendrum caudatum Marchand
  • Balsamodendrum roxburghianum (Wight & Arn.) Wall. ex Voigt
  • Protionopsis caudata Blume Unresolved
  • Protionopsis roxburghiana Blume []


ಕೊಂಡ ಮಾವುಕಾಮಿಫೋರ ಕಾಡೇಟ ಎಂಬ ಶಾಸ್ತ್ರೀಯ ಹೆಸರಿನ ಒಂದು ಸಣ್ಣಗಾತ್ರದ ಮರ. ಬೆಟ್ಟಮಾವು ಪರ್ಯಾಯನಾಮ. ಗುಗ್ಗುಳಮರದ (ಕಾಮಿಫೋರ ಮುಕುಲ್ ಪ್ರಭೇದ) ಹತ್ತಿರ ಸಂಬಂಧಿ. ಬರ್ಸರೇಸೀ ಕುಟುಂಬಕ್ಕೆ ಸೇರಿದೆ.

ಭೌಗೋಳಿಕ

[ಬದಲಾಯಿಸಿ]

ಏಷ್ಯ ಮತ್ತು ಆಫ್ರಿಕಗಳ ಮೂಲ ವಾಸಿಯಾದ ಇದು ದಕ್ಷಿಣ ಭಾರತದಲ್ಲೆಲ್ಲ ಬಲುಸಾಮಾನ್ಯ. ಶೀಘ್ರವಾಗಿ ಮತ್ತು ಯಾವ ಬಗೆಯ ಆರೈಕೆಯ ಅಗತ್ಯವಿಲ್ಲದೆ ಬೆಳೆಯುವುದರಿಂದ, ಇದನ್ನು ತೋಟಗಳಲ್ಲಿ, ರಸ್ತೆಗಳ ಬದಿಗಳಲ್ಲಿ, ಬೇಲಿಗಳಲ್ಲಿ ಬೆಳೆಸುವುದಿದೆ. ಕಾಂಡತುಂಡುಗಳನ್ನು ನೆಟ್ಟು ಇದನ್ನು ಬೆಳೆಸುವುದೇ ವಾಡಿಕೆಯಲ್ಲಿರುವ ಕ್ರಮ.

ಲಕ್ಷಣಗಳು

[ಬದಲಾಯಿಸಿ]

ಮಧ್ಯಮ ಪ್ರಮಾಣದ ಮರ.ಕೆಲವು ೧೫ರಿಂದ ೨೦ ಮೀಟರ್ ಬೆಳೆದರೂ ಸಾಮಾನ್ಯವಾಗಿ ಮಧ್ಯಮ ಪ್ರಮಾಣದ ಮರ[]. ಕೊಂಡಮಾವಿನ ತೊಗಟೆ ಬಹಳ ನವುರಾಗಿದ್ದು ಕಾಗದವನ್ನು ಹೋಲುತ್ತದೆ. ಎಲೆ ಹಾಗೂ ಮರದ ತೊಗಟೆಗಳಿಗೆ ಮಾವಿನಹಣ್ಣಿನ ವಾಸನೆಯಿದೆ. ಎಲೆಗಳು ಸಂಯುಕ್ತ ಮಾದರಿಯವು; ಒಂದೊಂದರಲ್ಲೂ 2-5 ಜೋಡಿ ಕಿರು ಎಲೆಗಳಿವೆ. ಎಲೆಗಳ ಜೋಡಣೆ ಪರ್ಯಾಯ ಮಾದರಿಯದು. ಹೂಗಳೂ ಸಂಕೀರ್ಣ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಒಂದೊಂದು ಹೂವಿನಲ್ಲೂ ಸಾಮಾನ್ಯವಾಗಿ 4 ಪುಷ್ಪಪತ್ರಗಳು, 4 ದಳಗಳು, 8-10 ಕೇಸರಗಳು, ಉಚ್ಚಸ್ಥಾನದ ಅಂಡಾಶಯ ಇವೆ. ಅಂಡಕೋಶದಲ್ಲಿ 2-4 ಕೋಣೆಗಳಿದ್ದು ಒಂದೊಂದರಲ್ಲೂ 2 ಅಂಡಕಗಳಿವೆ. ಫಲ ಅಷ್ಟಿಫಲ ಮಾದರಿಯದು. ಗಾತ್ರ ಬಟಾಣಿ ಕಾಳಿನಷ್ಟು.

ಉಪಯೋಗಗಳು

[ಬದಲಾಯಿಸಿ]

ಇದರ ಕಾಯಿಯಿಂದ ಉಪ್ಪಿನಕಾಯಿ ಹಾಕುತ್ತಾರೆ. ಈ ಮರದಿಂದ ಗೋಂದು ಮಿಶ್ರಿತ ರೆಸಿನ್ ವಸ್ತುವನ್ನು ಪಡೆಯಬಹುದಾಗಿದ್ದು ಅದನ್ನು ಧೂಪದಂತೆ ಬಳಸುವುದುಂಟು.

ಉಲ್ಲೇಖಗಳು

[ಬದಲಾಯಿಸಿ]
  1. http://www.theplantlist.org/tpl/record/kew-2733441
  2. Ashton et al Field Guide to the Common Trees and Shrubs of Sri Lanka p. 123, `India Diversity Portal: Commiphora caudata' at http://indiabiodiversity.org/species/show/266696 & 'Bihrmann's Caudiciforms: Commiphora caudata' at http://www.bihrmann.com/caudiciforms/subs/com-cau-sub.asp Archived 2015-12-04 ವೇಬ್ಯಾಕ್ ಮೆಷಿನ್ ನಲ್ಲಿ., http://indiabiodiversity.org/species/show/266696
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: