ಸದಸ್ಯ:Mebinchacko333/sandbox
ನಿವಿನ್ ಪೌಳಿ
[ಬದಲಾಯಿಸಿ]ನಿವಿನ್ ಪೌಳಿ ಅವರು ಮಲಯಾಳಂ ಚಿತ್ರರಂಗದ ಒಬ್ಬ ಪ್ರಮುಖ ನಟ.ಇವರು ಕೇರಳದ ಆಲುವ ಎಂಬ ಸ್ಥಳದಲ್ಲಿ ೧೧ ಅಕ್ಟೋಬರ್ ೧೯೮೪ ರಂದು ಜನಿಸಿದರು.ಇವರು ಶ್ರಿ.ವಿನೀತ್ ಶ್ರಿನಿವಾಸನ್ ಅವರ 'ಮಲರ್ವಾಡಿ ಆರ್ಟ್ಸ್ ಕ್ಲಬ್' ಎಂಬ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು.ಆ ಚಿತ್ರವು ೨೦೧೦ರಲ್ಲಿ ಬಿಡುಗಡೆ ಆಯಿತು.ಇದಾದ ಮೇಲೆ ಹಲವಾರು ಚಿತ್ರದಲ್ಲಿ ಸಣ್ಣಪುಟ್ಟ ವೆಶಗಳಲ್ಲಿ ನಟಿಸಿದ ನಿವಿನ್ ಅವರು ೨೦೧೨ರಲ್ಲಿ 'ತಟ್ಟತ್ತಿನ್ ಮರಯತ್ತು' ಎಂಬ ಚಿತ್ರದಲ್ಲಿ ಮುಖ್ಯ ವೇಶದಲ್ಲಿ ನಟಿಸಿ ಅದ್ಬುತ ಪ್ರದರ್ಶನವನ್ನು ನೀಡಿದರು ನಂತರ ನೇರಂ(೨೦೧೩)ಎಂಬ ಚಿತ್ರದಲ್ಲಿ ನಟಿಸಿದರು.ಈ ಚಿತ್ರವು ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಒಮ್ಮೆ ಬಿಡುಗಡೆ ಮಾಡಿದರು.ಈ ಮೂಲಕ ನಿವಿನ್ ಪೌಳಿಯವರಿಗೆ ತಮಿಳು ನಾಡಿನಲ್ಲು ಅಭಿಮಾನಿಗಳು ಬರತೊಡಗಿದರು.ಮುಂದೆ 1983(೨೦೧೪),ಓಂ ಶಾಂತಿ ಹೊಶಾನ(೨೦೧೪),ಬೆಂಗಳೂರು ಡೆಯ್ಸ್(೨೦೧೪),ಒರು ವಡಕನ್ ಸೆಲ್ಫಿ(೨೦೧೫),ಪ್ರೇಮಂ(೨೦೧೫),ಆಕ್ಷನ್ ಹಿರೊ ಬಿಜು(೨೦೧೬),ಜೇಕಬಿಂಡೆ ಸ್ವರ್ಗರಾಜ್ಯಂ(೨೦೧೬) ಎಂಬ ಚಿತ್ರಗಳಲ್ಲಿ ಮುಖ್ಯ ವೇಶದಲ್ಲಿ ನಟಿಸಿದರು.ನಿವಿನ್ ಅವರಿಗೆ ನೇರಂ(ತಮಿಳು) ಎಂಬ ಚಿತ್ರಕ್ಕೆ ಅತ್ಯುತ್ತಮ ಹೊಸ ಮುಖ ನಟ ಎಂಬ ಫಿಲಿಮ್ ಫೇರ್ ಪ್ರಶಸ್ತಿ ದೊರಕಿತು.೨೦೧೫ರಲ್ಲಿ ನಿವಿನ್ ಪೌಳಿಯವರ ಬೆಂಗಳೂರು ಡೆಯ್ಸ ಹಾಗು 1983 ಎಂಬ ಚಿತ್ರಗಳಲ್ಲಿ ಪ್ರದರ್ಶಿಸಿದ ಅದ್ಬುತ ನಟನೆಗೆ ಅವರಿಗೆ ೪೫ನೇಯ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರಕಿತು.ನಿವಿನ್ ಅವರು ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಸಯ್ನ್ಸ್ ಆಂಡ್ ಟೆಕ್ನೊಳಜಿಯಿಂದ ಎಲೆಕ್ಟ್ರಾನಿಕ್ಸ್ ಅನ್ಡ್ ಕಮ್ಯುನಿಕೆಶನ್ ನಲ್ಲಿ ಬಿ.ಟೆಕ್ ಪದವಿಯನ್ನು ಪಡೆದು ಬೆಂಗಳೂರಿನ ಇನ್ಫೋಸಿಸ್ ಎಂಬ ಕಂಪನಿಯಲ್ಲಿ ೨೦೦೬ ರಿಂದ ೨೦೦೯ರವರೆಗೆ ಕೆಲಸ ಮಾಡಿದರು.ತನ್ನ ತಂದೆಯ ವಿಯೊಗದ ನಂತರ ಆ ಕೆಲಸವನ್ನು ಬಿಟ್ಟರು ನಂತರ ಚಿತ್ರರಂಗವನ್ನು ಪ್ರವೇಶಿಸಿದರು.ನಿವಿನ್ ಅವರು ಆಗಸ್ಟ್ ೨೮,೨೦೧೦ ರಂದು ರೀನಾ ಜೊಯ್ ಅವರನ್ನು ಮದುವೆ ಮಾದಿದರು.ಇವರಿಬ್ಬರ ಮಗನ ಹೆಸರು ಡೆವಿಡ್ ಪೌಳಿ. ನಿವಿನ್ ಪೌಳಿ ಅವರು ಪ್ರಧಮ ಬಾರಿಗೆ ಮುಖ್ಯ ವೇಶದಲ್ಲಿ ಬಂದಂತ ಚಿತ್ರವಾಗಿತ್ತು 'ಮಲರ್ವಾಡಿ ಆರ್ಟ್ಸ್ ಕ್ಲಬ್'.ಈ ಚಿತ್ರದ ನಿರ್ದೆಶಕರಾದ ಶ್ರಿ.ವಿನೀತ್ ಶ್ರಿನಿವಾಸನ್ ಅವರು ಧ್ವನಿಪರೀಕ್ಷೆಯ ಮೂಲಕ ನಿವಿನ್ ಅವರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿದರು.ಈ ಚಿತ್ರದಲ್ಲಿ ನಿವಿನ್ ಮಾಡಿದ ಪ್ರಕಾಶನ್ ಎಂಬ ಪಾತ್ರವನ್ನು ನೋಡಿದರೆ ಅವರ ನಟನಾ ಪ್ರತಿಭೆಯನ್ನು ಕಾಣಬಹುದು.೨೦೧೨ ರಲ್ಲಿ ಶ್ರಿ.ವಿನೀತ್ ಅವರ ಎರಡನೆಯ ಚಿತ್ರ 'ತಟ್ಟತ್ತಿನ್ ಮರಯತ್ತು'ಬಿಡುಗಡೆ ಆಯಿತು.ಈ ಚಿತ್ರದಲ್ಲಿಯು ನಿವಿನ್ ಅವರನ್ನೆ ಮುಖ್ಯ ವೇಶಮಾಡಲು ವಿನೀತ್ ಅವರು ನಿಶ್ಚಯಿಸಿದರು.ಈ ಚಿತ್ರವು ನಿವಿನ್ ಅವರಿಗೆ ರೊಮ್ಯಾಂಟಿಕ್ ನಾಯಕ ಎಂಬ ಬಿರುದನ್ನು ನೀಡಿತು.೨೦೧೪ ರಲ್ಲಿ ಶ್ರಿಮತಿ.ಅಂಜಲಿ ಮೆನನ್ ನಿರ್ದೇಶನದ 'ಬೆಂಗಳೂರು ಡೆಯ್ಸ್' ಎಂಬ ಚಿತ್ರದಲ್ಲಿ ನಿವಿನ್ ಅವರ ಕುಟ್ಟನ್ ಎಂಬ ಪಾತ್ರವು ಆತನ ವೃತ್ತಿಜೀವನದಲ್ಲಿಯೆ ತುಂಬ ಮುಖ್ಯವಾದದ್ದಾಗಿತ್ತು.ಮೂರು ಸೋದರರು ಬೆಂಗಳೂರುಗೆ ಬಂದ ನಂತರ ಅವರ ಜೀವನದಲ್ಲಿ ನಡೆಯುವಂತ ಸಂಗತಿಗಳ ಬಗ್ಗೆ ಈ ಚಿತ್ರ ಹೇಳುತಿದೆ.ಈ ಚಿತ್ರದ ನಟನೆಗೆ ನಿವಿನ್ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರಕಿತು.ಈ ಚಿತ್ರವನ್ನು ಬೇರೆ ಬಾಷೆಗಳಲ್ಲೂ ತಯಾರು ಮಾಡುತ್ತಿದ್ದಾರೆ.೨೦೧೫ ರಲ್ಲಿ ಆಲ್ಪೋನ್ಸ್ ಪುತ್ರೆನ್ ಅವರ ನಿರ್ದೇಶನದಲ್ಲಿ ನಿವಿನ್ ಅವರು ಮೂಖ್ಯ ವೆಶದಲ್ಲಿ ಬಂದಂತ್ತ ಚಿತ್ರವಾಗಿತ್ತು 'ಪ್ರೇಮಂ'.ಈ ಚಿತ್ರವು ಯುವಕರಲ್ಲಿ ಆವೇಶವನ್ನು ಉಂಟುಮಾಡಿತು.ಇದರಲ್ಲಿ ನಿವಿನ್ ಅವರ ಗಡ್ಡ ಯುವಕರಿಗೆ ಹೊಸ ಫ್ಯಾಷನ್ ಆಗಿ ಬೆಳೆಯಿತು.ಅವರು ಆಕಿದ ಕಪ್ಪು ಶರ್ಟು ಹಾಗು ಬಿಳಿ ಧೊತಿ ಪ್ರೇಮಂ ಸ್ಟೈಲ್ ಎಂದು ಕರೆಯುತಿದ್ದರು.ರೊಮಾನ್ಸ್ ಅಷ್ಟೆ ಅಲ್ಲ ತನಗೆ ಯಾವ ವೇಶವು ಸೇರುತದೆ ಎಂಬುದು ನಿವಿನ್ 'ಆಕ್ಷನ್ ಹಿರೊ ಬಿಜು' ಎಂಬ ಚಿತ್ರದಲ್ಲಿ ಬಿಜು ಎಂಬ ಪೋಲಿಸ್ ಇನ್ಸ್ಪೆಕ್ಟರ್ ವೆಶದ ಮೂಲಕ ತೋರಿಸಿಕೊಟ್ಟರು.ಸಿನೆಮ ಅಷ್ಟೆ ಅಲ್ಲದೆ ನಿವಿನ್ ಅವರು ನಟಿಸಿದ 'ಯುವ' ಎಂಬ ಆಲ್ಬಂ ಕೇರಳದಲ್ಲಿ ತರಂಗವನ್ನೆ ಸೃಷ್ಟಿಮಾಡಿತು.'ಡಾ ತಡಿಯ' ಎಂಬ ಚಿತ್ರದಲ್ಲಿ ಖಯನಾಯಕನಾಗಿ ಬಂದು ತನ್ನ ಪ್ರತಿಭೆಯನ್ನು ಮತ್ತೊಮ್ಮೆ ತೊರಿಸಿಕೊಟ್ಟರು.
ಕುಟುಂಬ ಹಾಗು ವಿದ್ಯಾಭ್ಯಾಸ
[ಬದಲಾಯಿಸಿ]ನಿವಿನ್ ಪೌಳಿ ಅವರು ಮಲಯಾಳಂ ಚಿತ್ರರಂಗದ ಒಬ್ಬ ಪ್ರಮುಖ ನಟ.ಇವರು ಕೇರಳದ ಆಲುವ ಎಂಬ ಸ್ಥಳದಲ್ಲಿ ೧೧ ಅಕ್ಟೋಬರ್ ೧೯೮೪ ರಂದು ಜನಿಸಿದರು.ನಿವಿನ್ ಅವರ ತಂದೆ-ತಾಯಿ ಸ್ವಿಜರ್ಲ್ಯಾಂಡ್ ಉಳಿದು ಕೆಲಸ ಮಾಡುತಿದ್ದರು.ನಿವಿನ್ ಅವರು ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಸಯ್ನ್ಸ್ ಆಂಡ್ ಟೆಕ್ನೊಳಜಿಯಿಂದ ಎಲೆಕ್ಟ್ರಾನಿಕ್ಸ್ ಅನ್ಡ್ ಕಮ್ಯುನಿಕೆಶನ್ ನಲ್ಲಿ ಬಿ.ಟೆಕ್ ಪದವಿಯನ್ನು ಪಡೆದು ಬೆಂಗಳೂರಿನ ಇನ್ಫೋಸಿಸ್ ಎಂಬ ಕಂಪನಿಯಲ್ಲಿ ೨೦೦೬ ರಿಂದ ೨೦೦೯ರವರೆಗೆ ಕೆಲಸ ಮಾಡಿದರು.ನಿವಿನ್ ಅವರು ಆಗಸ್ಟ್ ೨೮,೨೦೧೦ ರಂದು ರೀನಾ ಜೊಯ್ ಅವರನ್ನು ಮದುವೆ ಮಾದಿದರು.ಇವರಿಬ್ಬರ ಮಗನ ಹೆಸರು ಡೆವಿಡ.
ಚಿತ್ರಗಳು
[ಬದಲಾಯಿಸಿ]'ಮಲರ್ವಾಡಿ ಆರ್ಟ್ಸ್ ಕ್ಲಬ್','ಒರು ವಡಕನ್ ಸೆಲ್ಫಿ','ಸೆವೆನ್ಸ್','ಮೈ ಫ಼ಾನ್ ರಾಮು','ಇವಿಡೆ','ತಟ್ಟತ್ತಿನ್ ಮರಯತ್ತು','ಪ್ರೇಮಂ','ಸ್ಪಾನಿಷ್ ಮಸಾಲ','ಇಂಗ್ಲಿಷ್','ನೇರಂ','ಆಕ್ಷನ್ ಹಿರೊ ಬಿಜು','ಭೂಪಡತಿಲ್ ಇಲ್ಲಾತ ಒರಿಡಂ','೫ ಸುಂದರಿಗಳ್','1983','ಜೇಕಬಿಂಡೆ ಸ್ವರ್ಗರಾಜ್ಯಂ','ಪುತಿಯ ತೀರಂಗಳ್','ಅರಿಕಿಲ್ ಒರಾಳ್','ಓಂ ಶಾಂತಿ ಹೊಶಾನ','ಟ್ರಾಫಿಕ್','ಚಾಪ್ಟರ್ಸ್','ವಿಕ್ರಮಾದಿತ್ಯನ್','ಬೆಂಗಳೂರು ಡೆಯ್ಸ್','ಥ ಮೆಟ್ರೊ', 'ಡಾ ತಡಿಯ','ಮಿಲಿ'
ಪ್ರಶಸ್ತಿಗಳು
[ಬದಲಾಯಿಸಿ]ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ -೨೦೧೪-ಅತ್ಯುತ್ತಮ ನಟ-ಬೆಂಗಳೂರು ಡೆಯ್ಸ್,1983 ಫಿಲ್ಮ್ಫೇರ್ ಪ್ರಶಸ್ತಿಗಳು-೨೦೧೩-ಅತ್ಯುತ್ತಮ ಪ್ರಥಮ ಪ್ರವೇಶ (ಪುರುಷ)-ನೇರಂ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು-೨೦೧೨-ರೈಸಿಂಗ್ ಸ್ಟಾರ್ ಆಫ್ ಸೌತ್ ಇಂಡಿಯ