ವಿಕಿಪೀಡಿಯ:ಅಳಿಸುವಿಕೆಯ ನಿಯಮಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಕಿಪೀಡಿಯ ಅಳಿಸುವಿಕೆಯ ಕಾರ್ಯನೀತಿಯು ಪುಟಗಳು ಒಳಗೊಂಡ ಮಾಹಿತಿಯು ವಿಶ್ವಕೋಶದ ಮಾನದಂಡಗಳನ್ನು ಪೂರೈಸದಿದ್ದಲ್ಲಿ ಅಂತಹ ಪುಟಗಳನ್ನು ಗುರುತಿಸುವುದು ಮತ್ತು ಅಳಿಸುವುದು ಹೇಗೆ ಎಂಬ ನೀತಿಯನ್ನು ವಿವರಿಸುತ್ತದೆ. ಈ ಕೆಳಗೆ ತೋರಿಸಿದ ಪ್ರಕ್ರಿಯೆ ಮೂಲಕ ವಿಕಿಪೀಡಿಯಾದಲ್ಲಿ ಪುಟಗಳನ್ನು ಅಳಿಸಬಹುದು.

ವಿಕಿಪೀಡಿಯಾದಲ್ಲಿ ಅಳಿಸುವಿಕೆಯು ಲೇಖನದ ಸದ್ಯದ ಆವೃತ್ತಿ ಮತ್ತು ಹಿಂದಿನ ಎಲ್ಲಾ ಆವೃತ್ತಿಗಳನ್ನೂ ಸಾರ್ವಜನನಿಕರು ನೋಡದಂತೆ ತೆಗೆಯುತ್ತದೆ. ಯಾವ ಬಳಕೆದಾರನಾದರೂ ಪುಟವನ್ನು ಬರಿದು ಮಾಡಬಹುದು (ಅಥವಾ ಹಿಮ್ಮರಳಿಸ ಬಹುದು) ನಿರ್ವಾಹಕರು ಮಾತ್ರ ಪುಟಗಳನ್ನು ಅಳಿಸಬಲ್ಲರು, ಅಳಿಸಿದ ಪುಟಗಳನ್ನು ನೋಡಬಲ್ಲರು ಮತ್ತು ಯಾವುದೇ ಅಳಿಸಿದ ಪುಟವನ್ನು ಹಿಮ್ಮರಳಿಸ ಬಲ್ಲರು. ಇಂತಹ ಎಲ್ಲ ಕಾರ್ಯಗಳೂ ಅಳಿಸುವಿಕೆ ಲಾಗ್‌ನಲ್ಲಿ ದಾಖಲಾಗುತ್ತವೆ ಮತ್ತು ಅಳಿಸುವಿಕೆ ಅಂಕಿಅಂಶಗಳೂ ದಾಖಲಾಗುತ್ತವೆ. ಯಾವುದೇ ಪುಟದ ಅಳಿಸುವಿಕೆಗೆ ಒಮ್ಮತವಿಲ್ಲದಿದ್ದರೆ ಸಾಮಾನ್ಯವಾಗಿ ಆ ಪುಟವನ್ನು ನಿರ್ವಾಹಕರು ಅಳಿಸುವುದಿಲ್ಲ.

ಅಳಿಸುವಿಕೆಗೆ ಕಾರಣಗಳು[ಬದಲಾಯಿಸಿ]

ಅಳಿಸುವಿಕೆ ಕೆಳಗಿನ ಕಾರಣಗಳು ಸೇರಿವೆ, ಆದರೆ ಕಾರಣಗಳು ಇವುಗಳಿಗೇ ಸೀಮಿತವಾಗಿಲ್ಲ (ತಪ್ಪೆಸಗುವ ಭಾಗದ ಸುಧಾರಣೆ ಅಥವಾ ಅಳಿಸುವಿಕೆ ಸಾಧ್ಯವಾಗುವ ಸಂದರ್ಭದಲ್ಲಿ, ಕಾರ್ಯಸಾಧುವಾಗಿದ್ದಲ್ಲಿ ಅದು ಪೂರ್ಣ ಪುಟದ ಅಳಿಸುವಿಕೆಗಿಂತ ಮೇಲು):

  1. ಒಳಗೊಂಡ ವಿಷಯ ವೇಗದ ಅಳಿಸುವಿಕೆಯ ಮಾನದಂಡಗಳಲ್ಲಿ ಒಂದನ್ನಾದರೂ ಪೂರೈಸುತ್ತಿರುವ ಲೇಖನ.
  2. ಹಕ್ಕುಸ್ವಾಮ್ಯ ಉಲ್ಲಂಘನೆ ಮತ್ತು ಇತರ ವಿಕಿಪೀಡಿಯ ಉಚಿತವಿಲ್ಲದ ವಿಷಯಗಳ ಮಾನದಂಡಗಳ ಉಲ್ಲಂಘನೆ.
  3. ಪ್ರಚೋದಕ ಪುನರ್ನಿರ್ದೇಶನಗಳು, ಪುಟಗಳು ಅವುಗಳ ವಿಷಯದ ಬಗೆಗೆ ಅಗೌರವ ತೋರುವ, ಅಸಂಬದ್ಧ ಅಥವಾ ವಿಚಾರಶೀಲ ವ್ಯಕ್ತಿಯೊಬ್ಬ ಸಂಬದ್ಧ ಎಂದು ಪರಿಗಣಿಸಲಾಗದ, ತಪ್ಪುತಪ್ಪಾದ ವಿವರಗಳನ್ನು ಒಳಗೊಂಡ ವಿಧ್ವಂಸಕ ಕೃತ್ಯ.
  4. ಜಾಹೀರಾತು (ಆದರೆ ಜಾಹಿರಾತು ವಿಷಯಕ್ಕೆ ಸಂಬಂಧಿತ ಲೇಖನವಲ್ಲ) ಅಥವಾ ಇತರ ಸ್ಪಾಮ್ (ಹೊರಗಿನ ಸಂಘಟನೆ, ವ್ಯಕ್ತಿ ಅಥವಾ ಚಿಂತನೆ ಮತ್ತು ಸೂಕ್ತವಲ್ಲದ ಹಾಗೂ ವಿಶ್ವಕೋಶಕ್ಕೆ ಹಾನಿಕಾರಕ ಎಂದು ಪರಿಗಣಿಸಲಾಗುವ ಮಾಹಿತಿ ಮತ್ತು ಲಿಂಕ್‌ಗಳು).
  5. ಮಾಹಿತಿ ಕವಲೊಡೆಯುವಿಕೆ (ಒಂದೇ ಲೇಖನದಲ್ಲಿ ಭಿನ್ನ ಅಭಿಪ್ರಾಯಗಳ ವಿಭಾಗಗಳನ್ನು ಮಾಡುವುದು)[ಸೂಕ್ತ ವಿಲೀನ ಅಥವಾ ಮರುನಿರ್ದೇಶನಗಳು ಸಾಧ್ಯವಿದ್ದಲ್ಲಿ ಇದು ಅನ್ವಯಿಸುವುದಿಲ್ಲ]
  6. ಲೇಖನಗಳ ಮಾಹಿತಿ ನಂಬಲರ್ಹ ಆಕರಗಳಿಗೆ ಆರೋಪಿಸುವಂತಿರ ಬೇಕು. ಅಲ್ಲದೆ ಅದು ನವ ಪದ ಪ್ರಯೋಗ, ಮೂಲ ಸಿದ್ಧಾಂತಗಳು ಮತ್ತು ತೀರ್ಮಾನಗಳನ್ನು ಒಳಗೊಂಡಿರ ಬಾರದು. ಹಾಗೆಯೇ ಲೇಖನ ಸ್ವತಹ ಒಂದು ವಂಚನೆಯಾಗಿರ ಬಾರದು (ಆದರೆ ಲೇಖನ ಪ್ರಮುಖ ವಂಚನೆಯ ಬಗೆಗಾಗಿರ ಬಹುದು).
  7. ತಾಳೆ ನೋಡಲು ಲೇಖನದ ಮೂಲ ಆಕಾರಗಳನ್ನು ಹುಡುಕುವ ಎಲ್ಲ ಪ್ರಯತ್ನಗಳೂ ವಿಫಲವಾದ ಲೇಖನಗಳು.
  8. ಲೇಖನದ ವಿಷಯವು ವಿಕಿಪೀಡಿಯಾದ ಗಮನಾರ್ಹತೆಯ ಮಾರ್ಗದರ್ಶನದ ಹೊರಗಿರುವುದು.
  9. ಸಜೀವ ವ್ಯಕ್ತಿಗಳ ಜೀವನಚರಿತ್ರೆಯ ಬಗೆಗೆ ವಿಕಿಪೀಡಿಯ ನೀತಿಯನ್ನು ಉಲ್ಲಂಘಿಸುವ ಲೇಖನಗಳು.
  10. ಅಧಿಕ ಅಥವ ನಿರುಪಯುಕ್ತ ಟೆಂಪ್ಲೇಟ್ಗಳು.
  11. ವರ್ಗಗಳಲ್ಲಿ ಮಿತಿಮೀರಿದ ವರ್ಗಗಳು.
  12. ಬಳಕೆಯಲ್ಲಿಲ್ಲದ, ಕಾಲಚೆಲ್ಲಿದ ಅಥವಾ ಉಚಿತವಿಲ್ಲದ ಕಾರ್ಯನೀತಿಯನ್ನು ಉಲ್ಲಂಘಿಸುವ ದಾಖಲೆಗಳು.
  13. ಲೇಖನ, ಟೆಂಪ್ಲೇಟು, ಯೋಜನೆ ಅಥವಾ ಬಳಕೆದಾರರ ಹೆಸರಿನಸ್ಥಾನದ (ನೇಮ್‌ಸ್ಪೇಸ್) ಬಗೆಗಿನ ಅಂಗೀಕೃತ ಪ್ರತ್ಯೇಕತೆಯ ನೀತಿಯನ್ನು ಹೊರತು ಪಡಿಸಿ ಬೇರೆ ರೀತಿಯ ಹೆಸರಿನಸ್ಥಾನ ಬಳಕೆ.
  14. ವಿಶ್ವಕೋಶಕ್ಕೆ ಸೂಕ್ತವಲ್ಲದ ಲೇಖನಗಳು.

ಅಳಿಸುವಿಕೆಗೆ ಪರ್ಯಾಯಗಳು[ಬದಲಾಯಿಸಿ]

ಸಂಪಾದನೆ ಮತ್ತು ಚರ್ಚೆ[ಬದಲಾಯಿಸಿ]

ಒಂದು ಪುಟವನ್ನು ಅಳಿಸಿಹಾಕುವ ಬದಲು ಆ ಪುಟದ ವಿಷಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸಂಪಾದಿಸಬಹುದು. ಪುಟದ ಬಗೆಗಿನ ವಿದ್ವಂಸಕತೆಯನ್ನು ಯಾವುದೇ ಬಳಕೆದಾರ ಹಿಮ್ಮರಳಿಸುವ ಮೂಲಕ ಮರುಸಂಪಾದಿಸಬಹುದು.

ಗಂಭೀರ ಪರಿಸ್ಥಿತಿಗಳನ್ನು ಹೊರತುಪಡಿಸಿ, ವಿವಾದಗಳಿರುವ ಪುಟಗಳನ್ನು ಸಾಮಾನ್ಯವಾಗಿ ಅಳಿಸಲಾಗುವುದಿಲ್ಲ. ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಂಬಂಧಿತ ಚರ್ಚಾ ಪುಟದಲ್ಲಿ ಚರ್ಚಿಸಲಾಗುತ್ತದೆ ಮತ್ತು ಹೆಚ್ಚುವರಿ ಮಾಹಿತಿಗಾಗಿ ವಿಕಿಪೀಡಿಯ: ಟಿಪ್ಪಣಿಗಳಿಗೆ ಆಹ್ವಾನ ಗಳಂತಹ ವಿವಾದವನ್ನು ಬಗೆಹರಿಸುವ ಪದ್ಧತಿಯನ್ನು ಮೊದಲು ಅನುಸರಿಸ ಬೇಕಾಗುತ್ತದೆ. ಅಳಿಸುವಿಕೆಯ ಚರ್ಚೆಯಲ್ಲಿ ಬಗೆಹರಿಸಲಾಗದ ವಿಷಯಗಳನ್ನು ವಿವಾದದಲ್ಲಿ ಭಾಗವಹಿಸದ ಸಂಪಾದಕರು ಮುಕ್ತಾಯಗೊಳಿಸುತ್ತಾರೆ ಮತ್ತು ಚರ್ಚಾ ಪುಟದಲ್ಲಿ ಅಥವಾ ಇತರ ಸೂಕ್ತ ವೇದಿಕೆಯಲ್ಲಿ ಇದರ ಅನುಸಾರವಾಗಿ ಉಲ್ಲೇಖಿಸಲಾಗುತ್ತದೆ.

ಗಮನಾರ್ಹ ವಿಷಯಗಳ ಲೇಖನ, ಪರಿಶೀಲನಾ ಸಾಧ್ಯತೆ ಅಥವ ತಟಸ್ಥ ಧೋರಣೆ ನೀತಿಗಳನ್ನು ಅನುಸರಿಸದಿದ್ದಲ್ಲಿ, ಆ ಲೇಖನವನ್ನು ಚುಟುಕು ಲೇಖನವನ್ನಾಗಿ ಕುಗ್ಗಿಸಲಾಗುತ್ತದೆ ಅಥವಾ ಅಳಿಸುವಿಕೆಗಾಗಿ ಲೇಖನದಲ್ಲಿನ ಒಮ್ಮತದಂತೆ ಸಂಪೂರ್ಣವಾಗಿ ಅಳಿಸಿಹಾಕಲಾಗುತ್ತದೆ. ಆರ್ಬಿಟ್ರೇಶನ್ ಸಮಿತಿಯು ಪಕ್ಷಪಾತದ ಸರಣಿ ಲೇಖನಗಳನ್ನು ರಚಿಸಿದ ಸಂಪಾದಕರನ್ನು ವಿಷಯ ನಿಷೇದಕ್ಕೆ (ನಿರ್ದಿಷ್ಟ ವಿಷಯದ ಬಗೆಗಿನ ಲೇಖನ ಸಂಪಾದಿಸಲು) ಒಳಪಡಿಸುತ್ತದೆ.

ಕಾರ್ಯನೀತಿ ಅಥವಾ ಮಾರ್ಗದರ್ಶನ ಸೂತ್ರಗಳ ಬಗೆಗಿನ ವಿವಾದ ಅವುಗಳನ್ನು ತೆಗೆದು ಹಾಕುವ ಮೂಲಕ ಪರಿಹಾರವಾಗುವದಿಲ್ಲ. ಹಾಗೆಯೇ ಬಳಕೆದಾರನ ಪುಟದ ಸರಿಯಲ್ಲದ ಬಳಕೆಯನ್ನು ಬಳಕೆದಾರನೊಂದಿಗೆ ಚರ್ಚಿಸಿ ಬಗೆಹರಿಸಿ ಕೊಳ್ಳಬಹುದು.

ಟ್ಯಾಗಿಂಗ್[ಬದಲಾಯಿಸಿ]

ಸಮಸ್ಯೆಯನ್ನು ಗುರುತಿಸಲು ಹಲವು ರೀತಿಯ ಟ್ಯಾಗ್‌ಗಳನ್ನು ಲೇಖನಕ್ಕೆ ಸೇರಿಸಲಾಗುತ್ತದೆ. ಆದರೆ ಟ್ಯಾಗ್‌ಗಳು ಶಾಶ್ವತ ಪರಿಹಾರವಲ್ಲ; ಬದಲಿಗೆ ಅವು ಓದುಗರನ್ನು ಎಚ್ಚರಿಸುವ ಮತ್ತು ಆಸಕ್ತ ಸಂಪಾದಕರು ಸಮಸ್ಯೆಯನ್ನು ತ್ವರಿತವಾಗಿ ಪತ್ತೆಹಚ್ಚಿ ಹಾಗೂ ಪರಿಹರಿಸುವಂತೆ ಮಾಡುವ ಉದ್ಧೇಶ ಹೊಂದಿರುತ್ತವೆ.

  • {{Cleanup}} ಉತ್ತಮ ಪಡಿಸಬೇಕಿರುವ ಲೇಖನಗಳಿಗೆ
  • {{Expert-subject}} ಪರಿಣಿತರು ಗಮನವನ್ನು ಹರಿಸಬೇಕಾದ ಲೇಖನಗಳಿಗೆ
  • {{Notenglish}} ವಿದೇಶಿ ಭಾಷೆಯಲ್ಲಿರುವ ಲೇಖನಗಳಿಗೆ
  • {{Npov}} ಪೂರ್ವಗ್ರಹಪೀಡಿತ ಲೇಖನಗಳಿಗೆ
  • {{Stub}} ಸಣ್ಣ ಅಥವಾ ಚುಟುಕು ಲೇಖನಗಳಿಗೆ
  • {{Refimprove}} ಪರಿಶೀಲನೆ ಸಾಧ್ಯತೆ ಕೊರತೆಯುಳ್ಳ ಲೇಖನಗಳಿಗೆ
  • {{Merge}} ಸಣ್ಣ ಲೇಖನವನ್ನು, ದೊಡ್ಡ ಲೇಖನದೊಂದಿಗೆ ವಿಲೀನಗೊಳಿಸಲು

ವಿಲೀನಗೊಳಿಸುವಿಕೆ[ಬದಲಾಯಿಸಿ]

ಪುಟ್ಟ ಲೇಖನಗಳನ್ನು ಹಿಗ್ಗಿಸುವ ಸಾಧ್ಯತೆ ಇಲ್ಲದಿದ್ದಲ್ಲಿ ದೊಡ್ಡ ಲೇಖನ ಅಥವಾ ಪಟ್ಟಿಯಲ್ಲಿ ವಿಲೀನಗೊಳಿಸ ಬಹುದು. ಉದಾಹರಣೆಗೆ ಹೆಸರಾಂತ ವ್ಯಕ್ತಿಗಳ ಕುಟುಂಬ ಸದಸ್ಯರು ತಮಗೆ ತಾವೇ ಗಮನಾರ್ಹ ವ್ಯಕ್ತಿಗಳು ಆಗಿಲ್ಲದಿದ್ದಲ್ಲಿ ಸಾಮಾನ್ಯವಾಗಿ ಆ ಹೆಸರಾಂತ ವ್ಯಕ್ತಿಯ ಪುಟದಲ್ಲಿ ಮಾಹಿತಿಯನ್ನು ಸೇರಿಸುವುದು ಅಥವಾ ಅದರೊಂದಿಗೆ ವಿಲೀನಿಗೊಳಿಸುವುದು ಮಾಡಬಹುದು. ಕಲ್ಪಿತ ಕಥನದ (ಫಿಕ್ಶನ್) ಗಮನಾರ್ಹವಲ್ಲದ ಅಂಶಗಳ ಬಗೆಗಿನ ಪುಟಗಳನ್ನು ಸಾಮಾನ್ಯವಾಗಿ ಆ ಕಥನ ಕೃತಿಯ ಬಗೆಗಿನ ಲೇಖನ ಅಥವಾ ಪಟ್ಟಿಯಲ್ಲಿ ಸೇರಿಸ ಬಹುದು.

ಎರಡು ಪುಟಗಳು ಒಂದರ ನಕಲು ಇನ್ನೊಂದು ಆಗಿದ್ದಲ್ಲಿ ಅಥವಾ ಇನ್ಯಾವುದೇ ರೀತಿಯಲ್ಲಿ ಅಧಿಕ ಅಥವಾ ಹೆಚ್ಚುವರಿಯಾಗಿದ್ದಲ್ಲಿ ಒಂದನ್ನು ಇನ್ನೊಂದರೊಂದಿಗೆ ವಿಲೀನಿಗೊಳಿಸ ಬೇಕು ಮತ್ತು ಒಂದಕ್ಕೆ ಇನ್ನೊಂದರಿಂದ ಮರುನಿರ್ದೇಶನ ಕೊಡಬೇಕು. ಇಂತಹ ಸಂದರ್ಭಗಳಲ್ಲಿ ಹೆಚ್ಚು ಸಾಮಾನ್ಯವಾದ ಹೆಸರನ್ನು ಉಳಿಸಿಕೊಳ್ಳ ಬೇಕು. ಇದಕ್ಕೆ ಔಪಚಾರಿಕ ಚರ್ಚೆಯ ಅವಶ್ಯಕತೆ ಇರುವುದಿಲ್ಲ.

"ವಿಲೀನಗೊಳಿಸು ಮತ್ತು ಅಳಿಸು"ವಿಕೆಗಳ ಪ್ರಕ್ರಿಯೆಯಲ್ಲಿ ವಿಲೀನಗೊಳಿಸಿದ ಪಠ್ಯದ ಬಗೆಗಿನ ಅಧ್ಯಾರೋಪವು (ಅಟ್ರಿಬ್ಯೂಶನ್) ಕಳೆದು ಹೋದಲ್ಲಿ ಸಂಭಾವ್ಯ ಲೈಸೆನ್ಸಿಂಗ್ (ಹಕ್ಕುಸ್ವಾಮ್ಯ) ಸಮಸ್ಯೆಗಳಿಗೆ ಇದು ಕಾರಣವಾಗ ಬಹುದು. ವಿಕಿಪೀಡಿಯ: ಅಳಿಸುವಿಕೆ ಮತ್ತು ವಿಲೀನ ಪ್ರಬಂಧವು ಈ ಬಗೆಗೆ ಚರ್ಚಿಸುತ್ತದೆ ಮತ್ತು ವಿಕಿಪೀಡಿಯ: ಅಳಿಸುವಿಕೆ ಅಥವಾ ವಿಲೀನ ಪ್ರಬಂಧವು ಲೈಸೆನ್ಸಿಂಗ್ ಸಮಸ್ಯೆ ಉಂಟುಮಾಡದ ಬೇರೆ ಪ್ರಕರಣಗಳ ಬಗೆಗೆ ಚರ್ಚಿಸುತ್ತದೆ.

ಮರುನಿರ್ದೇಶನ[ಬದಲಾಯಿಸಿ]

ವಿಕಿಪೀಡಿಯಕ್ಕೆ ಸರಿಹೊಂದದ ಲೇಖನದ ತಲೆಬರಹ ಉಪಯುಕ್ತವಾಗಿರ ಬಹುದು. ಅಂತಹ ಸಂದರ್ಭದಲ್ಲಿ ಪುಟದ ಅಳಿಸುವಿಕೆ ಅಗತ್ಯವಿಲ್ಲ, ಬದಲಿಗೆ ಬಳಕೆದಾರ ದೈರ್ಯವಾಗಿ ಅಲ್ಲಿನ ಮಾಹಿತಿಯನ್ನು ತೆಗೆದುಹಾಕಿ (ಪುಟವನ್ನು ಬರಿದು ಮಾಡಿ) ಅದಕ್ಕೆಸೂಕ್ತ ಮರುನಿರ್ದೇಶನ ನೀಡಬೇಕು. ಇಂತಹ ಪುಟದ ಬದಲಾವಣೆಗಳು ವಿವಾದ್ಮಕವಾಗಿರ ಬಹುದಾಗಿದ್ದಲ್ಲಿ ಈ ಬಗೆಗೆ ಚರ್ಚೆಯ ಪುಟದಲ್ಲಿ ಚರ್ಚಿಸಿ, ಒಮ್ಮತದ ಆಧಾರದ ಮೇಲೆ ಮರುನಿರ್ದೇಶನ ಕೊಡಬಹುದು.

ಮನನಕಾಲ[ಬದಲಾಯಿಸಿ]

ಲೇಖನಗಳು ಸಂಭಾವ್ಯತೆಯನ್ನು ಹೊಂದಿಯೂ ಸಹ ವಿಕಿಪೀಡಿಯ ಗುಣಮಟ್ಟದ ಮಾನದಂಡವನ್ನು ಪೂರೈಸದಿದ್ದಲ್ಲಿ ವಿಕಿಪೀಡಿಯ:ಕರಡು ಹೆಸರಿನಸ್ಥಳಕ್ಕೆ ವರ್ಗಾಯಿಸಲಾಗುತ್ತದೆ ಮತ್ತು ಅಲ್ಲಿ ಅವು ಪ್ರಮುಖಸ್ಥಳದ "ದರ್ಜೆಗೆ" ಏರುವ ಮುನ್ನ, ಸಹಯೋಗದಲ್ಲಿ ಸಂಪಾದಿಸಲ್ಪಡುತ್ತವೆ ಅಥವಾ ಕೊನೆಯಲ್ಲಿ ಅಳಿಸಲ್ಪಡುತ್ತವೆ. ಮನನಕಾಲ (ಇಂಕ್ಯೂಬೇಶನ್) ಹಿಂದಿನ ರೂಢಿಯಾದ ಇಂತಹ ಲೇಖನಗಳನ್ನು ಬಳಕೆದಾರರ ಸ್ಥಳಕ್ಕೆ ವರ್ಗಾಯಿಸುವದಕ್ಕಿಂತ ಹೆಚ್ಚಿನ ಅನುಕೂಲಗಳನ್ನು ಒದಗಿಸುತ್ತದೆ. ಮೂಲಭೂತವಾಗಿ ಕರಡು ಹೆಸರಿನಸ್ಥಳಕ್ಕೆ ವರ್ಗಾಯಿಸುವುದು ಈ ಪ್ರೋಟೋ-ಲೇಖನಗಳನ್ನು ಹೆಚ್ಚು ಸುಲಭವಾಗಿ ಹುಡುಕಲು ಮತ್ತು ಸಂಪಾದಿಸಲು ಅನುಕೂಲ ಮಾಡಿಕೊಡುತ್ತದೆ.

ಇತರ ಯೋಜನೆಗಳು[ಬದಲಾಯಿಸಿ]

ಕೆಲವು ಲೇಖನಗಳು ವಿಕಿಪೀಡಿಯಕ್ಕೆ ಸೇರಿಸಲು ಅನರ್ಹವಾಗಿದ್ದಾಗ್ಯೂ, ಅವನ್ನು ವಿಕಿಮೀಡಿಯ ಸಹೋದರಿ ಯೋಜನೆಗಳಿಗೆ ಸೇರಿಸ ಬಹದು. ಅವುಗಳನ್ನು ವಿಲೀನಗೊಳಿಸುವ ಅಥವಾ ಅಳಿಸುವ ಮುನ್ನ ಟ್ರಾನ್ಸ್‌ವಿಕಿ ಕಾರ್ಯನಿರ್ವಹಣೆ ಬಳಸಿ ಅಲ್ಲಿಗೆ ನಕಲು ಮಾಡಬಹುದು. ಹೀಗೆ ಅಳಿಸಲಾದ ಪುಟವನ್ನು ಮತ್ತೆ ಸೃಷ್ಟಿಸುವ ಸಾಧ್ಯತೆ ಇದ್ದಲ್ಲಿ ಅದನ್ನು ಸೂಕ್ತ ಸಹೋದರಿ ಯೋಜನೆ ಲೇಖನಕ್ಕೆ ಮೃದು ಮರುನಿರ್ದೇಶನವಾಗಿ ಮಾರ್ಪಡಿಸ ಬಹುದು.

ಇದು ವಿಶೇಷವಾಗಿ ವಿಕ್ಷನರಿಗೆ ಅನ್ವಯಿಸುತ್ತದೆ. ಈ ಸಂದರ್ಭದಲ್ಲಿ ಟ್ರಾನ್ಸ್‌ವಿಕಿ ಕೋರಿಕೆ ಸಲ್ಲಿಸುವ ಮುನ್ನ, ದಯವಿಟ್ಟು ಮೊದಲು ವಿಕ್ಷನರಿಯಲ್ಲಿ ಪದವು ಇಲ್ಲವೆಂದು ಖಚಿತ ಪಡಿಸಿಕೊಳ್ಳಿ ನಂತರ ಸರಳವಾಗಿ ಲೇಖನಕ್ಕೆ {{Copy to Wiktionary}} ಟ್ಯಾಗ್ ಹಾಕಿ. ಲೇಖನಗಳು ನಿಘಂಟು ಲೇಖನಗಳಲ್ಲದೆ ಬೇರೆನೂ ಆಗಲು ಸಾಧ್ಯವಿಲ್ಲದಿದ್ದಲ್ಲಿ ಅವನ್ನು ಗುಣವಾಚಕ→ನಾಮಪದ ಅಥವಾ ಕ್ರಿಯಾಪದ→ಕೃದಂತ ರೀತಿಯಲ್ಲಿ ವಿಲೀನಗೊಳಿಸ ಬೇಕು ಮತ್ತು ಮರುನಿರ್ದೇಶನ ಕೊಡಬೇಕು (ವಿಕಿಪೀಡಿಯದ ಒಳಗೆ). ಪುಟ ಮರುನಿರ್ದೇಶನಕ್ಕೆ ಸೂಕ್ತ ಪುಟ ವಿಕಿಪೀಡಿಯದಲ್ಲಿ ಇಲ್ಲದಿದ್ದಲ್ಲಿ ನಿಘಂಟು ಲೇಖನವನ್ನು ಅಳಿಸ ಬೇಕು ಅಥವಾ ದ್ವಂದನಿವಾರಣೆಯ ಪುಟವಾಗಿ ಬದಲಾಯಿಸ ಬೇಕು ಅಥವಾ ವಿಕ್ಷನರಿಯಲ್ಲಿನ ಪದಕ್ಕೆ{{Wi}} ಟೆಂಪ್ಲೇಟು ಮೂಲಕ ಮೃದು ಮರುನಿರ್ದೇಶನ ನೀಡಬೇಕು.

ಆರ್ಕಿವ್[ಬದಲಾಯಿಸಿ]

ಆರ್ಕಿವ್ (ಅಭಿಲೇಖಾಗಾರ) ಮಾಡಲು ಪುಟವನ್ನು ಅಳಿಸಬಾರದು. ಡೆವಲಪರ್‌ಗಳು (ಅಭಿವರ್ಧಕರು) ಸೂಚಿಸಿದಂತೆ ಅಳಿಸಿಹಾಕಿದ ಪುಟಗಳನ್ನು ಡಾಟಬೇಸ್‌ನಿಂದ ಯಾವಾಗ ಬೇಕಾದರೂ ತೆರಪುಗೊಳಿಸ ಬಹುದು ಅಥವಾ ತೆಗೆದು ಹಾಕಬಹುದು.

ಪ್ರಕ್ರಿಯೆಗಳು[ಬದಲಾಯಿಸಿ]

ಅಳಿಸುವಿಕೆಗೆ ನಾಲ್ಕು ಮೂಲಭೂತ ಪ್ರಕ್ರಿಯೆಗಳು ಇವೆ ಮತ್ತು ಎರಡು ಪ್ರಕ್ರಿಯೆಗಳು ಇದರ ಹಾಗೂ ಇತರ ಅಳಿಸುವಿಕೆ ಪ್ರಕ್ರಿಯೆಗಳ ಪಲಿತಾಂಶಗಳನ್ನು ಮರುಪರಿಶೀಲಿಸಲು ಮತ್ತು ರದ್ಧು ಮಾಡಲು ಇವೆ.

ಹಕ್ಕುಸ್ವಾಮ್ಯ ಉಲ್ಲಂಘನೆ:[ಬದಲಾಯಿಸಿ]

ಕಾನೂನಿನ ಕಾರಣಗಳಿಂದಾಗಿ ವಿಕಿಪೀಡಿಯ ಹಕ್ಕುಸ್ವಾಮ್ಯ ಉಲ್ಲಂಘನೆಯಡಿ ಬರುವ ಮಾಹಿತಿಯನ್ನು ಹೋಸ್ಟ್ ಮಾಡುವುದಿಲ್ಲ.

  • ಇದನ್ನು ಹೇಗೆ ಮಾಡಲಿ: ಚಿತ್ರಗಳಿಗಾಗಿ ಬಹುಶ ಫ್ರೀಅಲ್ಲದ ಚಿತ್ರಗಳ ಬಗೆಗಿನ ಮಾಹಿತಿಯನ್ನು ಓದಿ. ಇತರ ಪುಟಗಳಲ್ಲಿ ಸಾಧ್ಯವಾದರೆ ಉಲ್ಲಂಘನೆಯನ್ನು ತೆಗೆಯಿರಿ ಅಥವಾ ಅದರ ಸಂಪೂರ್ಣ ವಿಷಯವನ್ನು ಬದಲಾಯಿಸಲು ಪುಟವನ್ನು {{subst:copyvio}} ಇದರಿಂದ ಸಂಪಾದಿಸಬಹುದು. ಸ್ಪಷ್ಟ, ಇಡೀ ಪುಟದ ಕೃತಿಸ್ವಾಮ್ಯ ಉಲ್ಲಂಘನೆಯಾಗಿದ್ದಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಯಿಲ್ಲದ ಯಾವುದಾದರೂ ಆವೃತ್ತಿ ಇದೆಯೇ ಎಂದು ಇತಿಹಾಸದಲ್ಲಿ ಪರಿಶೀಲಿಸಿದ ನಂತರ , ವೇಗದ ಅಳಿಸುವಿಕೆಗಾಗಿ ಅದನ್ನು {{db-copyvio}} ಜೊತೆಗೆ ಟ್ಯಾಗ್ ಮಾಡಿ.
  • ನೀವು ಒಪ್ಪದಿದ್ದರೆ: ಪಠ್ಯದ ಲೇಖಕರನ್ನು ಸಂಪರ್ಕಿಸಲು ಪ್ರಯತ್ನಿಸಿ ಮತ್ತು ಅವರು ತಮ್ಮ ಕೃತಿಯನ್ನು (೧) ಸ್ವೀಕಾರಾರ್ಹ ಪರವಾನಿಗೆಯ (ಪಠ್ಯಕ್ಕೆ,ಇದು ಸಿಸಿ-ಬಿವೈ-ಎಸ್ಎ ಮತ್ತು ಜಿಎಪ್‌ಡಿಎಲ್ ಸಹ ಪರವಾನಗಿ, ಸಿಸಿ-ಬಿವೈ-ಎಸ್ಎ ಮಾತ್ರ, ಅಥವಾ ಸಿಸಿ-ಬಿವೈ-ಎಸ್ಎ ಹೊಂದಬಲ್ಲ) ಕೆಳಗೆ ಅಥವಾ (೨) ಸಾರ್ವಜನಿಕ ಡೊಮೇನ್‌ನಲ್ಲಿ ಬಿಡುಗಡೆ ಮಾಡುತ್ತಾರೆಯೋ ಕೇಳಿ. ಕೃತಿಯ ಪರವಾನಗಿ "ಕೇವಲ ವಿಕಿಪೀಡಿಯಾ ಮೇಲೆ" ಅಥವಾ "ವಾಣಿಜ್ಯೇತರ ಬಳಕೆಗೆ ಮಾತ್ರ" ಎಂದು ಇದ್ದರೆ ಸಾಕಾಗುವುದಿಲ್ಲ, ಏಕೆಂದರೆ ಇದು ನಮ್ಮ ಪರವಾನಗಿಗೆ ಹೊಂದಾಣಿಕೆಯಾಗುವುದಿಲ್ಲ.
  • ಪುನರ್ನಾಮಕರಣ ಮಾಡುವುದು: ಹಕ್ಕುಸ್ವಾಮ್ಯದ ಮಾಹಿತಿಯನ್ನು ಮತ್ತೆ ರಚಿಸಿದ್ದೇ ಆದಲ್ಲಿ ಅದನ್ನು ಕೆಳಗೆ ಸೂಚಿಸಿರುವಂತೆ ವೇಗವಾಗಿ ಅಳಿಸುವಿಕೆಗೆ ಹಾಕಲಾಗುವುದು. ಅಂತಹ ವಿಷಯಗಳನ್ನು ಮತ್ತೆ ಮತ್ತೆ ರಚಿಸುವುದು ವಿಚ್ಛಿದ್ರಕಾರಕವಾಗಿದೆ.

ವೇಗದ ಅಳಿಸುವಿಕೆ[ಬದಲಾಯಿಸಿ]

ಒಂದು ವೇಳೆ ಪುಟಗಳು ವೇಗದ ಅಳಿಸುವಿಕೆಯ ಮಾನದಂಡಗಳನ್ನು ಪೂರೈಸುತ್ತವೆ ಎಂದಾದಲ್ಲಿ ಅವುಗಳನ್ನು ಯಾವುದೇ ಚರ್ಚೆಗಳಿಲ್ಲದೇ ಅಳಿಸಬಹುದು. ವೇಗದ ಅಳಿಸುವಿಕೆಯಲ್ಲಿ ನಿಸ್ಸಂಶಯವಾಗಿ ವಿಕಿಪೀಡಿಯಗೆ ಸೂಕ್ತವಲ್ಲದ ಪುಟಗಳು ಹಾಗೂ ಚರ್ಚೆಯಿಂದಲೂ ಉಳಿಸಲಾರದ ಪುಟಗಳನ್ನು ಅಳಿಸಬಹುದು. ವೇಗದ ಅಳಿಸುವಿಕೆಯನ್ನು ಸ್ಪಷ್ಟ ಪ್ರಕರಣಗಳಲ್ಲಿ ಮಾತ್ರ ಬಳಸಬೇಕು.

ಒಂದು ಪುಟವು ಮೊದಲು ಅಳಿಸುವಿಕೆಯ ಚರ್ಚೆಯ ನಂತರ ಉಳಿದುಕೊಂಡಿದೆ ಎಂದರೆ ಇದನ್ನು ಹೊಸದಾಗಿ ಪತ್ತೆಯಾದ ಕೃತಿಸ್ವಾಮ್ಯ ಉಲ್ಲಂಘನೆ ಹೊರತುಪಡಿಸಿ ಬೇರೆ ಯಾವುದೇ ಕಾರಣದಿಂದಲೂ ವೇಗದ ಅಳಿಸುವಿಕೆ ಮಾಡಬಾರದು. ಅಳಿಸುವಿಕೆಯ ಪ್ರಸ್ತಾಪದಲ್ಲಿರುವ ಪುಟ ಅಥವಾ ಅಳಿಸುವಿಕೆ ಚರ್ಚೆ (ಕೆಳಗೆ ನೋಡಿ) ಪುಟಗಳನ್ನು ವೇಗದ ಅಳಿಸುವಿಕೆಯ ಮೂಲಕ ಅಳಿಸಬಹುದು.

  • ಎಲ್ಲಿ ಹುಡುಕಲಿ: ವೇಗದ ಅಳಿಸುವಿಕೆಗೆ ಗುರುತಿಸಿರುವ ಎಲ್ಲಾ ಪುಟಗಳ ಪಟ್ಟಿಯನ್ನು ಯಲ್ಲಿ ಕಾಣಬಹುದು.
  • ಇದನ್ನು ಹೇಗೆ ಮಾಡಲಿ: ಇಂತಹ ಪುಟಗಳನ್ನು ಗಮನಿಸಿದ ನಂತರ ನಿರ್ವಾಹಕರು ಅದನ್ನು ಅಳಿಸಬಹುದು. ಇತರ ಸಂಪಾದಕರು ಸಂಬಂಧಿತ ಪುಟದ ಮೇಲ್ಭಾಗದಲ್ಲಿ ವೇಗದ ಅಳಿಸುವಿಕೆಯ ಟೆಂಪ್ಲೇಟ್ ಸೇರಿಸುವ ಸಂಪಾದನೆಯ ಮೂಲಕ ಕೋರಬಹುದು.
  • ನೀವು ಒಪ್ಪದಿದ್ದರೆ: ಪುಟದ ಸೃಷ್ಟಿಕರ್ತ ಹೊರತುಪಡಿಸಿ ಯಾರಾದರೂ ಪುಟದಿಂದ ಅಳಿಸುವ ಸೂಚನೆ ತೆಗೆದು ಪುಟದ ವೇಗದ ಅಳಿಸುವಿಕೆಗೆ ಸ್ಪರ್ಧಿಸುವ ಸಾಧ್ಯತೆಯಿದೆ.ನೀವು ರಚಿಸಿದ ಪುಟ ವೇಗದ ಅಳಿಸುವಿಕೆಗೆ ಟ್ಯಾಗ್ ವೇಳೆ ನೀವು {{Hangon}} ಟ್ಯಾಗ್ ಸೇರಿಸಬಹುದು ಮತ್ತು ನೀವು ಪುಟವನ್ನು ಸುಧಾರಿಸಬಹದು ಅಥವಾ ಸಂಬಂಧಿತ ತಾರ್ಕಿಕ ಚರ್ಚೆಯನ್ನು ಪುಟದಲ್ಲಿ ವಿವರಿಸಬಹುದು. ನೀವು ಮಾಡಿರುವ ಟ್ಯಾಗ್ ಕೇವಲ ಹೆಚ್ಚುವರಿ ಸಮಯವನ್ನು ಮಾತ್ರ ನೀಡುತ್ತದೆ, ಆದಾಗ್ಯೂ ಪುಟ ವೇಗದ ಆಲಿಸುವಿಕೆಯ ಮಾನದಂಡಗಳಿಗೆ ಒಳಪಟ್ಟಲ್ಲಿ ಪುಟವನ್ನು ಅಳಿಸಬಹುದು. ಒಂದು ಪುಟ ಚುರುಕಾಗಿ ಅಳಿಸಿಹಾಕಿದಲ್ಲಿ ಅದರ ಸರಿ ತಪ್ಪು ಹಾಗೂ ಭಿನ್ನಾಭಿಪ್ರಾಯಗಳನ್ನು ಅಳಿಸುವಿಕೆಯ ವಿಮರ್ಶೆಯಲ್ಲಿ ಚರ್ಚಿಸಲಾಗುತ್ತದೆ.
  • ಪುನರ್ನಾಮಕರಣ ಮಾಡುವುದು: ಒಂದು ಪುಟವು ವೇಗದ ಮಾನದಂಡಗಳನ್ನು ಪೂರೈಸುತ್ತದೆ ಅಥವಾ ಇಲ್ಲ. ಈ ಮಾನದಂಡಗಳನ್ನು ಪುಟ ಪೂರೈಸುತ್ತದೆಯೋ ಇಲ್ಲವೊ ಎಂಬುದರ ಬಗೆಗೆ ಭಿನ್ನಾಭಿಪ್ರಾಯವಿದ್ದಲ್ಲಿ ಪುಟವನ್ನು ಅಳಿಸುವ ಬದಲು ವಿವಾದಾಂಶವನ್ನು ಕೆಳಗೆ ಕಾಣಿಸಿದ ಅಳಿಸುವಿಕೆಯ ಚರ್ಚೆಗೆ ತೆಗೆದುಕೊಂಡು ಹೋಗಲಾಗುತ್ತದೆ.

ಪ್ರಸ್ತಾಪಿತ ಅಳಿಸುವಿಕೆ[ಬದಲಾಯಿಸಿ]

ಒಬ್ಬ ಸಂಪಾದಕನಿಗೆ ಒಂದು ಪುಟ ಸ್ಪಷ್ಟವಾಗಿ ಮತ್ತು ನಿರ್ವಿವಾದವಾಗಿ ವಿಶ್ವಕೋಶಕ್ಕೆ ತಕ್ಕುದಾದುದು ಅಲ್ಲ ಎಂಬ ನಂಬಿಕೆ ಇದ್ದರೆ ಅದರ ಅಳಿಸುವಿಕೆಗೆ ಸಲಹೆ ನೀಡಬಹುದು. ಇಂತಹ ಪುಟದ ಅಳಿಸುವಿಕೆಯ ಬಗ್ಗೆ ಏಳು ದಿನಗಳ ನಂತರ ಯಾವುದೇ ಆಕ್ಷೇಪಣೆ ಇಲ್ಲದಿದ್ದಲ್ಲಿ ನಿರ್ವಾಹಕರು ಆ ಪುಟವನ್ನು ಅಳಿಸಬಹುದು. ಒಮ್ಮೆ ಆಕ್ಷೇಪಣೆ ಅಥವಾ ಅಳಿಸುವಿಕೆಗೆ ಚರ್ಚೆಗಳು ನಡೆದಲ್ಲಿ ಆ ಪುಟವನ್ನು ಮತ್ತೆ ಅಳಿಸುವಿಕೆಗೆ ಪ್ರಸ್ತಾಪಿಸಲು ಬರುವುದಿಲ್ಲ. ಈ ಪ್ರಕ್ರಿಯೆಯು ಕೇವಲ ಪುಟಗಳ ಮುಖ್ಯ ಶಿರೋನಾಮೆ (ಲೇಖನ ಶಿರೋನಾಮೆ)ಗೆ ಮಾತ್ರ ಅನ್ವಯಿಸುತ್ತದೆ. ಮರುರ್ನಿರ್ದೇಶನಗಳು ಪ್ರಸ್ತಾವಿತ ಅಳಿಸುವಿಕೆಗೆ ಅರ್ಹತೆ ಪಡೆಯುವುದಿಲ್ಲ.

  • ಎಲ್ಲಿ ಹುಡುಕಲಿ: ಪ್ರಸ್ತಾಪಿತ ಅಳಿಸುವಿಕೆಗೆ ಗುರ್ತಿಸಲ್ಪಟ್ಟಿರುವ ಎಲ್ಲಾ ಪುಟಗಳ ಪಟ್ಟಿಯನ್ನು ಸಿ:ಪ್ರಸ್ತಾಪಿತ ಅಳಿಸುವಿಕೆ ಯಲ್ಲಿ ನೋಡಬಹುದು, ಹಾಗೂ ಸ್ವಯಂ ನಿರ್ಮಿತ ಸಾರಾಂಶ ಟೇಬಲ್ ನಲ್ಲಿಯೂ ನೋಡಬಹುದು.
  • ಇದನ್ನು ಹೇಗೆ ಮಾಡಲಿ: ಪುಟದ ಮೇಲ್ಭಾಗದಲ್ಲಿ ಈ {{subst:prod|ಕಾರಣ}} ಪಠ್ಯವನ್ನು ಸೇರಿಸಿ ಮತ್ತು ನಿಮ್ಮ ತಾರ್ಕಿಕ ವಿವರಣೆಯನ್ನು "ಕಾರಣ"ದ ಜಾಗದಲ್ಲಿ ಬರೆಯುವ ಮೂಲಕ ಪುಟವನ್ನು ಸಂಪಾದಿಸಿ.
  • ನೀವು ಒಪ್ಪದಿದ್ದರೆ: ಉದ್ದೇಶಿತ ಅಳಿಸುವಿಕೆಗೆ ನಿರಾಕರಿಸುವ ಯಾವುದೇ ಸಂಪಾದಕ ಗುರುತುನ್ನು (ಟ್ಯಾಗ್) ತೆಗೆದುಹಾಕಬಹುದು. ಪುಟ ಅಳಿಸಲಾದ ನಂತರವೂ, ಯಾವುದೇ ಸಂಪಾದಕ ಸರಳವಾಗಿ ಯಾವುದೇ ನಿರ್ವಾಹಕರನ್ನು ಕೇಳುವ ಮೂಲಕ ಪುಟವನ್ನು ಮರುಸ್ಥಾಪಿಸಬಹುದು. ಎರಡೂ ಸಂದರ್ಭಗಳಲ್ಲಿಯೂ, ಸಂಪಾದಕನನ್ನು ಪುಟದಲ್ಲಿ ಗ್ರಹಿಸಿದ ಸಮಸ್ಯೆಯನ್ನು ಪರಿಹರಿಸಲು ಪ್ರೋತ್ಸಾಹಿಸಲಾಗುತ್ತದೆ.
  • ಪುನರ್ನಾಮಕರಣ ಮಾಡುವುದು: ಒಂದು ಪುಟದ ಪ್ರಸ್ತಾಪಿತ ಅಳಿಸುವಿಕೆಯ ಬಗ್ಗೆ ಯಾರಾದರೂ ಆಕ್ಷೇಪಣೆ ಮಾಡಿದ್ದೇ ಆದಲ್ಲಿ ತದನಂತರ ಇದನ್ನು ಅಳಿಸುವಿಕೆಗೆ ಮತ್ತೆ ಪ್ರಸ್ತಾವಿಸಬಾರದು. ಒಬ್ಬ ಸಂಪಾದಕ ಇನ್ನೂ ಪುಟವನ್ನು ಅಳಿಸಬೇಕು ಎಂದು ಭಾವಿಸಿದರೆ, ಕೆಳಗೆ ಸೂಚಿಸಿರುವಂತೆ ಅಳಿಸುವಿಕೆಯ ಚರ್ಚೆಯನ್ನು ಬಳಸಬೇಕು.

ಅಳಿಸುವಿಕೆಯ ಚರ್ಚೆ[ಬದಲಾಯಿಸಿ]

ಈ ಮೇಲೆ ಹೇಳಿರುವ ಮೂರು ವರ್ಗಗಳಲ್ಲಿ ಪುಟ ಬರುವುದಿಲ್ಲ ಎಂದಾಗ ಸಮುದಾಯವು ಅಳಿಸುವಿಕೆ ಚರ್ಚೆಯಲ್ಲಿ ಚರ್ಚಿಸಿದ ನಂತರ ಆ ಪುಟವನ್ನು ಅಳಿಸಬಹುದು. ಇದರ ಫಲಿತಾಂಶಗಳನ್ನು ಅಳಿಸುವಿಕೆಯ ವಿಮರ್ಶೆಯಲ್ಲಿ (ಕೆಳಗೆ ನೋಡಿ) ಮರುಪರಿಶೀಲಿಸ ಬಹುದು. ಇದು ವಿವಾದಿತ ವೇಗದ ಅಳಿಸುವಿಕೆ ಅಥವಾ ಪ್ರಸ್ತಾಪಿತ ಅಳಿಸುವಿಕೆಗಳನ್ನು ಒಳಗೊಳ್ಳುತ್ತದೆ. ಇದರಲ್ಲಿ ಭಾಗವಹಿಸ ಬಯಸುವ ಸಂಪಾದಕರು ಪುಟವನ್ನು ಏನು ಮಾಡಬೇಕು ಎಂಬುದರ ಬಗೆಗೆ ತಮ್ಮ ಅಭಿಪ್ರಾಯಗಳನ್ನು ನೀಡಬಹುದು.

ಈ ಪ್ರಕ್ರಿಯೆಗಳನ್ನು ತಲೆ ಎಣಿಕೆ ಮೂಲಕ ನಿರ್ಧರಿಸಲಾಗುವುದಿಲ್ಲ. ಆದ್ದರಿಂದ ಭಾಗವಹಿಸುವವರು ತಮ್ಮ ಅಭಿಪ್ರಾಯವನ್ನು ವಿವರಿಸಲು ಮತ್ತು ನೀತಿಯನ್ನು ಉಲ್ಲೇಖಿಸಲು ಪ್ರೋತ್ಸಾಹಿಸಲಾಗುತ್ತದೆ. ಚರ್ಚೆಯು ಕನಿಷ್ಠ ಏಳು ಪೂರ್ಣ ದಿನಗಳ ವರೆಗೂ ಇರುತ್ತದೆ; ನಂತರ ಅಳಿಸಲು ಒಮ್ಮತವಿದ್ದರೆ ಪುಟವನ್ನು ನಿರ್ವಾಹಕರು ಅಳಿಸುತ್ತಾರೆ. ನಾಮನಿರ್ದೇಶನ (ನಾಮಿನೇಶನ್) ಚರ್ಚೆಯ ಕಾಲಮಾನವು ಕಡಿಮೆ ಪ್ರತಿಕ್ರಿಯೊಂದಿಗೆ ಮುಕ್ತಾಯವಾದಲ್ಲಿ ಮುಕ್ತಾಯಗೊಳಿಸುವ ಸಂಪಾದಕ ಹೆಚ್ಚಿನ ಕಾಲಮಾನ ನೀಡಿದರೆ ಸ್ಪಷ್ಟ ಒಮ್ಮತಕ್ಕೆ ಬರಲು ಸಾಧ್ಯವಾಗ ಬಹುದು ಎಂದು ಭಾವಿಸಿದಲ್ಲಿ ಆ ಪುಟವನ್ನು ಮತ್ತೆ ಚರ್ಚೆಗೆ ಹಾಕುವ ಪಟ್ಟಿಯಲ್ಲಿ ಸೇರಿಸ ಬಹುದು.

ಚರ್ಚೆಯ ಪಲಿತಾಂಶವನ್ನು ಪ್ರಭಾವಿಸಲು ಹೊರಗಿನವರನ್ನು ಚರ್ಚೆಗೆ ಕರೆತರುವುದನ್ನು ವಿಕಿಪೀಡಿಯ ಅನುಚಿತವೆಂದು ಪರಿಗಣಿಸುತ್ತದೆ; ಇಂತಹ ಮೀಟ್‌ಪಪೆಟ್ (ಹೊಸ ಸಂಪಾದಕರನ್ನು ವಿಕಿಪೀಡಿಯ ಕರೆತಂದು ತಮ್ಮ ಅಭಿಪ್ರಾಯಕ್ಕೆ ಬಲ ತುಂಬಲು ಪ್ರಯತ್ನಿಸುವುದನ್ನು ಇದು ಒಳಗೊಂಡಿದೆ) ಟಿಪ್ಪಣಿಗಳನ್ನು ಕಡೆಗೆಣಿಸ ಬಹುದು. ಅವನ್ನು ತೆಗೆಯಲಾಗುವುದಿಲ್ಲ ಆದರೆ ಅವನ್ನು {{Spa|Username}} ಜೊತೆ ಟ್ಯಾಗ್ ಮಾಡುವ ಮೂಲಕ ಬಳಕೆದಾರ "ಕೆಲವೇ ಸಂಪಾದನೆಗಳನ್ನು ಮಾಡಿದ್ದಾರೆ ಅಥವಾ ಯಾವುದೇ ಇತರ ಸಂಪಾದನೆಗಳನ್ನು ಮಾಡಿಲ್ಲ" ಎಂದು ಟಿಪ್ಪಣಿ ಮಾಡಬಹುದು. ತೀರ ವಿರಳವಾಗಿ ಒಂದು ಅಳಿಸುವಿಕೆಯ ಚರ್ಚೆಯನ್ನು ಅರೆ-ಸಂರಕ್ಷಿತ ಮಾಡಬಹುದು.

ಸಂಪಾದಕೀಯ ವಿವಾದದಿಂದ ಅಳಿಸಲು ಕೋರುವುದು ಅಸಮಂಜಸ. ಇಂತಹ ವಿವಾದಗಳನ್ನು ಇಡೀ ಪುಟ ಅಳಿಸಿಹಾಕುವುದರ ಮೂಲಕ ಪರಿಹರಿಸಲಾಗುವುದಿಲ್ಲ; ಬದಲಿಗೆ ವಿವಾದ ಪರಿಹಾರ ಬಳಸಿ.

  • ಎಲ್ಲಿ ಹುಡುಕಲಿ: ಲೇಖನಗಳು, ವರ್ಗಗಳು (ಚುಟುಕು ವರ್ಗಗಳನ್ನು ಹೊರತುಪಡಿಸಿ), ಕಡತಗಳು, ಪುನರ್ನಿರ್ದೇಶನಗಳು, ಟೆಂಪ್ಲೇಟ್‌ಗಳು, ಚುಟುಕು ಟೆಂಪ್ಲೇಟ್‌ಗಳು ಮತ್ತು ವರ್ಗಗಳು ಮತ್ತು ಉಳಿದ ಎಲ್ಲಾದಕ್ಕೂ ಪ್ರತ್ಯೇಕ ಪ್ರಕ್ರಿಯೆಗಳು ಇವೆ.
  • ಇದನ್ನು ಹೇಗೆ ಮಾಡಲಿ: ಸಂಬಂಧಿತ ಪ್ರಕ್ರಿಯೆ ಪುಟದ ಮೇಲ್ಭಾಗದಲ್ಲಿರುವ ಸೂಚನೆಗಳನ್ನು ಅನುಸರಿಸಿ.
  • ನೀವು ಒಪ್ಪದಿದ್ದರೆ: ಸಂಬಂಧಿತ ಪ್ರಕ್ರಿಯೆ ಪುಟಕ್ಕೆ ಹೋಗಿ ಮತ್ತು ನೀವು ಒಪ್ಪದಿರುವುದರ ಕಾರಣಗಳನ್ನು ವಿವರಿಸಿ. ಪುಟದ ಟ್ಯಾಗ್‌ನ್ನು ತೆಗೆಯಬೇಡಿ. ಹೆಚ್ಚಿನ ವಿವರಗಳಿಗೆ ವಿಕಿಪೀಡಿಯ: ಅಳಿಸುವಿಕೆಗೆ ಮಾರ್ಗದರ್ಶನ ನೋಡಿ.
  • ಮರುನಾಮಕರಣ: ಒಂದು ಅಳಿಸುವಿಕೆಗೆ ಚರ್ಚೆ ಮುಗಿದು ಪುಟವನ್ನು ಉಳಿಸಿದ ನಂತರ, ಬಳಕೆದಾರರು ಪುಟವನ್ನು ಚರ್ಚೆಗೆ ಮರುನಾಮಕರಣ ಮಾಡುವ ಬದಲು ಸಂಪಾದಕರಿಗೆ ಪುಟವನ್ನು ಸುಧಾರಿಸಲು ನ್ಯಾಯಸಮ್ಮತ ಕಾಲಾವಧಿ ನೀಡಬೇಕಾಗುತ್ತದೆ. ಹಿಂದಿನ ಚರ್ಚೆಯ ನಂತರ ಮತ್ತೇ ಹಾಗೆಯೇ ಅದೇ ಪುಟವನ್ನು ನಾಮಕರಣಮಾಡಿದಲ್ಲಿ ಅದನ್ನು ಸಾಮಾನ್ಯವಾಗಿ ತಕ್ಷಣವೇ ಮುಚ್ಚಲಾಗುತ್ತದೆ. ಬೇರೆ ಫಲಿತಾಂಶವನ್ನು ಪಡೆಯುವ ನಿರೀಕ್ಷೆಯಲ್ಲಿ ಮತ್ತೇ ಮತ್ತೇ ಪುಟದ ನಾಮನಿರ್ದೇಶನ ಮಾಡುವುದು ವಿಚ್ಛಿದ್ರಕಾರಕ.

ಲೇಖನಗಳ ಅಳಿಸುವಿಕೆ[ಬದಲಾಯಿಸಿ]

ಒಂದು ಅಳಿಸುವಿಕೆಯ ಚರ್ಚೆ ಆಧರಿಸಿ ಪುಟವನ್ನು ಒಮ್ಮತವಿದ್ದಾಗ ಮಾತ್ರ ಅಳಿಸಬೇಕು. ಆದ್ದರಿಂದ ಒಂದು ವೇಳೆ ಒಮ್ಮತ ಇಲ್ಲದೇ ಹೋದಲ್ಲಿ , ಪುಟವನ್ನು ಉಳಿಸಲಾಗುತ್ತದೆ ಮತ್ತು ವಿಲೀನಗೊಳಿಸಲು ಅಥವಾ ಸೂಕ್ತ ಸಂಪಾದನೆಗೆ ಮರುನಿರ್ದೇಶಿಸುತ್ತದೆ.

ಜೀವನಚರಿತ್ರೆ ಮತ್ತು ಬದುಕಿರುವ ಜನರ ಜೀವನಚರಿತ್ರೆಗಳು[ಬದಲಾಯಿಸಿ]

ಅಪರಿಚಿತರು, ಪ್ರಖ್ಯಾತರಲ್ಲದ ವ್ಯಕ್ತಿಗಳ ಜೀವನಚರಿತ್ರೆಗಳನ್ನು ಅಳಿಸುವಿಕೆಗೆ ವಿನಂತಿಸಿದಲ್ಲಿ ಮತ್ತು ಯಾವುದೇ ಒಮ್ಮತ ಇಲ್ಲದೇ ಹೋದಲ್ಲಿ ಅಂತಹ ಲೇಖಗಳನ್ನು ಅಳಿಸುವುದರ ಮೂಲಕ ಮುಚ್ಚಲಾಗುತ್ತದೆ. ಕಳಪೆ ಮಟ್ಟದ ಅಪರಿಚಿತರು, ಪ್ರಖ್ಯಾತರಲ್ಲದ ವ್ಯಕ್ತಿಗಳ ಜೀವನಚರಿತ್ರೆಗಳನ್ನು ಒಳಗೊಂಡ ಲೇಖಗಳಿಗೆ ಯಾವುದೇ ಸಂಪಾದಕನ ಆಪೇಕ್ಷಣೆ ಇಲ್ಲದಿದ್ದಲ್ಲಿ ಅದನ್ನು ಕೆಲ ಚರ್ಚೆಗಳ ನಂತರ ಅಳಿಸಬಹುದು. ಯಾವುದೇ ಜೀವನಚರಿತ್ರೆ (ಹೆಸರಾಂತ ಅಥವಾ ಪ್ರಖ್ಯಾತರಲ್ಲದ) ಅಳಿಸುವಿಕೆಯ ಚರ್ಚೆಗೆ ನಿರ್ದೇಶನವಾಗಿದ್ದಲ್ಲಿ ಅದಕ್ಕೆ ನಿರ್ದೇಶನ ಮಾಡಿದವರ ಹೊರತಾಗಿ ಬೇರೆ ಯಾವುದೇ ಟೀಕೆಗಳು ಬಾರದಿದ್ದಲ್ಲಿ ಅದನ್ನು ಕೊನೆಯ ಸಂಪಾದಕನ ನಿರ್ಣಯದಂತೆ ಅತ್ಯುತ್ತಮ ತೀರ್ಪು ನೀಡಿ ಮುಚ್ಚಲಾಗುತ್ತದೆ.

ಅಳಿಸುವಿಕೆಯ ವಿಮರ್ಶೆ[ಬದಲಾಯಿಸಿ]

ನೀವು ಒಂದು ಪುಟವನ್ನು ತಪ್ಪಾಗಿ ಅಳಿಸಲಾಗಿದೆ ಎಂದು ಭಾವಿಸಿದರೆ ಅಥವಾ ಅಳಿಸಬೇಕಾದ ಪುಟವನ್ನು ಅಳಿಸದೇ ಹೋಗಿದ್ದಲ್ಲಿ, ಅಥವಾ ಅಳಿಸುವಿಕೆಯ ಚರ್ಚೆ ಸರಿಯಾಗಿ ಮುಗಿಯದೆ ಮುಚ್ಚಲಾದಲ್ಲಿ ನೀವು ಪುಟವನ್ನು ಅಳಿಸಿದ ಅಥವಾ ಚರ್ಚೆ ಮುಚ್ಚಿದ ವ್ಯಕ್ತಿಯೊಡನೆ ಅವರ ಚರ್ಚೆ ಪುಟದಲ್ಲಿ ಚರ್ಚಿಸಬೇಕು. ಇದು ಸಮಸ್ಯೆಯನ್ನು ಪರಿಹರಿಸಲು ವಿಫಲವಾದರೆ, ನೀವು ಮುಚ್ಚಿದ ಪುಟದ ವಿಮರ್ಶೆಯನ್ನು ಅಳಿಸುವಿಕೆ ಮರುಪರಿಶೀಲನೆಯಲ್ಲಿ ಕೋರಬಹುದು.

ಒಂದು ಪುಟವನ್ನು ನಿಸ್ಸಂಶಯವಾಗಿ "ಪ್ರಕ್ರಿಯೆಯ ಹೊರಗೆ" (ಇಲ್ಲಿನ ನೀತಿಯಂತೆ) ಅಳಿಸಲಾಗಿದಲ್ಲಿ, ನಿರ್ವಾಹಕರು ತಕ್ಷಣ ಅಳಿಸುವಿಕೆ ರದ್ದುಮಾಡಬಹುದು. ಇಂತಹ ಸಂದರ್ಭದಲ್ಲಿ, ಪುಟ ಅಳಿಸಿದ ನಿರ್ವಾಹಕರಿಗೆ ಇದನ್ನು ತಿಳಿಸಬೇಕು. ಆದರೆ ಒಮ್ಮತ ಪಡೆಯದೇ ಅಳಿಸುವಿಕೆಯನ್ನು ರದ್ದು ಪಡಿಸುವುದನ್ನು ವಿಚ್ಛಿದ್ರಕಾರಕ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಇವುಗಳನ್ನು ಎಚ್ಚರಿಕೆಯಿಂದ ಕೈಗೊಳ್ಳಬೇಕು.

ಲೇಖನ ವಿಷಯದ ಕೊರತೆ ಅಥವಾ ಅನುಚಿತ ವಿಷಯವನ್ನು ಒಳಗೊಂಡ (ಇದು ಬಹಳಷ್ಟು ವೇಗದ ಅಳಿಸುವಿಕೆಗಳಿಗೆ ಅನ್ವಯಿಸುತ್ತದೆ) ಕಾರಣಕ್ಕೆ ಪುಟ ಅಳಿಸಲಾಗಿದ್ದರೆ ಮತ್ತು ನೀವು ಅದೇ ವಿಷಯದ ಬಗ್ಗೆ ಒಂದು ಉತ್ತಮ ಲೇಖನ ರಚಿಸಲು ಬಯಸುತ್ತಿದ್ದರೆ, ನೀವು ಯಾವುದೇ ಮರುಪರಿಶೀಲನೆಯ ಅಗತ್ಯವಿಲ್ಲದೆಯೇ ಮುಂದೆ ಹೋಗಿ, ಹಾಗೆ ಮಾಡಬಹುದು. ವಿಶೇಷವಾಗಿ ಆಧಾರ ರಹಿತ ಚುಟುಕಿನ ಬಗೆಗೆ ಅಳಿಸುವಿಕೆ ಮರುಪರಿಶೀಲನೆ ಮಾಡುವುದು ಆಧಾರ ಸಹಿತ ಲೇಖನ ಸೃಷ್ಟಿಯ ಅವಕಾಶ ತೆರೆದುಕೊಂಡಿರುವಾಗ ವ್ಯರ್ಥ ಪ್ರಯತ್ನವಾಗುತ್ತದೆ.

ಅಳಿಸುವಿಕೆಯ ಪರಿಶೀಲನೆ ಒಮ್ಮತದ ಮೂಲಕ ನಿರ್ದರಿಸಲಾಗುವುದೇ ಹೊರತು ತಲೆ ಎಣಿಕೆ ಮೂಲಕ ಅಲ್ಲ. ವಿಮರ್ಶೆ ಸಾಮಾನ್ಯವಾಗಿ ಏಳು ದಿನಗಳ ಕಾಲ ನಡೆಯುತ್ತದೆ. ಕೆಲವೊಮ್ಮೆ ಫಲಿತಾಂಶದ ಅಸ್ಪಷ್ಟವಾಗಿರುವ ವೇಳೆ ಮುಂದೆ ಹೋಗುತ್ತದೆ.

ಅನೂರ್ಜಿತಗೊಳಿಸಿದ ಅಳಿಸುವಿಕೆಯನ್ನು ಯಾರಾದರೂ ಅಳಿಸಲು ಬಯಸಿದಲ್ಲಿ ಅಳಿಸುವಿಕೆಯ ಚರ್ಚೆಗೆ ಹೋಗಬಹುದು.

೧.ಎಲ್ಲಿ ಹುಡುಕಲಿ: ವಿಕಿಪೀಡಿಯ: ಅಳಿಸುವಿಕೆ ಮರುಪರಿಶೀಲನೆ

೨.ಇದನ್ನು ಹೇಗೆ ಮಾಡಲಿ: ಪುಟದ ಮೇಲ್ಭಾಗದಲ್ಲಿರುವ ಸೂಚನೆಗಳನ್ನು ಅನುಸರಿಸಿ.

೩.ನೀವು ಒಪ್ಪದಿದ್ದರೆ: ವಿಮರ್ಶೆಯ ಪುಟಕ್ಕೆ ಹೋಗಿ ಮತ್ತು ನೀವು ಒಪ್ಪದೇ ಇರುವುದಕ್ಕೆ ವಿವರಣೆ ನೀಡಿ.

೪.ಪುನರ್ನಾಮಕರಣ ಮಾಡುವುದು: ಅಳಿಸುವಿಕೆಯ ಚರ್ಚೆಗಳಲ್ಲಿಯಂತೆ ಮರುಕಳಿಸಿದ ಅಳಿಸುವಿಕೆಯ ಮರುಪರಿಶೀಲನೆ ಮನವಿಗಳನ್ನು ಪರಿಗಣಿಸಲು ನಿರ್ದಿಷ್ಟ ಸಮಯ ಕಳೆಯ ಬೇಕು ಮತ್ತು ಈ ಮನವಿಗಳನ್ನು ನೀತಿಯ ಅನುಸಾರವಾಗಿ ಪರಿಗಣಿಸಬೇಕು. ಹೊಸ ವಾದಗಳು ಇಲ್ಲದಿರುವ ಮರುನಾಮಕರಣಗಳನ್ನು ಬೇಗನೆ ಮುಚ್ಚುವ ಸಾಧ್ಯತೆಯಿದೆ.

ಅಳಿಸುವಿಕೆ ರದ್ದು[ಬದಲಾಯಿಸಿ]

ಸಮುದಾಯ ಚರ್ಚೆಗಳ ಮೂಲಕ ಅಲ್ಲದೇ ಕ್ಷಿಪ್ರ ತೀರ್ಮಾನಗಳ ಆಧಾರದ ಮೇಲೆ ಪುಟಗಳು ಅಳಿಸಲ್ಪಟ್ಟಿದ್ದಲ್ಲಿ ಅಳಿಸುವಿಕೆ ರದ್ದತಿ ಮನವಿಯಲ್ಲಿ ಅಳಿಸುವಿಕೆ ರದ್ದತಿಗೆ ಕೋರಬಹುದು. ಇದು ಎರಡು ಪ್ರಾಥಮಿಕ ಕಾರ್ಯಚರಣೆಗಳನ್ನು ಹೊಂದಿದೆ: ಒಂದು ಚರ್ಚೆ ಇಲ್ಲದೆ ಅಳಿಸಲಾದ ವಿಷಯದ ಮರುಸ್ಥಾಪನೆ ಮತ್ತು ಎರಡು ಮರುಸ್ಥಾಪನೆಗೆ ಯೋಗ್ಯವಲ್ಲದ ವಿಷಯದ ಯುಸರಿಫಿಕೇಶನ್ (ವಿಷಯವನ್ನು ಲೇಖನದ ಹೆಸರಿನಸ್ಥಳಕ್ಕಲ್ಲದೆ ಬಳಕೆದಾರನ ಹೆಸರಿನಸ್ಥಳಕ್ಕೆ ವರ್ಗಾಯಿಸುವುದು). ಅಳಿಸುವಿಕೆ ರದ್ದು ಮನವಿಯನ್ನು ಬಹುತೇಕ ಪ್ರಸ್ತಾವಿತ ಅಳಿಸುವಿಕೆ ಮತ್ತು ಕೆಲವೊಂದು ವೇಗದ ಅಳಿಸುವಿಕೆಯಲ್ಲಿ ಬಳಸಬೇಕು. ಆದಾಗ್ಯೂ, ಅಳಿಸುವಿಕೆಯ ಚರ್ಚೆಗಳು ಮತ್ತು ಸಮುದಾಯ ಮರುಪರಿಶೀಲನೆ ಅಗತ್ಯವಾದ ಇತರ ಅಳಿಸುವಿಕೆಗಳ ಪಲಿತಾಂಶಗಳ ಮೇಲಿನ ಮನವಿಗಳನ್ನು ಅಳಿಸುವಿಕೆ ಮರುಪರಿಶೀಲನೆಯಲ್ಲಿ ಮಾಡಬೇಕು. ಎಚ್ಚರ ಹೆನರಿನಸ್ಥಾನದಲ್ಲಿ ಮರುಸ್ಥಾಪಿನಿದ ಪುಟಗಳು ತಕ್ಷಣದಲ್ಲಿಯೇ ಅಳಿಸುವಿಕೆ ಚರ್ಚೆಗೆ ಒಳಗಾಗಬಹುದು.

೧.ಎಲ್ಲಿ ಹುಡುಕಲಿ: ವಿಕಿಪೀಡಿಯ: ಅಳಿಸುವಿಕೆ ರದ್ಧತಿ ಮನವಿ

೨.ಇದನ್ನು ಹೇಗೆ ಮಾಡಲಿ: ಪುಟದ ಮೇಲ್ಭಾಗದಲ್ಲಿರುವ ಸೂಚನೆಗಳನ್ನು ಅನುಸರಿಸಿ.

೩.ನೀವು ಒಪ್ಪದಿದ್ದರೆ: ವಿಷಯವನ್ನು ಅಳಿಸುವಿಕೆ ಮರುಪರಿಶೀಲನೆಗೆ ತೆಗೆದುಕೊಂಡು ಹೋಗಿ.

೪.ಪುನರ್ನಾಮಕರಣ ಮಾಡುವುದು: ಅಳಿಸುವಿಕೆ ಚರ್ಚೆಗಳಂತೆ ಅಲ್ಲದೆ ಇಲ್ಲಿ ಮನವಿಗಳ ನಡುವೆ ಯಾವುದೇ ಕಾಯುವ ಸಮಯದ ಅಗತ್ಯವಿಲ್ಲ. ಆದರೆ ಮನವಿಗಳನ್ನು ತಿರಸ್ಕರಿಸಲಾಗಿದ್ದರೆ ಅಳಿಸುವಿಕೆ ರದ್ಧು ರೂಢಿಗಳು ಅಥವಾ ಅಳಿಸುವಿಕೆಯ ರದ್ಧು ಪ್ರೇರಣೆಗಳಲ್ಲಿ ಬದಲಾವಣೆ ಯಾಗದಿದ್ದಲ್ಲಿ ಮತ್ತೆ ಮನವಿಯನ್ನು ಮಾಡಬಾರದು.

ಪ್ರಕ್ರಿಯೆಯ ಅಂತರಕ್ರಿಯೆ[ಬದಲಾಯಿಸಿ]

  • ತಪ್ಪು ಪ್ರಕ್ರಿಯೆಯಲ್ಲಿರುವ ವಿವಾದಾಂಶಗಳನ್ನು (ಉದಾ: ಟೆಂಪ್ಲೇಟ್‌ಗಳು ಲೇಖನ-ಅಳಿಸುವಿಕೆ ಪುಟದಲ್ಲಿರುವುದು) ಸರಿಯಾದ ಪ್ರಕ್ರಿಯೆಗೆ ವರ್ಗಾಯಿಸಲಾಗುತ್ತದೆ.
  • ಅಳಿಸುವಿಕೆಯ ಮರುಪರಿಶೀಲನೆಯ ಪುಟದಲ್ಲಿರುವ ಪುಟವನ್ನು ಮರುಪರಿಶೀಲನೆ ಮುಗಿಯುವವರೆಗೆ ಅಳಿಸುವಿಕೆ ಚರ್ಚೆ ಪುಟದಲ್ಲಿ ಪಟ್ಟಿ ಮಾಡಬಾರದು. ಅಳಿಸುವಿಕೆಯ ಚರ್ಚೆಯ ಪುಟದಲ್ಲಿರುವುದನ್ನು ಆ ಚರ್ಚೆ ಮುಗಿಯುವವರೆಗೂ ಅಳಿಸುವಿಕೆ ಮರುಪರಿಶೀಲನೆ ಪುಟದಲ್ಲಿ ಪಟ್ಟಿಮಾಡಬಾರದು.
  • ಅಳಿಸುವಿಕೆ ಚರ್ಚೆಯು ಅಳಿಸುವಿಕೆ ಪ್ರಸ್ತಾಪನೆಯ ಮೇಲೆ ಆಧಿಕ್ಯತೆ ಹೊಂದಿದೆ. ಹೀಗಾಗಿ ಪುಟವೊಂದು ಎರಡರಲ್ಲೂ ಪಟ್ಟಿಮಾಡಲ್ಪಟ್ಟರೆ ಅಳಿಸುವಿಕೆ ಚರ್ಚೆಗೆ ಆದ್ಯತೆ ಲಭಿಸುತ್ತದೆ.
  • ವೇಗದ ಅಳಿಸುವಿಕೆಗೆ ಮಾನದಂಡಗಳು ಅನ್ವಯವಾಗುವ ಪುಟಗಳನ್ನು ಇತರ ಪ್ರಕ್ರಿಯೆಗಳನ್ನು ಲೆಕ್ಕಿಸದೇ ಅಳಿಸಲಾಗುವುದು. ಒಂದು ಪುಟ ಅಳಿಸುವಿಕೆ ಚರ್ಚೆಯಲ್ಲಿದ್ದಾಗ ಅದು ವೇಗದ ಅಳಿಸುವಿಕೆಗೆ ಒಳಗಾದರೆ ಚರ್ಚೆ ಮುಕ್ತಾಯವಾಗುತ್ತದೆ.
  • ಒಂದು ಪುಟದ ವೇಗದ ಅಳಿಸುವಿಕೆಗೆ ಒಳಗಾಗುತ್ತದೆಯೇ ಅಥವಾ ಇಲ್ಲವೆ ಎಂಬ ಅನುಮಾನ ಇದ್ದ ಸಂದರ್ಭಗಳಲ್ಲಿ, ಅಳಿಸುವಿಕೆ ಚರ್ಚೆ ಆದ್ಯತೆ ಪಡೆಯುತ್ತದೆ. ಪ್ರಾಯೋಗಿಕವಾಗಿ ಇದರ ಅರ್ಥವೆಂದರೆ ಒಂದು ಪುಟದ ಅಳಿಸುವಿಕೆ ಚರ್ಚೆ 'ಉಳಿಸಿಕೊಳ್ಳಲು' ಅಥವಾ 'ಒಮ್ಮತ ಇಲ್ಲದಿದ್ದಲ್ಲಿ' ಅದನ್ನು ವೇಗವಾಗಿ ಅಳಿಸಬಾರದು ಎಂದು.
  • ಹಕ್ಕುಸ್ವಾಮ್ಯ ಉಲ್ಲಂಘಿಸುವ ಪುಟಗಳನ್ನು ಅವುಗಳ ಸಂಧರ್ಭ ಮತ್ತು ಹಿಂದಿನ ಚರ್ಚೆಗಳ ಬಗೆಗೆ ಗಮನ ಹರಿಸದೆ ಅಳಿಸಲಾಗುತ್ತದೆ.

ಇತರೆ ಸಮಸ್ಯೆಗಳು[ಬದಲಾಯಿಸಿ]

ಅಳಿಸಿಹಾಕಿದ ಪುಟಗಳಿಗೆ ಪ್ರವೇಶಾವಕಾಶ[ಬದಲಾಯಿಸಿ]

ಅಳಿಸಿದ ಬಹಳಷ್ಟು ಲೇಖನಗಳು ಮಾನನಷ್ಟ ಅಥವಾ ಇತರ ಕಾನೂನಿಗೆ ಸಂಬಂಧಿಸಿದ ಅನುಮಾನಸ್ಪದವಾದ ಮಾಹಿತಿ (ಅಥವಾ ವಸ್ತು) ಗಳನ್ನು ಒಳಗೊಂಡ ಕಾರಣಕ್ಕೆ ಸಾಮಾನ್ಯವಾಗಿ ಅಳಿಸಿದ ಪುಟಗಳನ್ನು ನೋಡಲು ಅನುಮತಿಸುವುದಿಲ್ಲ. ಆದಾಗ್ಯೂ, ಅವು ಡಾಟಬೇಸ್‌ನಲ್ಲಿ ಉಳಿದುಕೊಂಡಿರುತ್ತವೆ (ತಾತ್ಕಾಲಿಕವಾಗಿ). ಅವು ನಿರ್ವಾಹಕರಿಗೂ ಲಭ್ಯವಾಗದ ಮೇಲ್ವಿಚಾರಣೆ ಅಳಿಸುವಿಕೆಗಳನ್ನು (ಓವರ್‌ಸೈಟ್- ಇಲ್ಲಿಯ ಪುಟಗಳು ಮಾನನಷ್ಟ ಮತ್ತು ಗಂಭೀರ ಹಕ್ಕುಸ್ವಾಮ್ಯ ಉಲ್ಲಂಘನೆಗಳನ್ನು ಒಳಗೊಂಡಿರುತ್ತವೆ.) ಹೊರತು ಪಡಿಸಿ ಇತರ ಅಳಿಸುವಿಕೆಗಳಲ್ಲಿ ಸಂಪಾದನೆಯ ಇತಿಹಾಸವನ್ನೂ ಒಳಗೊಂಡು ಪುಟಗಳು ನಿರ್ವಾಹಕರಿಗೆ ಲಭ್ಯವಿರುತ್ತವೆ. ಯಾವುದೇ ಬಳಕೆದಾರ ನಿಜವಾದ ಕಾರಣಗಳಿಗೆ ಅಳಿಸಿದ ಪುಟವನ್ನು ನೋಡಲು ತಾತ್ಕಾಲಿಕ ಮರುಪರಿಶೀಲನೆಯ ಮನವಿ ಮಾಡಬಹುದು (ಅಥವಾ ಸರಳವಾಗಿ ನಿರ್ವಾಹಕರನ್ನು ಪುಟದ ನಕಲು ಒದಗಿಸುವಂತೆ ಕೋರಬಹದು). ಪುಟದ ಮಾಹಿತಿಯನ್ನು ಕಾನೂನಿನ ಅಂಶಗಳ (ಮಾನನಷ್ಟ ಅಥವಾ ಹಕ್ಕುಸ್ವಾಮ್ಯ ಉಲ್ಲಂಘನೆಗಳಂತಹ) ಮೇಲೆ ಅಳಿಸಿದ್ದರೆ ಅಥವಾ ಕೊಟ್ಟ ಕಾರಣವು ಸರಿಯಿಲ್ಲವಾದರೆ ಇಂತಹ ಮನವಿಯನ್ನು ತಿರಸ್ಕರಿಸ ಬಹುದು ಎಂಬುದು ನೆನಪಿರಲಿ.

ಚರ್ಚಾಪುಟ ಅಥವಾ ಅಳಿಸುವಿಕೆಯ ಚರ್ಚೆಗಳ ಸೌಜನ್ಯ ಬರಿದಾಗಿಸುವಿಕೆ[ಬದಲಾಯಿಸಿ]

ಕಾಲಕಾಲಕ್ಕೆ, ಚರ್ಚೆಯ ವಿಷಯವನ್ನು ಸಮುದಾಯ, ನಿರ್ವಾಹಕ, ಅಥವಾ ಇನ್ನೊಬ್ಬ ಕಾರ್ಯನಿರ್ವಾಹಕರ ತೀರ್ಪಿನ ಆಧಾರದ ಮೇಲೆ ಗುಪ್ತವಾಗಿಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ವಿರಳ ಸಂದರ್ಭಗಳನ್ನು ಹೊರತುಪಡಿಸಿ ಮಾಡುವುದಿಲ್ಲ. ಉದಾಹರಣೆಗೆ ಈ ಚರ್ಚೆಯನ್ನು ಸಾರ್ವಜನಿಕರು ನೋಡುವುದು ಒಬ್ಬ ವ್ಯಕ್ತಿ ಅಥವಾ ಸಂಸ್ಥೆಗೆ ಹಾನಿಯುಂಟು ಮಾಡುವ ಸಂದರ್ಭ. ಇಂತಹ ಪಠ್ಯವನ್ನು ಇತ್ತೀಚಿನ ಆವೃತ್ತಿಯಲ್ಲಿ ಇಲ್ಲದಂತೆ ಮಾಡುವ ಮೂಲಕ ಸರ್ಚ್ ಎಂಜಿನ್‌ಗಳು ಇಂಡೆಕ್ಸ್ ಅಥವಾ ಸೂಚಿಗಳನ್ನು ತಯಾರಿಸದಂತೆ ಮಾಡಲಾಗುತ್ತದೆ. ಈ ಮೂಲಕ ಚರ್ಚೆಯನ್ನು ಸೌಜನ್ಯಕ್ಕಾಗಿ ಬರಿದು ಮಾಡಲಾಗುತ್ತದೆ. ಅಳಿಸುವಿಕೆಯ ಚರ್ಚೆಗಳಲ್ಲಿ ಇಡೀ ಡೆಟಾಬೇಸನ್ನು {{XFD-ಗೌಪ್ಯತೆ}} ಟೆಂಪ್ಲೇಟಿಗೆ ಬದಲಿಸಬಹುದು. ಸೌಜನ್ಯ ಬರಿದಾಗಿಸುವಿಕೆ ಅಥವಾ xfd- ಬರಿದಾಗಿಸುವಿಕೆ ಎರಡರಲ್ಲೂ ವಾಸ್ತವದ ಪಠ್ಯವು ಸಂಪಾದನೆಯ ಇತಿಹಾಸದ ಮೂಲಕ ಲಭ್ಯವಿರುತ್ತದೆ. ಹೆಚ್ಚು ಗಂಭೀರ ಸಂದರ್ಭಗಳಲ್ಲಿ ಪುಟದ ಪೂರ್ಣ ಇತಿಹಾಸವನ್ನು ಅಳಿಸ ಬಹುದು. ಸೌಜನ್ಯ ಬರಿದಾಗಿಸುವಿಕೆ ಅಥವಾ ಮೇಲ್ವಿಚಾರಣೆ ಅಳಿಸುವಿಕೆ ತೀರ ವಿರಳವಾಗಿರ ಬೇಕು ಮತ್ತು ಪೂರ್ವಾಪರಗಳ ಬಗೆಗೆ ಯೋಚಿಸಿಯೇ ನಿರ್ದಾರ ಕೈಗೊಳ್ಳ ಬೇಕು.

ಕೆಲವು ಸಂದರ್ಭಗಳಲ್ಲಿ ನಿರ್ವಾಹಕಾರಾಗುವ ಮನವಿ ಮತ್ತು ಆರ್ಬಿಟರೇಶನ್‌ಗೆ ಮನವಿಗಳಂತಹ ಪ್ರಾಜೆಕ್ಟ್ ಹೆಸರಿನಸ್ಥಳ ಪುಟಗಳನ್ನೂ ಇಂತಹುದೇ ಕಾರಣಗಳಿಗೆ ಸೌಜನ್ಯ ಬರಿದಾಗಿಸುವಿಕೆ ಮಾಡಲಾಗುತ್ತದೆ.