ವಿಷಯಕ್ಕೆ ಹೋಗು

ಸಂಘಂ ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sage Agastya,Chairman of first Tamil Sangam, Thenmadurai, Pandiya Kingdom
Late legends say that the third Sangam was held on the banks of the sacred Pond of Golden Lotuses in Madurai

ಸಂಘಂ ಸಾಹಿತ್ಯ[] ತಮಿಳು ಸಾಹಿತ್ಯ ಲೋಕ[][]ದಲ್ಲಿ ಅತ್ಯಂತ ಪ್ರಮುಖವಾದುದು. ಇದರ ಕಾಲ ಕ್ರಿ.ಪೂ.೫೦೦ ರಿಂದ ಕ್ರಿ.ಶ. ೨೦೦ ರವರೆಗೆ.[]

ಇತಿವೃತ್ತ

[ಬದಲಾಯಿಸಿ]

ಸಂಘಂ ಸಾಹಿತ್ಯ ರಚನೆಗೆ ಕಾರಣರಾದವರು ಹಲವು ವಿದ್ವಾಂಸರು, ಮೇಧಾವಿಗಳು, ಪಾಠಕರು, ಮತ್ತು ಕವಿಗಳು. ಇಂತಹ ನೂರಾರು ಜನ ವಿದ್ವತ್ಮಣಿಗಳು ಒಂದೆಡೆ ಕಲೆತು ಸಾಹಿತ್ಯ ರಚಿಸುವಂತೆ ಪ್ರೋತ್ಸಾಹಿಸಿ ಸಹಕರಿಸಿದವರು ಪಾಂಡ್ಯ ಅರಸರು. ವೈಗೈ ನದಿಯ ಸಮೀಪದ ಮಧುರೈ ಮೊದಲಾದ ಪ್ರದೇಶಗಳಲ್ಲಿ 'ಸಂಘಂ ಸಾಹಿತ್ಯ' ಉಚ್ಛ್ರಾಯ ಸ್ಥಿತಿಯಲ್ಲಿತ್ತು.

ವಿಧಗಳು

[ಬದಲಾಯಿಸಿ]

ಸಂಘಂ ಸಾಹಿತ್ಯದಲ್ಲಿ ಪ್ರಮುಖವಾಗಿ ಎರಡು ವಿಧಗಳನ್ನು ಕಾಣಬಹುದು.

  1. ಎಟ್ಟುತೊಗೈ - ಬಿಡಿಬಿಡಿಯಾದ ಪದ್ಯಗಳಿರುವ ಎಂಟು ಕವನಸಂಕಲನಗಳ ಗುಂಪು.
  2. ಪತ್ತುಪಾಟ್ಟು - ಹತ್ತು ಖಂಡಕಾವ್ಯಗಳನ್ನು ಒಳಗೊಂಡ, ಕಾವ್ಯಗುಚ್ಛ.

ಎಟ್ಟುತೊಗೈ

[ಬದಲಾಯಿಸಿ]

ಎಂಟು ಕವನ ಸಂಕಲನವನ್ನು ಒಳಗೊಂಡ ಸಾಹಿತ್ಯ ಇದಾಗಿದೆ. ಆ ಎಂಟು ವಿಷಯಗಳೆಂದರೆ-

  1. ನಟ್ಟಿದೈ
  2. ಕುರುಂದೊಗೈ
  3. ಐಂಗೂರು ನೂರು
  4. ಪದಿಟ್ರುಪ್ಪತ್ತು
  5. ಪರಿಪಾಡಲ್
  6. ಕಲಿತ್ತೊಗೈ
  7. ಅಗನಾನೂರು
  8. ಪುರನಾನೂರು

ಪತ್ತುಪಾಟ್ಟು

[ಬದಲಾಯಿಸಿ]
  1. ತಿರುಮುರುಗಾಟ್ರುಪ್ಪಡೈ
  2. ಪೊರುನರಾಟ್ರುಪ್ಪಡೈ
  3. ಚಿರುಪಾಣಾಟ್ರುಪ್ಪಡೈ/ಸಿರುಪಾಣಾಟ್ರುಪ್ಪಡೈ
  4. ಪೆರಿಂಪಾಣಾಟ್ಟುಪ್ಪಡೈ
  5. ಮುಲ್ಲೈಪಾಟ್ಟು
  6. ಮಧುರೈಕ್ಕಾಂಜಿ
  7. ನೆಡುನಲ್ಲಾಡೈ
  8. ಕುರಿಂಜಿಪ್ಪಾಟ್ಟು
  9. ಪಟ್ಟಿನಪ್ಪಾಲೈ
  10. ಮಲೈಪಡುಕಡಾಂ

ಸಂಘಂ ಸಾಹಿತ್ಯದೊಳಗೆ

[ಬದಲಾಯಿಸಿ]

ಸಂಘಂ ಸಾಹಿತ್ಯ ಬಹುಮುಖಿ ನೆಲೆಯ ಅಧ್ಯಯನವನ್ನು ಒಳಗೊಂಡಿದೆ. ಅದರಲ್ಲಿ ಕೌಟುಂಬಿಕ ಬದುಕು, ಪ್ರೇಮ-ಕಾಮ, ಪತಿಸೇವೆ, ಹುಟ್ಟಿನ-ಸಾವಿನ ಆಚರಣೆ, ದೀಪಾರಾಧನೆ, ಹಬ್ಬಗಳ ಆಚರಣೆ, ಶಕುನ ಸಂಪ್ರದಾಯಗಳು, ನಿಸ್ವಾರ್ಥ ಗುಣ, ನಶ್ವರತೆ, ಕರುಣೆ, ಸತ್ಪಾತ್ರರಿಗೆ ಮಾಡುವ ದಾನ, ಪತಿಸೇವೆ, ದಾನದ ಮಹತ್ವ್ತ, ದಾನಿಗಳ ವರ್ಣನೆ, ಅಂದಿನ ಜನರ ಜೀವನ ವಿಧಾನ, ಅತಿಥಿ ಸತ್ಕಾರ, ಯುದ್ಧದ ರೀತಿ-ನೀತಿ, ಸಂಸ್ಕೃತಿ, ಕಲೆಗಳ ಮಹತ್ವ, ರಸಿಕತೆ, ಪ್ರಣಯ, ವಿರಹ, ಬಾಂಧವ್ಯಗಳ ಭಾವನಾತ್ಮಕತೆ, ವಿಧವೆಯರ ಸ್ಥಿತಿಗತಿ, ಯುದ್ಧಧರ್ಮ, ಚುನಾವಣಾಪದ್ಧತಿ, ನ್ಯಾಯಾಲಯ, ಆಡಳಿತ ಪದ್ಧತಿ, ರಾಜಕೀಯ ವ್ಯವಸ್ಥೆ, ಆದಾಯ, ಜೊತೆಗೆ ಅರಸ, ಪಂಡಿತ, ಕವಿ, ಹೊಗಳುಭಟ್ಟ ಮೊದಲಾದವರ ಶ್ರೇಷ್ಠಗುಣಗಳು ಇಲ್ಲಿವೆ.

ಸಂಘಂ ಸಾಹಿತ್ಯ ಕಾಲದ ಸಾಮಾಜಿಕ ಸ್ಥಿತಿಗತಿ

[ಬದಲಾಯಿಸಿ]
  1. ಸಂಘಂ ಸಾಹಿತ್ಯ ಕಾಲದ ಮದುವೆ ಸರಳವಾಗಿ ಮತ್ತು ಸಡಗರದಿಂದ, ಯಾವ ಬಗೆಯ ಸಂಪ್ರದಾಯ, ಆಚರಣೆಗಳು ಇಲ್ಲದೆ, ಬೆಳಗಿನ ಜಾವದಲ್ಲಿ ನಡೆಯುತ್ತಿತ್ತು. ಅತಿಥಿಗಳ ಸತ್ಕಾರ ಶ್ರೇಷ್ಠ ಧರ್ಮವೆಂದು ನಂಬಲಾಗಿತ್ತು.
  2. ಸಂಘಂ ಸಾಹಿತ್ಯ ಕಾಲದ ಕವಯತ್ರಿ 'ಪೊನ್ಮುಡಿಯಾರ್'- ಮಕ್ಕಳನ್ನು ಹೆತ್ತು ಬೆಳೆಸುವುದು ಹೆಂಗಸರ ಕರ್ತವ್ಯ; ಅವರನ್ನು ಬುದ್ದಿವಂತರನ್ನಾಗಿ ಮಾಡುವುದು ತಂದೆಯ ಕರ್ತವ್ಯ ಎಂದಿದ್ದಾರೆ.
  3. ಈ ಕಾಲದ ತಮಿಳರು ಸಮಾಜ ಕಲ್ಯಾಣವೇ ತಮ್ಮ ಕಲ್ಯಾಣವೆಂದು ಭಾವಿಸಿದ್ದರು. ಹಂಚಿ ಉಣ್ಣುವುದರಲ್ಲಿ ಸುಖವನ್ನು ಕಾಣುತ್ತಿದ್ದರು.
  4. ಮಾನವನ ಬದುಕು ಮತ್ತು ಸಂಪತ್ತು ಶಾಶ್ವತವಾದುದಲ್ಲ. ಇರುವಷ್ಟು ದಿನ ಅವನು ಸ್ವಾರ್ಥಿಯಾಗದೆ ತನ್ನಲ್ಲಿ ಇರುವುದನ್ನು ದಾನ ಮಾಡಿ ಸನ್ನಡತೆಯಲ್ಲಿ ಜೀವಿಸಬೇಕು. ಬೇಡುವುದು ಕೆಟ್ಟದ್ದು, ಕೊಡುವುದು ಒಳ್ಳೆಯದು.
  5. ಸಂಘಂ ಸಾಹಿತ್ಯ ಕಾಲದ ತಮಿಳರು ತಾವಿರುವ ನಾಡನ್ನು ದೇಹವಾಗಿಯೂ, ಆ ನಾಡನ್ನು ಆಳುವ ರಾಜನನ್ನು ಪ್ರಾಣವಾಗಿಯೂ ಭಾವಿಸಿದ್ದರು.

ವರ್ಷಗಳ ೬ ವಿಭಾಗ ಕ್ರಮಗಳು

[ಬದಲಾಯಿಸಿ]

ಸಂಘಂ ಸಾಹಿತ್ಯದಲ್ಲಿ ವರ್ಷಗಳನ್ನು ೬ ವಿಭಾಗಗಳಲ್ಲಿ ವಿಂಗಡಿಸಲಾಗಿತ್ತು. ಈ ಕಾಲಗಳು ಎರಡು ತಿಂಗಳಿಗೊಮ್ಮೆ ಬದಲಾಗುತ್ತಿರುತ್ತವೆ. ಅವೆಂದರೆ-

  1. ಕಾರ್ಗಾಲಂ - ಮಳೆಗಾಲ
  2. ಹೂದಿರ್‍ಕಾಲ - ಚಳಿಗಾಲ
  3. ಮುನ್‍ಪಾನಿ - ಮುಂಜಾನೆ ಮಂಜು ಸುರಿವ ಕಾಲ
  4. ಪಿನ್‍ಪನಿ - ಮುಸ್ಸಂಜೆಯ ಇಬ್ಬನಿ ಕಾಲ
  5. ಇಳವೇನಿಲ್ - ಎಳೆ ಬಿಸಿಲ ಕಾಲ
  6. ಮುದುವೇನಿಲ್ - ಕಡು ಬಿಸಿಲ ಕಾಲ

ಒಂದು ದಿನದ ಆರು ಭಾಗಗಳು

[ಬದಲಾಯಿಸಿ]
  1. ವೈಕಳ್ಕೆ- ಮುಂಜಾನೆ
  2. ವಿಡಿಯಲ್ - ಬೆಳಗ್ಗೆ
  3. ನಣ್‍ಪಗಲ್ - ಮದ್ಯಾಹ್ನ
  4. ಅಂಧಿಪೊಳುದು - ಸಾಯಂಕಾಲ
  5. ಇರವು - ರಾತ್ರಿ
  6. ನಡುಇರವು - ನಡುಜಾವ

ಉಲ್ಲೇಖಗಳು

[ಬದಲಾಯಿಸಿ]
  1. http://www.kanaja.in/%E0%B2%AA%E0%B2%B0%E0%B2%BF%E0%B2%95%E0%B2%B2%E0%B3%8D%E0%B2%AA%E0%B2%A8%E0%B3%86-%E0%B2%AA%E0%B3%8D%E0%B2%B0%E0%B2%BE%E0%B2%9A%E0%B3%80%E0%B2%A8-%E0%B3%A8-%E0%B2%B8%E0%B2%BE%E0%B2%B9%E0%B2%BF/
  2. http://tuluculture.blogspot.in/2015/10/blog-post_17.html
  3. https://www.facebook.com/permalink.php?story_fbid=1587230031600461&id=1440243252965807
  4. ಹಳಗನ್ನಡ-ಸಂಗಂ ತಮಿೞ್ ಮತ್ತು ಸಂಗಂ ಕಾಲದ ತೀರ್ಮಾನ