ವಿಷಯಕ್ಕೆ ಹೋಗು

ಇಂಟರ್ಲಾಕೆನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಂಟರ್ಲಾಕೆನ್
Population
ಟೆಂಪ್ಲೇಟು:Swiss populations NC
Websitewww.interlaken-gemeinde.ch

ಇಂಟರ್‍ಲಾಕೆನ್- ಸ್ವಿಟ್ಸರ್‍ಲೆಂಡಿನ ಬರ್ನ್ ಸಂಸ್ಥಾನದ ಒಂದು ಪಟ್ಟಣ. ಆರೆ ಎಂಬ ನದಿಯ ದಡದ ಮೇಲಿದೆ. ಪೂರ್ವದಲ್ಲಿ ಬ್ರೀನ್ಸ್ ಮತ್ತು ಪಶ್ಚಿಮದಲ್ಲಿ ಟೂನ್ ಈ ಎರಡೂ ಸರೋವರಗಳ ಮಧ್ಯದ ಬಯಲಲ್ಲಿರುವುದರಿಂದ ಈ ಹೆಸರು ಬಂದಿದೆ. ಪ್ರಸಿದ್ಧ ಪ್ರವಾಸಿಕೇಂದ್ರ ಮತ್ತು ಸುಂದರ ನಗರ.

ಪ್ರವಾಸೋದ್ಯಮ ಕೇಂದ್ರ

[ಬದಲಾಯಿಸಿ]

ಹದಿಮೂರುವರೆಸಾವಿರ ಅಡಿ ಎತ್ತರವಿರುವ ಯೂಂಗ್‍ಫ್ರೌ ಶಿಖರದ ಭವ್ಯನೋಟ ಪ್ರವಾಸಿಗರನ್ನು ಆಕರ್ಷಿಸಿದೆ. ಊರಿನ ನಿವಾಸಿಗಳಿಗಿಂತ ಬಂದುಹೋಗುವ ಪ್ರವಾಸಿಗರೇ ಹೆಚ್ಚು. 1130ರಲ್ಲಿ ಕ್ರೈಸ್ತಧರ್ಮ ಮಂಡಲಿಯ ಸನ್ಯಾಸಿನಿ ಆಶ್ರಮವೊಂದನ್ನು ನಿರ್ಮಿಸಲಾಯಿತು. ಅವರೆಲ್ಲ ಆಗಸ್ಟೀನ್ ಪಂಥಕ್ಕೆ ಸೇರಿದವರಾಗಿದ್ದರು. 1528ರಲ್ಲಿ ಆ ಆಶ್ರಮವನ್ನು ನಿರ್ಮೂಲಗೊಳಿಸಲಾಯಿತು. ಹಿಂದಿನ ಆಶ್ರಮದ ಮುಖ್ಯ ಕಟ್ಟಡವನ್ನು ಸಂಸ್ಥಾನದ ಕೇಂದ್ರ ಕಚೇರಿಯನ್ನಾಗಿಯೂ ಇತರ ಕಟ್ಟಡಗಳನ್ನು ಆರಾಧನಾಮಂದಿರಗಳನ್ನಾಗಿಯೂ ಉಪಯೋಗಿಸಲಾಗುತ್ತಿದೆ.

ಉದ್ಯಮ

[ಬದಲಾಯಿಸಿ]

ಇತ್ತೀಚೆಗೆ ಇಲ್ಲಿ ಉಣ್ಣೆ ನೇಯ್ಗೆ ಉದ್ಯಮ ಬೆಳೆದಿದೆ.ಪ್ರವಾಸೋದ್ಯಮ ಮುಖ್ಯ ಉದ್ಯಮ.

ಜನಸಂಖ್ಯೆ

[ಬದಲಾಯಿಸಿ]

ಜನಸಂಖ್ಯೆ ೫,೬೮೩ (೨೦೧೪). ಇವರಲ್ಲಿ ಜರ್ಮನ್ ಭಾಷೆ ಬಳಸುವ ಪ್ರಾಟೆಸ್ಟಂಟರೇ ಹೆಚ್ಚು.ಚಾರಿತ್ರಿಕವಾಗಿ ಜನಸಂಖ್ಯಾ ಬೆಳವಣಿಗೆ ತಖ್ತೆ ಇಲ್ಲಿದೆ.[][]

ಉಲ್ಲೇಖಗಳು

[ಬದಲಾಯಿಸಿ]


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: