ಎಡ್ವರ್ಡ್ ಚಾರ್ಲ್ಸ್ ಪಿಕೆರಿಂಗ್
ಎಡ್ವರ್ಡ್ ಚಾರ್ಲ್ಸ್ ಪಿಕೆರಿಂಗ್ | |
---|---|
Born | ಎಡ್ವರ್ಡ್ ಚಾರ್ಲ್ಸ್ ಪಿಕೆರಿಂಗ್ ೧೮೪೬ ಜುಲೈ ೧೯ ಅಮೇರಿಕ |
Nationality | ಅಮೇರಿಕ |
ಅಮೇರಿಕದ ಖಗೋಳವಿಜ್ಞಾನಿ ಮತ್ತು ಭೌತವಿಜ್ಞಾನಿಯೂ ಆಗಿದ್ದ ಎಡ್ವರ್ಡ್ ಚಾರ್ಲ್ಸ್ ಪಿಕೆರಿಂಗ್‌ರವರು ೧೮೪೬ರ ಜುಲೈ ೧೯ರಂದು ಮೆಸಾಚುಸೆಟ್ಸ್‌ನ ಬಾಸ್ಟನ್‌ನಲ್ಲಿ ಜನಿಸಿದರು. ಪಿಕೆರಿಂಗ್‌ರವರು ಕಾರ್ಲ್ ವೋಗೆಲ್‌ರವರ (೧೮೪೧-೧೯೦೭) ಜೊತೆ ಮೊದಲ ರೋಹಿತ-ಯುಗಳ ತಾರೆಗಳನ್ನು (spectroscopic binary stars) ಕಂಡುಹಿಡಿದರು. ಪಿಕೆರಿಂಗ್‌ರವರು ಹಾರ್ವರ್ಡ್ ವೀಕ್ಷಣಾಲಯದಲ್ಲಿ ನಿರ್ದೇಶಕರಾಗಿದ್ದಾಗ ಅನ್ನೀ ಜಂಪ್ ಕ್ಯಾನನ್‌ರವರೂ ಸೇರಿದಂತೆ ಅನೇಕ ಮಹಿಳೆಯರನ್ನು ಸಹಾಯಕ್ಕೆ ತೆಗೆದುಕೊಂಡಾಗ ಅವರುಗಳು ಖಗೋಳವಿಜ್ಞಾನದ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದರು. ಲೆವಿಟ್‌ರವರು (೧೮೬೮-೧೯೨೧) ಸಿಫೀಡ್ ಚಂಚಲ ತಾರೆಗಳಿಗೂ (Cepheids-variable stars) ಆವರ್ತ-ಕಾಂತಿಮಾನಗಳಿಗೂ (period-luminosity) ಇರುವ ಸಂಬಂಧವನ್ನು ಕಂಡುಹಿಡಿದಿದ್ದರು.[೧] ಪಿಕೆರಿಂಗ್‌ರವರು ಅವರ ಸಂಶೋಧನೆಗಳನ್ನು ಪ್ರಕಟಿಸಿದರು. ಗಮನಾರ್ಹ ಸಂಗತಿಯೆಂದರೆ ಪ್ರಸ್ತುತ ಪಿಕೆರಿಂಗ್‌ರವರು ಮತ್ತು ಅವರ ಸಹೋದರರಾಗಿದ್ದ ಖಗೋಳವಿಜ್ಞಾನಿ ವಿಲಿಯಂ ಹೆನ್ರಿ ಪಿಕೆರಿಂಗ್‌ರವರುಗಳ (೧೮೫೮-೧೯೩೮) ಗೌರವಾರ್ಥವಾಗಿ (ಜಂಟಿಯಾಗಿ) ಚಂದ್ರನ ಮೇಲಿನ ಒಂದು ಕುಳಿಗೆ (crater) ’ಪಿಕೆರಿಂಗ್’ ಎಂಬುದಾಗಿಯೂ, ಮಂಗಳಗ್ರಹದ ಒಂದು ಕುಳಿಗೆ ’ಪಿಕೆರಿಂಗ್’ ಎಂಬುದಾಗಿಯೂ, ಒಂದು ಕ್ಷುದ್ರಗ್ರಹಕ್ಕೆ (asteroid) ’೭೮೪ ಪಿಕೆರಿಂಗಿಯಾ’ ಎಂಬುದಾಗಿಯೂ ನಾಮಕರಣ ಮಾಡಲಾಗಿದೆ. ಪಿಕೆರಿಂಗ್‌ರವರು ೧೯೧೯ರ ಫೆಬ್ರವರಿ ೩ರಂದು ಮೆಸಾಚುಸೆಟ್ಸ್‌ನ ಕೇಂಬ್ರಿಜ್‌ನಲ್ಲಿ ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2016-04-09. Retrieved 2016-04-24.