ಆಲಿಡೇಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A simple alidade for use with a ceiling projector

ಆಲಿಡೇಡ್ ಮೋಜಣಿ ಕಾರ್ಯದಲ್ಲಿ ಬಳಸುವ ಒಂದು ಉಪಕರಣ. ದರ್ಶಕಪಟ್ಟಿ ಎಂದೂ ಕರೆಯುವುದಿದೆ. ಯಾವುದೇ ದಿಕ್ಕಿನಲ್ಲಿ ನೇರನೋಟದಲ್ಲಿ ಬರುವ ವಸ್ತುವನ್ನು ಸಮತಟ್ಟಿನ ಮೇಜಿನ ಹಾಳೆಯ ಮೇಲೆ ಬಿಂಬಿಸಲು ಇದು ಸಹಾಯಕಾರಿ. ಆದಕಾರಣ ಮೋಜಣಿದಾರರಿಗೆ, ಭೂಮಿತಿ ವಿಜ್ಞಾನಿಗಳಿಗೆ, ಕ್ಷೇತ್ರಸ್ವರೂಪ (ಟೋಪೊಗ್ರಾಫಿ) ತಿಳಿಯಬಯಸುವವರಿಗೆ ಆಲಿಡೇಡ್ ಅತ್ಯುಪಯುಕ್ತ ಉಪಕರಣ.

ಸ್ವರೂಪ[ಬದಲಾಯಿಸಿ]

An example of an alidade on a circumferentor. Taken from the Table of Surveying, Cyclopaedia, Volume 2, 1728

ಇದನ್ನು ಒಂದು ಚಪ್ಪಟೆ ಮತ್ತು ನೇರವಾದ ಕಬ್ಬಿಣ ಅಥವಾ ಮರದ ಪಟ್ಟಿಯಿಂದ ತಯಾರುಮಾಡಿದೆ. ಈ ಪಟ್ಟಿಯ ಎರಡು ತುದಿಗಳಲ್ಲಿ ಚಿಕ್ಕ ನಿಲುವಿನ ಲೋಹದ ಭಾಗಗಳಿವೆ. ಇವು ನೇರ ಗೆರೆಯ ಮೇಲಿರಲು ಸಾಧ್ಯವಾಗುವಂತೆ ಬಿರುಕುಗಳನ್ನು ಹೊಂದಿದೆ.

ಉಪಯೋಗಗಳು[ಬದಲಾಯಿಸಿ]

ಆಲಿಡೇಡನ್ನು ಸಮತಟ್ಟು ಮೋಜಣಿಯ ಅಂಗವಾಗಿ ಮೇಲ್ಮೈಯ ವಿಸ್ತಿರ್ಣವನ್ನು ಅಳೆಯಲು ಮತ್ತು ಭೂಪಟವನ್ನು ತಯಾರಿಸಲು ಉಪಯೋಗಿಸುತ್ತಾರೆ. ಕೆಲವು ವೇಳೆ ಕೋನಗಳನ್ನು ಅಳೆಯಬಲ್ಲ ಸಾಧನಕ್ಕೂ ಆಲಿಡೇಡ್ ಎಂಬ ಹೆಸರಿದೆ. ಆಲಿಡೇಡ್‍ನಲ್ಲಿ ಎರಡು ಬಗೆಯುಂಟು. ಒಂದು ಸಾಮಾನ್ಯ ಆಲಿಡೇಡ್, ಮತ್ತೊಂದು ದುರ್ಬೀನು ಆಲಿಡೇಡ್. ಸಾಮಾನ್ಯ ಆಲಿಡೇಡನ್ನು ಕ್ಷೇತ್ರಕಾರ್ಯದಲ್ಲಿ ಅದರಲ್ಲಿಯೂ ಪ್ರಾಯೋಗಿಕ ಕೆಲಸದಲ್ಲಿ ವಿದ್ಯಾರ್ಥಿಗಳು ಬಹಳವಾಗಿ ಬಳಸುತ್ತಾರೆ. ದುರ್ಬೀನು ಆಲಿಡೇಡಿನ ಉಪಯೋಗ ವಿಶೇಷವಾಗಿ ಮೋಜಣಿದಾರರಿಗೆ. ಇದರಲ್ಲಿ ಸಾಮಾನ್ಯ ಆಲಿಡೇಡಿನ ಜೊತೆಗೆ ಒಂದು ದುರ್ಬೀನು ಮತ್ತು ಅಳತೆ ಮಾಡುವ ಗೋಳಾಂಶ ಇವೆ. ಇವುಗಳ ಮೂಲಕ ಎತ್ತರ ಮತ್ತು ಉದ್ದವನ್ನು ಸುಲಭವಾಗಿ ಅಳೆಯಬಹುದು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಆಲಿಡೇಡ್&oldid=715153" ಇಂದ ಪಡೆಯಲ್ಪಟ್ಟಿದೆ