ವಿಷಯಕ್ಕೆ ಹೋಗು

ಸದಸ್ಯ:Varsha shetty

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಲಕೃಷಿ

ನೀರು ತುಂಬಿದ ಬಾಟಲಿಯೊಂದರಲ್ಲಿ ಮನಿಪ್ಲಾಂಟ್ ಎಂಬ ಸಸ್ಯವೊಮ್ದನ್ನು ಬೆಳಸುವುದನ್ನು ಕೆಲವು ಮನೆಗಳಲ್ಲಿ ನೀವು ನೋಡಿರಬಹುದು. ನೆಲವಾಸಿ ಸಸ್ಯಗಳನ್ನು ಮಣ್ಣಿನ ಸಹಯವಿಲ್ಲದೆ ಬೆಳೆಸಬಹುದೆಂಬುದನ್ನು ನೀವು ಊಹಿಸಲು ಸಾಧ್ಯವೆ? ಹೌದು, ಇದು ಸಾಧ್ಯವಿದೆ. ಮಣ್ಣಿನ ಸಹಾಯವಿಲ್ಲದೆ ಕೇವಲ ಪೋಷಕ ಲವಣಗಳ ದ್ರವಗಳಲ್ಲಿ ಸಸ್ಯಗಳನ್ನು ಬೆಳೆಯುವ ವಿಧಾನವೊಂದಿದೆ. ಇದಕ್ಕೆ ಜಲಕೃಷಿ ಎಂದು ಹೆಸರು.

ಒಂದು ಸಸ್ಯದ ಜಲಸಾಗಾಣಿಕಾ ವ್ಯವಸ್ಥೆಗೆ ನೆರವಾಗಿ ಪೋಷಕಾಂಶ ಲವಣಗಳನ್ನು ಕೃತಕವಾಗಿ ಸೇರಿಸುವ ಸಾಧ್ಯತೆಯನ್ನು ಈ ವಿಧಾನ ಅವಲಂಬಿಸಿದೆ. ಅಂತಹ ಸಸ್ಯಗಳ ಉಳಿವಿಗೆ ಮಣ್ಣಿನ ಅವಶ್ಯಕತೆ ಇರುವುದಿಲ್ಲ. ಈ ವಿಧಾನದಲ್ಲಿ ನೆಲ ಸಸ್ಯಗಳ ಬೇರುಗಳನ್ನು ನೇರವಾಗಿ ಪೋಷಕ ದ್ರವದಲ್ಲಿ ಅದ್ದುವ ಮೂಲಕ ಸಸ್ಯಗಳನ್ನು ಬೆಳೆಸಲಾಗುತ್ತದೆ. ಇದಕ್ಕಾಗಿಯೇ ವಿಶೇಷವಾದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈ ವಿಧಾನದ ಮೂಲಕ ಯಾವುದೇ ನೆಲವಾಸಿ ಸಸ್ಯಗಳನ್ನು ಬೆಳೆಯಬಹುದಾಗಿದೆ.

ಜಲಕೃಷಿಯಿಂದ ಈ ಕೆಳಗಿನ ಪ್ರಯೋಜನಗಳಿವೆ. ೧. ಮಣ್ಣಿನ ಅಗತ್ಯವಿಲ್ಲ ೨. ನೀರಿನ ಅಗತ್ಯ ಬಹಳ ಕಡಿಮೆ ೩. ಇಳುವರಿ ಹೆಚ್ಚು ಮತ್ತು ಸ್ಥಿರ ೪. ಕಳೆಗಳನ್ನು ತೆಗೆಯುವ ಅಗತ್ಯ ಇರುವುದಿಲ್ಲ ೫. ಸಸ್ಯಗಳು ಹೆಚ್ಚು ಆರೋಗ್ಯಕರವಾಗಿ ಬೆಳೆಯುತ್ತವೆ

ಆದರೆ ಜಲಕೃಷಿವಿಧಾನದ ಏಕೈಕ ಸಮಸ್ಯೆ ಎಂದರೆ, ಈ ರೀತಿ ಬೆಳೆದ ಸಸ್ಯಗಳು ಬಹು ಬೇಗ ಸಾಯುತ್ತವೆ.


ವಾಯು ಕೃಷಿ ವಾಯು ಕೃಷಿಯು ಜಲಕೃಷಿಯ ಇನ್ನೊಂದು ವಿಧಾನವಾಗಿದ್ದು ಇದರಲ್ಲಿ ಸಸ್ಯವೊಂದರ ಬೇರುಗಳನ್ನು ನಿರಂತರವಾಗಿ ಇಲ್ಲವೇ ಆಗಾಗ್ಗೆ ಪೋಷಕಲವಣಗಳ ಹನಿಗಳಿಗೆ ಒಡ್ಡಲಾಗುತ್ತದೆ. ಬೇರುಗಳನ್ನು ಗಾಳಿಯಲ್ಲಿ ಮುಕ್ತವಾಗಿ ಬಿಡುವ ಮೂಲಕವೂ ಈ ಸಸ್ಯಗಳನ್ನು ಬೆಳೆಸ ಬಹುದು. ಆಲೂಗಡ್ಡೆ, ಟೊಮ್ಯಾಟೊ, ಹಾಗೂ ಅನೇಕ ಸೊಪ್ಪಿನ ತರಕಾರಿಗಳನ್ನು ಈ ವಿಧಾನದಲ್ಲಿ ಬೆಳೆಯಲಾಗುತ್ತಿದೆ. ಜಲಕೃಷಿ ಹಾಗೂ ವಾಯು ಕೃಷಿ ವಿಧಾನಗಳು ವಿಶೇಷವಾಗಿ ಅಂತರಿಕ್ಷ ಸಂಶೋಧನಾ ಕೇಂದ್ರಗಳಲ್ಲಿ ಮಹತ್ವ ಪಡೆದುಕೊಂಡಿದೆ. ಗಗನ ಯಾತ್ರಿಗಳಿಗೆ ವಿಶೇಷವಾದ ಆಹಾರವನ್ನು ಅಭಿವೃದ್ಧಿಪಡಿಸುವಲ್ಲಿ ಇವು ಮುಖ್ಯವಾಗಿದೆ. ಇದಕ್ಕೆ ಕಾರಣ ಗುರುತ್ವಾಕರ್ಷಣ ಶಕ್ತಿ ಇಲ್ಲದ ಸ್ಥಿತಿಯಲ್ಲಿ ದ್ರವಕ್ಕಿಂತ ಸುಲಭವಾಗಿ ತುಂತುರನ್ನು ನಿರ್ವಹಿಸುವುದು ಸುಲಭ. ಈ ಎರಡೂ ಕ್ಷೇತ್ರಗಳು ಅಂತರಿಕ್ಷದಲ್ಲಿ ಬಳಸುವ ಆಹಾರದ ತಂತ್ರಜ್ಞಾನ ಕ್ಷೇತ್ರಕ್ಕೆ ಪ್ರಮುಖ ಕೊಡುಗೆಗಳಾಗಿವೆ.


ಈ ಸದಸ್ಯರ ಊರು ಮಂಗಳೂರು.