ವಿಷಯಕ್ಕೆ ಹೋಗು

ಕೀಟಗಳ ನಿರ್ವಹಣೆ ನೈಸರ್ಗಿಕ ವಿಧಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಬೇವಿನ ಸಿಂಪಡಣೆ: ಬೇವಿನ ಮರದ ವಿವಿಧ ಉತ್ಪನ್ನಗಳಿಂದ ಸುರಕ್ಷಿತವೂ ಆದ ಸ್ವಾಭಾವಿಕ ಕೀಟನಾಶಕಗಳನ್ನು ತಯಾರಿಸಬಹುದು.ಬೇವನ್ನು ಸೊಳ್ಳೆಯೂ ಸೇರಿದಂದೆ ಬಹುತೇಕ ಎಲ್ಲಾ ರೀತಿಯ ಕೀಟಗಳ ಮೇಲೂ ಪ್ರಯೋಗಿಸಬಹುದು.ಕೆಲ ಸಮಯಡ್ಡ ಫಲಿತಾಂಶ ಸಿಕ್ಕಲಿಲ್ಲ ಕೆಲ ವಾರಗಳೇ ಬೇಕಾಗಬಹುದು. ಏಕೆಂದರೆ ಕೆಲ ಕೀಟಗಳಲ್ಲಿ ಬೇವು ಅವುಗಳ ಸಚಿತಾನೋತ್ಪತ್ತಿಯ ಚಕ್ರವನ್ನು ನಾಶಪಡಿಸುತ್ತದೆ.ಕೀಟನಾಶಕವಾಗಿ ಬಳಸಲು ಬೇವು ತುಂಬಾ ಸೂಕ್ತ ಏಕೆಂದರೆ ಇದು ಮನುಷ್ಯರಿಗೆ ಸುರಕ್ಷಿತ,ಅನೇಕ ಮಿತ್ರ ಕೀಟಗಳ ಮೇಲ ವಿಷೇಷವಾಗಿ ಪೀಡೆ ಭಕ್ಷಕಗಳ ಮೇಲೆ ತೀವ್ರ ಪರಿಣಾಮ ಉಂಟುಮಾಡುವುದಿಲ್ಲ.ಕೆಲ ಸನ್ನಿವೇಷಗಳಲ್ಲಿ ಉಪಕಾರಿ ಎರೆಹುಳಗಳ ಸಂಖ್ಯೆಯನ್ನು ಇದು ವ್ರುದ್ದಿಸಬಹುದು.

ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಸಿಂಪಡಣೆ: ಮೂರು ಗಡ್ಡೆಬೆಳ್ಳುಳ್ಳಿಯನಙು ತಗೆದು ಸಿಪ್ಪೆ ಸುಲೆದು ಒಂದು ದೊಡ್ಡ ಹಿಡಿ ಹಸಿಮೆಣಸಿನಕಾಯಿ ಕಾಯಿ ಜೊತೆ ಬೆರೆಸಿ.ಒಂದು ಮಡಕೆಯಲ್ಲಿ ಹಾಕಿ ಕುದಿಸಿ.೫೦೧ ಸೋಪಿನ ಬಿಲ್ಲೆಯ ಕಾಲುಭಾಗವನ್ನು ಇದಕ್ಕೆ ಸೇರಿಸಿ ಒಂದೇ ಸಮ ಚನ್ನಾಗಿ ಕಲಕಿ.ಒಂದು ದಿನ ಹಾಗೆ ಬಿಡಿ.ಇದನ್ನು ಸೋಸಿಕೊಂೆಉ ಪ್ರತಿ ಸಿಂಪಡಣಿಕೆ ಎರಡು ಕೊಡದಂತೆ ಬಳಸಿ.ಬೆ ಬೆಳ್ಳುಳ್ಳಿ ಒಂದು ಕೀಟನಾಷಕ ಶಿಲೀಂದ್ರ ನಾಷಕ.ಸೊಪ್ಪನ್ನು ಬಳಸುವುದರಿಂದ ಸಿಂಪಡಣೆ ಸಸ್ಯಗಳಿಗೆ ಹತ್ತಿಕೊಳ್ಲಲು ಸಹಾಯ ಆಗುತ್ತದೆ. ಪಪಾಯ ಸಿಂಪಡಣೆ: ಒಂದು ಕೇಜಿ ಪಪಾಯ ಎಲೆ ಸಂಗ್ರಹಿಸಿ ಕೊಳ್ಳಿ .ಅದನ್ನು ಸಣ್ಣದಾಗಿ ತುಂಡರಿಸಿ ಜಜ್ಜಿ ಒಂದು ಲೀಟರ್ ನೀರಿಗೆ ಹಾಕಿ ಇಡಿ.ಮತ್ತೆ ಹಿಂಡಿ ರಸ ತೆಗೆದು ಅದಕ್ಕೆ ಪುನಹ ನಾಲ್ಕು ಲೀಟರ್ ನೀರು ಹಾಕಿ.ಕಾಲು ಭಾಗ ೫೦೧ ಸೋಪಿನ ಬಿಲ್ಲೆ ಕರಗಿಸಿ ಕೀಟ ಭಾದಿತ ಗಿಡಗಳಿಗೆ ಸಿಂಪಡಣೆ ಮಾಡಿ.

ಅಡಿಕೆ ರಸ ಸಿಂಪಡಣೆ: ದೊಡ್ಡ ಬಸವನ ಹುಳ ಮತ್ತು ಇತರ ಬಗೆಯ ಬಸವನ ಹುಳುಗಳಿಗೆ ಅಡಿಕೆ ರಸ ಅತ್ಯಂತ ಪರಿಣಾಮಕಾರಿ ವಿಷ ಎಂಬುದು ಸಾಭೀತಾಗಿದೆ. ಅಡಿಕೆ ರಸ ತೆಗೆದು ಒಂದು ಬಕೇಟಿನಲ್ಲಿ ಹಾಕಿ ಅದಕ್ಕೆ ನೀರು ಬೆರೆಸಿ ಬಸವನಹುಳುಗಳಿಗೆ ಹೊಡೆಯಿರಿ.ಈ ಸಿಂಪಡಣೆಯನ್ನು ಅಡಿಕೆ ಸುಣ್ಣದ ಪುಡಿ ಅಥವಾ ಎರಡನ್ನೂ ಬಳಸಿ ತಯಾರಿಸಬಹುದು.ಇದನ್ನು ನಿಮ್ಮ ತರಕಾರಿ ತೋಟದ ಸುತ್ತಲೂ ಇದನ್ನು ಹೊಡೆಯಬಹುದು.

ಸೋಪಿನ ಸಿಂಪಡಣೆ: ಇದು ಸೀಗಡಿ, ರಸಿರುಳ,ಸಣ್ಣ ಕ್ವಾರೆ ಹುಳ ಮತ್ತು ಇತರ ಎಲೆ ತಿನ್ನುವ ಕೀಟಗಳಿಗೆ ಪರಿಣಾಮಕಾರಿ.ಈ ಸಿಂಪಡಣೆ ತಯಾರಿಸಲು ಒಂದು ಲೀಟರ್ ನೀರಿಗೆ ಒಂದು ದೊಡ್ಡ ಚಮಚ ಸೋಪಿನ ಪುಡಿ ಅಥವಾ ಸೋಪಿನ ಬಿಲ್ಲೆ ಬೇಕು.ಇದನ್ನು ಕೇವಲ ಕೀಟಗಳ ಮೇಲೆ ಅಥವಾ ಘಾಸಿಯಾದ ಸಸ್ಯಗಳ ಮೇಲೆ ಸಿಂಪಡಣೆ ಮಾಡಿ. ಪಾತ್ರೆ ತೊಳೆದು ಅಥವಾ ಬಟ್ಟೆ ವಗೆದು ಉಳಿದ ಸೋಪು ನೀರನ್ನು ಕೂಡ ಕೀಟನಾಶಕ ಸಿಂಪಡಣೆ ಆಗಿ ಬಳಸಬಹುದು.