ವಿಷಯಕ್ಕೆ ಹೋಗು

ಬಾಲ್ ಬೇರಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾಲ್ ಬೇರಿಂಗ್

ಬೇರಿಂಗ್( Bearing) ಒಂದು ಯಂತ್ರದ ಒಂದು ಭಾಗವಾಗಿದೆ. ಅದು ಸಾಪೇಕ್ಷ ಚಲನೆಯನ್ನು ನಿರ್ಭಂದಿಸಿ, ನಾವು ಇಚ್ಛಿಸುವ ಚಲನೆಯಾಗಿ ಪರಿವರ್ತಿಸುತ್ತದೆ ಮತ್ತು ಘರ್ಷಣೆಯನ್ನು ಕಡಿಮೆ ಮಾಡುತ್ತದೆ. ಒಂದು ಬೇರಿಂಗ್‍ನ ಮಾದರಿ ಹೀಗಿರಬಹುದು. ಉದಾಹರಣೆಗೆ, ಸುಲಭವಾಗಿ ನೇರ ಚಲನೆ ಮಾಡುವ ಅವಕಾಶ ಕಲ್ಪಿಸುವುದು, ಅಥವಾ ಒಂದು ನಿರ್ದಿಷ್ಠ ಅಕ್ಷರೇಖೆಯ ಸುತ್ತ ಸುತ್ತುವಂತೆ ಮಾಡುವುದು ಅಥವಾ ಚಲಿಸುವ ಭಾಗಗಳ ಮೇಲೆ ತೀಡುವ ಒತ್ತಡದಿಂದ ಉಂಟಾಗುವ ಸದಿಶಗಳನ್ನು(vectors) ತಡೆದು ಚಲನೆಯನ್ನು ನಿಯಂತ್ರಿಸುವುದು. ಹಲವು ಬೇರಿಂಗ್‍ಗಳು ಘರ್ಷಣೆಯನ್ನು ಕಡಿಮೆ ಮಾಡುವ ಮೂಲಕ ಸಾಧ್ಯವಾಗುವಷ್ಟು ನಮಗೆ ಬೇಕಾಗಿರುವ ರೀತಿಯಲ್ಲಿಯೇ ಚಲನೆಗಳನ್ನು ಒದಗಿಸುತ್ತವೆ. ಬೇರಿಂಗ್‍ಗಳನ್ನು ಅವುಗಳ ಕಾರ್ಯಕ್ರಿಯೆ, ಚಲನೆ, ಅಥವಾ ಭಾಗಗಳ ಮೇಲೆ ಬೀಳುವ ಒತ್ತಡಗಳ ದಿಕ್ಕುಗಳ ಆಧಾರದ ಮೇಲೆ ವಿಂಗಡಿಸಲಾಗುತ್ತದೆ.

Rolling-element bearing (numbered)

'ಬೇರಿಂಗ್(Bearing)' ಎಂಬ ಪದವು 'ಟು ಬೇರ್ (to bear)[]'ಎಂಬ ಪದದಿಂದ ಪಡೆಯಲಾಗಿದೆ. ಬೇರಿಂಗ್ ಒಂದು ಯಂತ್ರದ ಭಾಗ. ಅದು ಒಂದು ವಸ್ತು ಅಥವಾ ಭಾಗವನ್ನು ಇನ್ನೊಂದರ ಮೇಲೆ ತೀಡುವಂತೆ ಮಾಡುತ್ತದೆ. ಅತೀ ಸಾಮಾನ್ಯ ಬೇರಿಂಗ್‍ಗಳು ಬೇರಿಂಗ್‍ ಮೇಲ್ಮೈಗಳು. ಇವುಗಳು ಕತ್ತರಿಸಲ್ಪಟ್ಟಿರುತ್ತವೆ ಅಥವಾ ಒಂದು ಭಾಗವಾಗಿ ಮಾಡಲ್ಪಡುತ್ತವೆ. ಜೊತೆಗೆ ಅವುಗಳ ಆಕಾರ, ಗಾತ್ರ, ಒರಟುತನ ಮತ್ತು ಅವುಗಳ ಜಾಗಗಳ ಮೇಲೆ ಹಲವು ಬಗೆಯಲ್ಲಿ ನಿಯಂತ್ರಿಸಲ್ಪಟ್ಟಿರುತ್ತವೆ. ಬೇರೆಯ ಬೇರಿಂಗ್‍ಗಳು ಪ್ರತ್ಯೇಕ ಸಾಧನಗಳು, ಇವುಗಳನ್ನು ಯಂತ್ರಗಳಲ್ಲಿ ಅಥವಾ ಯಂತ್ರಗಳ ಭಾಗಗಳ ಮೇಲೆ ಪ್ರತಿಷ್ಠಾಪಿಸಲಾಗಿರುತ್ತವೆ. ಹೆಚ್ಚಿನ ಬೇಡಿಕೆಗೆ ಅನ್ವಹಿಸುವಂತಹ ಅತ್ಯಾಧುನಿಕ ಬೇರಿಂಗ್‍ಗಳು ನಿಖರ ಸಾಧನಗಳಾಗಿವೆ. ಇವುಗಳ ತಯಾರಿಕೆಗೆ ಅತ್ಯುನ್ನತ ಗುಣಮಟ್ಟದ ಪ್ರಸಕ್ತ ತಂತ್ರಙ್ಙಾನದ ಬಳಕೆ ಬೇಕಾಗುತ್ತದೆ.

ಇತಿಹಾಸ

[ಬದಲಾಯಿಸಿ]
ಲಿಯೋನಾರ್ಡೋ ಡಾ ವಿಂಚಿಯ ಚಿತ್ರ(೧೪೫೨-೧೫೧೯) ಬಾಲ್ ಬೇರಿಂಗ್‍ನ ಅಧ್ಯಯನ

ಒಂದು ವಸ್ತುವು ಚಲಿಸುವಾಗ ಆಧಾರ ನೀಡಲು ಅಥವಾ ತಡೆದುಕೊಳ್ಳಲು ಮರದ ಉರುಳುಗುಂಡುಗಳು ರೋಲಿಂಗ್ ಬೇರಿಂಗ್ ಸಂಶೋಧನೆಯಾಗಿದ್ದು ಬಹಳ ಪ್ರಾಚೀನದ್ದಾಗಿದೆ. ಇವೆ ಮುಂದೆ ಚಕ್ರಗಳ ಸಂಶೋಧನೆಗೆ ತಳಹದಿಯಾದವು.

ಈಜಿಪ್ಟಿಯನ್ನರು ಬಂಡಿಗಳ ಕೆಳಗೆ[] ಮರದ ದಿಮ್ಮಿಗಳಂತೆ ರೋಲರ್ ಬೇರಿಂಗ್ ಅನ್ನು ಉಪಯೋಗಿಸುತ್ತಾ ಇದ್ದರು ಎನ್ನುತ್ತಾ ಕೆಲವೊಮ್ಮೆ ಹಕ್ಕು ಸಾಧಿಸುವುದು ಒಂದು ಆಧುನಿಕ ಊಹಾಪೋಹವಾಗಿದೆ.[] ಅವುಗಳು ಅವರ ಡಿಜೆಹುಟಿಹೋಟೆಪ್‍(Djehutihotep)ನ[] ಸಮಾಧಿ ಮೇಲೆ ಜಾರುಬಂಡಿಗಳ ಮೇಲೆ ದ್ರವನಯವಾಗಿಸುವ ಓಟಗಳ ಜೊತೆಗೆ ಚಲಿಸುವ ಬೃಹದಾಕಾರದ ಬಂಡೆಗಳಂತೆ ಚಿತ್ರಿತವಾಗಿರುವುದು ಪ್ಲೇನ್ ಬೇರಿಂಗ್ ಆಗಿದೆ. ಕೈ ಬೈರಿಗೆ ಜೊತೆಗೆ ಉಪಯೋಗಿಸುವ ಬೇರಿಂಗ್‍ಗಳ ಚಿತ್ರಗಳೂ ಇವೆ.[]

ಇವುಗಳನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. name="MWCD_online-headword_bearing">Merriam-Webster, "headwords "bearing" and "bear"", Merriam-Webster's Collegiate Dictionary, online subscription version. Paywalled reference work.{{citation}}: CS1 maint: postscript (link)
  2. American Society of Mechanical Engineers (1906), Transactions of the American Society of Mechanical Engineers, vol. 27, American Society of Mechanical Engineers, p. 441.
  3. Bryan Bunch, The history of science and technology.
  4. Steven Blake Shubert, Encyclopedia of the archaeology of ancient Egypt
  5. Guran, Ardéshir; Rand, Richard H. (1997), Nonlinear dynamics, World Scientific, p. 178, ISBN 978-981-02-2982-5.

ಬಾಹ್ಯ ಕೊಂಡಿಗಳು

[ಬದಲಾಯಿಸಿ]